ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ಎಷ್ಟೇ ಪ್ರಯತ್ನಪಟ್ರು ತೂಕ ಇಳಿತಾ ಇಲ್ವಾ? ಇದಕ್ಕೆ ಊಟದ ಮೊದಲು, ನಂತರ ನೀವು ಮಾಡುವ ಈ ತಪ್ಪುಗಳೇ ಕಾರಣ

Weight Loss: ಎಷ್ಟೇ ಪ್ರಯತ್ನಪಟ್ರು ತೂಕ ಇಳಿತಾ ಇಲ್ವಾ? ಇದಕ್ಕೆ ಊಟದ ಮೊದಲು, ನಂತರ ನೀವು ಮಾಡುವ ಈ ತಪ್ಪುಗಳೇ ಕಾರಣ

ತೂಕ ಇಳಿಕೆಯ ಪ್ರಯಾಣ ಸುಲಭದ್ದಲ್ಲ. ಆದರೆ ಹಲವು ಪ್ರಯತ್ನಗಳ ಬಳಿಕವೂ ಕೆಲವರಿಗೆ ತೂಕ ಇಳಿಕೆಯಾಗುವುದಿಲ್ಲ. ಅದಕ್ಕೆ ಕಾರಣ ಏನು ಎಂಬುದು ತಿಳಿಯುವುದಿಲ್ಲ. ನೀವು ಕೂಡ ತೂಕ ಇಳಿಸುವ ಹರಸಾಹಸದಲ್ಲಿದ್ದರೆ ನಿಮಗೆ ಅರಿವಿಲ್ಲದಂತೆ ಮಾಡುತ್ತಿರುವ ಈ ತಪ್ಪುಗಳೇ ನಿಮ್ಮನ್ನು ಗುರಿಯತ್ತ ತಲುಪಿಸಲು ವಿಳಂಬ ಮಾಡುತ್ತಿದೆ ಎಂದರ್ಥ.

ಎಷ್ಟೇ ಪ್ರಯತ್ನಿಸಿದ್ರೂ ತೂಕ ಇಳಿತಾ ಇಲ್ವಾ? ಇದಕ್ಕೆ ನೀವು ಮಾಡುವ ಈ ತಪ್ಪುಗಳೇ ಕಾರಣ
ಎಷ್ಟೇ ಪ್ರಯತ್ನಿಸಿದ್ರೂ ತೂಕ ಇಳಿತಾ ಇಲ್ವಾ? ಇದಕ್ಕೆ ನೀವು ಮಾಡುವ ಈ ತಪ್ಪುಗಳೇ ಕಾರಣ

ತೂಕ ಇಳಿಕೆಯ ಪ್ರಯತ್ನದಲ್ಲಿರುವ ಹಲವರಿಗೆ ಏರಿಕೆಯಾದಷ್ಟು ಸುಲಭದಲ್ಲಿ ತೂಕ ಇಳಿಕೆಯಾಗುವುದಿಲ್ಲ ಎಂಬ ವಿಚಾರವಂತೂ ಸ್ಪಷ್ಟವಾಗಿ ಅರಿವಿಗೆ ಬಂದಿರುತ್ತದೆ. ಶಿಸ್ತು ಎನ್ನುವುದು ಇಲ್ಲದೇ ತೂಕ ಇಳಿಕೆ ಸಾಧ್ಯವೇ ಇಲ್ಲ. ನಿಮ್ಮ ಜೀವನಶೈಲಿ, ಆಹಾರಕ್ರಮ ಎಲ್ಲದರಲ್ಲಿಯೂ ಶಿಸ್ತನ್ನು ರೂಢಿಸಿಕೊಂಡಾಗ ಮಾತ್ರ ತೂಕ ಇಳಿಕೆ ಸಾಧ್ಯವಾಗುತ್ತದೆ. ಆದರೆ ಅನೇಕರು ತೂಕ ಇಳಿಕೆಯ ಬಗ್ಗೆ ಸಾಕಷ್ಟು ನಿಷ್ಠೆಯನ್ನು ತೋರಿದರೂ ಸಹ ಅವರ ತೂಕ ಮಾತ್ರ ಇಳಿಕೆಯಾಗುವುದೇ ಇಲ್ಲ. ನೀವು ಆ ಲಿಸ್ಟ್‌ನಲ್ಲಿದ್ದು ಯಾವ ಕಾರಣಕ್ಕೆ ತೂಕ ಇಳಿಯುತ್ತಿಲ್ಲ ಎಂದು ಎಂದಾದರೂ ಯೋಚಿಸಿದ್ದೀರಾ?

ಈ ರೀತಿ ನಿಮ್ಮ ತೂಕ ಇಳಿಕೆ ವಿಳಂಬಗೊಳ್ಳುತ್ತಿರುವುದರ ಹಿಂದೆ ಸಾಕಷ್ಟು ಕಾರಣಗಳು ಇರಬಹುದು. ಆದರೆ ಮುಖ್ಯವಾಗಿ ಗಮನಿಸಬೇಕಾದ ವಿಚಾರ ಏನೆಂದರೆ ನೀವು ಊಟ ಮಾಡಿದ ಬಳಿಕ ಯಾವ ರೀತಿಯಲ್ಲಿ ಇರುತ್ತೀರಿ ಎಂಬ ವಿಚಾರ. ಹೌದು! ಮಧ್ಯಾಹ್ನ ಹಾಗೂ ರಾತ್ರಿ ಊಟದ ಬಳಿಕ ನಿಮ್ಮ ದಿನಚರಿ ಹೇಗಿರುತ್ತದೆ ಎಂಬುದರ ಮೇಲೆ ನಿಮ್ಮ ತೂಕ ನಷ್ಟವು ನಿರ್ಧರಿತವಾಗುತ್ತದೆ.

ತೂಕ ಇಳಿಕೆ ತಡವಾಗಲು ಈ ತಪ್ಪುಗಳೇ ಕಾರಣ

ಭಾರಿ ಭೋಜನ: ರಾತ್ರಿ ವೇಳೆಯಲ್ಲಿ ನಾವು ಏನೇ ತಿಂದರೂ ಅದು ಜೀರ್ಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದರಲ್ಲೂ ನಾವು ರಾತ್ರಿ ಮಿತಿ ಮೀರಿ ತಿಂದರೆ ತೂಕ ಇಳಿಕೆ ಕನಸು ಕಾಣುವುದನ್ನು ನಿಲ್ಲಿಸುವುದು ಒಳ್ಳೆಯದು. ರಾತ್ರಿ ವೇಳೆ ಅತಿಯಾದ ಆಹಾರ ಸೇವನೆ ನಿಮ್ಮ ತೂಕ ಏರಿಕೆಗೆ ಮೊದಲ ಕಾರಣವಾಗಿರುತ್ತದೆ.

ಟ್ರೆಂಡಿಂಗ್​ ಸುದ್ದಿ

ಸಕ್ಕರೆಯಂಶಯುಕ್ತ ಪಾನೀಯ: ಹಲವರು ಊಟ ಮಾಡುವಾಗ ಸೋಡಾ, ಜ್ಯೂಸ್‌ನಂತಹ ಸಕ್ಕರೆ ಅಂಶ ಇರುವ ಪಾನೀಯಗಳ ಸೇವನೆಯ ಅಭ್ಯಾಸ ಹೊಂದಿರುತ್ತಾರೆ. ಇವುಗಳ ರುಚಿ ಹೆಚ್ಚಿಸಲು ಅತ್ಯಧಿಕ ಪ್ರಮಾಣದಲ್ಲಿ ಸಕ್ಕರೆ ಸೇರಿಸುತ್ತಾರೆ. ಊಟದ ಸಮಯದಲ್ಲಿ ಅಥವಾ ಊಟವಾದ ಬಳಿಕ ಇವುಗಳ ಸೇವನೆಯು ತೂಕ ಏರಿಕೆಗೆ ಕಾರಣವಾಗುತ್ತದೆ.

ಊಟದ ನಂತರ ನೀರು ಕುಡಿಯುವುದು: ನೀರು ಕುಡಿಯುವುದು ಒಳ್ಳೆಯ ಅಭ್ಯಾಸವೇ. ಆದರೆ ನೀವು ಯಾವ ಸಮಯದಲ್ಲಿ ನೀರು ಕುಡಿಯುತ್ತಿರಿ ಎಂಬುದು ಮುಖ್ಯ. ಊಟವಾದ ಕೂಡಲೇ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಆಮ್ಲಗಳು ದುರ್ಬಲಗೊಳ್ಳುತ್ತವೆ. ಇದರಿಂದ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ.

ಆಹಾರ ಸೇವನೆ ನಡುವೆ ಅಂತರವಿಲ್ಲದಿರುವುದು: ಮಧ್ಯಾಹ್ನದ ಊಟವೇ ಆಗಿರಲಿ, ರಾತ್ರಿಯ ಭೋಜನವೇ ಆಗಿರಲಿ, ಈ ಸಮಯಗಳಲ್ಲಿ ಜಂಕ್‌ಫುಡ್ ಸೇವನೆ ಒಳ್ಲೆಯದಲ್ಲ. ಪದೇ ಪದೇ ಊಟ ಮಾಡುವುದು ಕೂಡ ಅತಿಯಾದ ತೂಕಕ್ಕೆ ಕಾರಣವಾಗಬಹುದು.

ರಾತ್ರಿ ಊಟವಾದ ಕೂಡಲೇ ಮಲಗುವುದು: ಊಟವಾದ ಕೂಡಲೇ ಮಲಗುವ ಅಭ್ಯಾಸ ಖಂಡಿತ ಒಳ್ಳೆಯದಲ್ಲ. ದೊಡ್ಡ ಪ್ರಮಾಣದಲ್ಲಿ ಆರೋಗ್ಯದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಜೀರ್ಣಕ್ರಿಯೆಯ ವೇಗವನ್ನು ಕಡಿಮೆ ಮಾಡುತ್ತದೆ. ಇದರಿಂದ ತೂಕ ಇಳಿಕೆ ಇನ್ನಷ್ಟು ವಿಳಂಬಗೊಳ್ಳುತ್ತದೆ.

ವ್ಯಾಯಾಮದ ಸಮಯ: ಊಟವಾದ ಕೂಡಲೇ ದೈಹಿಕ ವ್ಯಾಯಾಮಯದಲ್ಲಿ ತೊಡಗಿಕೊಳ್ಳುವುದರಿಂದ ವಾಕರಿಕೆ, ಹೊಟ್ಟೆಯುಬ್ಬರ, ವಾಂತಿ ಹಾಗೂ ತೂಕ ಇಳಿಕೆಯ ಪ್ರಕ್ರಿಯೆ ನಿಧಾನಗೊಳ್ಳುವುದಕ್ಕೆ ಕಾರಣವಾಗುತ್ತದೆ.

ಹೀಗಾಗಿ ಕೇವಲ ತೂಕ ಇಳಿಕೆ ಮಾಡಿಕೊಳ್ಳುತ್ತೇನೆ ಎಂದು ನಿರ್ಧಾರ ಮಾಡಿದರೆ ಸಾಲದು. ನಿಮ್ಮ ದಿನಚರಿ ಶಿಸ್ತುಬದ್ಧವಾಗಿದ್ದರೆ ಮಾತ್ರ ನೀವು ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯವಿದೆ.