ಒಂದು ಸಿಂಪಲ್ ಅಭ್ಯಾಸದ ಮೂಲಕ ಬರೋಬ್ಬರಿ 124 ಕೆಜಿ ತೂಕ ಇಳಿಸಿಕೊಂಡ ವ್ಯಕ್ತಿ, ಇವರ ಕಥೆ ನಿಜಕ್ಕೂ ಸ್ಪೂರ್ತಿದಾಯಕ
ಕನ್ನಡ ಸುದ್ದಿ  /  ಜೀವನಶೈಲಿ  /  ಒಂದು ಸಿಂಪಲ್ ಅಭ್ಯಾಸದ ಮೂಲಕ ಬರೋಬ್ಬರಿ 124 ಕೆಜಿ ತೂಕ ಇಳಿಸಿಕೊಂಡ ವ್ಯಕ್ತಿ, ಇವರ ಕಥೆ ನಿಜಕ್ಕೂ ಸ್ಪೂರ್ತಿದಾಯಕ

ಒಂದು ಸಿಂಪಲ್ ಅಭ್ಯಾಸದ ಮೂಲಕ ಬರೋಬ್ಬರಿ 124 ಕೆಜಿ ತೂಕ ಇಳಿಸಿಕೊಂಡ ವ್ಯಕ್ತಿ, ಇವರ ಕಥೆ ನಿಜಕ್ಕೂ ಸ್ಪೂರ್ತಿದಾಯಕ

ಸೈಕ್ಲಿಂಗ್ ಮತ್ತು ಅತ್ಯಧಿಕ ಪ್ರೊಟೀನ್ ಇರುವ ಆಹಾರದ ಮೂಲಕ 124 ಕೆಜಿ ತೂಕ ಇಳಿಸಿಕೊಂಡ ರಯಾನ್ ಗ್ರೆವೆಲ್ ಎನ್ನುವ ವ್ಯಕ್ತಿ ಜಡ ಜೀವನಶೈಲಿಯಿಂದ ತನ್ನ ದೈಹಿಕ, ಮಾನಸಿಕ ಆರೋಗ್ಯವನ್ನು ಹೇಗೆ ಮರಳಿ ಪಡೆದುಕೊಂಡರು ಎನ್ನುವ ಸ್ಫೂರ್ತಿದಾಯಕ ಕಥೆ.

ಒಂದು ಸಿಂಪಲ್ ಅಭ್ಯಾಸದ ಮೂಲಕ ಬರೋಬ್ಬರಿ 124 ಕೆಜಿ ತೂಕ ಇಳಿಸಿಕೊಂಡ ವ್ಯಕ್ತಿಯ ಕಥೆ
ಒಂದು ಸಿಂಪಲ್ ಅಭ್ಯಾಸದ ಮೂಲಕ ಬರೋಬ್ಬರಿ 124 ಕೆಜಿ ತೂಕ ಇಳಿಸಿಕೊಂಡ ವ್ಯಕ್ತಿಯ ಕಥೆ

ರಯಾನ್ ಗ್ರೆವೆಲ್ ಎನ್ನುವ 36 ವರ್ಷದ ವ್ಯಕ್ತಿಯ ತೂಕ ಇಳಿಕೆಯ ಸ್ಟೋರಿ ನಿಜಕ್ಕೂ ಇಂಟರೆಸ್ಟಿಂಗ್. ಇವರು ಬರೋಬ್ಬರಿ 124 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸುಮಾರು 222 ಕೆಜಿ ಇದ್ದ ಅವರು ಕೆಲವು ಸರಳ ಅಭ್ಯಾಸಗಳ ಮೂಲಕ ತೂಕ ಕಡಿಮೆಕೊಳ್ಳುತ್ತಾರೆ. ಸ್ಲೈಕಿಂಗ್‌, ಕ್ಯಾಲೋರಿ ಟ್ರ್ಯಾಕ್ ಮಾಡುವುದು ಮತ್ತು ಆಹಾರದಲ್ಲಿ ಪ್ರೊಟೀನ್‌ಗೆ ಆದ್ಯತೆ ನೀಡಿವುದರ ಮೂಲಕ ಇವರು ಸಾಕಷ್ಟು ತೂಕ ಇಳಿಸಿಕೊಳ್ಳುತ್ತಾರೆ. ಇವರ ತೂಕ ಇಳಿಕೆಯ ಸ್ಟೋರಿ ಇಲ್ಲಿದೆ.

ತಮ್ಮ ತೂಕ ಇಳಿಕೆ ಪಯಣದ ಬಗ್ಗೆ ನ್ಯೂಸ್ ವೀಕ್ ಜೊತೆ ಮಾತನಾಡಿರುವ ರಯಾನ್ ತಮ್ಮ ಜಡ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿ, ಹೆಚ್ಚಿನ ಊಟದ ಹೊತ್ತು ಫಾಸ್ಟ್ ಫುಡ್ ತಿನ್ನುವುದು, 500 ಕ್ಯಾಲೊರಿಗಳ ದೈನಂದಿನ ಸೇವನೆಯು ನಿರಂತರ ತೂಕ ಹೆಚ್ಚಳಕ್ಕೆ ಕಾರಣವಾಗಿತ್ತು ಎನ್ನುತ್ತಾರೆ.

ತೂಕ ಹೆಚ್ಚಳ ಕಾರಣದಿಂದ ಅವರಿಗೆ ಕೀಲುಗಳ ಸಮಸ್ಯೆ ಎದುರಾಗಿತ್ತು. ಪದೇ ಪದೇ ತೂಕ ಏರಿಕೆಯಾಗುತ್ತಲೇ ಇದ್ದಾಗ ಅವರು ಎಚ್ಚೆತ್ತುಕೊಳ್ಳುತ್ತಾರೆ. ಅಲ್ಲದೇ ಹೇಗಾದರೂ ತಾನು ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾರೆ.

ಆರಂಭದಲ್ಲಿ ಇವರು ತೂಕ ಇಳಿಸಿಕೊಳ್ಳಲು ವಾಕಿಂಗ್ ಮಾಡಲು ಪ್ರಯತ್ನಿಸಿದರು. ಆದರೆ ಮೊಣಕಾಲಿನ ಮೇಲೆ ಭಾರ ಹೆಚ್ಚಾಗಿ ನೋವು ಆರಂಭವಾಗಿತ್ತು. ಇದರಿಂದ ತೂಕ ಇಳಿಸಿಕೊಳ್ಳುವುದು ಇನ್ನಷ್ಟು ಕಷ್ಟವಾಗಿತ್ತು, ನಂತರ ಅವರು ಸೈಕ್ಲಿಂಗ್ ಮಾಡುವ ನಿರ್ಧಾರ ಮಾಡುತ್ತಾರೆ.

ರಿಯಾನ್ ತೂಕ ಎಷ್ಟು ಹೆಚ್ಚಾಗಿತ್ತು ಎಂದರೆ ಅತಿಯಾದ ತೂಕದ ಕಾರಣದಿಂದ ಇವರ 2 ಬೈಕ್‌ಗಳು ಮುರಿದು ಹೋಗಿದ್ದವು. ಕೊನೆಗೆ ಅವರು ಸ್ಲೈಕಿಂಗ್ ಮಾಡುವ ನಿರ್ಧಾರ ಮಾಡುತ್ತಾರೆ.

ಕೊನೆಗೆ ಅವರು ಬೆಲೆ ಬಾಳುವ ಸೈಕಲ್ ಮೇಲೆ ಹಣ ಹೂಡಿಕೆ ಮಾಡುತ್ತಾರೆ. ಅದು ಅವರು ಹೆಚ್ಚು ದೂರ ಸವಾರಿ ಮಾಡಲು ಪ್ರಾರಂಭಿಸಿದಾಗ ಅವರಿಗೆ ಬೆಂಬಲ ನೀಡಿತು, ಕೆಲವೊಮ್ಮೆ ಒಂದೇ ಸವಾರಿಯಲ್ಲಿ 100 ಮೈಲುಗಳಿಗಿಂತ ಹೆಚ್ಚು ದೂರ ಕ್ರಮಿಸಿತು.

ಸೈಕ್ಲಿಂಗ್ ಕೊಬ್ಬನ್ನು ಸುಡಲು ಮತ್ತು ಸ್ನಾಯುಗಳನ್ನು ನಿರ್ಮಿಸಲು ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೆ ನಿಯಂತ್ರಣವನ್ನು ಮರಳಿ ಪಡೆಯಲು ಸೈಕ್ಲಿಂಗ್ ಅವರಿಗೆ ಸಹಾಯ ಮಾಡಿತ್ತು. ಸೈಕ್ಲಿಂಗ್ ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಲು ನೆರವಾಯಿತು.

ಒಟ್ಟಾರೆ ಸೈಕ್ಲಿಂಗ್, ಪ್ರೊಟೀನ್ ಸಮೃದ್ಧ ಆಹಾರ ಸೇವನೆ ಈ ಮೂಲಕವೇ ಸಾಕಷ್ಟು ಕೆಜಿ ತೂಕ ಇಳಿಸಿಕೊಂಡು ಮಾದರಿಯಾಗಿದ್ದಾರೆ ರಯಾನ್‌.

ಒಂದಲ್ಲ, ಎರಡಲ್ಲ ಬರೋಬ್ಬರಿ 124 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್ ಆಗಿರುವ ರಯಾನ್ ತೂಕ ಏರಿಕೆಯ ಕಾರಣದಿಂದ ನಾನು ಮಾನಸಿಕ ಹಿಂಸೆ ಎದುರಿಸುತ್ತಿದ್ದೆ, ಆದರೆ ಈಗ ಮಾನಸಿಕವಾಗಿಯೂ ಸದೃಢವಾಗಿದ್ದೇನೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.