ಕನ್ನಡ ಸುದ್ದಿ  /  ಜೀವನಶೈಲಿ  /  Weight Loss Tips: ಬೆಳ್ಳುಳ್ಳಿ ತಿಂದ್ರೆ ಸುಲಭವಾಗಿ ಕೊಬ್ಬು ಕರಗಿಸಬಹುದು; ಆದ್ರೆ ಹೇಗೆ ಬೇಕೋ ಹಾಗೆ ತಿನ್ನೊಂಗಿಲ್ಲ, ಈ ಕ್ರಮ ಅನುಸರಿಸಿ

Weight Loss Tips: ಬೆಳ್ಳುಳ್ಳಿ ತಿಂದ್ರೆ ಸುಲಭವಾಗಿ ಕೊಬ್ಬು ಕರಗಿಸಬಹುದು; ಆದ್ರೆ ಹೇಗೆ ಬೇಕೋ ಹಾಗೆ ತಿನ್ನೊಂಗಿಲ್ಲ, ಈ ಕ್ರಮ ಅನುಸರಿಸಿ

Weight Loss Tips: ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ನಿಮಗೆ ಬೆಳ್ಳುಳ್ಳಿ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ಅದನ್ನು ನೀವು ಸೂಕ್ತ ರೀತಿಯಲ್ಲಿ ಬಳಸಿದರೆ ಖಂಡಿತ ನೀವು ಅತಿ ಕಡಿಮೆ ಅವಧಿಯಲ್ಲಿ ಆರೋಗ್ಯಕರವಾಗಿ ತೂಕ ಇಳಿಸಬಹುದು.

ತೂಕ ನಿರ್ವಹಣೆಗೆ ಬೆಳ್ಳುಳ್ಳಿ
ತೂಕ ನಿರ್ವಹಣೆಗೆ ಬೆಳ್ಳುಳ್ಳಿ (PC: UnSplash)

Weight Loss Tips: ಉತ್ತಮ ಆರೋಗ್ಯ ಪಡೆಯಲು ಪ್ರಕೃತಿಯಲ್ಲಿ ನಮಗೆ ಅನೇಕ ವಸ್ತುಗಳು ಲಭ್ಯವಿದೆ. ಅದರಲ್ಲೂ ನಮ್ಮ ಅಡುಗೆ ಮನೆಯಲ್ಲೇ ನಮ್ಮ ಆರೋಗ್ಯವಿದೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರ. ನಿಮ್ಮ ಆರೋಗ್ಯವನ್ನು ಹೆಚ್ಚಿಸಲು ನೀವು ಆರೋಗ್ಯಕರ, ನೈಸರ್ಗಿಕ ಮಾರ್ಗವನ್ನು ಹುಡುಕುತ್ತಿದ್ದರೆ ನಿಮಗೆ ಬೆಳ್ಳುಳ್ಳಿಗಿಂತ ಹೆಚ್ಚಿನದು ಬೇಕಿಲ್ಲ. ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವುದರಿಂದ ಹಿಡಿದು ಮಧುಮೇಹವನ್ನು ನಿಯಂತ್ರಿಸುವವರೆಗೆ ಬೆಳ್ಳುಳ್ಳಿ, ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಮಧುಮೇಹವನ್ನು ನಿಯಂತ್ರಿಸಿ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್‌ ವಿರೋಧಿಯಾಗಿ ಬೆಳ್ಳುಳ್ಳಿ ಕೆಲಸ ಮಾಡುತ್ತದೆ. ಹಾಗಂತ ಬೆಳ್ಳುಳ್ಳಿಯನ್ನು ತಿನ್ನಲು ಕೆಲವೊಂದು ಮಾರ್ಗಗಳಿವೆ. ಇದನ್ನು ನೀವು ಸೂಕ್ತ ರೀತಿಯಲ್ಲಿ ಅನುಸರಿಸಿದರೆ ಖಂಡಿತ ತೂಕ ಇಳಿಸಿಕೊಳ್ಳುವುದು ಕಷ್ಟದ ಮಾತೇನಲ್ಲ.

ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ಸೇವನೆ

ಹಸಿ ಬೆಳ್ಳುಳ್ಳಿಯನ್ನು ಯಾವಾಗ ಮತ್ತು ಹೇಗೆ ತಿನ್ನಬೇಕು ಎಂದು ಬಹಳ ಜನ ಗೊಂದಲಕ್ಕೆ ಒಳಗಾಗುತ್ತಾರೆ. ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗಿ ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಅಲಿಸಿನ್ ಎಂಬ ಸಂಯುಕ್ತವು ಅದರ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವ ಮತ್ತು ರಕ್ತವನ್ನು ತೆಳುಗೊಳಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಬೆಳಗ್ಗೆ ಒಂದು ಲೋಟ ನೀರಿನೊಂದಿಗೆ 3-4 ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ ಸೇವಿಸಬಹುದು. ಇದರಿಂದ ನೀವು ಕಡಿಮೆ ಅವಧಿಯಲ್ಲಿ ಬೇಗ ತೂಕ ಇಳಿಸಬಹುದು.

ಬೆಳ್ಳುಳ್ಳಿ ಟೀ

ಒಂದು ವೇಳೆ ನಿಮಗೆ ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಲು ಇಷ್ಟವಿಲ್ಲದಿದ್ದರೆ ಬೆಳ್ಳುಳ್ಳಿ ಚಹಾ ತಯಾರಿಸಿ ಸೇವಿಸಬಹುದು. ಬೆಳ್ಳುಳ್ಳಿ ಎಸಳನ್ನು ಕ್ರಶ್‌ ಮಾಡಿ ಒಂದು ಕಪ್ ನೀರಿಗೆ ಸೇರಿಸಿ. ಒಂದೆರಡು ನಿಮಿಷ ಇದನ್ನು ಕುದಿಸಿ. 1-2 ದಾಲ್ಚಿನ್ನಿ ಸೇರಿಸಿ ಸ್ಟೌವ್‌ ಆಫ್‌ ಮಾಡಿ. ಅದು ಸ್ವಲ್ಪ ತಣ್ಣಗಾದ ನಂತರ ಒಂದು ಟೀ ಚಮಚ ಜೇನುತುಪ್ಪ ಮತ್ತು ಅರ್ಧ ಟೀ ಚಮಚ ನಿಂಬೆ ರಸವನ್ನು ಸೇರಿಸಿ. ಇದನ್ನು ಮಿಕ್ಸ್‌ ಮಾಡಿ ಬೆಳ್ಳುಳ್ಳಿ ಟೀ ಎಂಜಾಯ್‌ ಮಾಡಿ.

ಬೆಳ್ಳುಳ್ಳಿ ಹಾಗೂ ಜೇನುತುಪ್ಪ

ಬೆಳ್ಳುಳ್ಳಿ ಹಾಗೂ ಜೇನುತುಪ್ಪದ ಕಾಂಬಿನೇಶನ್‌ ತೂಕ ಇಳಿಸಲು ಪರಿಣಾಮಕಾರಿಯಾಗಿದೆ. ಬೆಳ್ಳುಳ್ಳಿ ಎಸಳುಗಳನ್ನು ಸಣ್ಣದಾಗಿ ಕತ್ತರಿಸಿ, ಅದರೊಂದಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ 5 ನಿಮಿಷ ಬಿಡಿ. ನಂತರ ಅದನ್ನು ಸೇವಿಸಿ ಬೆಳ್ಳುಳ್ಳಿಯನ್ನು ಅಗಿದು ನುಂಗಿ.

ರೋಸ್ಟ್‌ ಮಾಡಿದ ಬೆಳ್ಳುಳ್ಳಿ

ಬೆಳ್ಳುಳ್ಳಿಯನ್ನು ನೀವು ರೋಸ್ಟ್‌ ಮಾಡಿ ಕೂಡಾ ಸೇವಿಸಬಹುದು. ಬೆಳ್ಳುಳ್ಳಿ ಸಿಪ್ಪೆ ಬಿಡಿಸದೆ ಸ್ವಲ್ಪ ಆಲಿವ್‌ ಎಣ್ಣೆ ಸೇರಿಸಿ ಅಲ್ಯೂಮಿನಿಯಂ ಫಾಯಿಲ್‌ ಶೀಟ್‌ನಲ್ಲಿ ಸುತ್ತಿ. ಇದರನ್ನು 200 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುಮಾರು 30 ನಿಮಿಷಗಳ ಕಾಲ ಓವನ್‌ನಲ್ಲಿ ಬೇಕ್‌ ಮಾಡಿ. ಇದರಿಂದ ಬೆಳ್ಳುಳ್ಳಿ ಮೃದುವಾಗಿ ಕಂದು ಬಣ್ಣಕ್ಕೆ ಬರುತ್ತದೆ. ನಂತರ ಹೊರಗೆ ತೆಗೆದು ಅದನ್ನು ಮ್ಯಾಶ್‌ ಮಾಡಿ, ಆ ಪೇಸ್ಟನ್ನು ನೀವು ರೊಟ್ಟೆ, ದೋಸೆ ಅಥವಾ ಡಿಪ್‌ ಆಗಿ ಬಳಸಬಹುದು.

ದೈನಂದಿನ ಅಡುಗೆಯಲ್ಲಿ ಬಳಸುವುದು

ಪ್ರತಿದಿನ ನೀವು ಬೆಳ್ಳುಳ್ಳಿ ಸೇವಿಸಬೇಕು ಎಂದಾದರೆ ಅದನ್ನು ಅಡುಗೆಗೆ ಸೇರಿಸುವುದು. ಬೆಳ್ಳುಳ್ಳಿ ಎಸಳನ್ನು ಸಣ್ಣಗೆ ಹೆಚ್ಚಿ ಅಥವಾ ಕ್ರಷ್‌ ಮಾಡಿ ಸ್ವಲ್ಪ ಎಣ್ಣೆಯಲ್ಲಿ ಹುರಿದು ಒಗ್ಗರಣೆಗೆ ಸೇರಿಸಬಹುದು. ಇದರಿಂದ ನಿಮ್ಮ ಅಡುಗೆಗೆ ಒಳ್ಳೆ ಸುವಾಸನೆ ನೀಡಬಹುದು. ಬೆಳ್ಳುಳ್ಳಿಯನ್ನು ಬೇಯಿಸುವುದರಿಂದ ಅದರಲ್ಲಿನ ಆಲಿಸಿನ್‌ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ನಿಮಗೆ ಅದರ ಪ್ರಯೋಜನ ಬೇಕೆಂದರೆ ಹಸಿ ಬೆಳ್ಳುಳ್ಳಿಯನ್ನು ಊಟಕ್ಕೆ ಸೇರಿಸಿ.

ಬೆಳ್ಳುಳ್ಳಿ ಎಣ್ಣೆ

ನಿಮಗೆ ಬೆಳ್ಳುಳ್ಳಿ ಪ್ರಯೋಜನ ಸಂಪೂರ್ಣವಾಗಿ ದೊರೆಯಬೇಕೆಂದರೆ ಅದಕ್ಕೆ ಮತ್ತೊಂದು ಮಾರ್ಗವಿದೆ. ನೀವು ಅಡುಗೆಗೆ ಎಣ್ಣೆ ಬಳಸುವಾಗ ಬೆಳ್ಳುಳ್ಳಿ ಎಣ್ಣೆ ಬಳಸಬಹುದು. ಬೆಳ್ಳುಳ್ಳಿ ಎಣ್ಣೆ ತಯಾರಿಸಲು ಒಂದು ಹಿಡಿ ಬೆಳ್ಳುಳ್ಳಿ ಎಸಳನ್ನು 2 ಕಪ್‌ ಅಡುಗೆ ಎಣ್ಣೆಯೊಂದಿಗೆ ಸೇರಿಸಿ ಕಡಿಮೆ ಉರಿಯಲ್ಲಿ 10 ನಿಮಿಷ ಹೀಟ್‌ ಮಾಡಿ. ನಂತರ ಸ್ಟೌವ್‌ ಆಫ್‌ ಮಾಡಿ ತಣ್ಣಗಾದ ನಂತರ ಅದನ್ನು ಶೋಧಿಸಿ ಶುದ್ಧವಾದ ಕಂಟೇನರ್‌ನಲ್ಲಿ ಸ್ಟೋರ್‌ ಮಾಡಿ ರೆಫ್ರಿಜರೇಟರ್‌ನಲ್ಲಿ ಸ್ಟೋರ್‌ ಮಾಡಿ.