ತೂಕ ಇಳಿಸೋಕೆ ಟ್ರೈ ಮಾಡ್ತಾ ಇದೀರಾ, ಬೆಳಗೆದ್ದು ಚಿಯಾ ಬೀಜ ಸೇವಿಸಿ ನೋಡಿ; ಇದರಿಂದ ಆರೋಗ್ಯಕ್ಕೂ ಇದೆ ಹತ್ತಾರು ಪ್ರಯೋಜನ
ಕನ್ನಡ ಸುದ್ದಿ  /  ಜೀವನಶೈಲಿ  /  ತೂಕ ಇಳಿಸೋಕೆ ಟ್ರೈ ಮಾಡ್ತಾ ಇದೀರಾ, ಬೆಳಗೆದ್ದು ಚಿಯಾ ಬೀಜ ಸೇವಿಸಿ ನೋಡಿ; ಇದರಿಂದ ಆರೋಗ್ಯಕ್ಕೂ ಇದೆ ಹತ್ತಾರು ಪ್ರಯೋಜನ

ತೂಕ ಇಳಿಸೋಕೆ ಟ್ರೈ ಮಾಡ್ತಾ ಇದೀರಾ, ಬೆಳಗೆದ್ದು ಚಿಯಾ ಬೀಜ ಸೇವಿಸಿ ನೋಡಿ; ಇದರಿಂದ ಆರೋಗ್ಯಕ್ಕೂ ಇದೆ ಹತ್ತಾರು ಪ್ರಯೋಜನ

ಸ್ವಲ್ಪ ತೂಕ ಹೆಚ್ಚಾದ್ರೂ ಸಾಕು ಹೇಗಪ್ಪಾ ತೂಕ ಇಳಿಸೋದು ಅನ್ನೋ ಚಿಂತೆ ಕಾಡೋದು ಸಹಜ. ಆದರೆ ಆಹಾರದ ಕಡುಬಯಕೆಯಿಂದ ಬಾಯಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕೆ ಬೇಡವೆಂದರೂ ತೂಕ ಹೆಚ್ಚುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಚಿಯಾ ಬೀಜಗಳನ್ನು ಸೇವಿಸಲೇಬೇಕು. ತೂಕ ಇಳಿಕೆಯ ವಿಚಾರದಲ್ಲಿ ಚಿಯಾ ಬೀಜಗಳ ಪ್ರಯೋಜನ ತಿಳಿಯಿರಿ.

ತೂಕ ಇಳಿಸೋಕೆ ಟ್ರೈ ಮಾಡ್ತಾ ಇದೀರಾ, ಬೆಳಗೆದ್ದು ಚಿಯಾ ಬೀಜ ಸೇವಿಸಿ ನೋಡಿ
ತೂಕ ಇಳಿಸೋಕೆ ಟ್ರೈ ಮಾಡ್ತಾ ಇದೀರಾ, ಬೆಳಗೆದ್ದು ಚಿಯಾ ಬೀಜ ಸೇವಿಸಿ ನೋಡಿ

ಇತ್ತೀಚಿನ ದಿನಗಳಲ್ಲಿ ಚಿಯಾ ಬೀಜಗಳು ಆರೋಗ್ಯಕರ ಆಹಾರಕ್ರಮದ ಭಾಗವಾಗಿದೆ. ಇದು ಸಾಕಷ್ಟು ರೀತಿಯಲ್ಲಿ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವುದರಿಂದ ಹಲವರು ಇದನ್ನು ನಿತ್ಯ ಸೇವಿಸುತ್ತಾರೆ. ಗಾಢ ಕಪ್ಪು ಬಣ್ಣದ ಚೀಯಾ ಬೀಜಗಳು ಪ್ರೊಟೀನ್‌ನ ಉತ್ತಮ ಮೂಲವಾಗಿದೆ ಹಾಗೂ ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಬೇಕಾದ ಅಗತ್ಯ ಪೋಷಕಾಂಶಗಳನ್ನು ಚೀಯಾ ಬೀಜಗಳು ಹೊಂದಿರುತ್ತವೆ. ಸಲಾಡ್‌ಗಳು, ಸ್ಮೂಥಿಗಳು, ಮಿಲ್ಕ್ ಶೇಕ್‌ಗಳು, ಐಸ್‌ಕ್ರೀಮ್‌ಗಳು, ಬ್ರೇಕ್‌ಫಾಸ್ಟ್ ಖಾದ್ಯಗಳ ಜೊತೆ ಇದನ್ನು ಸೇರಿಸಿಕೊಂಡು ತಿನ್ನುತ್ತಾರೆ.

ತೂಕ ನಷ್ಟಕ್ಕಾಗಿ ಹೋರಾಡುತ್ತಿರುವವರಿಗೆ ಚಿಯಾ ಬೀಜಗಳು ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ಇವುಗಳಲ್ಲಿ ಪ್ರೊಟೀನ್ ಸಮೃದ್ಧವಾಗಿರುತ್ತದೆ. ಇದನ್ನು ಸೇವಿಸಿದ ಬಳಿಕ ನಿಮಗೆ ಹೊಟ್ಟೆ ತುಂಬಿದಂತಹ ಭಾವನೆ ಉಂಟಾಗುವುದರಿಂದ ನೀವು ಅತಿಯಾಗಿ ಇನ್ನೇನನ್ನೂ ತಿನ್ನಲಾರಿರಿ. ಪಾನೀಯದ ರೂಪದಲ್ಲಿಯೂ ಇದನ್ನು ಸೇವಿಸಲು ಸಾಧ್ಯವಿರುವುದರಿಂದ ಇದರಿಂದ ಸಾಕಷ್ಟು ಪ್ರಯೋಜನಗಳು ಇವೆ. ಒಂದು ಲೋಟ ನೀರಿನಲ್ಲಿ ಒಂದು ಚಮಚ ಚಿಯಾ ಬೀಜವನ್ನು ನೆನೆಸಿ ಅರ್ಧ ಗಂಟೆ ಬಿಟ್ಟು ಇದನ್ನು ಕುಡಿಯಬಹುದು. ತೂಕ ನಷ್ಟ ಮಾಡುವಲ್ಲಿ ಚಿಯಾ ಬೀಜಗಳ ಕೊಡುಗೆ ಏನು ಎಂಬುದನ್ನು ತಿಳಿದುಕೊಳ್ಳೋಣ.

ತೂಕ ನಷ್ಟಕ್ಕೆ ಚಿಯಾ ಬೀಜದ ನೀರಿನ ಪ್ರಯೋಜನ

ಪೋಷಕಾಂಶಗಳಿಂದ ಸಮೃದ್ಧ: ಚಿಯಾ ಬೀಜಗಳು ಒಮೆಗಾ 3 ಕೊಬ್ಬಿನಾಮ್ಲಗಳು, ನಾರಿನಾಂಶ, ಪ್ರೊಟೀನ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಮೆಗ್ನಿಷಿಯಂ ಹಾಗೂ ಫಾಸ್ಪರಸ್ ಸೇರಿದಂತೆ ವಿವಿಧ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದನ್ನು ಬೆಳಗ್ಗೆ ಸೇವನೆ ಮಾಡುವುದರಿಂದ ನಿಮಗೆ ಪೌಷ್ಠಿಕಾಂಶಯುಕ್ತ ಮುಂಜಾವು ಆರಂಭಗೊಂಡಂತೆ ಆಗುತ್ತದೆ.

ಅಗಾಧ ಪ್ರಮಾಣದ ನಾರಿನಾಂಶ: ಚಿಯಾ ಬೀಜಗಳಲ್ಲಿ ಫೈಬರ್ ಪ್ರಮಾಣ ಅತ್ಯುತ್ತಮವಾಗಿ ಇರುತ್ತದೆ. ಇದನ್ನು ಸೇವಿಸಿದ ಬಳಿಕ ನಿಮಗೆ ಪರಿಪೂರ್ಣತೆಯ ಭಾವ ಉಂಟಾಗುತ್ತದೆ. ಇದರಿಂದ ದಿನವಿಡೀ ನಿಮ್ಮ ಒಟ್ಟಾರೆ ಕ್ಯಾಲೋರಿ ಸೇವನೆ ಪ್ರಮಾಣ ಕಡಿಮೆಯಾಗಲಿದೆ. ಇದರಿಂದ ತೂಕ ನಷ್ಟ ಸುಲಭವಾಗಿದೆ.

ಜೀರ್ಣಕ್ರಿಯೆಗೆ ಉತ್ತೇಜನ: ಇದರಲ್ಲಿ ನಾರಿನಾಂಶ ಅಂಶವು ಹೆಚ್ಚಾಗಿ ಇರುವುದರಿಂದ ನಿಯಮಿತವಾಗಿ ಕರುಳಿನ ಚಲನೆಗೆ ಉತ್ತೇಜನ ನೀಡುತ್ತದೆ. ಅಲ್ಲದೇ ಮಲಬದ್ಧತೆ ಕೂಡ ನಿವಾರಣೆಯಾಗುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಚಿಯಾ ಬೀಜಗಳು ಪ್ರಮುಖ ಪಾತ್ರ ವಹಿಸುತ್ತವೆ.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ: ಚಿಯಾಬೀಜಗಳು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಚಿಯಾ ಬೀಜಗಳು ನಿಮಗೆ ಹೊಟ್ಟೆ ತುಂಬಿದ ಭಾವವನ್ನು ನೀಡುವುದರಿಂದ ನಿಮಗೆ ಅನಗತ್ಯ ಜಂಕ್ ಫುಡ್‌ಗೂ ಸಕ್ಕರೆಯಂಶಯುಕ್ತ ಪಾನೀಯಗಳನ್ನು ಸೇವಿಸಬೇಕು ಎಂಬ ಭಾವನೆ ಮೂಡುವುದಿಲ್ಲ.

ನೀರಿನಂಶ ಸಮತೋಲನ: ಚಿಯಾ ಬೀಜಗಳನ್ನು ನೀವು ನೀರಿನಲ್ಲಿ ನೆನೆಸಿದಾಗ ಇವುಗಳು ಅಗಾಧ ಪ್ರಮಾಣದ ನೀರನ್ನು ತಮ್ಮೆಡೆಗೆ ಹೀರಿಕೊಂಡಿರುತ್ತವೆ. ಹೀಗಾಗಿ ಇವುಗಳನ್ನು ನೀವು ಸೇವನೆ ಮಾಡುವುದರಿಂದ ನಿಮ್ಮ ದೇಹ ಹೈಡ್ರೀಕರಣಗೊಳ್ಳುತ್ತದೆ. ಇದರಿಂದ ನಿಮ್ಮ ದೈಹಿಕ ಸ್ವಾಸ್ಥ್ಯ ಕ್ಷೇಮವಾಗಿ ಇರುತ್ತದೆ.

ಶಕ್ತಿ: ಚಿಯಾ ಬೀಜಗಳಲ್ಲಿ ಅಡಕವಾಗಿರುವ ಪ್ರೊಟೀನ್, ಫೈಬರ್ ಹಾಗೂ ಆರೋಗ್ಯಕರ ಕೊಬ್ಬಿನ ಸಂಯೋಜನೆಯು ದೇಹಕ್ಕೆ ನಿರಂತರ ಶಕ್ತಿಯನ್ನು ಒದಗಿಸುತ್ತದೆ. ಇದರಿಂದ ನಿಮ್ಮ ಇಡೀ ದಿನ ಆರೋಗ್ಯಕರವಾಗಿ ಇರಲಿದೆ.

Whats_app_banner