ಕನ್ನಡ ಸುದ್ದಿ  /  Lifestyle  /  Weight Loss How Loss Weight Naturally At Home 5 Natural Ways To Burn Fat Sustainably Weight Loss Tips Rst

Weight Loss Tips: ಜಿಮ್‌ಗೂ ಹೋಗ್ದೆ, ವರ್ಕ್‌ಔಟ್‌ ಮಾಡ್ದೆ ನೈಸರ್ಗಿಕ ವಿಧಾನದಲ್ಲೇ ತೂಕ ಇಳಿಸಬೇಕು ಅನ್ನೋರಿಗೆ ಇಲ್ಲಿದೆ ಟಿಪ್ಸ್‌

ಜಿಮ್‌ಗೆ ಹೋಗೋಕೆ ಮನಸ್ಸಿಲ್ಲ, ವರ್ಕೌಟ್‌ ಮಾಡೋಕೆ ಟೈಮಿಲ್ಲ, ಆದ್ರೂ ತೂಕ ಇಳಿಸಬೇಕು ಅನ್ನೋರ ಲಿಸ್ಟ್‌ ಅಲ್ಲಿ ನೀವೂ ಇದ್ರೆ ನೈಸರ್ಗಿಕ ವಿಧಾನದಲ್ಲಿ ತೂಕ ಇಳಿಸಲು ನಿಮಗಾಗಿ ಇಲ್ಲಿದೆ ಟಿಪ್ಸ್‌. ಈ ಕ್ರಮವನ್ನು ತಪ್ಪದೇ ಪಾಲಿಸಿದ್ರೆ ನೀವು ಸ್ಲಿಮ್‌ ಆಗೋದ್ರಲ್ಲಿ ಅನುಮಾನವಿಲ್ಲ.

ಜಿಮ್‌ಗೂ ಹೋಗ್ದೆ, ವರ್ಕ್‌ಔಟ್‌ ಮಾಡ್ದೆ ನೈಸರ್ಗಿಕ ವಿಧಾನದಲ್ಲೇ ತೂಕ ಇಳಿಸಬೇಕು ಅನ್ನೋರಿಗೆ ಇಲ್ಲಿದೆ ಟಿಪ್ಸ್‌
ಜಿಮ್‌ಗೂ ಹೋಗ್ದೆ, ವರ್ಕ್‌ಔಟ್‌ ಮಾಡ್ದೆ ನೈಸರ್ಗಿಕ ವಿಧಾನದಲ್ಲೇ ತೂಕ ಇಳಿಸಬೇಕು ಅನ್ನೋರಿಗೆ ಇಲ್ಲಿದೆ ಟಿಪ್ಸ್‌

ಇತ್ತೀಚಿನ ದಿನಗಳಲ್ಲಿ ಜನರನ್ನು ಅತಿಯಾಗಿ ಕಾಡುವ ಸಮಸ್ಯೆ ಎಂದರೆ ತೂಕ. ಕಾರಣವಿಲ್ಲದೇ ತೂಕ ಏರಿಕೆಯಾಗುತ್ತದೆ. ಆದರೆ ತೂಕ ಇಳಿಸುವ ವಿಚಾರಕ್ಕೆ ಬಂದರೆ ಹೇಗಪ್ಪಾ ತೂಕ ಇಳಿಸೋದು, ಏನೇ ಮಾಡಿದ್ರು ತೂಕ ಇಳಿತಾ ಇಲ್ವಲ್ಲಾ ಅಂತ ಕೊರಗುವವರೇ ಜಾಸ್ತಿ. ಜಿಮ್‌, ವರ್ಕೌಟ್‌ ಮಾಡಿ ತೂಕ ಇಳಿಸಿದ್ರೂ ಅದನ್ನ ನಿಲ್ಲಿಸಿದ್ರೆ ಮತ್ತೆ ತೂಕ ಹೆಚ್ಚುತ್ತೆ ಅನ್ನೋ ಭಯ ಕೂಡ ಇರುತ್ತೆ. ಅದಕ್ಕಾಗಿ ನೈಸರ್ಗಿಕ ವಿಧಾನದಲ್ಲಿ ತೂಕ ಇಳಿಸುವ ಕ್ರಮಗಳನ್ನು ಅನುಸರಿಸಬೇಕು. ದೇಹದಲ್ಲಿನ ಕ್ಯಾಲೊರಿ ಬರ್ನ್‌ ಮಾಡುವ ಉದ್ದೇಶದಿಂದ ಒಬ್ಬೊಬ್ಬರು ಒಂದೊಂದು ರೀತಿಯ ಕ್ರಮಗಳನ್ನು ಅನುಸರಿಸುತ್ತಾರೆ. ಕ್ರ್ಯಾಶ್‌ ಡಯೆಟ್‌ನಂತಹ ಕ್ರಮಗಳು ಕ್ಯಾಲೊರಿ ಕಡಿಮೆ ಮಾಡಿದರೂ ಕೂಡ ಇದು ಆರೋಗ್ಯಕರ ವಿಧಾನವಲ್ಲ. ತ್ವರಿತವಾಗಿ ತೂಕ ಇಳಿಸುವ ಈ ಕ್ರಮವು ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡಬಹುದು. ಹಾಗಾಗಿ ತೂಕ ಇಳಿಸುವ ವಿಚಾರದಲ್ಲಿ ಸಮರ್ಥನೀಯ ಗುರಿಗಳನ್ನು ಹೊಂದಿರಬೇಕು. ನೈಸರ್ಗಿಕ ವಿಧಾನದಲ್ಲಿ ತೂಕ ಇಳಿಸಲು ಪ್ರಯತ್ನ ಮಾಡುವುದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮವೂ ಕಡಿಮೆ.

ನೀವು ತೂಕ ಇಳಿಕೆಗೆ ಪ್ರಯತ್ನ ಮಾಡುತ್ತಿದ್ದರೆ, ನಿಮ್ಮ ದೇಹದ ಮೇಲೆ ಮ್ಯಾಜಿಕಲ್‌ ಪರಿಣಾಮಗಳನ್ನು ಉಂಟು ಮಾಡಲಿದೆ ಈ ಪಾನೀಯಗಳು.

ತೂಕ ಇಳಿಕೆಗೆ ಸಹಾಯ ಮಾಡುವ ನೈಸರ್ಗಿಕ ವಿಧಾನಗಳು 

ದಾಲ್ಚಿನ್ನಿ: ಭಾರತೀಯರ ಅಡುಗೆಮನೆಯಲ್ಲಿ ಸಿಗುವ ಈ ಒಂದು ವಸ್ತು ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ನಂಬರ್‌ ಒನ್‌ ಪ್ಲೇಸ್‌ನಲ್ಲಿರುವುದು ಸುಳ್ಳಲ್ಲ. ಇದರಲ್ಲಿ ಆಂಟಿಆಕ್ಸಿಡೆಂಟ್‌, ಆಂಟಿ ಬ್ಯಾಕ್ಟೀರಿಯಲ್‌ ಅಂಶಗಳು ಸಮೃದ್ಧವಾಗಿವೆ. ಇದರಲ್ಲಿರುವ ಪೋಷಕಾಂಶಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಕೊಲೆಸ್ಟ್ರಾಲ್‌ ಅಂಶವೂ ಕಡಿಮೆ ಇದ್ದು, ಕೊಬ್ಬಿನಾಂಶ ನಿವಾರಣೆಗೂ ಇದು ಸಹಕಾರಿ. ಇಂದು ಚಮಚ ದಾಲ್ಚಿನ್ನಿ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ನಿರಂತರವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಬೇಗನೆ ತೂಕ ಇಳಿಯುತ್ತದೆ.

ಸಾಕಷ್ಟು ನೀರು ಕುಡಿಯಿರಿ: ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯವಾಗುತ್ತದೆ. ನೀರು ಕುಡಿಯುವುದು ನಮ್ಮ ಒಟ್ಟಾರೆ ಆರೋಗ್ಯಕ್ಕೂ ಉತ್ತಮ. ಹೆಚ್ಚು ನೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ, ಇದು ಚಯಾಪಚಯ ಕ್ರಿಯೆ ವೃದ್ಧಿಯಾಗಲು ಸಹಕಾರಿ. ಜೊತೆಗೆ ಜೀರ್ಣಕ್ರಿಯೆಯನ್ನೂ ಹೆಚ್ಚಿಸುತ್ತದೆ. ಪ್ರತಿದಿನ 8 ಕಪ್‌ಗೂ ಅಧಿಕ ನೀರು ಕುಡಿಯುವುದು ಬಹಳ ಮುಖ್ಯ.

ನಾರಿಶಾಂಶ ಸಮೃದ್ಧ ಆಹಾರ ಸೇವನೆ: ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ನಾರಿನಾಂಶ ಸಮೃದ್ಧವಾಗಿರುವ ಆಹಾರ ಸೇವಿಸುವುದು ಬಹಳ ಮುಖ್ಯವಾಗುತ್ತದೆ. ಇದು ಹೊಟ್ಟೆ ತುಂಬಿದಂತಿದ್ದು, ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಹಣ್ಣು, ತರಕಾರಿ, ಧಾನ್ಯಗಳು, ಒಣ ಹಣ್ಣುಗಳನ್ನು ನಿಮ್ಮ ಡಯೆಟ್‌ ಕ್ರಮದಲ್ಲಿ ಸೇರಿಸಿಕೊಳ್ಳಿ. ಈ ಆಹಾರಗಳು ದೇಹಕ್ಕೆ ಅಗತ್ಯ ಪೋಷಕಾಂಶವನ್ನೂ ಒದಗಿಸುತ್ತದೆ.

ಪ್ರೊಟೀನ್‌ ಸಮೃದ್ಧ ಆಹಾರ: ತೂಕ ಇಳಿಕೆಗೆ ವಿಚಾರಕ್ಕೆ ಬಂದಾಗ ಪ್ರೊಟೀನ್‌ಗಳು ಬಹಳ ಮುಖ್ಯವಾಗುತ್ತವೆ. ಇವು ಸ್ನಾಯುಗಳ ಬೆಳವಣಿಗೆಗೂ ಉತ್ತಮ. ಚಯಾಪಚಯವನ್ನು ವೃದ್ಧಿಸುವ ಜೊತೆಗೆ ಹಸಿವನ್ನೂ ನಿಯಂತ್ರಿಸಲು ಇವು ಸಹಾಯ ಮಾಡುತ್ತವೆ. ನೀವು ಸೇವಿಸುವ ಆಹಾರದ ಜೊತೆಗೆ ಕೋಳಿ, ಮೀನು, ಮೊಟ್ಟೆ, ಪನೀರ್‌, ಬೀನ್ಸ್‌, ಮಸೂರ ಬೇಳೆಯಂತಹ ಪ್ರೊಟೀನ್‌ ಸಮೃದ್ಧ ಆಹಾರಗಳನ್ನೂ ಸೇರಿಸಿಕೊಳ್ಳಿ. ಇವು ಆಹಾರದ ಕಡುಬಯಕೆಗಳನ್ನು ನಿಯಂತ್ರಿಸಲು ಸಹಕಾರಿ.

ಊಟವನ್ನು ವಿಭಾಗಿಸಿ ತಿನ್ನುವುದು: ಇದೇನು ಊಟವನ್ನು ವಿಭಾಗಿಸಿ ತಿನ್ನುವುದು ಎಂದುಕೊಳ್ಳಬೇಡಿ, ತೂಕ ಇಳಿಸುವುದು ಎಂದಾಕ್ಷಣ ಕಡಿಮೆ ತಿನ್ನುವುದು ಎಂದಲ್ಲ. ನೀವು ತಿನ್ನುವ ಊಟವನ್ನೇ ವಿಭಾಗಿಸಿ ತಿನ್ನಿ. ಆಗ ಮಧ್ಯೆ ಮಧ್ಯೆ ಹಸಿವಾಗುವುದು ನಿಲ್ಲುತ್ತದೆ. ಇದರಿಂದ ನೀವು ಸಿಕ್ಕ ಸಿಕ್ಕ ಆಹಾರ ತಿನ್ನುವುದಕ್ಕೂ ಕಡಿವಾಣ ಹಾಕುತ್ತೀರಿ. ನಿಮ್ಮ ಆಹಾರ ಪದ್ಧತಿಯ ಬಗ್ಗೆ ಕಟ್ಟುನಿಟ್ಟು ಪಾಲಿಸುವುದು ಬಹಳ ಮುಖ್ಯವಾಗುತ್ತದೆ. ನಿಧಾನವಾಗಿ ತಿನ್ನುವುದು, ಸಂಪೂರ್ಣವಾಗಿ ಅಗಿಯುವುದು ಕೂಡ ತೂಕ ಇಳಿಕೆಗೆ ಸಹಾಯ ಮಾಡುತ್ತವೆ.

ಇವೆಲ್ಲದವರ ಜೊತೆಗೆ ವಾಕಿಂಗ್‌, ಜಾಗಿಂಗ್‌, ಸೈಕ್ಲಿಂಗ್‌ನಂತಹ ಸರಳ ವ್ಯಾಯಾಮಗಳನ್ನು ಮಾಡುವುದು ಕೂಡ ಬಹಳ ಮುಖ್ಯವಾಗುತ್ತದೆ. ನೀವು ತೂಕ ಇಳಿಸಲು ಪ್ಲಾನ್‌ ಮಾಡ್ತಾ ಇದ್ದೂ, ಏನೇ ಮಾಡಿದ್ರೂ ತೂಕ ಇಳಿತಾ ಇಲ್ಲ ಅನ್ನೋ ಯೋಚನೆ ನಿಮ್ಮಲ್ಲೂ ಇದ್ರೆ ಈ ಮೇಲಿನ ಕ್ರಮಗಳನ್ನು ತಪ್ಪದೇ ಪಾಲಿಸಿ.

(This copy first appeared in Hindustan Times Kannada website. To read more like this please logon to kannada.hindustantimes.com)