ಕನ್ನಡ ಸುದ್ದಿ  /  Lifestyle  /  Weight Loss How Hot Water On Empty Stomach Helps To Burn Calories Faster Fitness Tips Weight Loss With Hot Water Rst

Weight Loss: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿದ್ರೆ ತೂಕ ಇಳಿಯುತ್ತಾ; ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

ಸುಲಭವಾಗಿ ತೂಕ ಇಳಿಬೇಕು ಅಂದ್ರೆ ಬಿಸಿನೀರಿಗೆ ನಿಂಬೆರಸ, ಜೇನುತುಪ್ಪ, ಚಕ್ಕೆ ಸೇರಿಸಿ ಕುಡಿಯಿರಿ ಎಂದು ಹಲವರು ಸಲಹೆ ನೀಡುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಬರೀ ಬಿಸಿನೀರು ಕುಡಿದ್ರೆ ತೂಕ ಇಳಿಯುತ್ತಾ ಇಲ್ವಾ ಅನ್ನೋದು ಹಲವರ ಪ್ರಶ್ನೆ. ನಿಮ್ಮಲ್ಲೂ ಈ ಪ್ರಶ್ನೆ ಮೂಡಿದ್ರೆ ಇಲ್ಲಿದೆ ಉತ್ತರ.

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿದ್ರೆ ತೂಕ ಇಳಿಯುತ್ತಾ; ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿದ್ರೆ ತೂಕ ಇಳಿಯುತ್ತಾ; ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

ತೂಕ ಇಳಿಸೋ ವಿಚಾರಕ್ಕೆ ಬಂದ್ರೆ, ಯಾರು ಏನೇ ಹೇಳಿದ್ರು ಅವರ ಸಲಹೆಯನ್ನು ನಾವು ಪಾಲಿಸುತ್ತೇವೆ. ಹೇಗಾದ್ರೂ ಒಮ್ಮೆ ತೂಕ ಕಡಿಮೆ ಆದ್ರೆ ಸಾಕು ಅಂತ ನೂರಾರು ಕ್ರಮಗಳನ್ನು ಪಾಲಿಸುತ್ತೇವೆ. ತೂಕ ಇಳಿಸೋಕೆ ವರ್ಕೌಟ್‌, ವಾಕಿಂಗ್‌ ಅಂತ ಹರಸಾಹಸ ಪಡೋದು ಸಹಜ. ಕೆಲವರು ಡಯೆಟ್‌ ಮೂಲಕ ತೂಕ ಇಳಿಸೋಕೆ ಟ್ರೈ ಮಾಡ್ತಾರೆ. ಪೌಷ್ಟಿಕ ಆಹಾರ ಸೇವನೆಯ ಮೂಲಕ ತೂಕ ಇಳಿಸೋಕೆ ಪ್ರಯತ್ನ ಮಾಡ್ತಾರೆ. ಅದರೊಂದಿಗೆ ಬಹುತೇಕ ಜನ ಪಾಲಿಸುವ ಇನ್ನೊಂದು ಕ್ರಮ ಜೇನುತುಪ್ಪ, ನಿಂಬೆರಸ ಹಾಗೂ ದಾಲ್ಚಿನ್ನಿಯನ್ನು ಬಿಸಿನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರಿಗೆ ಇವನ್ನು ಸೇರಿಸಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತಾರೆ ಅನ್ನೋದು ಡಯಟಿಷೀಯನ್‌ಗಳ ಅಭಿಪ್ರಾಯ ಕೂಡ ಹೌದು.

ಆದರೆ ಬರೀ ಬಿಸಿ ನೀರು ಕುಡಿದ್ರೆ ತೂಕ ಇಳಿಯುತ್ತಾ, ಅನ್ನೋ ಪ್ರಶ್ನೆ ಹಲವರು ಕೇಳುತ್ತಾರೆ. ಅದಕ್ಕೆ ಖಂಡಿತ ಹೌದು ಅಂತಾರೆ ತಜ್ಞರು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಅಥವಾ ಉಗುರು ಬೆಚ್ಚನೆಯ ನೀರು ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಇದು ತೂಕ ಇಳಿಯಲು ಉತ್ತಮ ಪರಿಹಾರ ಎನ್ನುವುದು ತಜ್ಞರ ಸಲಹೆ. ಹಾಗಾದ್ರೆ ಇದು ತೂಕ ಇಳಿಯಲು ಹೇಗೆ ಸಹಾಯ ಮಾಡುತ್ತೆ ನೋಡಿ.

ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಇಷ್ಟೆಲ್ಲಾ ಲಾಭವಿದೆ

ಹೈಡ್ರೇಷನ್‌: ಪ್ರತಿದಿನ ಬೆಳಿಗ್ಗೆ ಎದ್ದಾಕ್ಷಣ ಒಂದು ಲೋಟ ಬಿಸಿನೀರು ಕುಡಿಯುವುದರಿಂದ ನಿಮ್ಮ ದೇಹವು ಹೈಡ್ರೇಟ್‌ ಆಗುತ್ತದೆ. ನಮ್ಮ ಒಟ್ಟಾರೆ ಆರೋಗ್ಯ ಹಾಗೂ ತೂಕ ನಿರ್ವಹಣೆಗೆ ಹೈಡ್ರೇಟ್‌ ಆಗಿರುವುದು ತುಂಬಾ ಮುಖ್ಯ. ಇದು ಚಯಾಪಚಯ ಕ್ರಿಯೆಯನ್ನು ವೃದ್ಧಿಸಿ, ತೂಕ ಹೆಚ್ಚಲು ಸಹಾಯ ಮಾಡುತ್ತದೆ.

ಹಸಿವನ್ನು ನಿಯಂತ್ರಿಸುತ್ತದೆ: ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದಂತಿರುತ್ತದೆ. ಇದು ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಕ್ಯಾಲೋರಿ ಅಂಶಗಳುಳ್ಳ ಆಹಾರ ಸೇವನೆಯನ್ನು ನಿಯಂತ್ರಿಸಿ ತೂಕ ಹೆಚ್ಚಲು ಸಹಾಯ ಮಾಡುತ್ತದೆ,

ಜೀರ್ಣಕ್ರಿಯೆ ವೃದ್ಧಿಸುತ್ತದೆ: ಬಿಸಿನೀರು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಚಯಾಪಚಯ ಕ್ರಿಯೆ ವೃದ್ಧಿಯಾಗಲು ಇದು ಸಹಕಾರಿ, ಇದು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಜೊತೆಗೆ ಜೀರ್ಣಾಂ ವ್ಯೂಹದಲ್ಲಿ ಆಹಾರ ವಿಭಜನೆಗೆ ಸಹಾಯ ಮಾಡುತ್ತದೆ.

ನಿರ್ವಿಶೀಕರಣ: ದೇಹದಲ್ಲಿನ ವಿಷಾಂಶವನ್ನು ಹೊರಹಾಕುವ ಮೂಲಕ ನಿರ್ವಿಶೀಕರಣ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಇದರ ಬಗ್ಗೆ ವೈಜ್ಞಾನಿಕ ಪುರಾವೆಗಳು ಇಲ್ಲ ಎಂದಾದರೂ ತಜ್ಞರು ಇದನ್ನು ಒಪ್ಪುತ್ತಾರೆ.

ವಿಶ್ರಾಂತಿ: ಬಿಸಿ ನೀರು ಕುಡಿಯುವುದರಿಂದ ದೇಹ ಶಾಂತವಾಗುವುದು ಮಾತ್ರವಲ್ಲ ಹಿತವಾದ ಅನುಭವ ಸಿಗುತ್ತದೆ. ಪ್ರತಿದಿನ ಬೆಳಗೆದ್ದು ಒಂದು ಲೋಟ ಬೆಚ್ಚಗಿನ ನೀರು ಕುಡಿಯುವುದರಿಂದ ಒತ್ತಡ ಮಟ್ಟ ಕಡಿಮೆಯಾಗುತ್ತದೆ. ಬಾಯಿಗೆ ರುಚಿಸಿದ್ದೆಲ್ಲಾ ತಿನ್ನಬೇಕು ಎನ್ನುವ ಬಯಕೆಯನ್ನು ಇದು ನಿಯಂತ್ರಿಸುತ್ತದೆ. ನಿದ್ದೆಯ ಗುಣಮಟ್ಟ ಸುಧಾರಿಸುವ ಮೂಲಕ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಬಿಸಿನೀರು ಕುಡಿದ ಒಂದೇ ತಿಂಗಳಲ್ಲಿ ತೂಕ ಕಡಿಮೆಯಾಗುತ್ತದೆ ಎಂದೇನಿಲ್ಲ. ನಿಯಮಿತವಾಗಿ ಕುಡಿಯುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ. ಆದರೆ ಬಿಸಿನೀರು ಕುಡಿಯುವ ಜೊತೆಗೆ ನಿಯಮಿತ ವ್ಯಾಯಾಮ ಹಾಗೂ ಸಮತೋಲಿತ ಆಹಾರ ಸೇವನೆ ಕೂಡ ಮುಖ್ಯವಾಗುತ್ತದೆ ಎನ್ನುವುದನ್ನು ಮರೆಯದಿರಿ.