Weight Loss Tips: ವ್ಯಾಯಾಮ, ಡಯಟ್ ಇಲ್ಲದೆ ಇಷ್ಟದ ಆಹಾರ ತಿನ್ನುತ್ತಲೇ ತೂಕ ಇಳಿಸಿಕೊಳ್ಳುವ ವಿಧಾನ ಹೀಗಿರುತ್ತೆ
ತೂಕ ಇಳಿಸುವ ಟಿಪ್ಸ್: ಜಿಮ್ ಗೆ ಹೋಗದೆ ಮತ್ತು ಡಯಟ್ ಮಾಡದೆ ತೂಕ ಇಳಿಸಿಕೊಳ್ಳಲು ಕೆಲವೊಂದು ಮಾರ್ಗಗಳಿವೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಆರೋಗ್ಯಕರ ಆಹಾರದ ಸೇವನೆ. ಇಷ್ಟದ ಆಹಾರ ತಿನ್ನುವ ಮೂಲಕ ತೂಕವನ್ನು ಹೇಗೆ ಕಳೆದುಕೊಳ್ಳಬಹುದು ಎಂಬುದನ್ನು ಆಹಾರ ತಜ್ಞರು ವಿವರಿಸುತ್ತಾರೆ. ಇಲ್ಲಿ ನೀಡಲಾಗಿರುವ ತೂಕ ಇಳಿಸಿಕೊಳ್ಳುವ ಸಲಹೆಗಳು ಎಲ್ಲರಿಗೂ ಉಪಯುಕ್ತವಾಗಿದೆ.
ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಾಗುವುದು ಅನೇಕರಿಗೆ ದೊಡ್ಡ ಸಮಸ್ಯೆಯಾಗಿದೆ. ತೂಕ ಇಳಿಸಿಕೊಳ್ಳಲು ಹಲವಾರು ರೀತಿಯ ವ್ಯಾಯಾಮಗಳು ಮತ್ತು ಆಹಾರಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಯಾರೂ ಕೂಡ ಸುಲಭವಾಗಿ ತೂಕವನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಜೀವನಶೈಲಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಸುಲಭವಾಗಿ ತೂಕ ಇಳಿಕೆಯನ್ನು ಸಾಧಿಸಬಹುದು. ಗುರುಗ್ರಾಮ್ ಮೂಲದ ಡಯೆಟಿಷಿಯನ್ ಡಾ.ಅನ್ಶುಲ್ ಸಿಂಗ್ ತೂಕ ಇಳಿಕೆಗೆ ಕೆಲವು ಸರಳ ಸಲಹೆಗಳನ್ನು ನೀಡಿದ್ದಾರೆ. ಅಂತೆಯೇ, ಜಿಮ್ ನಲ್ಲಿ ತುಂಬಾ ವರ್ಕೌಟ್ ಮಾಡದೆ, ಆಹಾರಕ್ಕೆ ನಿಯಂತ್ರಣ ಹಾಕಿಕೊಳ್ಳದೇ ತೂಕ ನಷ್ಟವನ್ನು ಸಾಧಿಸಬಹುದು ಎಂಬುದನ್ನು ವಿವವರಿಸಿದ್ದಾರೆ.
ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ತೂಕವನ್ನು ಕಳೆದುಕೊಳ್ಳುವ ಪ್ರಮುಖ ಹಂತವಾಗಿದೆ. ಈ ಸಣ್ಣ ಬದಲಾವಣೆಗಳು ತೂಕ ನಿಯಂತ್ರಣದಲ್ಲಿ ಬಹಳ ನೆರವಾಗುತ್ತವೆ. ಪ್ರತಿದಿನ ಮಲಗುವ ಸಮಯವನ್ನು ಬದಲಾಯಿಸುವುದರಿಂದ ದೇಹದಲ್ಲಿ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ರಾತ್ರಿಯಲ್ಲಿ 7-8 ಗಂಟೆಗಳ ನಿದ್ದೆ ಮಾಡುವುದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಒತ್ತಡವನ್ನು ಕಡಿಮೆ ಮಾಡುವುದರಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು. ಯೋಗ, ಧ್ಯಾನ ಹಾಗೂ ಪ್ರಾಣಾಯಾಮವು ಒತ್ತಡವನ್ನು ಕಡಿಮೆ ಮಾಡಲು ಪ್ರಮುಖ ಮಾರ್ಗವಾಗಿದೆ.
ಸಾಕಷ್ಟು ನೀರು ಕುಡಿಯಿರಿ
ಸಾಕಷ್ಟು ನೀರು ಕುಡಿಯುವುದು ಸಹ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನೀರಿನ ಕೊರತೆಯು ಚಯಾಪಚಯ ಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ನೀವು ಹೆಚ್ಚು ನೀರು ಕುಡಿದಷ್ಟೂ ಆರೋಗ್ಯವಂತರಾಗಿರುತ್ತೀರಿ. ಡಯಟ್ ಮಾಡುವುದಷ್ಟೇ ಅಲ್ಲ, ಆಹಾರ ಪದ್ಧತಿಯಲ್ಲಿಯೂ ಕೆಲವೊಂದು ಸರಳ ಬದಲಾವಣೆಗಳನ್ನು ಮಾಡಿಕೊಂಡರೆ ತೂಕ ನಿಯಂತ್ರಣದಲ್ಲಿಡಬಹುದು. ನಿಮ್ಮ ಆಹಾರದಲ್ಲಿ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಅವು ಫೈಬರ್ ಮತ್ತು ವಿಟಮಿನ್ ಗಳನ್ನು ಹೊಂದಿರುತ್ತವೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಹೆಚ್ಚಾಗಿ ಧಾನ್ಯಗಳನ್ನು ಸೇವಿಸಿ
ಧಾನ್ಯಗಳನ್ನು ಸೇವಿಸುವುದರಿಂದ ತೂಕ ಇಳಿಕೆಗೂ ಸಹಕಾರಿಯಾಗುತ್ತದೆ. ನೀವು ಸಕ್ಕರೆ ಮತ್ತು ಕೊಬ್ಬಿನ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಿದರೆ ಸುಲಭವಾಗಿ ತೂಕವನ್ನು ಕಳೆದುಕೊಳ್ಳುತ್ತೀರಿ. ಸಕ್ಕರೆ, ಕೊಬ್ಬಿನ ಆಹಾರಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ, ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ.
ಮೆಟ್ಟಿಲು ಹತ್ತುವುದು ಆರೋಗ್ಯಕರ ಅಭ್ಯಾಸ
ವಾಕಿಂಗ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನಡಿಗೆಯಿಂದ ದೇಹದಲ್ಲಿ ಕ್ಯಾಲೊರಿ ಕರಗುತ್ತದೆ ಮತ್ತು ತೂಕವನ್ನು ನಿಯಂತ್ರಿಸುತ್ತದೆ. ಮೆಟ್ಟಿಲು ಹತ್ತುವುದು ಕೂಡ ತುಂಬಾ ಆರೋಗ್ಯಕರ ಅಭ್ಯಾಸ. ಸಾಧ್ಯವಾದಾಗಲೆಲ್ಲಾ ಲಿಫ್ಟ್‌ಗಳ ಬದಲಿಗೆ ಮೆಟ್ಟಿಲುಗಳನ್ನು ಬಳಸಿ. ಇದು ತೂಕ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ.
ನಿತ್ಯ ಯೋಗ ಮಾಡಿ
ಯೋಗ ಮತ್ತು ಧ್ಯಾನವು ದೇಹವನ್ನು ಆರೋಗ್ಯವಾಗಿಡಲು ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಅಭ್ಯಾಸಗಳನ್ನು ಪ್ರತಿದಿನ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಇದು ಚಯಾಪಚಯವನ್ನು ಸುಧಾರಿಸುತ್ತದೆ. ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಆಹಾರ ಸೇವನೆಯನ್ನು ಕಡಿಮೆ ಮಾಡುವ ಮೂಲಕವೂ ತೂಕ ನಷ್ಟವನ್ನು ಸಾಧಿಸಬಹುದು. ನಮ್ಮ ದೇಶದಲ್ಲಿ ನಾವು ಮೂರು ಹೊತ್ತು ಊಟ ಮಾಡುತ್ತೇವೆ. ಅದನ್ನು ಎರಡು ಬಾರಿ ಕಡಿಮೆ ಮಾಡಿ. ಊಟ ಕಡಿಮೆ ಮಾಡಿ ಹಣ್ಣುಗಳಿಗೆ ಹೊಂದಿಕೊಳ್ಳಿ. ಇದು ಕೂಡ ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
(ಗಮನಿಸಿ: ಅಧ್ಯಯನಗಳು ಮತ್ತು ಆರೋಗ್ಯ ನಿಯತಕಾಲಿಕಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ನಿಮಗಾಗಿ ಇಲ್ಲಿ ಒದಗಿಸಲಾಗಿದೆ. ಇದು ಕೇವಲ ಮಾಹಿತಿಯಾಗಿದೆ. ಇದು ಔಷಧಿ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಆರೋಗ್ಯದ ಬಗ್ಗೆ ಅನುಮಾನವಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.)