ಹೊಟ್ಟೆಯ ಕೊಬ್ಬು ಕರಗಿಸಲಾಗದೆ ಸಂಕಟ ಪಡುತ್ತಿದ್ದರೆ ಇಲ್ಲಿದೆ ಟಿಪ್ಸ್; ಈ 7 ಸಲಹೆಗಳನ್ನು ಪಾಲಿಸಿ
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಹೊಟ್ಟೆ ಕೊಬ್ಬಿನಿಂದ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ. ಆನ್ಲೈನ್ ಫಿಟ್ನೆಸ್ ತರಬೇತುದಾರ ಡಾನ್ ಗೋ ಎಂಬುವವರು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಸಲಹೆಯನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಹೊಟ್ಟೆ ಕೊಬ್ಬಿನಿಂದ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ. ಒಮ್ಮೆ ಹೊಟ್ಟೆಯಲ್ಲಿ ಬೊಜ್ಜು ಬಂದರೆ ಮತ್ತೆ ಅದನ್ನು ಹೋಗಲಾಡಿಸುವುದು ಬಹಳ ಕಷ್ಟ ಎಂದು ಎಲ್ಲರೂ ಹೇಳುತ್ತಾರೆ. ಆನ್ಲೈನ್ ಫಿಟ್ನೆಸ್ ತರಬೇತುದಾರ ಡಾನ್ ಗೋ ಎಂಬುವವರು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಸಲಹೆಯನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.
ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಇಲ್ಲಿದೆ ಸಲಹೆ
ಮದ್ಯಪಾನ ಮಾಡುವುದನ್ನು ನಿಲ್ಲಿಸಿ: ಆಲ್ಕೋಹಾಲ್ ಹಸಿವು ಮತ್ತು ಒತ್ತಡವನ್ನು ನಿಯಂತ್ರಿಸುವ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಹೆಚ್ಚಿನ ಕ್ಯಾಲೊರಿಗಳನ್ನು ಸಹ ಹೊಂದಿದೆ. ಇದು ಕಿಬ್ಬೊಟ್ಟೆಯ ಕೊಬ್ಬನ್ನು ಹೆಚ್ಚಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಕಾರ್ಬೋಹೈಡ್ರೇಟ್ ಸೇವನೆಯನ್ನು ನಿಮ್ಮ ಚಟುವಟಿಕೆಯ ಮಟ್ಟಕ್ಕೆ ಹೊಂದಿಸಿ: ಕಾರ್ಬೋಹೈಡ್ರೇಟ್ ಕಾರ್ಯಕ್ಷಮತೆಗೆ ಇಂಧನವಾಗಿದೆ. ಕುಳಿತುಕೊಂಡು ಕೆಲಸ ಮಾಡುವಿರಾದರೆ ಅವುಗಳನ್ನು ಕಡಿಮೆ ತಿನ್ನಿ. ಸಕ್ರಿಯ ವ್ಯಕ್ತಿಯಾಗಿದ್ದರೆ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಹೆಚ್ಚು ತಿನ್ನಿ.
ಸಾಕಷ್ಟು ನೀರು ಕುಡಿಯಿರಿ: ನಡೆದಾಡುವಾಗ ನೀರು ಕುಡಿಯಿರಿ. ಊಟದ ಮೊದಲು ಮತ್ತು ನಂತರ ನೀರು ಕುಡಿಯಿರಿ. ಊಟ ಮಾಡುವಾಗ ನೀರು ಕುಡಿಯಬೇಡಿ. ತಿಂಡಿ ತಿನ್ನುವ ಬದಲು ಊಟದ ನಡುವೆ ನೀರು ಕುಡಿಯಿರಿ. ಇದು ದಿನವಿಡೀ ಹೊಟ್ಟೆ ತುಂಬಿರಲು ಸಹಾಯ ಮಾಡುತ್ತದೆ.
ಪ್ರೋಟೀನ್, ಪೋಷಕಾಂಶ ಸಮೃದ್ಧ ಆಹಾರವನ್ನು ಸೇವಿಸಿ: ದೇಹದ ತೂಕದ ಪ್ರತಿ ಪೌಂಡ್ಗೆ 8 ಗ್ರಾಂನಿಂದ 1 ಗ್ರಾಂ ಪ್ರೋಟೀನ್ ಸೇವಿಸಿ. ನಿಮ್ಮ ಕ್ಯಾಲೊರಿಗಳಲ್ಲಿ 90 ಪ್ರತಿಶತವನ್ನು ಸಂಪೂರ್ಣ, ಸಂಸ್ಕರಿಸದ ಮೂಲಗಳಿಂದ ಪಡೆಯುವ ಗುರಿಯನ್ನು ಹೊಂದಿರಿ. ಪ್ರೋಟೀನ್ ಹಾಗೂ ಫೈಬರ್ ಅಂಶ ಹೇರಳವಾಗಿರುವ ಆಹಾರವನ್ನು ಸೇವಿಸಿ.ಇದು ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ.
ವ್ಯಾಯಾಮ ಅಥವಾ ಜಿಮ್ಗೆ ಹೋಗಿ ದೇಹ ದಂಡಿಸಿ: ತೂಕ ತರಬೇತಿಯು ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದು ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬು ಬರ್ನ್ ಮಾಡಲು ಸಹಾಯ ಮಾಡುತ್ತದೆ.
ಒತ್ತಡದ ಮಟ್ಟವನ್ನು ನಿರ್ವಹಿಸಿ: ಹೆಚ್ಚಿನ ಒತ್ತಡದ ಜೀವನವನ್ನು ನಡೆಸಿದಾಗ ದೇಹವು ಹೆಚ್ಚಿನ ಕಾರ್ಟಿಸೋಲ್ ಅನ್ನು ಉತ್ಪಾದಿಸುತ್ತದೆ. ಇದು ಹಸಿವನ್ನು ಹೆಚ್ಚಿಸುವ ಮೂಲಕ ನಿಮ್ಮ ಹೊಟ್ಟೆಯ ಸುತ್ತಲೂ ಕೊಬ್ಬಿನ ಶೇಖರಣೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನೀವು ಹೆಚ್ಚು ತಿನ್ನುತ್ತೀರಿ. ಒತ್ತಡದ ವಿರುದ್ಧ ಹೋರಾಡಲು, ನಡಿಗೆ ಮಾಡಿ ಮತ್ತು ಪ್ರಕೃತಿಯಲ್ಲಿ ಸಮಯ ಕಳೆಯಿರಿ.
ಗುಣಮಟ್ಟದ ನಿದ್ರೆಗೆ ಆದ್ಯತೆ ನೀಡಿ: ನಿದ್ರೆಯ ಕೊರತೆಯು ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ, ರಾತ್ರಿಯಲ್ಲಿ 5.5 ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ದೆ ಮಾಡುವ ಜನರು ತುಂಬಾ ಹೆಚ್ಚು ತಿನ್ನುತ್ತಾರೆ. ದಿನಕ್ಕೆ 385 ಕ್ಯಾಲೊರಿಗಳು ಅಥವಾ ಅದಕ್ಕಿಂತ ಹೆಚ್ಚಿನದನ್ನು ತಿನ್ನುತ್ತಾರೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಹೀಗಾಗಿ 7 ರಿಂದ 9 ಗಂಟೆಗಳ ಗುಣಮಟ್ಟದ ನಿದ್ದೆ ಮಾಡಿ. ಇದರಿಂದ ಹೆಚ್ಚು ತಿನ್ನಬೇಕು ಎಂದೆನಿಸುವುದಿಲ್ಲ.
ಆಹಾರ ಪದ್ಧತಿ ಹಾಗೂ ಆಧುನಿಕ ಜೀವನಶೈಲಿಯಿಂದಾಗಿ ಬಹುತೇಕ ಮಂದಿ ಹೊಟ್ಟೆ ಕೊಬ್ಬು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಮೇಲೆ ನೀಡಿರುವ ಸಲಹೆಯು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ).