Weight Loss Story: ಕೇವಲ 4 ತಿಂಗಳಲ್ಲಿ 10 ಕೆಜಿ ತೂಕ ಕಳೆದುಕೊಂಡ ಮಹಿಳೆ: ಈಕೆಯ ತೂಕ ನಷ್ಟದ ಕಥೆ ನಿಜಕ್ಕೂ ಸ್ಫೂರ್ತಿ-weight loss story real life weight loss journey how tripakhi pathak lost weight prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss Story: ಕೇವಲ 4 ತಿಂಗಳಲ್ಲಿ 10 ಕೆಜಿ ತೂಕ ಕಳೆದುಕೊಂಡ ಮಹಿಳೆ: ಈಕೆಯ ತೂಕ ನಷ್ಟದ ಕಥೆ ನಿಜಕ್ಕೂ ಸ್ಫೂರ್ತಿ

Weight Loss Story: ಕೇವಲ 4 ತಿಂಗಳಲ್ಲಿ 10 ಕೆಜಿ ತೂಕ ಕಳೆದುಕೊಂಡ ಮಹಿಳೆ: ಈಕೆಯ ತೂಕ ನಷ್ಟದ ಕಥೆ ನಿಜಕ್ಕೂ ಸ್ಫೂರ್ತಿ

ತೂಕಇಳಿಕೆಯ ಕಥೆಗಳು ನಿಜಕ್ಕೂ ಎಲ್ಲರಿಗೂ ಸ್ಫೂರ್ತಿದಾಯಕವಾಗಿರುತ್ತದೆ. ತೂಕ ನಷ್ಟದ ಪ್ರಯಾಣದಲ್ಲಿ ಹಲವು ಅಡೆತಡೆಗಳು ಎದುರಾದ್ರೂ ಅವುಗಳನ್ನು ಮೆಟ್ಟಿ ನಿಂತು ಹೇಗೆ ತೂಕ ಕಳೆದುಕೊಳ್ಳಬಹುದು ಎಂಬುದಕ್ಕೆ ಈ ಮಹಿಳೆಯೇ ಸಾಕ್ಷಿ. ಕೇವಲ 4 ತಿಂಗಳಲ್ಲಿ ಬರೋಬ್ಬರಿ 10 ಕೆಜಿ ತೂಕ ಕಳೆದುಕೊಂಡಿದ್ದಾರೆ. ಈಕೆಯ ತೂಕ ಇಳಿಕೆ ಪ್ರಯಾಣದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ತ್ರಿಪಾಖಿ ಪಾಠಕ್ ಎಂಬಾಕೆ ಕೇವಲ ನಾಲ್ಕು ತಿಂಗಳಲ್ಲಿ ಬರೋಬ್ಬರಿ 10 ಕೆಜಿ ತೂಕ ಕಳೆದುಕೊಂಡಿದ್ದಾರೆ.
ತ್ರಿಪಾಖಿ ಪಾಠಕ್ ಎಂಬಾಕೆ ಕೇವಲ ನಾಲ್ಕು ತಿಂಗಳಲ್ಲಿ ಬರೋಬ್ಬರಿ 10 ಕೆಜಿ ತೂಕ ಕಳೆದುಕೊಂಡಿದ್ದಾರೆ. (freepik)

ಇಂದಿನ ದಿನಗಳಲ್ಲಿ ಬಹುತೇಕ ಮಂದಿ ತೂಕ ಇಳಿಕೆಗೆ ಪ್ರಯತ್ನಿಸುತ್ತಲೇ ಇದ್ದಾರೆ. ಪ್ರತಿಯೊಬ್ಬರ ತೂಕ ನಷ್ಟ ಪ್ರಯಾಣವು ವಿಭಿನ್ನವಾಗಿರುತ್ತದೆ. ಆಹಾರ ಕ್ರಮ, ವ್ಯಾಯಾಮ, ಜೀವನ ಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಹಲವರು ತೂಕ ಇಳಿಕೆಗೆ ಪ್ರಯತ್ನಿಸುತ್ತಾರೆ. ಇದರಲ್ಲಿ ಯಶಸ್ಸನ್ನೂ ಕೂಡ ಕಂಡಿರುವವರು ಅನೇಕರಿದ್ದಾರೆ. ಇದೀಗ ಈ ಸಾಲಿಗೆ ತ್ರಿಪಾಖಿ ಪಾಠಕ್ ಎಂಬಾಕೆ ಸೇರ್ಪಡೆಗೊಂಡಿದ್ದು, ಈಕೆಯ ತೂಕ ಇಳಿಕೆಯ ಸ್ಟೋರಿ ಸ್ಫೂರ್ತಿ ನೀಡುವಂಥದ್ದು.

ಕೇವಲ 4 ತಿಂಗಳಲ್ಲಿ 10 ಕೆ.ಜಿ ತೂಕ ಕಳೆದುಕೊಂಡ ತ್ರಿಪಾಖಿ

ಅತ್ಯಂತ ಸಮರ್ಪಣೆ ಮತ್ತು ಕಟ್ಟುನಿಟ್ಟಾದ ದಿನಚರಿಯೊಂದಿಗೆ 4 ತಿಂಗಳಲ್ಲಿ 10 ಕೆ.ಜಿ ತೂಕ ಕಳೆದುಕೊಂಡಿರುವುದಾಗಿ ತ್ರಿಪಾಖಿ ಪಾಠಕ್ ತಿಳಿಸಿದ್ದಾರೆ. ತೂಕ ಇಳಿಸುವುದು ಎಂದರೆ ಅಷ್ಟು ಸುಲಭವಲ್ಲ. ದೃಢ ನಿರ್ಧಾರ ಹಾಗೂ ಆತ್ಮವಿಶ್ವಾಸವಿದ್ದರೆ ಖಂಡಿತಾ ಇದನ್ನು ಸಾಧಿಸಬಹುದು ಅನ್ನೋದನ್ನು ತ್ರಿಪಾಖಿ ಪಾಠಕ್ ಸಾಧಿಸಿ ತೋರಿಸಿದ್ದಾರೆ. ತೂಕ ಇಳಿಕೆಯ ಪ್ರಯಾಣಕ್ಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಿದ್ಧವಾಗಿದ್ದರೆ, ಖಂಡಿತಾ ತೂಕವನ್ನು ಇಳಿಸಿಕೊಳ್ಳುವ ಪ್ರಯತ್ನ ಯಶಸ್ವಿಯಾಗುತ್ತದೆ ಅನ್ನೋದಕ್ಕೆ ತ್ರಿಪಾಖಿ ಅವರೇ ಸ್ಫೂರ್ತಿ ಅಂದರೆ ತಪ್ಪಿಲ್ಲ.

ತೂಕ ನಷ್ಟ ಪ್ರಯಾಣದಲ್ಲಿ ತ್ರಿಪಾಖಿ ಅವರ ಆಹಾರ ಹಾಗೂ ದಿನಚರಿ ಹೀಗಿತ್ತು

ಆಹಾರದಲ್ಲಿ ಚಿಯಾ ಬೀಜಗಳು, ಕ್ವಿನೋವಾ ಮತ್ತು ಆಪಲ್ ಸೈಡರ್ ವಿನೆಗರ್ ಅನ್ನು ದಿನನಿತ್ಯದ ದಿನಚರಿಯಲ್ಲಿ ಸೇವಿಸುತ್ತಾರೆ. ಪ್ರತಿದಿನ ವ್ಯಾಯಾಮ ಮಾಡುವ ಮುನ್ನ ಬಾಳೆಹಣ್ಣು ಸೇವಿಸುತ್ತಾರೆ. ಗ್ಲುಟನ್‍ ಅಂಶವುಳ್ಳ ಆಹಾರ ಹಾಗೂ ತುಂಬಾ ಕಷ್ಟವಾದರೂ ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಿದ್ದರು. ಸಕ್ಕರೆ ಹೆಚ್ಚು ಕ್ಯಾಲೊರಿಗಳನ್ನು ಹೊಂದಿದ್ದು, ಇದರಿಂದ ತೂಕ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಇದನ್ನು ತ್ಯಜಿಸಬೇಕಾಯ್ತು. ಬಿರಿಯಾನಿ ಹಾಗು ಫ್ರೈಡ್ ಚಿಕನ್ ಎಂದರೆ ಬಹಳ ಇಷ್ಟವಾದರೂ ಹೆಚ್ಚು ತಿನ್ನುವುದಿಲ್ಲ ಎಂದು ತ್ರಿಪಾಖಿ ತಿಳಿಸಿದ್ದಾರೆ.

ತೂಕ ಕಳೆದುಕೊಳ್ಳಲು ತ್ರಿಪಾಖಿ ಅನುಸರಿಸಿದ ನಿಯಮ

ತಾಲೀಮುಗೆ ಅನುಗುಣವಾಗಿರುವುದು, ಸಕ್ಕರೆ ಮತ್ತು ಗ್ಲುಟನ್ ಅಂಶವುಳ್ಳ ಆಹಾರವನ್ನು ತ್ಯಜಿಸಿದ್ದಾರೆ. ಆದರೆ, ಆಹಾರಗಳು ಮತ್ತು ಪಾನೀಯಗಳಲ್ಲಿ ಗ್ಲುಟನ್ ಅಂಶ ಇರುವುದರಿಂದ ಸಂಪೂರ್ಣವಾಗಿ ತ್ಯಜಿಸಲು ತುಸು ಕಷ್ಟ ಎಂದು ಹೇಳಿರುವ ತ್ರಿಪಾಖಿ, ಪ್ರತಿ ರಾತ್ರಿ ಸಾಕಷ್ಟು ನಿದ್ದೆ ಮಾಡುತ್ತಿದ್ದರು. 7 ರಿಂದ 9 ಗಂಟೆಗಳ ನಿದ್ದೆ ಅತ್ಯಗತ್ಯವಾಗಿದ್ದು, ತೂಕ ಇಳಿಕೆಯ ಪ್ರಯಾಣದಲ್ಲಿ ಇಷ್ಟು ನಿದ್ದೆ ಪಡೆಯಲೇಬೇಕು ಎನ್ನುವುದು ಅವರ ಅಭಿಪ್ರಾಯ. ಹಾಗೆಯೇ ಎಷ್ಟೇ ಕೆಲಸವಿದ್ದರೂ ಪ್ರತಿದಿನ ತಾಲೀಮಿಗಾಗಿ ಸಮಯವನ್ನು ಮೀಸಲಿರಿಸುತ್ತಾರೆ.

ತೂಕ ಇಳಿಕೆ ಪ್ರಯಾಣದಲ್ಲಿ ಎದುರಿಸಿದ ಸವಾಲು

ತೂಕ ಇಳಿಕೆಯ ಪ್ರಯಾಣದಲ್ಲಿ ತ್ರಿಪಾಖಿ ಅವರು ಹಲವು ಸವಾಲುಗಳನ್ನು ಎದುರಿಸಿದ್ರು. ಮುಖ್ಯವಾಗಿ ಚಾಕೊಲೇಟ್, ಸಿಹಿತಿಂಡಿಗಳು ಮತ್ತು ಫ್ರೈಡ್ ಚಿಕನ್‌, ಬಿರಿಯಾನಿಯಂತಹ ಮಸಾಲೆ ಖಾದ್ಯಗಳ ಮೇಲೆ ಇನ್ನಿಲ್ಲದ ವ್ಯಾಮೋಹವಿತ್ತು. ಆದರೆ, ತೂಕ ಇಳಿಸಬೇಕೆಂದರೆ ಇವುಗಳನ್ನು ನಿಯಂತ್ರಣದಲ್ಲಿಡಲೇಬೇಕು. ನಾಲಿಗೆ ಎಷ್ಟೇ ಆಸೆ ಪಟ್ಟರೂ ಇವುಗಳಿಂದ ದೂರ ಉಳಿಯಬೇಕಾಯ್ತು. ಆದರೆ, ಇದು ಅಷ್ಟು ಸುಲಭವಾಗಿರಲಿಲ್ಲ, ತುಂಬಾ ಕಷ್ಟವಾಗುತ್ತಿತ್ತಂತೆ

ಇನ್ನು ಆಹಾರದಲ್ಲಿ ವಿಶೇಷವಾಗಿ ಊಟದ ಸಮಯದಲ್ಲಿ ಕಂದು ಅಕ್ಕಿಯ ಅನ್ನವನ್ನೇ ಸೇವಿಸುತ್ತಿದ್ದರಂತೆ. ಬಿಳಿ ಅಕ್ಕಿಯನ್ನು ಸಂಸ್ಕರಿಸಲಾಗುತ್ತದೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೂ, ಕಡಿಮೆ ಫೈಬರ್ ಮಟ್ಟವು ಜೀರ್ಣಕಾರಿ ಸಮಸ್ಯೆಗಳಿಗೆ ಸಹ ಸಹಾಯ ಮಾಡುತ್ತದೆ. ಆದರೆ, ಕಂದು ಅಕ್ಕಿ ಪೋಷಕಾಂಶಗಳಿಂದ ದಟ್ಟವಾಗಿರುತ್ತದೆ. ಇದು ಮಧುಮೇಹ, ಹೃದ್ರೋಗ ಮತ್ತು ತೂಕವನ್ನು ನಿರ್ವಹಿಸಲು ಉತ್ತಮ ಆಯ್ಕೆಯಾಗಿದೆ. ಹೀಗಾಗಿ ಕಂದು ಅಕ್ಕಿಯನ್ನೇ ಸೇವಿಸುತ್ತಿದ್ದೆ ಎಂದು ತಿಳಿಸಿದ್ದಾರೆ.