ಯಾವುದೇ ಡಯೆಟ್‌ ಇಲ್ಲದೇ ದೇಹದ ಕೊಬ್ಬು ಕರಗಿಸುವ, ನಾವು ನಿರ್ಲಕ್ಷ್ಯ ಮಾಡುತ್ತಿರುವ 5 ದೈನಂದಿನ ಅಭ್ಯಾಸಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಯಾವುದೇ ಡಯೆಟ್‌ ಇಲ್ಲದೇ ದೇಹದ ಕೊಬ್ಬು ಕರಗಿಸುವ, ನಾವು ನಿರ್ಲಕ್ಷ್ಯ ಮಾಡುತ್ತಿರುವ 5 ದೈನಂದಿನ ಅಭ್ಯಾಸಗಳಿವು

ಯಾವುದೇ ಡಯೆಟ್‌ ಇಲ್ಲದೇ ದೇಹದ ಕೊಬ್ಬು ಕರಗಿಸುವ, ನಾವು ನಿರ್ಲಕ್ಷ್ಯ ಮಾಡುತ್ತಿರುವ 5 ದೈನಂದಿನ ಅಭ್ಯಾಸಗಳಿವು

ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಕರಗಿಸಿ, ತೂಕ ಇಳಿಸಿಕೊಂಡು ಫಿಟ್‌ ಆಗಿರಲು ಹರಸಾಹಸ ಪಡ್ತಾ ಇದ್ದೀರಾ, ಯಾವುದೇ ಡಯೆಟ್‌ ಇಲ್ಲದೇ, ಈ 5 ದೈನಂದಿನ ಅಭ್ಯಾಸಗಳಿಂದ ಬೊಜ್ಜು ಕರಗಿಸಬಹುದು. ಅಂತಹ ಅಭ್ಯಾಸಗಳು ಯಾವುವು ನೋಡಿ.

ಯಾವುದೇ ಡಯೆಟ್‌ ಇಲ್ಲದೇ ದೇಹದ ಕೊಬ್ಬು ಕರಗಿಸುವ, ನಾವು ನಿರ್ಲಕ್ಷ್ಯ ಮಾಡುತ್ತಿರುವ 5 ದೈನಂದಿನ ಅಭ್ಯಾಸಗಳಿವು
ಯಾವುದೇ ಡಯೆಟ್‌ ಇಲ್ಲದೇ ದೇಹದ ಕೊಬ್ಬು ಕರಗಿಸುವ, ನಾವು ನಿರ್ಲಕ್ಷ್ಯ ಮಾಡುತ್ತಿರುವ 5 ದೈನಂದಿನ ಅಭ್ಯಾಸಗಳಿವು

ಇತ್ತೀಚಿನ ದಿನಗಳಲ್ಲಿ ಯುವಜನರಿಗೆ ದೇಹದ ಕೊಬ್ಬು ಕರಗಿಸಿ, ತೂಕ ನಿಯಂತ್ರಣದಲ್ಲಿಟ್ಟುಕೊಳ್ಳುವುದು ನಿಜಕ್ಕೂ ಸವಾಲಾಗಿದೆ. ಹಲವರು ತೂಕ ಏರಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಹಲವರು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಡಯೆಟ್‌ ಹೆಸರಿನಲ್ಲಿ ಬಾಯಿಗೆ ರುಚಿ ಎನ್ನಿಸುವ ಯಾವುದನ್ನೂ ತಿನ್ನದೇ ಕಷ್ಟಪಟ್ಟು ಆಹಾರ ನಿಯಂತ್ರಣ ಮಾಡುತ್ತಿದ್ದಾರೆ.

ಕೆಲವರು ತೂಕ ಇಳಿಸಿಕೊಳ್ಳುವ ಸಲುವಾಗಿ ಔಷಧಿಗಳನ್ನು ಸೇವಿಸುತ್ತಾರೆ. ಆದರೆ ಇದರಿಂದ ಅಡ್ಡಪರಿಣಾಮಗಳು ಜಾಸ್ತಿ. ಕೆಲವೊಮ್ಮೆ ತೂಕ ಇಳಿಕೆಯ ಔಷಧಿಗಳು ಪ್ರಾಣಕ್ಕೆ ಸಂಚು ತರುವ ಅಪಾಯವೂ ಇದೆ. ಈ ಬಗ್ಗೆ ಹಿಂದೂಸ್ತಾನ್‌ ಟೈಮ್ಸ್‌ ಲೈಫ್‌ಸ್ಟೈಲ್‌ ಜೊತೆ ಮಾತನಾಡಿರುವ ಡಾ. ಜೈಸನ್ ಪಾಲ್ ಶರ್ಮಾ, ʼತೂಕ ಇಳಿಕೆಯ ಔಷಧಿಗಳು ದುಬಾರಿಯಾಗಿವೆ. ಇವು ವಿಮೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಅಲ್ಲದೇ ದೀರ್ಘಾವಧಿಯ ಬಳಕೆಗೆ ಸಮರ್ಥನೀಯವಲ್ಲ. ಸಾಕಷ್ಟು ಪೋಷಣೆಯಿಲ್ಲದೆ ತ್ವರಿತ ತೂಕ ನಷ್ಟವು ಸ್ನಾಯುವಿನ ದ್ರವ್ಯರಾಶಿಯಲ್ಲಿ ಇಳಿಕೆಗೆ ಕಾರಣವಾಗಬಹುದು. ಹಲವರು ಈ ಔಷಧಿಗಳನ್ನು ನಿಲ್ಲಿಸಿದ ನಂತರ ಮತ್ತೆ ತೂಕ ಏರಿಕೆಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಾನಸಿಕ ಅವಲಂಬನೆಯ ಅವಶ್ಯಕತೆಯೂ ಇದೆʼ ಎನ್ನುತ್ತಾರೆ.

ಅದರ ಬದಲು ನೀವು ದೈನಂದಿನ ದಿನಚರಿಯಲ್ಲಿ ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು, ಇದರಿಂದ ನಿಮ್ಮ ದೇಹ ತೂಕ ತನ್ನಿಂದ ತಾನೇ ನಿಯಂತ್ರಣಕ್ಕೆ ಬರುತ್ತದೆ, ದೇಹದ ಕೊಬ್ಬು ಕರಗಿಸಲು ಈ ಅಭ್ಯಾಸಗಳನ್ನು ಪಾಲಿಸಿದ್ರೆ ಸಾಕು, ಆದರೆ ನಾವು ಇದನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ, ಅಂತಹ ಅಭ್ಯಾಸಗಳು ಯಾವುದು ಎಂಬುದನ್ನು ತಿಳಿಸಿದ್ದಾರೆ ಡಾ. ಜೈಸನ್‌.

ವೈದ್ಯರು ಸೂಚಿಸಿದ ತೂಕ ಇಳಿಕೆಯ ನಿಯಮಗಳು

  • ನಮ್ಮ ಪ್ರತಿದಿನದ ಆಹಾರ ಕ್ರಮದಲ್ಲಿ ಅಲ್ಟ್ರಾ ಪ್ರೊಸೆಸ್ಡ್, ಕಾರ್ಬೋಹೈಡ್ರೇಟ್‌ಗಳು ಹಾಗೂ ಸಕ್ಕರೆ ಅಂಶ ಹೆಚ್ಚಿರುವ ಪಾನೀಯಗಳ ಸೇವನೆ ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ಇವುಗಳನ್ನು ತ್ಯಜಿಸಬೇಕು. ಸಂಪೂರ್ಣ, ಸಂಸ್ಕರಿಸದ, ನಾರಿನಾಂಶ ಸಮೃದ್ಧ ಆಹಾರಗಳ ಸೇವನೆಗೆ ಒತ್ತು ನೀಡಬೇಕು.
  • ರೆಸಿಸ್ಟೆಂಟ್‌ ಟ್ರೈನಿಂಗ್‌ ಬಹಳ ಮುಖ್ಯ ಎನ್ನುವ ಅವರು ಬರೀ ವಾಕಿಂಗ್‌ ಮಾಡುವುದು ಮಾತ್ರವಲ್ಲ, ಸ್ನಾಯುಗಳನ್ನು ನಿರ್ಮಿಸುವ, ಸಂರಕ್ಷಿಸುವ ವ್ಯಾಯಾಮಗಳು ಅತ್ಯಗತ್ಯ ಎಂದು ಡಾ. ಜೈಸನ್‌ ಪ್ರತಿಪಾದಿಸುತ್ತಾರೆ. ಏಕೆಂದರೆ ನೀವು ಪ್ರತಿ ನಿಮಿಷಕ್ಕೆ 120 ಹೆಜ್ಜೆಗಳ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾದಾಗ ಮಾತ್ರ ನಡಿಗೆಯನ್ನು ವ್ಯಾಯಾಮವೆಂದು ಪರಿಗಣಿಸಲಾಗುತ್ತದೆ.
  • ನಿದ್ರೆ ಚಯಾಪಚಯ ಕ್ರಿಯೆಗೆ ಅತಿ ಅವಶ್ಯವಾಗಿದೆ. ಕಳಪೆ ನಿದ್ರೆ ಗ್ರೆಲಿನ್ ಮತ್ತು ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ, ಕೊಬ್ಬಿನ ಹೆಚ್ಚಳವನ್ನು ಉತ್ತೇಜಿಸುತ್ತದೆ. ಪ್ರತಿ ದಿನ ರಾತ್ರಿ 7–9 ಗಂಟೆಗಳ ಗುಣಮಟ್ಟದ ನಿದ್ರೆ ಪಡೆಯುವುದು ಬಹಳ ಮುಖ್ಯವಾಗಿದೆ.
  • ಎಮೋಷನಲ್‌ ಈಟಿಂಗ್‌ ಅಥವಾ ಭಾವನಾತ್ಮಕ ತಿನ್ನುವಿಕೆ ಇತ್ತೀಚಿನ ಜನರಲ್ಲಿ ಸಹಜವಾಗಿದೆ. ಆದರೆ ಇದನ್ನು ನಿಯಂತ್ರಿಸುವುದು ಕೂಡ ದೇಹದ ಕೊಬ್ಬು ಕರಗಲು ಅತಿ ಅವಶ್ಯವಾಗಿದೆ. ಜರ್ನಲಿಂಗ್, ಮೈಂಡ್‌ಫುಲ್‌ನೆಸ್ ಮೂಲಕ ಎಮೋಷನಲ್‌ ಈಟಿಂಗ್‌ಗೆ ಕಡಿವಾಣ ಹಾಕಬೇಕು.
  • ಎಲ್ಲಕ್ಕಿಂತ ಹೆಚ್ಚಾಗಿ ಕೊಬ್ಬು ಕರಗಿಸುವ ವಿಚಾರದಲ್ಲಿ ಪರಿಪೂರ್ಣತೆಗಿಂತ ಸ್ಥಿರತೆ ಬಹಳ ಮುಖ್ಯ ಎಂಬುದನ್ನು ನೆನಪಿಡಬೇಕು ಎಂದು ಡಾ. ಜೈಸನ್‌ ಒತ್ತಿ ಹೇಳುತ್ತಾರೆ.

    ಇದನ್ನೂ ಓದಿ: ತೂಕ ಇಳಿಯೋಕೆ ಇಂಜೆಕ್ಷನ್ ತಗೊಂಡ್ರಾ ಎನ್‌ಟಿಆರ್‌, ಇದ್ದಕ್ಕಿದ್ದಂತೆ ಹಲವು ಕೆಜಿ ಕಡಿಮೆಯಾಗಿದ್ದು ಹೇಗೆ? ವದಂತಿಗೆ ಸಿಕ್ತು ಉತ್ತರ

ತೂಕ ಇಳಿಕೆಗೆ GLP-1 ಔಷಧಿಗಳನ್ನು ಸೇವಿಸುವಾಗ ಸಮಗ್ರ, ರಚನಾತ್ಮಕ ಜೀವನಶೈಲಿ ಯೋಜನೆಯನ್ನು ರೂಢಿಸಿಕೊಳ್ಳಬೇಕು. ಬೊಜ್ಜು ಮತ್ತು ಮಧುಮೇಹ ಅಥವಾ ತೀವ್ರ ಚಯಾಪಚಯ ಅಪಸಾಮಾನ್ಯ ಕ್ರಿಯೆ ಇರುವ ರೋಗಿಗಳಿಗೆ ಅವು ಹೆಚ್ಚು ಸೂಕ್ತವಾಗಿವೆ. ಈ ಔಷಧಿಗಳನ್ನು ನಿಲ್ಲಿಸಿದ ನಿಲ್ಲಿಸಿದ ನಂತರವೂ, ಫಲಿತಾಂಶಗಳನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಮುಂದುವರಿಸುವುದು ನಿರ್ಣಾಯಕವಾಗಿದೆ. ದೈನಂದಿನ ಅಭ್ಯಾಸಗಳಲ್ಲಿ ಸಣ್ಣ, ಸ್ಥಿರವಾದ ಬದಲಾವಣೆಗಳು ತೂಕ, ಶಕ್ತಿಯ ಮಟ್ಟಗಳು ಮತ್ತು ಒಟ್ಟಾರೆ ಆರೋಗ್ಯದಲ್ಲಿ ಶಾಶ್ವತ ಸುಧಾರಣೆಗಳಿಗೆ ಕಾರಣವಾಗಬಹುದು ಎಂದು ಅವರು ಹೇಳುತ್ತಾರೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.