ಪಪ್ಪಾಯ ಸೇವನೆಯಿಂದ ವಾರದಲ್ಲಿ ಎರಡು ಕೆಜಿ ತೂಕ ಕಡಿಮೆ ಆಗುತ್ತಾ? ಏನಿದು ಕಥೆ, ಇದರ ಹಿಂದಿನ ಸತ್ಯ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಪಪ್ಪಾಯ ಸೇವನೆಯಿಂದ ವಾರದಲ್ಲಿ ಎರಡು ಕೆಜಿ ತೂಕ ಕಡಿಮೆ ಆಗುತ್ತಾ? ಏನಿದು ಕಥೆ, ಇದರ ಹಿಂದಿನ ಸತ್ಯ ತಿಳಿಯಿರಿ

ಪಪ್ಪಾಯ ಸೇವನೆಯಿಂದ ವಾರದಲ್ಲಿ ಎರಡು ಕೆಜಿ ತೂಕ ಕಡಿಮೆ ಆಗುತ್ತಾ? ಏನಿದು ಕಥೆ, ಇದರ ಹಿಂದಿನ ಸತ್ಯ ತಿಳಿಯಿರಿ

ಪಪ್ಪಾಯ ಉಷ್ಣವಲಯದ ಹಣ್ಣಾಗಿದ್ದು, ಸಿಹಿ ರುಚಿಯನ್ನು ಹೊಂದಿದೆ. ಉತ್ಕರ್ಷಣ ನಿರೋಧಕ ಸಮೃದ್ಧವಾಗಿರುವ ಪಪ್ಪಾಯಿವನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಹೃದಯ, ಮೆದುಳು ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ಇದು ತೂಕ ನಷ್ಟಕ್ಕೆ ಪರಿಪೂರ್ಣ ಆಹಾರ ಎಂದು ಮಾತು ಇದೆ. ನಿಜವಾಗಲೂ ಪಪ್ಪಾಯಿ ಹಣ್ಣು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆಯೇ? ಇಲ್ಲಿದೆ ಮಾಹಿತಿ.

ಪಪ್ಪಾಯ ಸೇವನೆಯಿಂದ ವಾರದಲ್ಲಿ ಎರಡು ಕೆಜಿ ತೂಕ ಕಡಿಮೆ ಆಗುತ್ತಾ? ಇದರ ಹಿಂದಿನ ಸತ್ಯ ತಿಳಿಯಿರಿ
ಪಪ್ಪಾಯ ಸೇವನೆಯಿಂದ ವಾರದಲ್ಲಿ ಎರಡು ಕೆಜಿ ತೂಕ ಕಡಿಮೆ ಆಗುತ್ತಾ? ಇದರ ಹಿಂದಿನ ಸತ್ಯ ತಿಳಿಯಿರಿ

ಹಣ್ಣುಗಳು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ನಾವೆಲ್ಲರೂ ಹಣ್ಣಿನ ಪ್ರಿಯರು. ಒಂದಿಲ್ಲೊಂದು ಹಣ್ಣು ನಮಗೆ ಫೇವರಿಟ್‌ ಆಗಿರುತ್ತದೆ. ತಾಜಾ ಹಣ್ಣುಗಳ ಸೇವನೆ ಆರೋಗ್ಯಕ್ಕೂ ಉತ್ತಮ. ಬಾಳೆಹಣ್ಣು, ಕಲ್ಲಂಗಡಿ ಅಥವಾ ಪಪ್ಪಾಯಿ ಯಾವುದೇ ಆಗಿರಲಿ ತಾಜಾ ಹಣ್ಣುಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಪರಂಗಿ ಹಣ್ಣು ಅಥವಾ ಪಪ್ಪಾಯವು ಹಲವು ಪೋಷಕಾಂಶಗಳಿಂದ ಕೂಡಿದೆ. ಇದು ದಕ್ಷಿಣ ಮೆಕ್ಸಿಕೋ ಮತ್ತು ಮಧ್ಯ ಅಮೆರಿಕ ಮೂಲದ ಹಣ್ಣಾಗಿದ್ದರೂ ಇಂದು ನಮ್ಮ ದೇಶದ್ದೇ ಏನೋ ಎಂಬಂತಾಗಿದೆ.

ಅಂದ ಹಾಗೆ, ತೂಕವನ್ನು ಕಳೆದುಕೊಳ್ಳಲು ಪರಂಗಿ ಹಣ್ಣು ಉತ್ತಮ, ಇದನ್ನು ಸೇವಿಸುವುದರಿಂದ ವಾರದಲ್ಲಿ ಎರಡು ಕೆಜಿವರೆಗೆ ತೂಕ ಇಳಿಸಬಹುದು ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಪೋಸ್ಟ್‌ಗಳು ಹರಿದಾಡಿದ್ದವು. ಪಪ್ಪಾಯಿಯಲ್ಲಿ ಕಡಿಮೆ ಕ್ಯಾಲೊರಿ ಇರುವುದರಿಂದ ಅದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಪಪ್ಪಾಯಿಯನ್ನು ಆಹಾರದಲ್ಲಿ ಸೇರಿಸಿಕೊಂಡರೆ ಒಂದು ವಾರದಲ್ಲಿ ಎರಡು ಕೆಜಿಯಷ್ಟು ತೂಕವನ್ನು ಕಳೆದುಕೊಳ್ಳಬಹುದು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ತೂಕ ನಷ್ಟಕ್ಕೆ ಪಪ್ಪಾಯ ಸಹಕಾರಿಯೇ, ಇದನ್ನು ತಿನ್ನುವುದರಿಂದ ವಾರದಲ್ಲಿ ಎರಡು ಕೆಜಿ ತೂಕ ಇಳಿಸಿಕೊಳ್ಳಬಹುದೇ, ಇದರ ಸತ್ಯಾಸತ್ಯತೆ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡಿ.

ಪಪ್ಪಾಯಿದಲ್ಲಿರುವ ಕಡಿಮೆ ಕ್ಯಾಲೋರಿ ಅಂಶದಿಂದಾಗಿ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಪಪ್ಪಾಯಿ ಹಣ್ಣು ಪ್ರಯೋಜನಕಾರಿಯಾಗಿದೆ. ಕಡಿಮೆ ಕ್ಯಾಲೋರಿಗಳ ಜೊತೆಗೆ ಇದು ವಿಟಮಿನ್ ಎ, ಸಿ ಮತ್ತು ಇಯಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ ಎಂಬುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಾಗಂತ ತೂಕ ನಿರ್ವಹಣೆಯು ಕೇವಲ ಒಂದು ಆಹಾರದಿಂದ ಮಾತ್ರ ನಿರ್ಧರಿಸಲ್ಪಡುವುದಿಲ್ಲ. ಆರೋಗ್ಯಕರವಾಗಿ ತೂಕವನ್ನು ಇಳಿಸಲು, ಪ್ರೊಟೀನ್, ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನ ಸರಿಯಾದ ಪ್ರಮಾಣವನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ನಿರ್ವಹಿಸುವುದರ ಮೇಲೆ ಗಮನಹರಿಸಬೇಕು. ಹಣ್ಣುಗಳು ವ್ಯಾಪಕವಾದ ಪೋಷಕಾಂಶಗಳನ್ನು ಒದಗಿಸುತ್ತವೆಯಾದರೂ, ಒಟ್ಟಾರೆ ಕ್ಯಾಲೋರಿ ಸೇವನೆಯ ಭಾಗವಾಗಿ ಅವುಗಳ ಪ್ರಮಾಣವನ್ನು ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯ.

ಪಪ್ಪಾಯಿಯಲ್ಲಿನ ಪ್ರಯೋಜನಕಾರಿ ಅಂಶಗಳು

ಪಪ್ಪಾಯಿಯು ತೂಕ ನಷ್ಟದ ವಿಚಾರದಲ್ಲಿ ನೇರವಾಗಿ ಭಾಗಿಯಾಗದಿದ್ದರೂ, ಇದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಲವಾರು ಸಂಯುಕ್ತಗಳನ್ನು ಒಳಗೊಂಡಿದೆ. ಪಪ್ಪಾಯಿಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ದೇಹದಲ್ಲಿನ ಫ್ರಿ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ.

ಪಪ್ಪಾಯಿಯಲ್ಲಿರುವ ಕೆಲವು ಪ್ರಬಲವಾದ ಉತ್ಕರ್ಷಣ ನಿರೋಧಕಗಳೆಂದರೆ ವಿಟಮಿನ್ ಸಿ, ಲೈಕೋಪೀನ್ ಮತ್ತು ಪಿಗ್ಮೆಂಟ್ ಕ್ಯಾರೊಟಿನಾಯ್ಡ್ ಬೀಟಾ ಕ್ಯಾರೋಟಿನ್. ಇದಲ್ಲದೆ, ಪಪ್ಪಾಯಿಯು ಪಪೈನ್ ಎಂಬ ವಿಶಿಷ್ಟ ಕಿಣ್ವವನ್ನು ಹೊಂದಿದೆ. ಅಲ್ಲದೆ, ಜೀರ್ಣಕ್ರಿಯೆಗೂ ಸಹಕಾರಿಯಾಗಿದೆ. ಮಕ್ಕಳಲ್ಲಿ ಅಥವಾ ವಯಸ್ಕರಲ್ಲಿ ಮಲಬದ್ಧತೆ ಸಮಸ್ಯೆ ಉಂಟಾದರೆ ಅಂಥವರು ಪಪ್ಪಾಯಿ ಹಣ್ಣು ಸೇವಿಸಬಹುದು. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.

ಪಪ್ಪಾಯಿಯು ನಿರ್ದಿಷ್ಟವಾಗಿ ತೂಕ ನಷ್ಟಕ್ಕೆ ಕಾರಣವಾಗುವುದಿಲ್ಲ. ಆದರೆ ಇದು ಆರೋಗ್ಯಕರ ತೂಕ ನಷ್ಟ ಆಹಾರವನ್ನು ಉತ್ತೇಜಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಒಳಗೊಂಡಿದೆ. ಈ ಹಣ್ಣಿನಲ್ಲಿ ಕಡಿಮೆ ಕ್ಯಾಲೊರಿಗಳು ಮತ್ತು ನಾರಿನಾಂಶದ ಉತ್ತಮ ಮೂಲವಾಗಿರುವುದರಿಂದ ತೂಕ ಹೆಚ್ಚಾಗುವ ಅಪಾಯ ಕಡಿಮೆ. ಹೀಗಾಗಿ ಡಯೆಟ್ ಮಾಡುವವರು ಪಪ್ಪಾಯಿ ಹಣ್ಣನ್ನು ಸೇವಿಸಬಹುದು.

ಹಣ್ಣುಗಳಲ್ಲಿದೆ ನೈಸರ್ಗಿಕ ಸಕ್ಕರೆ

ಹಣ್ಣುಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆಯಾದರೂ, ಅವುಗಳು ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತವೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸದಿರುವುದು ಒಳ್ಳೆಯದು. ಬದಲಾಗಿ, ಆರೋಗ್ಯಕರ ಮತ್ತು ಸಮತೋಲಿತ ಆಹಾರದ ಭಾಗವಾಗಿ ಅವುಗಳನ್ನು ಅಳವಡಿಸಿಕೊಳ್ಳಬೇಕು ಎಂಬುದು ತಜ್ಞರ ಅಭಿಪ್ರಾಯ.

Whats_app_banner