Weight Loss tips: ಸೋರೆಕಾಯಿ ರಸದ ಪ್ರಯೋಜನ ಕೇಳಿದ್ರೆ ಪ್ರತಿ ದಿನ ಸೇವಿಸ್ತೀರಾ: ತೂಕ ಇಳಿಕೆಗೆ ಈ ಜ್ಯೂಸ್ ಬೆಸ್ಟ್
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss Tips: ಸೋರೆಕಾಯಿ ರಸದ ಪ್ರಯೋಜನ ಕೇಳಿದ್ರೆ ಪ್ರತಿ ದಿನ ಸೇವಿಸ್ತೀರಾ: ತೂಕ ಇಳಿಕೆಗೆ ಈ ಜ್ಯೂಸ್ ಬೆಸ್ಟ್

Weight Loss tips: ಸೋರೆಕಾಯಿ ರಸದ ಪ್ರಯೋಜನ ಕೇಳಿದ್ರೆ ಪ್ರತಿ ದಿನ ಸೇವಿಸ್ತೀರಾ: ತೂಕ ಇಳಿಕೆಗೆ ಈ ಜ್ಯೂಸ್ ಬೆಸ್ಟ್

ಸೋರೆಕಾಯಿ ಜ್ಯೂಸ್‍ನ ಪ್ರಯೋಜನ ಕೇಳಿದ್ರೆ ನೀವು ಪ್ರತಿದಿನ ಸೇವಿಸಬಹುದು. ಅದರಲ್ಲೂ ತೂಕ ಇಳಿಕೆಗೆ ಪ್ರಯತ್ನಿಸುವವರಿಗಂತೂ ಇದೊಂದು ಉತ್ತಮ ಪಾನೀಯ. ಸೋರೆಕಾಯಿ ಜ್ಯೂಸ್‍ ಹಲವಾರು ಆರೋಗ್ಯ ಪ್ರಯೋಜನವನ್ನು ಹೊಂದಿದ್ದು, ತೂಕ ನಷ್ಟಕ್ಕೆ ಇದು ಹೇಗೆ ಸಹಕಾರಿ ಎಂಬುದು ಇಲ್ಲಿದೆ.

ತೂಕ ನಷ್ಟಕ್ಕೆ ಸೋರೆಕಾಯಿ ಜ್ಯೂಸ್‍ ಹೇಗೆ ಸಹಕಾರಿ ಎಂಬುದು ಇಲ್ಲಿದೆ.
ತೂಕ ನಷ್ಟಕ್ಕೆ ಸೋರೆಕಾಯಿ ಜ್ಯೂಸ್‍ ಹೇಗೆ ಸಹಕಾರಿ ಎಂಬುದು ಇಲ್ಲಿದೆ. (Instagram)

ಸೋರೆಕಾಯಿ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಇದರ ಸಾಂಬಾರ್ ಅಂದ್ರೆ ಬಹುತೇಕರಿಗೆ ಇಷ್ಟ ಆಗುವುದೇ ಇಲ್ಲ. ದಿನಾ ಏನು ಸಾಂಬಾರ್ ಮಾಡಲಿ ಎಂದು ಚಿಂತಿಸುವ ಹೆಂಗಳೆಯರು ಸೋರೆಕಾಯಿ ಇದ್ದರೆ ಅದರ ಸಾಂಬಾರು ಮಾಡುತ್ತಾರೆ. ಆದರೆ, ಕುಟುಂಬ ಸದಸ್ಯರು ಈ ಸೋರೆಕಾಯಿ ಹೆಸರೆತ್ತಿದ್ದರೆ ವ್ಯಾಕ್ ಅನ್ನುತ್ತಾರೆ. ಆದರೆ, ಇದರ ಪಾಯಸ ಮಾಡಿದ್ರೆ ಮಾತ್ರ ತೃಪ್ತಿಯಿಂದ ಸವಿಯುತ್ತಾರೆ. ದೇಹದ ಫಿಟ್ನೆಸ್ ವಿಚಾರಕ್ಕೆ ಬಂದ್ರೆ ಸೋರೆಕಾಯಿ ಅತ್ಯುತ್ತಮ. ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದಲ್ಲಿ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಫಿಟ್ನೆಸ್ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಬಹುದು. ಅದರಲ್ಲೂ ಹೊಟ್ಟೆಯ ಕೊಬ್ಬನ್ನು ಕರಗಿಸುವಲ್ಲಿ ಸೋರೆಕಾಯಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸೋರೆಕಾಯಿಯ ಅದ್ಭುತ ಪ್ರಯೋಜನಗಳ ಬಗ್ಗೆ ನೀವಿಲ್ಲಿ ತಿಳಿಯಲೇಬೇಕು.

ಸೋರೆಕಾಯಿ ಜ್ಯೂಸ್‍ನ ಐದು ಪ್ರಯೋಜನಗಳು

ಕಡಿಮೆ ಕ್ಯಾಲೋರಿಗಳು: ಸೋರೆಕಾಯಿ ರಸವು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದು ತೂಕನಷ್ಟಕ್ಕೆ ಪ್ರಯತ್ನಿಸುತ್ತಿರುವವರಿಗೆ ಸೂಕ್ತ ಆಯ್ಕೆಯಾಗಿದೆ. 100 ಗ್ರಾಂ ಸೋರೆಕಾಯಿ ಕೇವಲ 14 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಅಲ್ಲದೆ ಇದು ವಿಟಮಿನ್ ಸಿ, ವಿಟಮಿನ್ ಬಿ, ಪೊಟ್ಯಾಶಿಯಮ್ ಮತ್ತು ಮೆಗ್ನೀಸಿಯಮ್ ಸೇರಿದಂತೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿರುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಹೈಡ್ರೀಕರಿಸುವಲ್ಲಿ ಪರಿಣಾಮಕಾರಿ: ತೂಕ ನಷ್ಟಕ್ಕೆ ದೇಹವು ಹೈಡ್ರೀಕರಣಗೊಂಡಿರುವುದು ಕೂಡ ಬಹಳ ಮುಖ್ಯ. ಸೋರೆಕಾಯಿ ರಸವು ಸುಮಾರು ಶೇ. 96 ರಷ್ಟು ನೀರಿನಿಂದ ಕೂಡಿದೆ. ಇದು ನಿಮ್ಮ ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ. ಪದೇ ಪದೇ ಹಸಿವಾಗುತ್ತಿರುವುದನ್ನು ತಡೆಯುತ್ತದೆ. ಜೊತೆಗೆ ಅತಿಯಾಗಿ ತಿನ್ನುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಚಯಾಪಚಯ ಕ್ರಿಯೆಗಳು ಉತ್ತಮವಾಗಿ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಟಾಕ್ಸಿನ್‌ಗಳನ್ನು ಹೊರಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಇವೆಲ್ಲವೂ ತೂಕ ನಿರ್ವಹಣೆಗೆ ಅವಶ್ಯಕವಾಗಿದೆ. ದಿನವಿಡೀ ಸೋರೆಕಾಯಿ ರಸವನ್ನು ಕುಡಿಯುವುದರಿಂದ ದೇಹವನ್ನು ಹೈಡ್ರೀಕರಿಸಿಕೊಳ್ಳಲು ಸಹಾಯಕವಾಗಿದೆ.

ಫೈಬರ್‌ನಲ್ಲಿ ಸಮೃದ್ಧ: ಸೋರೆಕಾಯಿ ಆಹಾರದ ಫೈಬರ್‌ನ ಅತ್ಯುತ್ತಮ ಮೂಲವಾಗಿದೆ. ಫೈಬರ್-ಭರಿತ ಆಹಾರಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಸೋರೆಕಾಯಿ ರಸದಲ್ಲಿರುವ ಫೈಬರ್ ಕರುಳಿನ ಚಲನೆಯನ್ನು ನಿಯಂತ್ರಿಸಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಸೋರೆಕಾಯಿ ಜ್ಯೂಸ್ ಸೇವಿಸಬಹುದು. ಅಲ್ಲದೆ, ತೂಕ ನಷ್ಟಕ್ಕೂ ಗಮನಾರ್ಹ ಕೊಡುಗೆ ನೀಡುತ್ತದೆ.

ಟಾಕ್ಸಿನ್ ಹೊರಹಾಕಲು ಸಹಕಾರಿ: ಸೋರೆಕಾಯಿ ರಸದಲ್ಲಿರುವ ನೀರಿನ ಅಂಶ ಮತ್ತು ಫೈಬರ್ ಅಂಶವು ಜೀರ್ಣಕ್ರಿಯೆ ಮತ್ತು ಟಾಕ್ಸಿನ್ ಹೊರಹಾಕಲು ಸಹಕಾರಿಯಾಗಿದೆ. ಅಲ್ಲದೆ ಇದು ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಉತ್ತಮವಾಗಿ ಕಾರ್ಯನಿರ್ವಹಿಸುವ ಜೀರ್ಣಾಂಗ ವ್ಯವಸ್ಥೆಯು ತೂಕ ನಷ್ಟಕ್ಕೆ ನಿರ್ಣಾಯಕವಾಗಿದೆ. ಹಾಗೆಯೇ, ಸೋರೆಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಆರೋಗ್ಯ ಮತ್ತು ತೂಕ ನಿರ್ವಹಣೆಯನ್ನು ಇದು ಬೆಂಬಲಿಸುತ್ತದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ತೂಕ ನಷ್ಟಕ್ಕೆ ಅವಶ್ಯಕವಾಗಿದೆ. ಸೋರೆಕಾಯಿ ರಸದಿಂದ ಇದನ್ನು ಸಾಧಿಸಲು ಸಹಾಯ ಮಾಡುತ್ತದೆ. ಸೋರೆಕಾಯಿ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಮಧುಮೇಹವನ್ನು ನಿರ್ವಹಿಸುವವರಿಗೆ ಅಥವಾ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವವರಿಗೆ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗಿದೆ. ಸೋರೆಕಾಯಿ ರಸವನ್ನು ಸೇವಿಸುವುದರಿಂದ ಹಸಿವನ್ನು ನಿಯಂತ್ರಿಸಲು ಮತ್ತು ಅನಾರೋಗ್ಯಕರ ತಿಂಡಿಗಳನ್ನು ತಿನ್ನದಂತೆ ಮಾಡುವಲ್ಲಿ ಸಹಾಯ ಮಾಡಬಹುದು.

ಒಟ್ಟಿನಲ್ಲಿ ಸೋರೆಕಾಯಿ ಜ್ಯೂಸ್ ತೂಕ ನಷ್ಟಕ್ಕೆ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಆರೋಗ್ಯಕರ ಜೀವನಶೈಲಿಗೆ ಪ್ರತಿದಿನ ಸೋರೆಕಾಯಿ ರಸ ಸೇವಿಸಿ, ಇದರ ಪ್ರಯೋಜನಗಳನ್ನು ಪಡೆಯಬಹುದು.

Whats_app_banner