ಭಾರತದ ಹೆಣ್ಣುಮಕ್ಕಳಿಗೆ ಇಲ್ಲಿದೆ ಸಿಹಿಸುದ್ದಿ, ದೇಹದಂಡಿಸದೇ ತೂಕ ಇಳಿಸಲು ಐಸಿಎಂಆರ್ ನೀಡಿದೆ ಸಲಹೆ, ಫಾಲೋ ಮಾಡೋದು ಮರಿಬೇಡಿ
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಭಾರತೀಯ ಮಹಿಳೆಯರಿಗಾಗಿ ಡಯಟ್ ಚಾರ್ಟ್ ಬಿಡುಗಡೆ ಮಾಡಿದೆ. ವ್ಯಾಯಾಮ, ವಾಕಿಂಗ್‌ನಂತಹ ದೇಹದಂಡನೆ ಮಾಡಲು ಸಾಧ್ಯವಾಗದ ಮಹಿಳೆಯರೂ ಕೂಡ ಈ ಡಯಟ್ ಕ್ರಮ ಪಾಲಿಸುವ ಮೂಲಕ ತೂಕ ಇಳಿಸಬಹುದಾಗಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಭಾರತೀಯರಿಗೆಂದೇ ಆಹಾರ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯು ಪ್ರಮುಖ 17 ಅಂಶಗಳ ಮಾಹಿತಿಯನ್ನು ಒಳಗೊಂಡಿದ್ದು ಆಹಾರ ಹಾಗೂ ಪಾನೀಯ ಉದ್ಯಮದಲ್ಲಿ ಸಾಕಷ್ಟು ಕೋಲಾಹಲವನ್ನೆಬ್ಬಿಸಿದೆ. ಈ ಮಾರ್ಗಸೂಚಿಯಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಆಹಾರಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುವ ಮಹಿಳೆಯರು ಹಾಗೂ ತಾಯಂದಿರ ಆರೋಗ್ಯ-ಆಹಾರ ಕ್ರಮದ ಬಗ್ಗೆ ಈ ವರದಿಯಲ್ಲಿ ತಿಳಿಸಲಾಗಿದೆ.
ಈ ವರದಿಯಲ್ಲಿ ಕಚೇರಿಯಲ್ಲಿ ಹಾಗೂ ಮನೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆಂದೇ ಮೀಸಲಾದ ಡಯಟ್ ಚಾರ್ಟ್ ನೀಡಲಾಗಿದೆ ಹಾಗೂ ಆರೋಗ್ಯಕರ ಜೀವನಶೈಲಿಗಾಗಿ ಇವರ ಆಹಾರ ಕ್ರಮ ಹೇಗಿರಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಮಹಿಳೆಯರಿಗೆಂದು ನೀಡಲಾದ ಡಯಟ್ ಚಾರ್ಟ್‌ನ ವಿವರದ ಬಗ್ಗೆ ತಿಳಿದುಕೊಳ್ಳೋಣ.
ಈ ಡಯೆಟ್ ಚಾರ್ಟ್ ನಿಮಗಾಗಿ
ಬೆಳಗಿನ ಉಪಹಾರ(470ಕಿಲೋ ಕ್ಯಾಲೋರಿ)
ನೆನೆಸಿದ ಹಾಗೂ ಬೇಯಿಸಿದ ಧಾನ್ಯಗಳು 60 ಗ್ರಾಂ
ಬೇಯಿಸಿದ ಬೀನ್ಸ್
ಕಡಲೆ 30 ಗ್ರಾಂ
ಹಸಿರು ತರಕಾರಿಗಳು 150 ಗ್ರಾಂ
ಡ್ರೈಫ್ರೂಟ್ಸ್ 20 ಗ್ರಾಂ
ಮಧ್ಯಾಹ್ನದ ಊಟ (740 ಕಿಲೋ ಕ್ಯಾಲೋರಿ)
ಧಾನ್ಯಗಳು 80 ಗ್ರಾಂ
ದ್ವಿದಳ ಧಾನ್ಯ 20 ಗ್ರಾಂ
ತರಕಾರಿ 150 ಗ್ರಾಂ
ಹಸಿರು ಎಲೆಗಳು 50 ಗ್ರಾಂ
ಮೊಸರು 150 ಮಿಲೀ
ಹಣ್ಣು 50 ಗ್ರಾಂ
ರಾತ್ರಿ ಊಟ (415ಕಿಲೋ ಕ್ಯಾಲೊರಿ)
ಧಾನ್ಯಗಳು 60 ಗ್ರಾಂ
ಧ್ವಿದಳ ಧಾನ್ಯ 15 ಗ್ರಾಂ
ತರಕಾರಿ 50 ಗ್ರಾಂ
ಎಣ್ಣೆ 5 ಗ್ರಾಂ
ಮೊಸರು 100 ಮಿಲೀ
ಹಣ್ಣು 50 ಗ್ರಾಂ
ಸಂಜೆಯ ತಿನಿಸು (35 ಕಿಲೋ ಕ್ಯಾಲೋರಿ)
ಹಾಲು 50 ಮಿಲೀ
ಆರೋಗ್ಯಕರ ಜೀವನಶೈಲಿಯ ಆಯ್ಕೆ ಮಾಡಿಕೊಳ್ಳುವುದು ಹೇಗೆ?
ಸಂಸ್ಕರಿಸಿದ ಅನಾರೋಗ್ಯಕರ ಆಹಾರ ಅಥವಾ ಅತೀ ಹೆಚ್ಚು ಸಕ್ಕರೆ ಮಟ್ಟವನ್ನು ಹೊಂದಿರುವ ಪಾನೀಯಗಳ ಸೇವನೆಯನ್ನು ತ್ಯಜಿಸಿ ಅವುಗಳ ಬದಲಾಗಿ ಸಾವಯವವಾಗಿ ಬೆಳೆದ, ನೈಸರ್ಗಿಕವಾಗಿ ಸಿಗುವ ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
ತರಕಾರಿಗಳ ಸೇವನೆಗೆ ಆದ್ಯತೆ ನೀಡುವ ಮೂಲಕ ಆರೋಗ್ಯಕರ ಜೀವನಶೈಲಿ ನಿಮ್ಮದಾಗಿಸಿಕೊಳ್ಳಿ.
ಸಾಕಷ್ಟು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಗೋಧಿ ಹಿಟ್ಟು, ರಾಗಿ ಹಿಟ್ಟು, ಜೋಳದ ಹಿಟ್ಟು, ಬಿದಿರಿನ ಅಕ್ಕಿ ಸೇರಿದಂತೆ ವಿವಿಧ ಏಕದಳ ಹಾಗೂ ದ್ವಿದಳ ಧಾನ್ಯಗಳನ್ನು ಸೇವನೆ ಮಾಡಿ. ಇವುಗಳೆಲ್ಲವೂ ನಾರಿನಾಂಶದಿಂದ ಸಮೃದ್ಧವಾಗಿದ್ದು ನಿಮಗೆ ನಿರಂತರ ಶಕ್ತಿಯನ್ನು ನೀಡುತ್ತವೆ. ಅಲ್ಲದೇ ನೀವು ನಿತ್ಯ ಪೂರ್ಣವಾಗಿರಲು ಸಹಾಯ ಮಾಡುತ್ತದೆ. ಹೆಚ್ಚುವರಿ ಆಹಾರ ಸೇವನೆ ಮೂಲಕ ದೇಹದಲ್ಲಿ ಇನ್ನಷ್ಟು ಕ್ಯಾಲೋರಿ ಸಂಗ್ರಹವಾಗುವುದನ್ನು ತಪ್ಪಿಸುತ್ತದೆ.
ತರಕಾರಿಗಳಿಂದ ಹೆಚ್ಚೆಚ್ಚು ಲಾಭ ಪಡೆಯಿರಿ
ಸಾಕಷ್ಟು ಬಗೆಯ ಸಲಾಡ್‌ಗಳನ್ನು ನೀವು ವಿವಿಧ ತರಕಾರಿಗಳನ್ನು ಬಳಸಿ ತಯಾರಿಸಬಹುದು. ಇದು ನಿಮಗೆ ವಿಟಮಿನ್, ಖನಿಜ, ಪೋಷಕಾಂಶ, ಫೈಬರ್ ಸೇರಿದಂತೆ ಹೆಚ್ಚಿನ ದೇಹಕ್ಕೆ ಲಾಭವನ್ನು ನೀಡುತ್ತದೆ. ಅಲ್ಲದೇ ಹೆಚ್ಚಿನ ಮಸಾಲೆ, ಎಣ್ಣೆ ಏನನ್ನೂ ಸೇರಿಸದೆಯೂ ನಿಮ್ಮ ನಾಲಿಗೆಗೆ ರುಚಿ ಕೊಡುವ ಸಾಮರ್ಥ್ಯ ತರಕಾರಿಗಳಿಗೆ ಇರುತ್ತದೆ.
ಆರೋಗ್ಯಕರ ಅಡುಗೆಕ್ರಮ ಅನುಸರಿಸಿ
ಗ್ರಿಲ್ ಮಾಡುವುದು, ಬೇಕ್ ಮಾಡುವುದು, ಎಣ್ಣೆಯಲ್ಲಿ ಕರಿಯುವ ಬದಲು ಏರ್‌ಫ್ರೈಯರ್‌ಗಳನ್ನು ಬಳಸುವುದು ಇಂತಹ ಆರೋಗ್ಯಕರ ಅಡುಗೆಯ ಕ್ರಮವನ್ನು ಅನುಸರಿಸಿ. ನಿಮ್ಮ ಅಡುಗೆಶೈಲಿ ಕೂಡ ದೇಹಕ್ಕೆ ಹೆಚ್ಚು ಕ್ಯಾಲೋರಿ ಸೇರ್ಪಡೆಯಾಗುವುದನ್ನು ತಪ್ಪಿಸುತ್ತದೆ.
ಯಾವುದೇ ಆಹಾರ ಪದಾರ್ಥ ಖರೀದಿಸುವ ಮುನ್ನ ಪರಿಶೀಲಿಸಿ
ಯಾವುದೇ ಆಹಾರ ಪದಾರ್ಥವನ್ನು ಖರೀದಿ ಮಾಡುವ ಮುನ್ನ ಅದರ ಲೇಬಲ್ ಪರಿಶೀಲನೆ ಮಾಡುವುದು ಒಳ್ಳೆಯದು. ಸ್ಯಾಚುರೇಟೆಡ್ ಕೊಬ್ಬಿನಂಶ, ಸಕ್ಕರೆಯಂಶ ಹಾಗೂ ಸೋಡಿಯಂ ಪ್ರಮಾಣ ಅತಿಯಾಗಿರುವ ಆಹಾರದ ಹತ್ತಿರವೂ ಸುಳಿಯಬೇಡಿ. ಈ ಅಂಶಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವ ಆಹಾರವನ್ನು ಸೇವನೆ ಮಾಡಿ
