ದಿನಚರಿಯಲ್ಲಿ 5 ಸರಳ ಅಭ್ಯಾಸ ಪಾಲಿಸುವ ಮೂಲಕ 70 ಕೆಜಿ ತೂಕ ಇಳಿಸಿಕೊಂಡ ಇನ್ಫ್ಲುಯೆನ್ಸರ್, ಹೀಗಿತ್ತು ಅವರ ತೂಕ ಇಳಿಕೆಯ ಹಾದಿ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಹುತೇಕರು ತಮ್ಮ ವೈಟ್‌ಲಾಸ್ ಜರ್ನಿಯ ಅನುಭವವನ್ನ ಹಂಚಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾ ಇನ್ಫ್ಲುಯೆನ್ಸರ್ ಒಬ್ಬರು ತಮ್ಮ ದಿನಚರಿ ಈ 5 ಸಾಮಾನ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ತಾವು 70 ಕೆಜಿ ತೂಕ ಇಳಿಸಿಕೊಂಡ ಕಥೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. ತೂಕ ಕಡಿಮೆಯಾಗಲು ಅವರು ಮಾಡಿದ್ದೇನು ನೋಡಿ.
ತೂಕ ಇಳಿಕೆಯ ಪಯಣ ಖಂಡಿತ ಸುಲಭವಲ್ಲ, ಒಮ್ಮೆ ತೂಕ ಏರಿಕೆಯಾಯ್ತು ಎಂದರೆ ಇಳಿಸೋದು ಬಹಳ ಕಷ್ಟ. ಇದಕ್ಕಾಗಿ ನೀವು ಸಾಕಷ್ಟು ಶ್ರಮ ಹಾಕಬೇಕಾಗುತ್ತದೆ. ನಾಲಿಗೆ ಇಷ್ಟಪಡುವ ಎಲ್ಲಾ ತಿನಿಸುಗಳನ್ನು ತ್ಯಜಿಸಬೇಕಾಗುತ್ತದೆ. ದೇಹವನ್ನು ದಂಡಿಸುವ ಮೂಲಕ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಮಾಡಬೇಕಾಗುತ್ತದೆ.
ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ಸ್ಥಿರತೆ ಬಹಳ ಮುಖ್ಯ. ಅಂದರೆ ನೀವು ಯಾವ ದಿನಚರಿಯನ್ನ ಪಾಲಿಸುತ್ತೀರೋ ಅದನ್ನು ನಿರಂತರವಾಗಿ ತಪ್ಪದೇ ಮಾಡಬೇಕಾಗುತ್ತದೆ. 4 ದಿನ ಡಯೆಟ್, ಜಿಮ್ ಮಾಡಿ 2 ದಿನ ಸುಮ್ಮನಿರುವುದು ಮಾಡಿದರೆ ಪರಿಣಾಮಕಾರಿಯಾಗಿ ತೂಕ ಇಳಿಸಲು ಸಾಧ್ಯವಾಗುವುದಿಲ್ಲ. ಆದರೆ ನಿಷ್ಠೆ ಹಾಗೂ ಛಲದಿಂದ ಪ್ರಯತ್ನಪಟ್ಟರೆ ತೂಕ ಇಳಿಸೋದು ದೊಡ್ಡ ಸಂಗತಿಯಲ್ಲ ಎಂಬುದನ್ನು ಸಾಬೀತು ಪಡಿಸಿ ತೋರಿಸಿದ್ದಾರೆ ಸೋಷಿಯಲ್ ಮಿಡಿಯಾ ಇನ್ಫ್ಲುಯೆನ್ಸರ್ ಒಬ್ಬರು. ಅವರು 70 ಕೆಜಿ ತೂಕ ಇಳಿಸಿಕೊಂಡಿದ್ದು ತಮ್ಮ ಡಯೆಟ್ ಕ್ರಮ ಹಾಗೂ ದೈನಂದಿನ ದಿನಚರಿ ಹೇಗಿತ್ತು ಎಂಬುದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ತೂಕ ನಷ್ಟದ ಹಾದಿಗೆ ನೆರವಾದ 5 ಸರಳ ಅಭ್ಯಾಸಗಳು
ಆಹಾರ ಹಾಗೂ ವ್ಯಾಯಾಮದ ಹೊರತಾಗಿಯೂ ನಮ್ಮ ದೈನಂದಿನ ದಿಚರಿಯು ಆರೋಗ್ಯಕರ ಜೀವನಶೈಲಿಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ.
ಆ ಇನ್ಫ್ಲುಯೆನ್ಸರ್ ತಮ್ಮ ತೂಕ ಇಳಿಕೆಯ ಪಯಣದ ಬಗ್ಗೆ ಮಾತನಾಡುತ್ತಾ ‘ಒಂದೇ ಬಾರಿ ತೂಕ ಇಳಿಯಬೇಕು ಎಂಬ ಹಟಕ್ಕೆ ಬಿದ್ದು, ಅದರ ಮೇಲೆ ಗಮನ ಹರಿಸಿದ್ದರೆ ಖಂಡಿತ ನನ್ನಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಅನ್ನಿಸುತ್ತದೆ. ನಾನು ನಿಧಾನಕ್ಕೆ ಒಂದೊಂದೇ ಹಂತವಾಗಿ ತೂಕ ಇಳಿಸಿಕೊಳ್ಳುವ ಯೋಚನೆ ಮಾಡಿದೆ. ದಿನದಿಂದ ದಿನಕ್ಕೆ ಹಂತ ಹಂತವಾಗಿ ಸಾಗುವ ಮೂಲಕ ತೂಕ ಇಳಿಸಿಕೊಳ್ಳುತ್ತಾ ಹೋದೆ. ಒಂದೇ ಬಾರಿಗೆ ತೂಕ ಇಳಿಯಬೇಕು ಎಂದು ಇಲ್ಲದ ಸಾಹಸಕ್ಕೆ ಕೈ ಹಾಕುವ ಬದಲು ದೃಢ ನಿರ್ಧಾರ ಹಾಗೂ ಬದ್ಧತೆಯ ಮೂಲಕ ತೂಕ ಇಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಆಕೆ ಸಲಹೆ ನೀಡುತ್ತಾರೆ.
ತೂಕ ಇಳಿಸುವ ವಿಚಾರದಲ್ಲಿ ಅವರು ನಮ್ಮ ದೈನಂದಿನ ದಿನಚರಿಯಲ್ಲಿ ಈ 5 ಅಭ್ಯಾಸಗಳನ್ನು ತಪ್ಪದೇ ಪಾಲಿಸುತ್ತಿದ್ದರು. ಆ ಮೂಲಕ 70 ಕೆಜಿ ತೂಕ ಇಳಿಸಿಕೊಂಡು ಬಳುಕೋ ಬಳ್ಳಿಯಂತಾಗುತ್ತಾರೆ. ಆ 5 ಅಭ್ಯಾಸಗಳು ಯಾವುವು ನೋಡಿ.
- ಅವರು ತಮ್ಮ ಪ್ರತಿ ಊಟದಲ್ಲೂ ಇಂತಿಷ್ಟು ಪ್ರಮಾಣದ ಪ್ರೊಟೀನ್ ಅಂಶ ಇರುವಂತೆ ನೋಡಿಕೊಳ್ಳುತ್ತಿದ್ದರು.
- ಪ್ರತಿದಿನ ತಪ್ಪದೇ ವಾಕಿಂಗ್ ಮಾಡುತ್ತಿದ್ದರು.
- ಕ್ಯಾಲೊರಿ ಅಂಶ ಇರುವ ಪಾನೀಯಗಳಿಗೆ ಬ್ರೇಕ್ ಹಾಕಿ ಹೆಚ್ಚು ನೀರು ಕುಡಿಯುತ್ತಿದ್ದರು
- ತೂಕ ಇಳಿಕೆಗೆ ನೆರವಾಗುವಂತಹ ಚಟುವಟಿಕೆಗಳನ್ನು ತಪ್ಪದೇ ಮಾಡುತ್ತಿದ್ದರು
- ಆಹಾರದ ವಿಚಾರಕ್ಕೆ ಬಂದರೆ ಆಕೆ ನನಗೆ ಇಷ್ಟವಾಗುವುದನ್ನೆಲ್ಲಾ ತಿನ್ನುತ್ತಿದ್ದರು
ಈ ಸರಳ ವಿಧಾನವನ್ನು ನಿರಂತರವಾಗಿ ಪಾಲಿಸುವ ಮೂಲಕ 70 ಕೆಜಿಯಷ್ಟು ತೂಕ ಇಳಿಸಿಕೊಂಡ ಮಹಿಳೆಯರ ಹೆಸರು ಅಂಬರ್ ಕ್ಲೆಮೆನ್ಸ್. ವಿದೇಶಿ ಮೂಲದ ಈ ಮಹಿಳೆ ತಮ್ಮ ವೈಟ್‌ಲಾಸ್ ಕಥೆಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಹಲವರಿಗೆ ಸ್ಫೂರ್ತಿಯಾಗಿದ್ದಾರೆ.
ಇಂದಿನ ಮಾರ್ಡನ್ ಜಗತ್ತಿನಲ್ಲಿ ತೂಕ ಇಳಿಕೆ ಎನ್ನುವುದು ಬಹುದೊಡ್ಡ ಸವಾಲಾಗಿರುವ ಕಾರಣ ಬಹುತೇಕರು ತೂಕ ಕಡಿಮೆ ಮಾಡಿಕೊಳ್ಳಲು ಪರದಾಟ ಮಾಡುತ್ತಿದ್ದಾರೆ. ಅಂಥವರಿಗೆ ಇಂತಹ ರಿಯಲ್ ಲೈಫ್ ಕಥೆಗಳು ಸ್ಫೂರ್ತಿಯಾಗುವುದು ಸುಳ್ಳಲ್ಲ.