ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ವರ್ಕೌಟ್, ಕಠಿಣ ಆಹಾರ ಕ್ರಮ; 41ನೇ ವಯಸ್ಸಿನಲ್ಲಿ 13 ಕೆಜಿ ತೂಕ ಇಳಿಸಿಕೊಂಡ ಡಾ ಭರತ್ ಕೌಶಿಕ್ ಇತರರಿಗೆ ಸ್ಪೂರ್ತಿ

Weight Loss: ವರ್ಕೌಟ್, ಕಠಿಣ ಆಹಾರ ಕ್ರಮ; 41ನೇ ವಯಸ್ಸಿನಲ್ಲಿ 13 ಕೆಜಿ ತೂಕ ಇಳಿಸಿಕೊಂಡ ಡಾ ಭರತ್ ಕೌಶಿಕ್ ಇತರರಿಗೆ ಸ್ಪೂರ್ತಿ

41ನೇ ವಯಸ್ಸಿನಲ್ಲಿ ಡಾ ಭರತ್ ಕೌಶಿಕ್ ಎಂಬುವರು 13 ಕೆಜಿ ತೂಕವನ್ನು ಇಳಿಸಿಕೊಂಡು ಯುವಕರು ನಿಬ್ಬೆರಗಾಗುವಂತೆ ಮಾಡಿದ್ದಾರೆ. ಅವರ ಆಹಾರ ಕ್ರಮ ಹಾಗೂ ಕಠಿಣ ವ್ಯಾಯಾಮ ಹೇಗಿತ್ತು ಅನ್ನೋದನ್ನು ತಿಳಿಯೋಣ.

ವರ್ಕೌಟ್, ಕಠಿಣ ಆಹಾರ ಕ್ರಮ; 41ನೇ ವಯಸ್ಸಿನಲ್ಲಿ 13 ಕೆಜಿ ತೂಕ ಇಳಿಸಿಕೊಂಡ ಡಾ ಭರತ್ ಕೌಶಿಕ್ ಇತರರಿಗೆ ಸ್ಪೂರ್ತಿ (ಫೋಟೊ-TOI)
ವರ್ಕೌಟ್, ಕಠಿಣ ಆಹಾರ ಕ್ರಮ; 41ನೇ ವಯಸ್ಸಿನಲ್ಲಿ 13 ಕೆಜಿ ತೂಕ ಇಳಿಸಿಕೊಂಡ ಡಾ ಭರತ್ ಕೌಶಿಕ್ ಇತರರಿಗೆ ಸ್ಪೂರ್ತಿ (ಫೋಟೊ-TOI)

ಬೆಂಗಳೂರು: ಮನಸ್ಸಿದ್ದತೆ ಮಾರ್ಗ, ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಆಗಾಗ ನಮ್ಮ ನಡುವಿನ ಜನರೇ ನಿದರ್ಶನರಾಗಿ ಸಿಗುತ್ತಾರೆ. ಉತ್ತಮ ಜೀವನ ಶೈಲಿ (Lifestyle) ಮತ್ತು ಆಹಾರದ (Food) ಕ್ರಮ ಸರಿಯಾಗಿದ್ದರೆ ಮಾತ್ರ ಉತ್ತಮ ಆರೋಗ್ಯ (Good Health) ಹಾಗೂ ಫಿಟ್ನೆಸ್ (Fitness) ಸಾಧ್ಯವಾಗುತ್ತದೆ. ಡಾ ಭರತ್ ಕೌಶಿಕ್ (Dr Bharat Kaushik) ಎಂಬುವರು ತನ್ನ 41ನೇ ವಯಸ್ಸಿನಲ್ಲಿ ಬರೋಬ್ಬರಿ 13 ಕೆಜಿ ತೂಕವನ್ನು ಇಳಿಸಿಕೊಂಡು ಇದೀಗ ಸ್ಲಿಮ್ ಫಿಟ್ ಆಗಿದ್ದಾರೆ. ವಯಸ್ಸಿಗೆ ತಕ್ಕಂತೆ ದೇಹವನ್ನು ದಂಡಿಸಿಕೊಂಡು ಆರೋಗ್ಯವಾಗಿದ್ದಾರೆ. ಡಾ ಭರತ್ ಅವರಿಗೆ ಇದೆಲ್ಲಾ ಹೇಗೆ ಸಾಧ್ಯವಾಯಿತು, ಆಹಾರ ಆಹಾರದ ಕ್ರಮ ಹೇಗಿತ್ತು, ಏನೆಲ್ಲಾ ವರ್ಕೌಟ್ ಮಾಡುತ್ತಿದ್ದರು ಎಂಬುದನ್ನು ಇವೊಂದು ವಿಶೇಷ ಸ್ಟೋರಿಯಲ್ಲಿ ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

ಡಾ ಭರತ್ ಕೌಶಿಕ್ ಅವರು ಸ್ಲಿಮ್ ಆಗಿಯೇ ಇದ್ದರು. ಆದರೆ ಕೋವಿಡ್ ಸಮಯ ಅವರನ್ನು ಜರ್ಜರಿತವಾಗಿಸಿದೆ. ಮೊದಲು ಇವರಿಗೆ ಕೋವಿಡ್-19 ಸೋಂಕು ತಗುಲಿದೆ. ಇದರಿಂದ ನಿಷ್ಕ್ರಿಯತೆ ಮತ್ತು ದೇಹದ ತೂಕ ಹೆಚ್ಚಾಗಿದೆ. ಇದೇ ಸಮಯದಲ್ಲಿ ಇವರ ತಂದೆ ಮತ್ತು ಸಹೋದರಿಯನ್ನು ಕಳೆದುಕೊಂಡಿದ್ದಾರೆ. ಈ ಬೆಳವಣಿಗೆಗಳು ಇವರನ್ನು ಮತ್ತಷ್ಟು ಆಲಸ್ಯ ಹಾಗೂ ಕುಗ್ಗುವಂತೆ ಮಾಡಿದೆ. ನಂತರ ನಿಧಾನವಾಗಿ ಸುಧಾರಿಸಿಕೊಂಡ ಭರತ್ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ತೂಕ ನಷ್ಟಕ್ಕೆ ನಷ್ಟಕ್ಕೆ ಪಣತೊಟ್ಟ ಡಾ ಭರತ್ ಕೌಶಿಕ್ ಅವರು ಮೊದಲು ಟೇಕ್ವಾಂಡೋ ತರಬೇತಿ ಮೂಲಕ ತನ್ನ ಮಗಳ ಉತ್ಸಾಹವನ್ನು ಕಂಡು ತಾನು ಕೂಡ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಭರವಸೆ ನೀಡಿದ್ದಾರೆ. ಅದರಂತೆ ಆಹಾರದಲ್ಲಿ ಕಠಿಣ ಕ್ರಮ ಮತ್ತು ವರ್ಕೌಟ್ ಆರಂಭಿಸಿದ್ದಾರೆ.

ತೂಕ ಇಳಿಸಿಕೊಳ್ಳಲು ಆಹಾರದ ಕ್ರಮ ಹೇಗಿತ್ತು?

ಡಾ ಭರತ್ ಅವರು ದೈಹಿಕ ಆರೋಗ್ಯಕ್ಕೆ ಒತ್ತು ನೀಡುವ ಜೊತೆಗೆ ಭಾವನಾತ್ಮಕ ಮತ್ತು ಅಧ್ಯಾತ್ಮಿಕ ಬೆಳವಣಿಗೆಗೆ ಆಹಾರ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರಿತುಕೊಂಡಿದ್ದಾರೆ. ಸದ್ಗುರು ಮತ್ತು ಸಾತ್ವಿಕ್ ಆಂದೋಲನದೊಂದಿಗೆ ಪ್ರೇರಿತರಾಗಿ ಸಸ್ಯಹಾರ ಮತ್ತು ಜೈನ ಆಹಾರ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ. ಆಹಾರದ ಭಾಗವಾಗಿ ತಾಜಾ ತರಕಾರಿಗಳು, ಹಣ್ಣುುಗಳು, ಧಾನ್ಯಗಳು, ಕಾಳುಗಳು ಹಾಗೂ ಆರೋಗ್ಯಕರ ಕೊಬ್ಬು ಸಮೃದ್ಧವಾಗಿರುವ ಪದಾರ್ಥಗಳನ್ನೇ ಹೆಚ್ಚಾಗಿ ತಿನ್ನಲು ಶುರು ಮಾಡಿದ್ದಾರೆ. ಈ ಆಹಾರ ಕ್ರಮವನ್ನು ಅಳವಡಿಸಿಕೊಂಡ ಕೆಲವೇ ದಿನಗಳಲ್ಲಿ ಭರತ್ ಅವರು ತಮ್ಮಲ್ಲಿ ಬದಲಾವಣೆಯನ್ನು ಕಂಡಿದ್ದಾರೆ.

ವರ್ಕೌಟ್ ಆಯ್ತು ನಿತ್ಯ 200 ಮೀಟರ್ ಓಟ

ಆರಂಭದಲ್ಲಿ ಡಾ ಭರತ್ ಅವರು ದಿನ ನಿತ್ಯ 200 ಮೀಟರ್ ಓಡಲು ಆರಂಭಿಸಿದ್ದಾರೆ. ಮೊದ ಮೊದಲು ಇದು ಕಷ್ಟ ಎನಿಸಿದರೂ ದಿನಗಳು ಸಾಗುತ್ತಿದ್ದಂತೆ ಅಭ್ಯಾಸ ಮಾಡಿಕೊಳ್ಳುತ್ತಾರೆ. ಕಠಿಣ ಪರಿಶ್ರಮದ ಫಲವಾಗಿ ಕ್ರಮೇಣ ಸುಸ್ತು ಕಡಿಮೆಯಾಗಿ ಓಡುವ ಉತ್ಸಾಹವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆರಾಮವಾಗಿ 8 ರಿಂದ 10 ಕಿಲೋ ಮೀಟರ್ ಓಡುವ ಮಟ್ಟಕ್ಕೆ ಬರುತ್ತಾರೆ. ಓಟ, ವಾಕಿಂಗ್ ಹೀಗೆ 1 ದಿನದಲ್ಲಿ 30 ಕಿಲೋ ಮೀಟರ್ ಕ್ರಮಿಸಿರುವುದಾಗಿ ಡಾ ಭರತ್ ಕೌಶಿಕ್ ಅವರೇ ಹೇಳಿಕೊಂಡಿದ್ದಾರೆ.

ಇವರ ಫಿಟ್ನೆಸ್ ರಹಸ್ಯಗಳನ್ನು ನೋಡುವುದಾದರೆ ದೈಹಿಕ ಫಿಟ್ನೆಸ್‌ಗಿಂತ ಮಾನಸಿಕ ಮತ್ತು ಭಾವನಾತ್ಮಕ ಅಂಶಗಳು ಹೆಚ್ಚು ಅನುಕೂಲವಾಯ್ತು ಎನ್ನುತ್ತಾರೆ. ನಿಯಮಿತ ಧ್ಯಾನ, ಪ್ರಕೃತಿಯೊಂದಿಗೆ ಸಮಯ ಕಳೆಯುವುದರೊಂದಿಗೆ ಮಾನಸಿಕ ಅಸ್ತವ್ಯಸ್ತತೆ ಕಡಿಮೆ ಆಯಿತು. ಅಧಿಕ ತೂಕವು ಆಲಸ್ಯಕ್ಕೆ ಕಾರಣವಾಗಿತ್ತು. ಕೊನೆಗೆ ಆಹಾರದಲ್ಲಿನ ಕಠಿಣ ಕ್ರಮ, ವರ್ಕೌಟ್ ಹಾಗೂ ಭಾವನಾತ್ಮಕ ಅಂಶಗಳ ಪರಿಣಾಮದಿಂದ ತನ್ನ 41ನೇ ವಯಸ್ಸಿನಲ್ಲಿ 13 ಕೆಜಿ ತೂಕವನ್ನು ಇಳಿಸಿಕೊಂಡ ಡಾ ಭರತ್ ಅವರು ಇತರರಿಗೆ ಮಾದರಿಯಾಗಿದ್ದಾರೆ.