Weight Loss Story: ಮನೆಯಲ್ಲೇ ವರ್ಕೌಟ್ ಮಾಡಿ 5 ತಿಂಗಳಲ್ಲಿ 26 ಕೆಜಿ ಇಳಿಸಿಕೊಂಡು 24 ವರ್ಷದ ಯುವತಿ
ನರ್ಸಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ಮತ್ತು ಮನೆಯಲ್ಲೇ ವರ್ಕೌಟ್ ಮಾಡಿ 5 ತಿಂಗಳಲ್ಲಿ 26 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಬ್ಯಾಟ್‌ಮೆಟ್‌ಗಳು, ಶಿಕ್ಷಕರ ಟೀಕೆಗಳನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡು ಇಟ್ಟ ಗುರಿಯನ್ನು ಸಾಧಿಸಿದ್ದು ಹೇಗೆ ಅನ್ನೋದರ ವಿವರ ಇಲ್ಲಿದೆ.
ಬೆಂಗಳೂರು: ತೂಕ ಇಳಿಸಿಕೊಳ್ಳಲು ಕೆಲವರು ಜಿಮ್‌ಗೆ ಹೋಗಿ ಸಾಕಷ್ಟು ಬೆವರು ಹರಿಸುತ್ತಾರೆ. ಇನ್ನೂ ಕೆಲವರು ತಮ್ಮ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ತೂಕ ಇಳಿಸಿಕೊಳ್ಳಬೇಕೆಂಬ ಏಕೈಕ ಗುರಿಯಿಂದ ಯಾರು ಏನೇ ಹೇಳಿದರೂ ಅದೆನ್ನೆಲ್ಲಾ ಪ್ರಯತ್ನಿಸುವ ಜನರಿದ್ದಾರೆ. ಆದರೆ ಇಲ್ಲೊಬ್ಬ ಯುವತಿ ಜಿಮ್‌ಗೆ ಹೋಗದೆ, ಜಿಮ್ ಮೆಟೀರಿಯಲ್ ಇಲ್ಲದೆ ಮನೆ ಮತ್ತು ಹಾಸ್ಟೆಲ್‌ನಲ್ಲಿ ವರ್ಕೌಟ್ ಮಾಡಿ 5 ತಿಂಗಳಲ್ಲಿ ಬರೋಬ್ಬರಿ 26 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ನರ್ಸಿಂಗ್ ಓದುತ್ತಿರುವ ಈ ಯುವತಿ ವಯಸ್ಸಾದ ಮಹಿಳೆಯಂತೆ ಕಾಣುತ್ತಿದ್ದರು, ಇದೀಗ ತನ್ನ ವಯಸ್ಸಿಗೆ ತಕ್ಕಂತೆ ಕಾಣುತ್ತಿದ್ದಾರೆ. ಹಾಗಾದರೆ ಇವರು ಮಾಡಿದ ವರ್ಕೌಟ್ ಆದರೂ ಏನು, ಆಹಾರದ ಕ್ರಮ ಹೇಗಿತ್ತು ಅನ್ನೋದರ ವಿವರ ಇಲ್ಲಿದೆ.
ತೂಕದ ವಿಚಾರದಲ್ಲಿ ಆಹಾರ (Food For Weight Loss) ಪ್ರಮುಖ ಪಾತ್ರವಹಿಸುತ್ತದೆ. ತೂಕ (Weight Loss Tips) ಇಳಿಸಿಕೊಳ್ಳಬೇಕಾದರೆ ಆಹಾರ ಸೇವಿಸುವ ಪದ್ಧತಿ ಕಟ್ಟುನಿಟ್ಟಾಗಿರಬೇಕು. ತೂಕ ಇಳಿಸಿಕೊಂಡು ಫಿಟ್ ಆಗಿ ಇರುವುದು ಹೇಗೆ ಅನ್ನೋದನ್ನು 24 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಅಶ್ವಿನಿ ಗೈಗೋಳ್ ತೋರಿಸಿಕೊಟ್ಟಿದ್ದಾರೆ. 80.70 ಕೆಜಿ ಇದ್ದ ಅಶ್ವಿನಿ 5 ತಿಂಗಳಲ್ಲಿ 26.7 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ತೂಕ ಇಳಿಸಿಕೊಳ್ಳಲು ಸಮಯ, ಶ್ರಮ ಮತ್ತು ಹಣದ ವ್ಯರ್ಥವಾಗಿದೆ. ನಾನು ತೂಕ ಇಳಿಸಿಕೊಳ್ಳಲು ಹೊರಗಡೆ ಹೋಗಿಲ್ಲ. ಬದಲಾಗಿ ಮೂರು ತಿಂಗಳ ಕಾಲ ಊಟದಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ ಎಂದು ವಿವರಿಸಿದ್ದಾರೆ. ನನ್ನ ಪ್ರತಿದಿನ ಆಹಾರದ ಕ್ರಮದಲ್ಲಿ ದಿನಕ್ಕೆ ಕೇವಲ ಒಮ್ಮೆ ಮಾತ್ರ ಊಟ ಮಾಡುತ್ತಿದ್ದೆ. ಆದರೆ ಇದು ನನ್ನ ಆಹಾರದ ಬಯಕೆಗಳನ್ನು ಹೆಚ್ಚಿಸಿತ್ತು. ಇದರಿಂದಾಗಿ ಶೇಕ್ಸ್ ಮತ್ತು ಪಾನೀಯಗಳ ಮೊರೆ ಹೋದೆ ಎಂದು ಅಶ್ವಿನಿ ತಿಳಿಸಿದ್ದಾರೆ.
ಈ ಶೇಕ್ಸ್ ಮತ್ತು ಪಾನೀಯಗಳನ್ನು ಮನೆಯಲ್ಲಿ ನಾನೇ ಮಾಡಿಕೊಳ್ಳುವುದನ್ನು ಕಲಿತೆ. ಪೌಷ್ಠಿಕಾಂಶದ ಬಗ್ಗೆ ನನಗೆ ಮೂಲಭೂತ ಅಂಶಗಳು ತಿಳಿದಿದ್ದವು. ಯಾಕೆಂದರೆ ನರ್ಸಿಂಗ್ ವಿದ್ಯಾರ್ಥಿಯಾಗಿರುವ ನನಗೆ ಇದೆಲ್ಲಾ ಪಠ್ಯದ ಭಾಗವೂ ಆಗಿತ್ತು. ಆದ್ದರಿಂದ ನಾನು ಇವುಗಳನ್ನು ಕಾರ್ಯಗತಗೊಳಿಸಲು ಪ್ರಾರಂಭಿಸಿದೆ.ತೂಕ ಇಳಿಸಿಕೊಳ್ಳಲು ಸಮತೋಲಿತ ಆಹಾರ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅಶ್ವಿನಿ ವಿವರಿಸಿದ್ದಾರೆ.
ಕಾಲೇಜಿನ ಹಿರಿಯರು, ಬ್ಯಾಚ್‌ಮೇಟ್‌ಗಳು, ಶಿಕ್ಷಕರ ಟೀಕೆಗಳೇ ಸ್ಪೂರ್ತಿ
ತೂಕ ಇಳಿಸಿಲು ಯಾಕೆ ನಿರ್ಧರಿಸಿದೆ, ಇದಕ್ಕೆ ಸ್ಪೂರ್ತಿ ಏನು ಎಂಬುದನ್ನು ವಿವರಿಸಿರುವ ನರ್ಸಿಂಗ್ ವಿದ್ಯಾರ್ಥಿ ಅಶ್ವಿನಿ ಗೈಗೋಳ್, ಕಾಲೇಜಿನಲ್ಲಿ ನನ್ನ ಹಿರಿಯ ಸಹಪಾಠಿಗಳು, ಬ್ಯಾಟ್‌ಮೆಟ್‌ಗಳು ಹಾಗೂ ನಿರಂತರ ಟೀಕೆಗಳು ನನ್ನ ತೂಕ ಮತ್ತು ಆರೋಗ್ಯದ ಬಗ್ಗೆ ಅವರ ಅಪಹಾಸ್ಯಗಳು ನನಗೆ ಸ್ಪೂರ್ತಿ ನೀಡಿತು. ಇದರಿಂದ ನಾನು ತೂಕವನ್ನು ತಗ್ಗಿಸಿಕೊಳ್ಳುವ ಸವಾಲನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. ಆರೋಗ್ಯ ಮತ್ತು ಫಿಟ್ನೆಸ್‌ಗೆ ಒತ್ತು ನೀಡಲು ನನ್ನ ತಾಯಿಯ ಉತ್ಸಾಹವೂ ನನಗೂ ಸ್ಪೂರ್ತಿ ನೀಡಿತು. ತಾಯಿ ಜುಂಬಾ ಮಾಡುತ್ತಾರೆ. ನಿಯಮಿತವಾಗಿ ನಡೆಯುತ್ತಾರೆ. ಸಂಧಿವಾತ ಸಮಸ್ಯೆ ಇದ್ದರೂ ಆಕ್ಟೀವ್ ಆಗಿ ಇರುತ್ತಾರೆ. ಇದೆಲ್ಲಾ ನನ್ನ ಉತ್ಸಾಹವನ್ನು ಹೆಚ್ಚಿಸಿತು ಎಂದು ಹೇಳಿದ್ದಾರೆ.
ತೂಕ ಇಳಿಸಿಕೊಳ್ಳುವ ಹಾದಿಯಲ್ಲಿ ಎದುರಿಸಿದ ದೊಡ್ಡ ಸವಾಲುಗಳು?
ನರ್ಸಿಂಗ್ ವಿದ್ಯಾರ್ಥಿಯಾಗಿದ್ದ ನನಗೆ ಶೈಕ್ಷಣಿಕ ಮತ್ತು ಒತ್ತಡದ ವೇಳಾಪಟ್ಟಿಯನ್ನು ನಿರ್ವಹಿಸೋದು ದೊಡ್ಡ ಸವಾಲಾಗಿತ್ತು. ಸಮಯ ನಿರ್ವಹಣೆ, ಹಾಸ್ಟೆಲ್‌ನಲ್ಲಿ ತೂಕ ಕಳೆದುಕೊಳ್ಳುವುದು, ಸುಲಭವಾಗಿ ಮನೆಯಲ್ಲಿ ತಯಾರಿಸಬಹುದಾದ ಆಹಾರ ಸೇವನೆಯ ಪ್ಲಾನ್ ಮಾಡಿಕೊಂಡೆ. ಇದು ನನಗೆ ತುಂಬಾ ನೆರವಾಯಿತು. ಪ್ರಖವಾಗಿ ಈ ಪ್ರಕ್ರಿಯೆಯಲ್ಲಿ ಹಲವಾರರು ಮೈಲಿಗಳಷ್ಟು ದೂ ನಡೆದಿದ್ದೇನೆ. ದೈನಂದಿನ ಕಾರ್ಯಗಳ ಮೇಲೆ ಕೇಂದ್ರೀಕರಿಸಿದೆ. ಇದು ನಿರ್ದಿಷ್ಟ ತೂಕ ಕಳೆದುಕೊಳ್ಳಲು ಸಹಾಯ ಮಾಡಿತು ಎಂದು ಅಶ್ವಿನಿ ಹೇಳಿದ್ದಾರೆ.
ಆರಂಭದಲ್ಲಿ ವೇಳಾಪಟ್ಟಿಯಂತೆ ಸಾಗಲು ಕಷ್ಟವಾಯಿತು. ಆದರೆ ಕಷ್ಟವಾದರೂ ಛಲ ಬಿಡದೆ ಮುಂದುವರಿಸಿದ್ದರಿಂದ ವೇಳಾಪಟ್ಟಿಯನ್ನು ಅನುಸರಿಸುವುದು ತುಂಬಾ ಸುಲಭವಾಯಿತು. ಚಾಕೊಲೇಟ್ ಪೇಸ್ಟ್ರಿಗಳು ನನಗೆ ತುಂಬಾ ಇಷ್ಟ. ನಾನು ಇಂತಿಷ್ಟು ದೂರ ನಡೆಯಬೇಕೆಂದು ನನಗೆ ನಾನೇ ಗುರಿಯನ್ನು ಹಾಕಿಕೊಳ್ಳುತ್ತಿದ್ದೆ. ಆ ಗುರಿಯನ್ನು ಮುಟ್ಟಿದರೆ ಮಾತ್ರ ಪ್ರತಿಫಲವಾಗಿ ಚಾಕೊಲೇಟ್ ತಿನ್ನತ್ತಿದ್ದೆ. ಇದು ನನಗೆ ದೊಡ್ಡ ಪ್ರೇರಣೆಯಾಗಿದೆ ಎಂಬುದನ್ನು ಹೇಳಲು ಅವರು ಮರೆಯಲಿಲ್ಲ.
ಆಹಾರದ ಕ್ರಮ ಹೇಗಿತ್ತು?
ನಾನು ಸಮತೋಲಿತ ಆಹಾರ ಸೇವನೆಯನ್ನು ಅಳವಡಿಸಿಕೊಂಡಿದ್ದೇನೆ. ಪ್ರೋಟಿನ್, ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಫೈಬರ್‌ಗಳು, ಖನಿಜ ಹಾಗೂ ವಿಟಿಮಿನ್ ಇರುವಂತಹ ಆಹಾರಗಳಿಗೆ ಆದ್ಯತೆ ನೀಡುತ್ತಿದ್ದೇನನೆ. ವಾರಕ್ಕೆ 5 ರಿಂದ 6 ಬಾರಿ ವ್ಯಾಯಾಮ ಮಾಡುತ್ತೇನೆ. ಚೇತರಿಸಿಕೊಳ್ಳಲು ವಿಶ್ರಾಂತಿಗೂ ಇಂತಿಷ್ಟು ದಿನ ಅಂತ ಮೀಸಲು ಇಡುತ್ತೇನೆ. ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ಕಾರಣ ಜಿಮ್‌ಗೆ ಹೋಗುವುದು ಕಷ್ಟವಾಗಿದೆ. ಮನೆ ಮತ್ತು ಹಾಸ್ಟೆಲ್‌ನಲ್ಲಿ ವರ್ಕೌಟ್‌ಗೆ ಆದ್ಯತೆ ನೀಡಿದೆ. ಪ್ರತಿ ದಿನ 10 ಸಾವಿರ ಹೆಜ್ಜೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಇಟ್ಟುಕೊಂಡಿದ್ದೆ ಎಂದು 5 ತಿಂಗಳಲ್ಲಿ 26 ಕೆಜಿ ತೂಕ ಇಳಿಸಿಕೊಂಡ ಹಿಂದಿನ ರಹಸ್ಯವನ್ನು ವಿವರಿಸಿದ್ದಾರೆ.
ಕ್ರಿಯಾತ್ಮಕ ತರಬೇತಿ, ಸ್ಕ್ವಾಟ್‌ಗಳು, ಜಂಪಿಂಗ್ ಜ್ಯಾಕ್‌ಗಳು, ಮೊಣಕಾಲು ಪುಷ್‌ಅಪ್‌ಗಳು, ಕ್ರಂಚ್, ಹಲಗೆ ಮತ್ತು ಲೆಗ್ ರೈಸ್‌ಗಳು ಅಶ್ವಿನಿ ಅವರು ಫಿಟ್ನೆಸ್ ಕಾಯ್ದುಕೊಳ್ಳಲು ನೆರವಾಗಿವೆ. ಅಂತಿಮವಾಗಿ ನರ್ಸಿಂಗ್ ವಿದ್ಯಾಭ್ಯಾಸದ ಜೊತೆ ಜೊತೆಗೆ ತೂಕ ಇಳಿಸಿಕೊಳ್ಳುವ ಜಾಲೆಂಜ್ ತೆಗೆದುಕೊಂಡ ಅಶ್ವಿನ್ ಯಶಸ್ವಿಯಾಗಿ ತನ್ನ ಗುರಿಯನ್ನು ಮುಟ್ಟುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)