ಕೂತು ಕೂತು ಹೊಟ್ಟೆ ಬಂದಿದ್ಯಾ, ಬೇಸರ ಮಾಡ್ಬೇಡಿ; ಕುಳಿತುಕೊಂಡೇ ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿಸಲು ಇಲ್ಲಿದೆ ಐಡಿಯಾ-weight loss tips belly fat best ways to lose belly fat while sitting some tricks to lose belly fat while sitting rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕೂತು ಕೂತು ಹೊಟ್ಟೆ ಬಂದಿದ್ಯಾ, ಬೇಸರ ಮಾಡ್ಬೇಡಿ; ಕುಳಿತುಕೊಂಡೇ ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿಸಲು ಇಲ್ಲಿದೆ ಐಡಿಯಾ

ಕೂತು ಕೂತು ಹೊಟ್ಟೆ ಬಂದಿದ್ಯಾ, ಬೇಸರ ಮಾಡ್ಬೇಡಿ; ಕುಳಿತುಕೊಂಡೇ ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿಸಲು ಇಲ್ಲಿದೆ ಐಡಿಯಾ

ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ದೊಡ್ಡವವರೆಗೆ ಬೊಜ್ಜಿನ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಹೊಟ್ಟೆಯ ಸುತ್ತಲೂ ಬೊಜ್ಜು ಸಂಗ್ರಹವಾಗಲು ನಾವು ಕುಳಿತುಕೊಳ್ಳುವ ಭಂಗಿಯೂ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಹಾಗಾದರೆ ಕುಳಿತುಕೊಂಡಲ್ಲೇ ಹೊಟ್ಟೆಯ ಬೊಜ್ಜು ಕಡಿಮೆ ಮಾಡುವುದು ಹೇಗೆ ಅಂತ ನೋಡೋಣ.

ಕುಳಿತಲ್ಲೇ ಹೊಟ್ಟೆಯ ಬೊಜ್ಜು ಕರಗಿಸಲು ಟಿಪ್ಸ್‌
ಕುಳಿತಲ್ಲೇ ಹೊಟ್ಟೆಯ ಬೊಜ್ಜು ಕರಗಿಸಲು ಟಿಪ್ಸ್‌ (PC: Canva)

ಬೆಲ್ಲಿ ಫ್ಯಾಟ್ ಅಥವಾ ಹೊಟ್ಟೆಯ ಸುತ್ತಲಿನ ಬೊಜ್ಜು ಕಡಿಮೆ ಮಾಡಲು ಬಹುತೇಕರು ಹರಸಾಹಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ ಸಾಂಕ್ರಾಮಿಕವಾಗಿ ಹರಡುತ್ತಿರುವುದು ಸುಳ್ಳಲ್ಲ. ಇದರಲ್ಲೂ ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವುದು ದೇಹದಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಲು ಕಾರಣವಾಗಿದೆ. ಆದರೆ ಕುಳಿತು ಬರುವ ಬೊಜ್ಜಿನ ಸಮಸ್ಯೆಗೆ ಕುಳಿತುಕೊಳ್ಳುವುದರಿಂದಲೇ ಪರಿಹಾರ ಕಂಡುಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.

ಬೇರೆಲ್ಲಾ ಬೊಜ್ಜಿಗಿಂತ ಹೊಟ್ಟೆಯ ಸುತ್ತಲೂ ಬರುವ ಬೊಜ್ಜು ಬಹಳ ಅಪಾಯಕಾರಿ. ಇದು ಇತರ ಅಂಗಾಗಗಳ ಸುತ್ತಲೂ ಸುತ್ತಿಕೊಳ್ಳುವುದರಿಂದ ಅವುಗಳ ಕಾರ್ಯ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಇಲ್ಲದ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇದೆ.

ಬೆಲ್ಲಿ ಫ್ಯಾಟ್ ಕರಗಿಸಲು ಡಯೆಟ್‌, ಜಿಮ್‌, ಎಕ್ಸ್‌ಸೈಜ್ ಹೀಗೆ ಹಲವು ಸಲಹೆಗಳನ್ನು ನೀವು ಕೇಳಿರಬಹುದು. ಆದರೆ ನಾವು ಕುಳಿತುಕೊಳ್ಳುವ ಭಂಗಿಯನ್ನು ಸರಿಪಡಿಸಿಕೊಂಡು ಕುಳಿತುಕೊಳ್ಳುವಾಗ ಒಂದಿಷ್ಟು ವಿಚಾರಗಳ ಮೇಲೆ ಗಮನ ಹರಿಸಿದ್ರೆ ಬೇಗನೆ ಬೆಲ್ಲಿ ಫ್ಯಾಟ್ ಕಡಮೆಯಾಗುತ್ತದೆ.

ಕುಳಿತಲ್ಲೇ ಬೆಲ್ಲಿ ಫ್ಯಾಟ್ ಕರಗಿಸುವುದು ಹೇಗೆ ನೋಡಿ

ಕುಳಿತಲ್ಲೇ ವ್ಯಾಯಾಮ

ಬೆಲ್ಲಿ ಫ್ಯಾಟ್ ಕರಗಲು ನೀವು ಕೂತ ಕುರ್ಚಿಯಲ್ಲೇ ಒಂದಿಷ್ಟು ವ್ಯಾಯಾಮ ಮಾಡಬಹುದು. ಕಾಲನ್ನು ಮುಂದಕ್ಕೆ ಚಾಚುವುದು, ಮುಂಗಾಲನ್ನು ಮಡಿಚಿ ಎದೆಯ ಭಾಗಕ್ಕೆ ತಾಕಿಸುವುದು, ನೇರವಾಗಿ ಕೂತು ಕೈಗಳನ್ನು ತಲೆಯ ಹಿಂದಿನಿಂದ ಹಿಡಿದುಕೊಳ್ಳುವುದು ಇಂತಹ ಸರಳ ವ್ಯಾಯಾಮಗಳನ್ನು ನೀವು ಕುಳಿತಲ್ಲೇ ಮಾಡಬಹುದು. ಇದನ್ನು ಸರಿಯಾದ ಕ್ರಮದಲ್ಲಿ ಮಾಡಲು ಯುಟ್ಯೂಬ್‌ನಲ್ಲಿ ವಿಡಿಯೊಗಳು ಸಿಗುತ್ತವೆ, ಅದನ್ನು ನೋಡಬಹುದು.

ಬಟರ್‌ಫ್ಲೈ ಪೋಸ್‌

ಬದ್ಧ ಕೋನಸಾನವು ಆರಾಮದಾಯಕ ಭಂಗಿಯಲ್ಲಿ ಕುಳಿತು ಹೊಟ್ಟೆಯ ಕೊಬ್ಬನ್ನು ತೊಡೆದುಹಾಕಲು ಅದ್ಭುತವಾದ ಮಾರ್ಗವಾಗಿದೆ. ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವುದರ ಹೊರತಾಗಿ, ಇದು ಒತ್ತಡ ನಿವಾರಣೆಗೆ ಉತ್ತಮ ಆಸನವಾಗಿದೆ. ಈ ಆಸನವು ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸುತ್ತದೆ.

ನೇರವಾಗಿ ಕುಳಿತುಕೊಳ್ಳುವುದು

ಕುಳಿತುಕೊಳ್ಳುವ ಭಂಗಿಯೂ ಕೂಡ ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ. ನಿಮ್ಮ ದೇಹದ ಭಂಗಿಯನ್ನು ಸರಿಪಡಿಸುವುದು ತೂಕವನ್ನು ಕಳೆದುಕೊಳ್ಳುವ ಮೊದಲ ಹೆಜ್ಜೆಯಾಗಿದೆ. ಬಾಗಿಕೊಂಡು, ಮುದ್ದೆಯಾಗಿ ಕುಳಿತುಕೊಳ್ಳುವುದನ್ನು ತಪ್ಪಿಸಿ. ನೇರವಾಗಿ ಕುಳಿತುಕೊಳ್ಳುವ ಅಭ್ಯಾಸ ಮಾಡಿ. ಇದರಿಂದ ಬೆನ್ನುನೋವಿನಂತಹ ಸಮಸ್ಯೆ ಎದುರಾಗುವುದಿಲ್ಲ, ಮಾತ್ರವಲ್ಲ ಹೊಟ್ಟೆಯ ಸುತ್ತಲೂ ಬೊಜ್ಜು ಸಂಗ್ರಹವಾಗದಂತೆ ನೋಡಿಕೊಳ್ಳಬಹುದು. ನೇರವಾಗಿ ಕುಳಿತುಕೊಳ್ಳುವುದು ದಿನಕ್ಕೆ ಹೆಚ್ಚುವರಿ 350 ಕ್ಯಾಲೊರಿಗಳನ್ನು ಸುಡುವಲ್ಲಿ ನಿಮಗೆ ಸಹಾಯ ಮಾಡುತ್ತದೆ.

ನೀರು ಕುಡಿಯಿರಿ

ನೀರು ನಷ್ಟದ ವಿಚಾರಕ್ಕೆ ಬಂದಾಗ ನೀರಿಗೆ ಅಗ್ರಸ್ಥಾನ, ನಿರ್ಜಲೀಕರಣವು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಏಕೆಂದರೆ ಇದು ಮಲಬದ್ಧತೆಗೆ ಕಾರಣವಾಗಬಹುದು ಮತ್ತು ಇದು ಹೊಟ್ಟೆಯುಬ್ಬರವನ್ನು ಪ್ರಚೋದಿಸುತ್ತದೆ. ಕುಳಿತುಕೊಂಡು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಬಹುದು. ಹೊಟ್ಟೆಯ ಕೊಬ್ಬು ನಷ್ಟಕ್ಕೆ ನೀರು ಮುಖ್ಯವಾಗಿದೆ ಏಕೆಂದರೆ ಕೊಬ್ಬಿನ ಅಣುಗಳು ಒಡೆಯಲು, ಸರಿಯಾದ ಜಲಸಂಚಯನವು ನಿರ್ಣಾಯಕವಾಗಿದೆ. ಹೀಗಾಗಿ ಕೊಬ್ಬನ್ನು ಕಡಿಮೆ ಮಾಡುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ.

ಕಾಲುಗಳಿಂದ ನಂಬರ್ ಬರೆಯುವುದು

ಕುಳಿತಲ್ಲೇ ಕುಳಿತು ಎದ್ದು ಹೋಗಲು ಬೇಸರವಾಗಿದ್ದರೆ ಅಲ್ಲಿಯೇ ಕುಳಿತು ಕಾಲಿನಿಂದ ಸಂಖ್ಯೆಗಳನ್ನು ಬರೆಯಿರಿ ಅಥವಾ ವರ್ಣಮಾಲೆಯ ಅಕ್ಷರಗಳನ್ನು ಬರೆಯಿರಿ, ಇದು ಕೂಡ ಉತ್ತಮ ವ್ಯಾಯಾಮ. ಇದರಿಂದ ಹೊಟ್ಟೆ ಕೊಬ್ಬು ಕರಗುತ್ತದೆ.

ಆಳವಾದ ಉಸಿರಾಟ

ಹೊಟ್ಟೆಯ ಕೊಬ್ಬಿಗೆ ದೊಡ್ಡ ಅಪಾಯಕಾರಿ ಅಂಶವೆಂದರೆ ಒತ್ತಡ. ಸಂಶೋಧನೆಯ ಪ್ರಕಾರ, ಹೆಚ್ಚಿನ ಕಾರ್ಟಿಸೋಲ್ ಮಟ್ಟಗಳು ಹೆಚ್ಚಿದ ಒತ್ತಡದ ಮಟ್ಟಗಳಿಗೆ ಸಂಬಂಧಿಸಿವೆ. ಉಸಿರಾಟದ ವ್ಯಾಯಾಮ ಅಥವಾ ಪ್ರಾಣಾಯಾಮ ಮಾಡುವ ಮೂಲಕ ನಿಮ್ಮ ಹೊಟ್ಟೆಯ ಕೊಬ್ಬನ್ನು ತೊಡೆದುಹಾಕಲು ನೀವು ಸಹಾಯ ಮಾಡಬಹುದು, ಇದು ದೀರ್ಘಾವಧಿಯಲ್ಲಿ ಈ ಅಪಾಯಕಾರಿ ಅಂಶವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

mysore-dasara_Entry_Point