Fitness Tips: ತೆಳ್ಳಗೆ ಬಳುಕುವ ಹೊಟ್ಟೆ ನಿಮ್ಮದಾಗಬೇಕೇ? ಫಿಟ್‌ನೆಸ್ ಟ್ರೈನರ್ ನೀಡಿರುವ ಈ ಸಲಹೆಗಳನ್ನು ಪಾಲಿಸಿ ನೋಡಿ
ಚಪ್ಪಟೆಯಾದ ಹೊಟ್ಟೆ, ಆಕರ್ಷಕವಾಗಿ ಕಾಣಿಸುವ ದೇಹಾಕೃತಿ ನಿಮ್ಮದಾಗಬೇಕು ಎಂಬ ಬಯಕೆ ನಿಮಗಿದೆಯೇ? ಹಾಗಾದರೆ ಫಿಟ್ನೆಸ್ ಟ್ರೈನರ್ ಹೇಳುವ ಈ ಸರಳ ಸಲಹೆ ಪಾಲಿಸಿ, ಹೀಗೆ ಸರಳವಾಗಿ ಮನೆಯಲ್ಲೇ ಈ ಟಿಪ್ಸ್ ಪಾಲಿಸಿದರೆ, ತೂಕ ಇಳಿಸುವುದು ದೊಡ್ಡ ಸವಾಲಿನ ಕೆಲಸವಲ್ಲ.

ಜನರು ತೂಕ ಕಳೆದುಕೊಳ್ಳಬೇಕು, ಹೊಟ್ಟೆ ಸಣ್ಣದಾಗಬೇಕು ಎಂದು ಹಲವು ಕಸರತ್ತು ಮಾಡುತ್ತಾರೆ. ಅದರಲ್ಲೂ ಜಿಮ್‌ಗೆ ಹೋಗುವುದು, ವರ್ಕೌಟ್ ಮಾಡುವುದು, ಡಯೆಟ್ ಫುಡ್ ಸೇವನೆ ಎಂದು ಹಲವು ರೀತಿಯಲ್ಲಿ ಪ್ರಯತ್ನ ಕೈಗೊಳ್ಳುತ್ತಾರೆ. ಹೇಗಾದರೂ ಮಾಡಿ, ತೂಕ ಕಡಿಮೆ ಮಾಡಿಕೊಂಡು, ಆಕರ್ಷಕ ದೇಹಾಕೃತಿ ಹೊಂದಬೇಕು ಎನ್ನುವುದು ಅವರ ಆಸೆಯಾಗಿರುತ್ತದೆ. ಆದರೆ ಕೆಲವೊಮ್ಮೆ ಸರಳ ಟಿಪ್ಸ್ ಪಾಲಿಸಿದರೆ ಸಾಕು, ನೀವು ಮನೆಯಲ್ಲೇ ಅವುಗಳನ್ನು ಟ್ರೈ ಮಾಡಿ, ತೂಕ ಕಡಿಮೆ ಮಾಡಬಹುದು. ಫಿಟ್ಮೆಸ್ ಟ್ರೈನರ್ ನೇಹಾ ಅವರ ಪ್ರಕಾರ, ಕೆಲವು ಟಿಪ್ಸ್ ಮತ್ತು ಡಯೆಟ್, ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಂಡರೆ, ಚಪ್ಪಟೆಯಾದ ಹೊಟ್ಟೆ ನಮ್ಮದಾಗಬಹುದು.
ಹೊಟ್ಟೆಯ ಬೊಜ್ಜು ಇಳಿಕೆ ಮಾಡಲು ಈ ಟಿಪ್ಸ್
ಹೊಟ್ಟೆಯಲ್ಲಿ ಶೇಖರವಾಗಿರುವ ಬೊಜ್ಜು ಕಡಿಮೆ ಮಾಡಲು ಈ ಸರಳ ಟಿಪ್ಸ್ ಪಾಲಿಸಿ, ಮೂರು ಹೊತ್ತು ಭರ್ಜರಿಯಾಗಿ ತಿನ್ನುವ ಬದಲು, ದಿನದಲ್ಲಿ ನಾಲ್ಕು ಹೊತ್ತು ಸರಳ ಮತ್ತು ಅತಿ ಕಡಿಮೆ ಕ್ಯಾಲೊರಿ ಇರುವ ಆಹಾರ ಸೇವಿಸಿ. ಇದರಿಂದಾಗಿ ನೀವು ಮಿತಿಗಿಂತ ಹೆಚ್ಚಿನ ಆಹಾರ ಸೇವಿಸುವುದು ತಪ್ಪುತ್ತದೆ. ಅಲ್ಲದೆ, ನಾಲ್ಕು ಸರಳ ಊಟ ಅಥವಾ ಉಪಾಹಾರ ಸೇವನೆಯಿಂದ ಹೊಟ್ಟೆಯಲ್ಲಿ ಅನಗತ್ಯ ಬೊಜ್ಜು ಶೇಖರವಾಗುವುದು ತಡೆಯುತ್ತದೆ.
ಊಟ ಮಾಡುವ ಮೊದಲು ನೀರು ಕುಡಿಯಿರಿ
ಪ್ರತಿ ಬಾರಿ ಊಟ ಮಾಡುವ ಮೊದಲು, ಒಂದು ಗ್ಲಾಸ್ ನೀರು ಕುಡಿಯಿರಿ. ಆಗ ದೇಹದಲ್ಲಿನ ಅನಗತ್ಯ ಅಂಶ ಮತ್ತು ಕಲ್ಮಶಗಳು ಸುಲಭದಲ್ಲಿ ಹೊರಹೋಗುತ್ತದೆ, ಆರೋಗ್ಯಕರ ದೇಹ ನಮ್ಮದಾಗುತ್ತದೆ.
ದಿನಕ್ಕೆ 40 ನಿಮಿಷ ವರ್ಕೌಟ್ ಮಾಡಿ
ದಿನಕ್ಕೆ ಕನಿಷ್ಠ 30ರಿಂದ 40 ನಿಮಿಷ ಆಬ್ಸ್ ವರ್ಕೌಟ್ ಮಾಡಿ, ಅದರಿಂದ ಹೊಟ್ಟೆಯ ಮೇಲೆ ಸಂಗ್ರಹವಾಗಿರುವ ಕೊಬ್ಬು ಕರಗುತ್ತದೆ.
ಹೆಚ್ಚು ಪ್ರೊಟೀನ್ ಮತ್ತು ನಾರಿನ ಅಂಶದ ಆಹಾರ
ದೇಹಕ್ಕೆ ಅಗತ್ಯವಾದ ಪ್ರೊಟೀನ್ ಮತ್ತು ಹೆಚ್ಚು ನಾರಿನ ಅಂಶ ಇರುವ ಆಹಾರ ಸೇವಿಸಿ, ಇದರಿಂದ ದೇಹದ ಆರೋಗ್ಯ ಸಮಸ್ಥಿತಿಯಲ್ಲಿರುವ ಜತೆಗೆ, ಕೊಬ್ಬು ಸಂಗ್ರಹವಾಗುವುದಿಲ್ಲ. ಜತೆಗೆ ಜೀರ್ಣಕ್ರಿಯೆಯೂ ಸೂಕ್ತ ರೀತಿಯಲ್ಲಿ ಆಗುತ್ತದೆ.
ಇದನ್ನೂ ಓದಿ: ರಾತ್ರಿ ಒಳಉಡುಪು ಧರಿಸದೇ ಮಲಗಿದರೆ ಎಷ್ಟೊಂದು ಪ್ರಯೋಜನ; ವೈದ್ಯರ ಟಿಪ್ಸ್ ಇಲ್ಲಿದೆ
ತರಕಾರಿ ಮತ್ತು ಹಣ್ಣು ಸೇವಿಸಿ
ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಹಣ್ಣು, ತರಕಾರಿ ಸೇವಿಸಿ. ಇದರಿಂದ ಅಧಿಕ ತೂಕ ಹೊಂದಿದ್ದರೆ, ಅನಗತ್ಯ ಕೊಬ್ಬು ಕರಗಿ, ಆರೋಗ್ಯವಂತ ದೇಹ ನಿಮ್ಮದಾಗುತ್ತದೆ.
ದಿನಕ್ಕೆ ಕನಿಷ್ಠ 7-8 ಗಂಟೆ ನಿದ್ರೆ ಮಾಡಿ
ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲ ದಿನಕ್ಕೆ ಕನಿಷ್ಠ ಏಳರಿಂದ ಎಂಟು ಗಂಟೆ ನಿದ್ರೆ ಮಾಡಿ. ಹಾಗೆ ಮಾಡಿದರೆ, ನಿಮ್ಮ ಹಾರ್ಮೋನ್‌ಗಳು ಸುಧಾರಿತವಾಗಿ, ತೂಕ ಇಳಿಕೆಗೆ ಸಹಕಾರಿಯಾಗುತ್ತದೆ.
ಒತ್ತಡವನ್ನು ಕಡಿಮೆ ಮಾಡಿ
ಯೋಗ, ಧ್ಯಾನ ಮತ್ತು ಪ್ರಾಣಾಯಾಮದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ, ಹಾಗೆ ಮಾಡುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ. ಚಿಂತೆ ದೂರವಾದರೆ, ದೇಹದಲ್ಲಿ ಉಲ್ಲಾಸ ಉಂಟಾಗುತ್ತದೆ.
ಇದನ್ನೂ ಓದಿ: ಮಕ್ಕಳ ಊಟದ ಡಬ್ಬಿಗೆ ಈ ಆಹಾರಗಳನ್ನು ಕೊಡಬೇಡಿ; ಆರೋಗ್ಯ ಸಮಸ್ಯೆಯಾಗಬಹುದು
ಹೊಟ್ಟೆ ಇಳಿಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಹೊಟ್ಟೆಯಲ್ಲಿ ಶೇಖರವಾದ ಬೊಜ್ಜು ಮತ್ತು ಕೊಬ್ಬು ಸುಲಭದಲ್ಲಿ ಕರಗಿ ಹೋದರೆ, ಆಗ ದೇಹದ ಒಟ್ಟಾರೆ ಸ್ಥಿತಿ ಸುಧಾರಿಸುತ್ತದೆ. ಆರೋಗ್ಯಕರ ದೇಹ ನಮ್ಮದಾದರೆ, ರೋಗಗಳು ಹತ್ತಿರ ಸುಳಿಯುವುದಿಲ್ಲ. ಹೀಗೆ ಸರಳವಾಗಿ ಮನೆಯಲ್ಲೇ ಈ ಟಿಪ್ಸ್ ಪಾಲಿಸಿದರೆ, ತೂಕ ಇಳಿಸುವುದು ದೊಡ್ಡ ಸವಾಲಿನ ಕೆಲಸವಲ್ಲ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
