ಕನ್ನಡ ಸುದ್ದಿ  /  ಜೀವನಶೈಲಿ  /  ತೂಕ ಇಳಿಯುವ ಜೊತೆಗೆ ದೇಹದ ಕೊಬ್ಬು ಕರಗಬೇಕು ಅಂದ್ರೆ ನಿಮ್ಮ ಜೀವನಶೈಲಿಯಲ್ಲಿ ಇಂದೇ ಈ ಬದಲಾವಣೆಗಳನ್ನ ರೂಢಿಸಿಕೊಳ್ಳಿ

ತೂಕ ಇಳಿಯುವ ಜೊತೆಗೆ ದೇಹದ ಕೊಬ್ಬು ಕರಗಬೇಕು ಅಂದ್ರೆ ನಿಮ್ಮ ಜೀವನಶೈಲಿಯಲ್ಲಿ ಇಂದೇ ಈ ಬದಲಾವಣೆಗಳನ್ನ ರೂಢಿಸಿಕೊಳ್ಳಿ

ಇತ್ತೀಚಿಗೆ ಬೊಜ್ಜಿನ ಸಮಸ್ಯೆಯಿಂದ ಹಲವರು ಬಳಲುತ್ತಿದ್ದಾರೆ. ಇದಕ್ಕಾಗಿ ವ್ಯಾಯಾಮ, ಡಯೆಟ್ ಇತ್ಯಾದಿಗಳ ಮೊರೆ ಹೋಗುತ್ತಾರೆ. ಆದರೆ, ನಾವು ಸೇವಿಸುವ ಹಲವು ಆಹಾರಗಳು ತೂಕ ನಷ್ಟಕ್ಕೆ ನೆರವಾಗುವುದೇ ಹೊರತು ಇದರಿಂದ ಕೊಬ್ಬು ನಷ್ಟವಾಗುವುದಿಲ್ಲ. ನಿಮ್ಮ ಪ್ರಯತ್ನಗಳನ್ನು ಇದು ವ್ಯರ್ಥವಾಗಿಸುತ್ತದೆ. ತೂಕ ಇಳಿಸಿ, ಕೊಬ್ಬು ನಷ್ಟವನ್ನು ಉತ್ತೇಜಿಸಲು ಹೀಗಿರಲಿ ಜೀವನಶೈಲಿ.

ತೂಕ ಇಳಿಯುವ ಜೊತೆಗೆ ದೇಹದ ಕೊಬ್ಬು ಕರಗಬೇಕು ಅಂದ್ರೆ ನಿಮ್ಮ ಜೀವನಶೈಲಿಯನ್ನು ಹೀಗೆ ಬದಲಿಸಿ
ತೂಕ ಇಳಿಯುವ ಜೊತೆಗೆ ದೇಹದ ಕೊಬ್ಬು ಕರಗಬೇಕು ಅಂದ್ರೆ ನಿಮ್ಮ ಜೀವನಶೈಲಿಯನ್ನು ಹೀಗೆ ಬದಲಿಸಿ

ಪಾನಿಪುರಿ, ಮಸಾಲಪುರಿ, ಗೋಬಿ ಮಂಚೂರಿ ಅಂತೆಲ್ಲಾ ಬೀದಿ ಬದಿಯ ತಿನಿಸುಗಳು ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ? ಬಹುತೇಕ ಮಂದಿ ಸಂಜೆಯಾಗುತ್ತಿದ್ದಂತೆ ಈ ತಿನಿಸುಗಳನ್ನು ಚಪ್ಪರಿಸಿ ತಿನ್ನುತ್ತಾರೆ. ಆದರೆ, ಈ ರೀತಿಯ ಬೀದಿ ಬದಿಯ ಕೊಬ್ಬಿನಾಂಶವಿರುವ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ತೂಕ ಹೆಚ್ಚಳವಾಗುವುದು ಸಾಮಾನ್ಯ. ತೂಕ ಹೆಚ್ಚಳವಾಗುತ್ತಿದ್ದಂತೆ ಭೀತಿಗೊಳ್ಳುವ ಅನೇಕರು ನಂತರ ದೇಹದ ಫಿಟ್ನೆಸ್‌ಗಾಗಿ ಯೋಗ, ವ್ಯಾಯಾಮ, ಜಿಮ್, ಡಯೆಟ್ ಮಾಡುವುದು ಮುಂತಾದವುಗಳ ಮೊರೆ ಹೋಗುತ್ತಾರೆ.

ಆದರೆ, ಕೆಲವರಿಗೆ ತಮ್ಮ ತೂಕ ನಷ್ಟದ ಪ್ರಯಾಣದಲ್ಲಿ ಯಾವೆಲ್ಲಾ ಆಹಾರವನ್ನು ಸೇವಿಸಬಾರದು, ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ದೇಹದಿಂದ ಕೊಬ್ಬನ್ನು ತೊಡೆದುಹಾಕಲು ನೀವು ತಂತ್ರಗಳನ್ನು ರೂಪಿಸಿದರೆ, ಆರೋಗ್ಯಕರ ರೀತಿಯಲ್ಲಿ ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಹಲವು ಬಗೆಯ ಆಹಾರಗಳು ತೂಕ ನಷ್ಟದ ಮೇಲೆ ಮಾತ್ರ ಕೇಂದ್ರೀಕೃತವಾಗಿರುತ್ತದೆ. ಆದರೆ, ಇದರಿಂದ ಕೊಬ್ಬು ನಷ್ಟವಾಗುವುದಿಲ್ಲ. ಇದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ.

ಪ್ರೊಟೀನ್ ಭರಿತ ಆಹಾರದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸುವ ಮೂಲಕ, ನಿಯಮಿತವಾಗಿ ವ್ಯಾಯಾಮ ಮಾಡುವ ಮೂಲಕ ಮತ್ತು ಪೋಷಕಾಂಶ ಭರಿತ ಆಹಾರವನ್ನು ಅನುಸರಿಸಬೇಕು. ಇದಕ್ಕಾಗಿ ನಿಮ್ಮ ಆಹಾರದಲ್ಲಿ ಧಾನ್ಯಗಳು ಮತ್ತು ಹೆಚ್ಚಿನ ಫೈಬರ್ ಅಂಶವಿರುವ ಆಹಾರಗಳನ್ನು ಸೇವಿಸಬೇಕು.

ಟ್ರೆಂಡಿಂಗ್​ ಸುದ್ದಿ

ಕೊಬ್ಬು ನಷ್ಟಕ್ಕೆ, ಸಾಕಷ್ಟು ನೀರು ಕುಡಿಯುವುದರಿಂದ ಹಿಡಿದು, ಚೆನ್ನಾಗಿ ನಿದ್ದೆ ಮಾಡಬೇಕು. ನಿಮ್ಮ ಚಯಾಪಚಯ ಪ್ರಕ್ರಿಯೆಗಳನ್ನು ಬೆಂಬಲಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸಾಧಿಸಲು ಕೆಲವು ಅಗತ್ಯ ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ.

ಕೊಬ್ಬು ನಷ್ಟಕ್ಕೆ ಸಹಾಯ ಮಾಡುವ ಐದು ಜೀವನಶೈಲಿ ಬದಲಾವಣೆಗಳು

1. ನಿದ್ದೆ ಮಾಡುವ ಮುನ್ನ ನೀರು ಕುಡಿಯಿರಿ: ಮಲಗುವ ಮುನ್ನ ನೀರನ್ನು ಕುಡಿಯುವುದು ಉತ್ತಮ. ಇದು ದೇಹವನ್ನು ಹೈಡ್ರೀಕರಿಸುವಲ್ಲಿಯೂ ಸಹಕಾರಿ. ರಾತ್ರಿಯ ಸಮಯದಲ್ಲಿ ಅತಿಯಾದ ಪ್ರಮಾಣದಲ್ಲಿ ಆಹಾರ ಸೇವಿಸದಿರುವುದು ಒಳ್ಳೆಯದು. ದೇಹಕ್ಕೆ ಅಗತ್ಯವಾದ ನೀರು ದೊರೆತಾಗ ನಿಮ್ಮ ದೇಹದ ಚಯಾಪಚಯ ಪ್ರಕ್ರಿಯೆಗಳನ್ನು ಬೆಂಬಲಿಸುತ್ತದೆ.

2. ಸಮತೋಲಿತ ಆಹಾರ: ಪೌಷ್ಟಿಕಾಂಶಭರಿತ ಸಮತೋಲಿತ ಆಹಾರವನ್ನು ಸೇವಿಸಿ. ಹಣ್ಣುಗಳು, ತರಕಾರಿಗಳು, ಪ್ರೊಟೀನ್‌ಗಳು, ಧಾನ್ಯಗಳು ಸೇರಿದಂತೆ ಆರೋಗ್ಯಕರ ಆಹಾರಗಳ ಮೇಲೆ ಗಮನ ಕೇಂದ್ರೀಕರಿಸಿ. ಇದು ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದರಿಂದ ಕ್ಯಾಲೋರಿ ಸೇವನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಇವುಗಳು ನಿಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸದಿರಬಹುದು.

3. ದಿನವಿಡೀ ಕ್ರಿಯಾಶೀಲರಾಗಿರಿ: ನಿಮ್ಮ ದಿನಚರಿಯಲ್ಲಿ ನಡಿಗೆ, ಓಟ ಅಥವಾ ಸೈಕ್ಲಿಂಗ್‌ನಂತಹ ತರಬೇತಿಯನ್ನು ಕೈಗೊಳ್ಳಿ. ವ್ಯಾಯಾಮವು ಕ್ಯಾಲೊರಿಗಳನ್ನು ಬರ್ನ್ ಮಾಡಲು, ಸ್ನಾಯುಗಳನ್ನು ಬಲಪಡಿಸಲು ಮತ್ತು ಒಟ್ಟಾರೆ ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದಿನವಿಡೀ ಕ್ರಿಯಾಶೀಲರಾಗಿರುವುದರಿಂದ ಕೊಬ್ಬು ನಷ್ಟಕ್ಕೆ ಸಹಾಯ ಮಾಡಬಹುದು.

4. ಸಾಕಷ್ಟು ನಿದ್ದೆ ಮಾಡಿ: ಚೆನ್ನಾಗಿ ನಿದ್ದೆ ಮಾಡಿ. ರಾತ್ರಿ ಸುಮಾರು 8 ಗಂಟೆಗಳಾದ್ರೂ ನಿದ್ದೆ ಮಾಡುವುದು ಅವಶ್ಯಕ. ಮಲಗುವ ಮುನ್ನ ಮೊಬೈಲ್ ನೋಡುವುದನ್ನು ಬಿಟ್ಟುಬಿಡಿ. ಇದರಿಂದ ಬೇಗನೆ ನಿದ್ದೆ ಬರುವುದಿಲ್ಲ. ನಿದ್ದೆಯ ಕೊರತೆಯು ಹಾರ್ಮೋನ್ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಇದು ಹಸಿವಿನ ಭಾವನೆಗಳನ್ನು ಹೆಚ್ಚಿಸುತ್ತದೆ. ಇದರಿಂದ ತೂಕ ಹೆಚ್ಚಳಕ್ಕೂ ಕೊಡುಗೆ ನೀಡುತ್ತದೆ.

5. ಒತ್ತಡ ನಿರ್ವಹಣೆ: ಅಧಿಕ ಒತ್ತಡದಿಂದಲೂ ತೂಕ ಹೆಚ್ಚಾಗಲು ಕಾರಣವಾಗಬಹುದು. ಅದರಲ್ಲೂ ಹೊಟ್ಟೆಯ ಸುತ್ತಳತೆ ಹೆಚ್ಚಬಹುದು. ಇಂದಿನ ದಿನಗಳಲ್ಲಿ ಒತ್ತಡದ ಬದುಕು ಸರ್ವೇ ಸಾಮಾನ್ಯ. ಇದಕ್ಕಾಗಿ ನೀವು ದಿನನಿತ್ಯ ಧ್ಯಾನ, ಆಳವಾದ ಉಸಿರಾಟ, ಯೋಗ ಅಥವಾ ಇತರೆ ಯಾವುದೇ ಒತ್ತಡವನ್ನು ಕಡಿಮೆ ಮಾಡುವ ಚಟುವಟಿಕೆಗಳನ್ನು ಕೈಗೊಳ್ಳಿ.

ನೀವು ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದರೆ ಮುಖ್ಯವಾಗಿ ನೀವು ಕೊಬ್ಬು ನಷ್ಟದ ಬಗ್ಗೆ ಯೋಚಿಸಬೇಕು. ಅಧಿಕ ಕೊಬ್ಬು, ಸ್ಯಾಚುರೇಟೆಡ್ ಕೊಬ್ಬು, ಸಕ್ಕರೆ ಮತ್ತು ಉಪ್ಪನ್ನು ಹೊಂದಿರುವ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ. ತಂಪು ಪಾನೀಯಗಳು, ಲಘು ಆಹಾರಗಳು ಮತ್ತು ಆಲ್ಕೊಹಾಲ್ ಯುಕ್ತ ಪಾನೀಯಗಳನ್ನು ಸೇವಿಸದಿರುವುದು ಉತ್ತಮ. ನಿಯಮಿತ ದೈಹಿಕ ಚಟುವಟಿಕೆಯು ಕ್ಯಾಲೊರಿಗಳನ್ನು ಬರ್ನ್ ಮೂಲಕ ಮತ್ತು ನಿಮ್ಮ ಚಯಾಪಚಯ ಮಟ್ಟವನ್ನು ಹೆಚ್ಚಿಸುತ್ತದೆ. ವ್ಯಾಯಾಮವು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.