ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಸೋಕೆ ಆಗ್ತಿಲ್ವಾ, ಒಮ್ಮೆ ಲವಂಗ ಬಳಸಿ ನೋಡಿ; ಉಪಯೋಗಿಸುವ ವಿಧಾನ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಸೋಕೆ ಆಗ್ತಿಲ್ವಾ, ಒಮ್ಮೆ ಲವಂಗ ಬಳಸಿ ನೋಡಿ; ಉಪಯೋಗಿಸುವ ವಿಧಾನ ಇಲ್ಲಿದೆ

ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಸೋಕೆ ಆಗ್ತಿಲ್ವಾ, ಒಮ್ಮೆ ಲವಂಗ ಬಳಸಿ ನೋಡಿ; ಉಪಯೋಗಿಸುವ ವಿಧಾನ ಇಲ್ಲಿದೆ

Clove For Weight Loss: ಎಷ್ಟೇ ಪ್ರಯತ್ನಿಸಿದರೂ ತೂಕ ಇಳಿಸೋಕೆ ಸಾಧ್ಯ ಆಗ್ತಿಲ್ಲ ಅನ್ನೋದು ಅನೇಕರ ದೂರು. ಆದರೆಸರಿಯಾದ ಆಹಾರ ಮತ್ತು ವ್ಯಾಯಾಮದ ಜೊತೆಗೆ, ಪ್ರತಿದಿನ ಸೂಕ್ತ ವಿಧಾನದಲ್ಲಿ ಲವಂಗವನ್ನು ಸೇವಿಸಿದರೆ ಖಂಡಿತ ನೀವು ಬೇಗ ತೂಕ ಇಳಿಸಬಹುದು.

ತೂಕ ಇಳಿಸಲು ಪರಿಣಾಮಕಾರಿ ಲವಂಗ
ತೂಕ ಇಳಿಸಲು ಪರಿಣಾಮಕಾರಿ ಲವಂಗ (PC: Freepik, unsplash)

Weight Loss Tips:  ತೂಕ ಇಳಿಸುವುದು ಕಷ್ಟದ ಕೆಲಸ. ಇದಕ್ಕಾಗಿ ಸಾಕಷ್ಟು ಪ್ರಯತ್ನಗಳು ಬೇಕಾಗುತ್ತವೆ, ಆದರೆ ಅನೇಕ ಬಾರಿ ಅಪೇಕ್ಷಿತ ಫಲಿತಾಂಶ ದೊರೆಯುವುದಿಲ್ಲ. ತೂಕ ಇಳಿಸಿಕೊಳ್ಳಲು ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸಲಹೆಗಳು ದೊರೆಯಬಹುದು. ಆದರೂ ಅದು ಅಷ್ಟು ಸುಲಭವಲ್ಲ. ಸರಿಯಾದ ಆಹಾರ ಕ್ರಮ ಮತ್ತುಕಠಿಣ ವ್ಯಾಯಾಮದ ನಂತರ ಮಾತ್ರ ತೂಕವನ್ನು ಕಳೆದುಕೊಳ್ಳಬಹುದು. 

ಇದರ ನಡುವೆ ನೀವು ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅಂದುಕೊಂಡಿದ್ದಕ್ಕಿಂತ ಬೇಗ ತೂಕ ಇಳಿಸಬಹುದು. ಅವುಗಳಲ್ಲಿ ಲವಂಗ ಕೂಡಾ ಒಂದು. ಅಡುಗೆ ಮನೆಯ ಈ ಚಿಕ್ಕ ಪದಾರ್ಥ. ನಿಮ್ಮ ತೂಕ ಇಳಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಲವಂಗದ ಪ್ರಯೋಜನಗಳು ಮತ್ತು ತೂಕ ನಿಯಂತ್ರಣಕ್ಕಾಗಿ ಅವುಗಳನ್ನು ಬಳಸುವ ಸರಿಯಾದ ವಿಧಾನದ ಬಗ್ಗೆ ತಿಳಿಯೋಣ.

ತೂಕ ನಷ್ಟಕ್ಕೆ ಲವಂಗ ಹೇಗೆ ಸಹಾಯ ಮಾಡುತ್ತದೆ?

  • ನಿಮ್ಮ ವೇಟ್‌ ಲಾಸ್‌ ಜರ್ನಿಗೆ ಲವಂಗವು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಲವಂಗ ಸೇವಿಸುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ, ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:  ಆರು ತಿಂಗಳಲ್ಲಿ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಂಡ ಮಹಿಳೆ, ಪೂಜಾ ಮಲಿಕ್‌ಳ ತೂಕ ಇಳಿಕೆಯ ಪ್ರಯಾಣ ಹೀಗಿತ್ತು

  • ಲವಂಗವು ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ, ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಇವುಗಳಲ್ಲಿರುವ ಯುಜೆನಾಲ್ ಎಂಬ ವಸ್ತುವು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಫ್ಯಾಟ್‌ ಬರ್ನ್‌ ಮಾಡಲು ಸಹಾಯ ಮಾಡುತ್ತದೆ.
  • ಲವಂಗವನ್ನು ಬಾಯಿಗೆ ಹಾಕಿಕೊಂಡರೆ ಅದರಿಂದ ಬರುವ ವಾಸನೆ ಮತ್ತು ರುಚಿಯಿಂದ ಕೆಲವರಿಗೆ ಹಸಿವಾಗುವುದಿಲ್ಲ. ಆದ್ದರಿಂದ ಮಿತವಾಗಿ ತಿನ್ನಿರಿ ಮತ್ತು ತೂಕ ಹೆಚ್ಚಾಗುವುದನ್ನು ತಪ್ಪಿಸಿ.
  • ಸಾಮಾನ್ಯವಾಗಿ, ದೇಹದಲ್ಲಿ ಉರಿಯೂತವು ತೂಕ ಹೆಚ್ಚಾಗಲು ಕಾರಣವಾಗಬಹುದು. ಲವಂಗವು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
  • ಇದಲ್ಲದೆ, ಲವಂಗವು ವಿಟಮಿನ್ ಇ, ವಿಟಮಿನ್ ಸಿ, ಫೋಲೇಟ್, ವಿಟಮಿನ್ ಬಿ, ರಿಬೋಫ್ಲಾವಿನ್, ವಿಟಮಿನ್ ಕೆ ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ಉಪವಾಸ ಮಾಡಿ 55 ಕೆಜಿ ತೂಕ ಇಳಿಸಿಕೊಂಡ ರಾಮ್‌ ಕಪೂರ್‌- ಹೀಗಿತ್ತು ಇವರ ಫಾಸ್ಟಿಂಗ್‌

ತೂಕ ನಷ್ಟಕ್ಕೆ ಲವಂಗವನ್ನು ಹೇಗೆ ಬಳಸಬೇಕು?

ಲವಂಗವನ್ನು ನಿಮ್ಮ ಆಹಾರದಲ್ಲಿ ಹಲವು ವಿಧಗಳಲ್ಲಿ ಬಳಸಬಹುದು. ಆದರೆ ತೂಕ ಇಳಿಸಿಕೊಳ್ಳಲು ಲವಂಗವು ದಾಲ್ಚಿನ್ನಿ, ಜೀರ್ಗೆ, ಅಜ್ವೈನ್‌ನಂಥ ಇತರ ಮಸಾಲೆಗಳೊಂದಿಗೆ ಸೇರಿಸಿದಾಗ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. 

ಬಾಣಲೆಯಲ್ಲಿ ಲವಂಗ, ದಾಲ್ಚಿನ್ನಿ ಮತ್ತು ಜೀರ್ಗೆಯನ್ನು ಸಮ ಪ್ರಮಾಣದಲ್ಲಿ ಹುರಿದುಕೊಳ್ಳಿ. ಪರಿಮಳ ಬಂದಾಗ ಸ್ಟೌವ್‌ ಆಫ್ ಮಾಡಿ.  ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ.

ಒಂದು ಲೋಟ ನೀರನ್ನು ಬಿಸಿ ಮಾಡಿ, ಅದಕ್ಕೆ ಒಂದು ಚಮಚ ಮೊದಲೇ ಸಿದ್ಧಪಡಿಸಿಕೊಂಡಿರುವ ಪುಡಿ ಸೇರಿಸಿ ಕುದಿಸಿ. ನೀರು ಕುದಿಯಲು ಆರಂಭಿಸಿದಾಗ ಸ್ಟೌವ್‌ ಆಫ್‌ ಮಾಡಿ. ಮಿಶ್ರಣ ಉಗುರು ಬೆಚ್ಚಗಿರುವಾಗ ಒಂದು ಚಮಚ ಜೇನುತುಪ್ಪ ಸೇರಿಸಿ ಮಿಕ್ಸ್‌ ಮಾಡಿ ಕುಡಿಯಿರಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಮತ್ತು ಸುಲಭವಾಗಿ ತೂಕ ಇಳಿಸಬಹುದು.

ಗಮನಿಸಿ: ಗಂಭೀರ ಆರೋಗ್ಯ ಸಮಸ್ಯೆ ಅಥವಾ ಲವಂಗದ ಅಲರ್ಜಿ ಇರುವವರು ವೈದ್ಯರನ್ನು ಸಂಪರ್ಕಿಸದೆ ಅದನ್ನು ಬಳಸಬೇಡಿ

Whats_app_banner