Weight Loss Tips: ಒಂದೇ ವಾರದಲ್ಲಿ 5 ಕೆಜಿ ತೂಕ ಕಡಿಮೆ ಆಗಬೇಕಾ, ಫಿಟ್ನೆಸ್ ಟ್ರೈನರ್ ನೀಡಿದ ಸೂಪರ್ ಡಯೆಟ್ ಪ್ಲಾನ್ ಇಲ್ಲಿದೆ ನೋಡಿ
Weight Loss Diet Plan: ಕೇವಲ ಒಂದು ವಾರದಲ್ಲಿ 5ಕೆಜಿ ತೂಕ ಇಳಿಸಿಕೊಳ್ಳುವುದು ಖಂಡಿತ ಸಾಮಾನ್ಯ ವಿಷಯವಲ್ಲ. ಇದನ್ನು ನಂಬಲು ಅಸಾಧ್ಯ ಎನ್ನಿಸಬಹುದು. ಆದರೆ ಫಿಟ್‌ನೆಸ್ ತರಬೇತುದಾರರೊಬ್ಬರು ಹೇಳಿದ ಈ ಡಯೆಟ್ ಕ್ರಮ ಪಾಲಿಸಿದ್ರೆ ಖಂಡಿತವಾಗಿಯೂ ನೀವು 5 ಕೆಜಿ ತೂಕ ಇಳಿಸಿಕೊಳ್ಳಲು ಸಾಧ್ಯವಿದೆ.

ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ಯಾರು ಏನೇ ಸಲಹೆ ನೀಡಿದ್ರೂ ನಮಗೆ ಖುಷಿಯಾಗುತ್ತೆ, ಇದನ್ನೊಮ್ಮೆ ಮಾಡಿ ನೋಡೋಣ ಎಂದು ಮನಸ್ಸಿಗೆ ಬರುತ್ತೆ. ಹಾಗಂತ ಒಂದು ವಾರದಲ್ಲಿ 5 ಕೆಜಿ ತೂಕ ಇಳಿಯುತ್ತೆ ಅಂದ್ರೆ ನಂಬೋದು ಸ್ವಲ್ಪ ಕಷ್ಟ ಆಗುತ್ತೆ, ಆದರೆ ಇದು ಖಂಡಿತ ಅಸಾಧ್ಯವಲ್ಲ.
ನೀವು ಕಷ್ಟಪಟ್ಟು ಪ್ರಯತ್ನಿಸಿದರೆ, ಆರೋಗ್ಯಕರ ರೀತಿಯಲ್ಲಿ ಒಂದು ವಾರದಲ್ಲಿ ಐದು ಕೆಜಿ ತೂಕ ಇಳಿಸಿಕೊಳ್ಳಬಹುದು ಎಂದು ಹೇಳುತ್ತಾರೆ ಫಿಟ್‌ನೆಸ್ ತರಬೇತುದಾರ ಏಕಾಂಶ್ ತನೇಜಾ. ಕಟ್ಟುನಿಟ್ಟಿನ ಡಯೆಟ್ ಕ್ರಮ ಹಾಗೂ ವ್ಯಾಯಾಮದ ಮೂಲಕ ಅದನ್ನು ಸಾಧಿಸಬಹುದು ಎಂದು ಏಕಾಂಶ್ ಹೇಳುತ್ತಾರೆ. 35 ಕೆಜಿ ತೂಕ ಕಡಿಮೆ ಮಾಡಿಕೊಂಡಿರುವ ಅವರು ತಮ್ಮ ತೂಕ ಇಳಿಕೆಯ ಪಯಣದ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಟಿಪ್ಸ್ ಕೂಡ ನೀಡಿದ್ದಾರೆ. ಒಂದು ವಾರದಲ್ಲಿ 5 ಕೆಜಿ ತೂಕ ಇಳಿಸಿಕೊಳ್ಳಲು ನಮ್ಮ ಡಯೆಟ್ ಕ್ರಮ ಹೇಗಿರಬೇಕು ಎಂದು ಏಕಾಂಶ್ ತಿಳಿಸಿದ್ದಾರೆ.
ಆದಾಗ್ಯೂ, ತ್ವರಿತವಾಗಿ ತೂಕ ಇಳಿಸಿಕೊಳ್ಳುವುದು ಆರೋಗ್ಯಕರವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ ಎಂದು ಅವರು ಹೇಳಿದ್ದಾರೆ. ನಮ್ಮ ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುವ ರೀತಿಯಲ್ಲಿ ತೂಕ ನಷ್ಟಕ್ಕೆ ಪ್ರಯತ್ನಿಸಬೇಕು ಎಂದು ಹೇಳುತ್ತಾರೆ. ವಾರಕ್ಕೆ ಮೂರರಿಂದ ಐದು ಕೆಜಿಯಷ್ಟು ಆರೋಗ್ಯಕರ ರೀತಿಯಲ್ಲಿ ಸುಲಭವಾಗಿ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.
ಒಂದು ವಾರದಲ್ಲಿ 5 ಕೆಜಿ ತೂಕ ಇಳಿಸಿಕೊಳ್ಳುವುದು ಸವಾಲಿನ ಗುರಿ. ಆದ್ದರಿಂದ ಕಷ್ಟಪಟ್ಟು ಕೆಲಸ ಮಾಡಲು ಸಿದ್ಧರಾಗಿರಿ. ಇದಕ್ಕಾಗಿ ನೀವು ನಿಮ್ಮ ಆಹಾರಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಏಕಾಂಶ್ ಸೂಚಿಸಿದ ಡಯೆಟ್ ಪ್ಲಾನ್ ಇಲ್ಲಿದೆ.
ಬೆಳಿಗ್ಗೆ 6.30
- ಸೋಂಪು ಬೀಜದ ನೀರು: 1 ಟೀ ಚಮಚ ಸೋಂಪು ಬೀಜಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅದನ್ನು ಸೋಸಿ ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಒಳ್ಳೆಯದು. ಹೊಟ್ಟೆ ಉಬ್ಬರ ಕಡಿಮೆ ಮಾಡುತ್ತದೆ.
ಉಪಾಹಾರ: ಬೆಳಿಗ್ಗೆ 8 ಗಂಟೆಗೆ
- ನಿಮ್ಮ ಉಪಾಹಾರದಲ್ಲಿ ಆವಕಾಡೊವನ್ನು ಸೇರಿಸಲು ಮರೆಯದಿರಿ. ಒಂದು ಆವಕಾಡೊ ಹಣ್ಣನ್ನು ಕಪ್ಪು ಉಪ್ಪು ಮತ್ತು ನಿಂಬೆ ರಸದೊಂದಿಗೆ ಬೆರೆಸಿ ತಿನ್ನಿರಿ. ಇದರಲ್ಲಿ ಆರೋಗ್ಯಕರ ಕೊಬ್ಬುಗಳಿವೆ. ಇದು ಸಂಪೂರ್ಣವಾಗಿ ಕಾರ್ಬೋಹೈಡ್ರೇಟ್‌ಗಳಿಂದ ಮುಕ್ತವಾಗಿದೆ ಮತ್ತು ಕಡಿಮೆ ಪ್ರೋಟೀನ್ ಅನ್ನು ಹೊಂದಿದೆ.
- ಉಪಾಹಾರ ಸೇವಿಸಿದ ನಂತರ, ಒಂದು ಗಂಟೆಯ ನಂತರ ಗ್ರೀನ್ ಟೀ ಕುಡಿಯಿರಿ.
ಬೆಳಿಗ್ಗೆ 10.30
- ಸೌತೆಕಾಯಿ ಮತ್ತು ಪುದೀನ ಡಿಟಾಕ್ಸ್ ನೀರು: ಒಂದು ಲೋಟ ಸೌತೆಕಾಯಿ ಚೂರುಗಳು, ಪುದೀನ ಎಲೆಗಳು ಮತ್ತು ಒಂದು ಚಿಟಿಕೆ ಪಿಂಕ್ ಸಾಲ್ಟ್ ಬೆರೆಸಿ ಇದನ್ನು ತಯಾರಿಸಿ. ಇದು ಸಂಪೂರ್ಣವಾಗಿ ಜೀರೋ ಕ್ಯಾಲೋರಿಗಳನ್ನು ಹೊಂದಿದೆ.
ಇದನ್ನೂ ಓದಿ: ತೂಕ ಇಳಿಕೆಯ ವಿಚಾರದಲ್ಲಿ ಮ್ಯಾಜಿಕ್ ಮಾಡುವ ಪಾನೀಯಗಳಿವು; ಕೆಲವೇ ದಿನಗಳಲ್ಲಿ ಬೊಜ್ಜು ಕರಗಿ, ತೂಕ ಕಡಿಮೆಯಾಗ್ಬೇಕು ಅಂದ್ರೆ ಕುಡಿದು ನೋಡಿ
ಮಧ್ಯಾಹ್ನ ಊಟ: 1 ಗಂಟೆ
- ಆಲಿವ್ ಎಣ್ಣೆಯೊಂದಿಗೆ ಕುಂಬಳಕಾಯಿ ನೂಡಲ್ಸ್: ಒಂದು ಕಪ್ ಕುಂಬಳಕಾಯಿ ತಿರುಳನ್ನು ಒಂದು ಟೀ ಚಮಚ ಆಲಿವ್ ಎಣ್ಣೆಯೊಂದಿಗೆ ಬೆರೆಸಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿಯೊಂದಿಗೆ ಹುರಿದು ತಿನ್ನಿರಿ.
- ಹಸಿರು ಸಲಾಡ್: ಲೆಟಿಸ್, ಸೌತೆಕಾಯಿ, ಕೆಲವು ಬಾದಾಮಿಗೆ ನಿಂಬೆರಸ ಹಿಂಡಿಕೊಂಡು ತಿನ್ನಿ. ಇದು ಕಡಿಮೆ ಕಾರ್ಬ್, ಕಡಿಮೆ ಪ್ರೊಟೀನ್ ಹೊಂದಿರುತ್ತದೆ. ಇದು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ.
- ಸೋಂಪು ಬೀಜದ ಚಹಾ: ಸೋಂಪು ಬೀಜಗಳನ್ನು ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಆ ನೀರನ್ನು ಸೋಸಿ ಕುಡಿಯಿರಿ.
ಇದನ್ನೂ ಓದಿ: ವೇಟ್ ಲಾಸ್ ಆಗ್ತಿಲ್ಲ ಅಂತ ಚಿಂತಿಸಬೇಡಿ ನೆಲ್ಲಿಕಾಯಿಯನ್ನು ಹೀಗೆ ಬಳಸಿ ನೋಡಿ; ದೇಹದ ಹಟಮಾರಿ ಕೊಬ್ಬು ಕರಗಿ, ಕೆಲವೇ ದಿನಗಳಲ್ಲಿ ತೂಕ ಇಳಿಯುತ್ತೆ
ಸಂಜೆ 4 ಗಂಟೆ
- ಸಂಜೆ ಎಳನೀರು ಕುಡಿಯಿರಿ. ಒಂದು ಲೋಟ ಎಳನೀರು ಕುಡಿಯುವುದರಿಂದ ಎಲೆಕ್ಟ್ರೋಲೈಟ್‌ಗಳು ದೊರೆಯುತ್ತವೆ.
- ಎಳನೀರು ಕುಡಿಯುವುದು ಸಾಧ್ಯವಾಗಿಲ್ಲ ಎಂದರೆ ಗಿಡಮೂಲಿಕೆ ಚಹಾ ಕುಡಿಯಬಹುದು.
ರಾತ್ರಿ ಊಟ: ಸಂಜೆ 7:30
- ತರಕಾರಿ ಸೂಪ್: ಬೇಯಿಸಿದ ಪಾಲಕ್, ಸೆಲರಿ ಮತ್ತು ಅಣಬೆಗಳಿಂದ ಮಾಡಿದ ಸೂಪ್ ಕುಡಿಯುವುದು ಒಳ್ಳೆಯದು. ಈ ಸೂಪ್ ಅನ್ನು ಉಪ್ಪು ಮತ್ತು ಕರಿಮೆಣಸಿನ ಪುಡಿಯಿಂದ ತಯಾರಿಸಲಾಗುತ್ತದೆ, ಆದ್ದರಿಂದ ಇದರಲ್ಲಿ ಯಾವುದೇ ಕಾರ್ಬೋಹೈಡ್ರೇಟ್‌ಗಳಿರುವುದಿಲ್ಲ.
- ಗ್ರೀನ್ ಟೀ: ಒಂದು ಕಪ್ ಗ್ರೀನ್ ಟೀ ಕುಡಿಯುವುದು ಪ್ರಯೋಜನಕಾರಿ.
- ಸೋಂಪು ಬೀಜಗಳು ಮತ್ತು ದಾಲ್ಚಿನ್ನಿ ತುಂಡುಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯಲು ಪ್ರಯತ್ನಿಸಿ. ಇದು ಅದ್ಭುತವಾಗಿ ಕೆಲಸ ಮಾಡುತ್ತದೆ.
ಈ ಆಹಾರ ಕ್ರಮದೊಂದಿಗೆ ಒಂದು ಗಂಟೆ ಕಾರ್ಡಿಯೋ ವ್ಯಾಯಾಮ ಮಾಡುವುದು ಒಳ್ಳೆಯದು. ನೀವು ಹೀಗೆ ತಿಂದು ವ್ಯಾಯಾಮ ಮಾಡಿದರೆ, ಒಂದು ವಾರದಲ್ಲಿ 5 ಕೆಜಿ ಅಥವಾ ಅದಕ್ಕಿಂತ ಹೆಚ್ಚು ತೂಕ ಇಳಿಸಿಕೊಳ್ಳಬಹುದು ಎಂದು ಅವರು ಹೇಳುತ್ತಾರೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
