Weight Loss: ಆರು ತಿಂಗಳಲ್ಲಿ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಂಡ ಮಹಿಳೆ, ಪೂಜಾ ಮಲಿಕ್‌ ತೂಕ ಇಳಿಕೆಯ ಪ್ರಯಾಣ ಹೀಗಿತ್ತು
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: ಆರು ತಿಂಗಳಲ್ಲಿ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಂಡ ಮಹಿಳೆ, ಪೂಜಾ ಮಲಿಕ್‌ ತೂಕ ಇಳಿಕೆಯ ಪ್ರಯಾಣ ಹೀಗಿತ್ತು

Weight Loss: ಆರು ತಿಂಗಳಲ್ಲಿ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಂಡ ಮಹಿಳೆ, ಪೂಜಾ ಮಲಿಕ್‌ ತೂಕ ಇಳಿಕೆಯ ಪ್ರಯಾಣ ಹೀಗಿತ್ತು

ಇಂದಿನ ಆಹಾರ ಪದ್ಧತಿ, ಜೀವನಶೈಲಿಯಿಂದಾಗಿ ಬಹುತೇಕ ಮಂದಿ ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಇಳಿಕೆಗೆ ಅನೇಕರು ನಾನಾ ಕಸರತ್ತು ಮಾಡುತ್ತಾರೆ. ಅದೇ ರೀತಿ ಪೂಜಾ ಮಲಿಕ್ ಎಂಬುವವರು ಕೂಡ ಆಹಾರ ಪದ್ಧತಿ ಹಾಗೂ ವ್ಯಾಯಾಮದಲ್ಲಿ ಮಾಡಿಕೊಂಡ ಬದಲಾವಣೆಯು ಅವರ ತೂಕ ಇಳಿಕೆಗೆ ನೆರವಾಯ್ತು. 6 ತಿಂಗೊಳಗೆ 25 ಕೆಜಿ ತೂಕ ಕಳೆದುಕೊಂಡರು. ಈ ಬಗ್ಗೆ ಇಲ್ಲಿದೆ ವಿವರ.

ಆರು ತಿಂಗಳಲ್ಲಿ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಂಡ ಪೂಜಾ ಮಲಿಕ್‌
ಆರು ತಿಂಗಳಲ್ಲಿ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಂಡ ಪೂಜಾ ಮಲಿಕ್‌

ಇಂದಿನ ಆಹಾರ ಪದ್ಧತಿ, ಜೀವನಶೈಲಿಯಿಂದಾಗಿ ಬಹುತೇಕ ಮಂದಿ ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಹೆಚ್ಚಳದ ಬಳಿಕ ತೂಕ ಇಳಿಕೆ ಮಾಡಿಕೊಳ್ಳುವುದು ಹೇಗೆ ಅನ್ನುವುದು ಅನೇಕರ ಚಿಂತೆಯಾಗಿದೆ. ತೂಕ ಇಳಿಕೆಗೆ ಅನೇಕರು ನಡೆಯುತ್ತಾರೆ, ಜಿಮ್‍ಗೆ ಹೋಗುವುದು, ವ್ಯಾಯಾಮ, ಯೋಗಾಸನ ಇತ್ಯಾದಿ ಅಭ್ಯಾಸಗಳನ್ನು ಮಾಡುತ್ತಾರೆ. ಇನ್ನೂ ಕೆಲವರು ಕಡಿಮೆ ಆಹಾರ ಸೇವಿಸುತ್ತಾರೆ. ಆದರೂ ತೂಕ ಮಾತ್ರ ಇಳಿಕೆಯಾಗುವುದೇ ಇಲ್ಲ. ಇದೇ ರೀತಿಯ ಪರಿಸ್ಥಿತಿ ಎದುರಿಸುತ್ತಿದ್ದ ಪೂಜಾ ಮಲಿಕ್ ಎಂಬುವವರು, ಇದೀಗ ಕಠಿಣ ಪರಿಶ್ರಮದಿಂದ ಆರು ತಿಂಗಳೊಳಗೆ 25 ಕೆಜಿ ತೂಕ ಕಳೆದುಕೊಂಡಿದ್ದಾರೆ.

ತೂಕ ಇಳಿಕೆಗೆ ಪ್ರಯತ್ನಿಸಿದ ಪೂಜಾ ಮಲಿಕ್‍ಗೆ ಆರಂಭದಲ್ಲೇ ಹಿನ್ನಡೆಯಾಯಿತು. ಈಕೆ ಬೆಳಗ್ಗಿನ ಉಪಾಹಾರ ತ್ಯಜಿಸಿದರು, ಈಜಲು ಮುಂದಾದ್ರು, ದಿನವಿಡೀ ಸ್ವಲ್ಪ ಸಮಯ ವ್ಯಾಯಾಮ ಮಾಡಿದರೂ ದೇಹದ ತೂಕ ಮಾತ್ರ 100 ಕೆ.ಜಿ ಗಿಂತ ಕಡಿಮೆಯಾಗಲು ಸಾಧ್ಯವಾಗಲೇ ಇಲ್ಲ. ಇದು ಆಕೆಯ ಚಿಂತೆಗೆ ಕಾರಣವಾಯಿತು. ಆದರೂ ಧೈರ್ಯಗುಂದದ ಪೂಜಾ ಮಲಿಕ್, ಆರೋಗ್ಯಕರ ಆಹಾರ ಸೇವಿಸುವ ಮೂಲಕ, ಆರು ತಿಂಗಳೊಳಗೆ 25 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಪೂಜಾ ಮಲಿಕ್ ಅವರ ತೂಕ ಇಳಿಕೆಯ ಪ್ರಯಾಣ ಹೀಗಿತ್ತು.

ಪೂಜಾ ಮಲಿಕ್‌ ತೂಕ ಇಳಿಕೆಯ ಪ್ರಯಾಣ ಹೀಗಿತ್ತು

ಊಟ ತ್ಯಜಿಸಿದ್ರೂ ತೂಕ ಕಡಿಮೆಯಾಗಲಿಲ್ಲ: ಕೋವಿಡ್ ಸಮಯದಲ್ಲಿ ದೀರ್ಘಕಾಲ ಮನೆಯಲ್ಲಿಯೇ ಇದ್ದ ಕಾರಣ, ದೇಹದ ತೂಕ ಹೆಚ್ಚುತ್ತಲೇ ಇತ್ತು. ಆಹಾರ ಪದ್ಧತಿ ಸಂಪೂರ್ಣವಾಗಿ ಅನಿಯಮಿತವಾಗಿದ್ದರಿಂದ ದೇಹದ ತೂಕ ಹೆಚ್ಚುತ್ತಲೇ ಇತ್ತು. ತೂಕ ಇಳಿಕೆಗೆ ಜಿಮ್, ಯೋಗ ಮತ್ತು ಉಪವಾಸದ ಮೊರೆ ಹೊದರೂ ದೇಹದ ತೂಕ ಮಾತ್ರ ಒಂಚೂರು ಕಡಿಮೆಯಾಗಲಿಲ್ಲ. ಹೀಗಾಗಿ ಸ್ವ-ಆರೈಕೆ ಮತ್ತು ಸ್ನೇಹಿತರ ಸಹಾಯದಿಂದ ತೂಕ ಇಳಿಸಿಕೊಳ್ಳಲು ಸಹಾಯ ಪಡೆದುಕೊಂಡರು.

ಆಹಾರ ಪದ್ಧತಿಯಲ್ಲಿ ಬದಲಾವಣೆ: ಹೆರಿಗೆಯಾದ ಬಳಿಕ ದೇಹದ ತೂಕ ಹೆಚ್ಚಾಗುತ್ತಾ ಬಂದಿತ್ತು. ತೂಕ ಕಡಿಮೆ ಮಾಡಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿದ್ದವು. ಹೀಗಾಗಿ ಸ್ನೇಹಿತರ ಸಲಹೆ ಮೇರೆಗೆ ಆಹಾರ ಯೋಜನೆಯನ್ನು ಅನುಸರಿಸಲು ಪ್ರಾರಂಭಿಸಿದ್ರು. ವರ್ಷಗಳ ಹಿಂದೆಯೇ ಉಪಾಹಾರ ತಿನ್ನುವುದನ್ನು ಬಿಟ್ಟಿದ್ದ ಆಕೆ, ಮತ್ತೆ ತಿನ್ನಲು ಶುರು ಮಾಡಿದರು. ಆಹಾರದಲ್ಲಿ ಕಾರ್ಬೋಹೈಡ್ರೇಟ್‌, ಪ್ರೋಟೀನ್‌, ಪ್ರೋಬಯಾಟಿಕ್ ಆಹಾರಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಆಹಾರ ತಿನ್ನಲು ಪ್ರಾರಂಭಿಸಿದರು. ಇದು ದೇಹದಲ್ಲಿ ಹೆಚ್ಚಿದ್ದ ಪೋಷಕಾಂಶಗಳ ಕೊರತೆಯನ್ನು ಪೂರೈಸಲು ಸಹಾಯ ಮಾಡಿತು. ಇದರಿಂದ ತೂಕ ನಿಧಾನವಾಗಿ ಕಡಿಮೆಯಾಗಲು ಪ್ರಾರಂಭಿಸಿತು.

ಸಕಾರಾತ್ಮಕ ಮನಸ್ಥಿತಿ ಅತ್ಯಂತ ಮುಖ್ಯ: ತೂಕ ಹೆಚ್ಚಾಗಿರುವುದರಿಂದ ಯಾವಾಗಲೂ ಒತ್ತಡ ಮತ್ತು ಆತಂಕ ಇರುತ್ತದೆ. ಇದರಿಂದಾಗಿ, ಪ್ರತಿ ಕ್ಷಣವೂ ಮನಸ್ಸಿಗೆ ವಿಚಿತ್ರ ಆಲೋಚನೆಗಳು ಬರುತ್ತಿದ್ದುದಾಗಿ ವಿವರಿಸಿದ್ದಾರೆ. ಸ್ವ-ಆರೈಕೆಗೆ ಗಮನ ಕೊಡಲು ಪ್ರಾರಂಭಿಸಿದ ಪೂಜಾ, ತನಗಾಗಿ ಸಮಯ ತೆಗೆದುಕೊಳ್ಳಲು ಪ್ರಾರಂಭಿಸಿದರು. ಸಮಯಕ್ಕೆ ಸರಿಯಾಗಿ ತಿನ್ನುವುದರ ಜೊತೆಗೆ, ಸಮಯಕ್ಕೆ ಸರಿಯಾಗಿ ಮಲಗುವುದು ಸಹ ಮುಖ್ಯ. ಇದರಿಂದಾಗಿ, ಆಲೋಚನೆಯಲ್ಲಿ ಸಕಾರಾತ್ಮಕತೆಯೂ ಹೆಚ್ಚಾಯಿತು, ಈಗ ಮೊದಲಿಗಿಂತಲೂ ಬಹಳ ಸಂತಸದಿಂದಿರುವುದಾಗಿ ವಿವರಿಸಿದ್ದಾರೆ.

ಬೊಜ್ಜಿನ ಜೊತೆಗೆ ರೋಗಗಳು ದೂರವಾದವು: ಖಿನ್ನತೆಯಿಂದ ಪರಿಹಾರ ಪಡೆಯುವುದರ ಜೊತೆಗೆ, ಮೈಗ್ರೇನ್ ಸಮಸ್ಯೆಯೂ ಕಡಿಮೆಯಾಯಿತು. ದೇಹದಲ್ಲಿನ ಶಕ್ತಿಯ ಮಟ್ಟವು ಹೆಚ್ಚಾಗಿದೆ. ಆಹಾರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವುದರ ಜೊತೆಗೆ ದಿನಕ್ಕೆ ಎರಡು ಬಾರಿ ವ್ಯಾಯಾಮ ಮಾಡುತ್ತಿದ್ದುದಾಗಿ ತಿಳಿಸಿದ್ದಾರೆ. ತೂಕ ಇಳಿಕೆಯ ಬಳಿಕ ಸರಿಯಾದ ಸಮಯಕ್ಕೆ ಹಸಿವು ಮತ್ತು ಬಾಯಾರಿಕೆಯಾಗಲು ಪ್ರಾರಂಭಿಸಿತು. ಈಗ ಜೀವನವು ಆರೋಗ್ಯಕರವಾಗುತ್ತಿದೆ ಮತ್ತು ತೂಕವೂ ಕಡಿಮೆಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಪೌಷ್ಠಿಕಾಂಶ: ತೂಕ ಇಳಿಸುವ ಪ್ರಯಾಣದಲ್ಲಿ ಪೌಷ್ಠಿಕಾಂಶವು ಪ್ರಮುಖ ಪಾತ್ರ ವಹಿಸಿದೆ. ಮೊಸರು, ಉಪ್ಪಿನಕಾಯಿ, ಹಪ್ಪಳ, ತರಕಾರಿಗಳು ಮತ್ತು ರೊಟ್ಟಿಯಂತಹ ಆಹಾರಗಳನ್ನು ತಿನ್ನಲು ಪ್ರಾರಂಭಿಸಿದರು. ದೇಹದಲ್ಲಿ ಉತ್ಕರ್ಷಣ ನಿರೋಧಕ ಪ್ರಮಾಣವನ್ನು ಹೆಚ್ಚಿಸಲು ಆರೋಗ್ಯಕರ ಗ್ರೀನ್ ಟೀ ಕುಡಿಯಲು ಪ್ರಾರಂಭಿಸಿದರು. ಊಟದಲ್ಲಿ ಸಲಾಡ್ ಅನ್ನು ಸೇವಿಸಲು ಶುರು ಮಾಡಿದ್ದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಲಭ್ಯವಾದವು. ಇದು ಕೂಡ ತೂಕ ಇಳಿಕೆಗೆ ನೆರವಾಯ್ತು ಎಂಬುದಾಗಿ ತಿಳಿಸಿದ್ದಾರೆ.

ಸ್ವ-ಆರೈಕೆ: ಸ್ವ-ಆರೈಕೆಯತ್ತ ಗಮನಹರಿಸುವ ಮೂಲಕ, ಪೂಜಾ ಮಲಿಕ್ 6 ತಿಂಗಳಲ್ಲಿ 25 ಕೆ.ಜಿ ತೂಕವನ್ನು ಕಳೆದುಕೊಂಡರು. ಆರೋಗ್ಯಕರ ಊಟ ಮಾಡುವುದರ ಜೊತೆಗೆ, ದೇಹವು ನಿರ್ಜಲೀಕರಣವಾಗದಂತೆ ತಡೆಯಲು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದರು. ತೂಕ ಇಳಿಕೆಯ ಸಂಪೂರ್ಣ ಪ್ರಯಾಣದಲ್ಲಿ ಆಹಾರವು ಶೇಕಡಾ 80 ರಷ್ಟು ಕೊಡುಗೆ ನೀಡಿದರೆ, ವ್ಯಾಯಾಮವು ಶೇಕಡಾ 20ರಷ್ಟು ಪಾತ್ರವನ್ನು ವಹಿಸಿದೆ ಎಂಬುದಾಗಿ ಪೂಜಾ ತಿಳಿಸಿದ್ದಾರೆ.

Whats_app_banner