Weight Loss Food: ಬಹಳ ವೇಗವಾಗಿ, ಆರೋಗ್ಯಕರ ವಿಧಾನದಲ್ಲಿ ತೂಕ ಇಳಿಸಿಕೊಳ್ಳಬೇಕಾ; ರಾತ್ರಿ ಊಟದ ಹೊತ್ತು ಈ ಆಹಾರಗಳನ್ನು ಸೇವಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss Food: ಬಹಳ ವೇಗವಾಗಿ, ಆರೋಗ್ಯಕರ ವಿಧಾನದಲ್ಲಿ ತೂಕ ಇಳಿಸಿಕೊಳ್ಳಬೇಕಾ; ರಾತ್ರಿ ಊಟದ ಹೊತ್ತು ಈ ಆಹಾರಗಳನ್ನು ಸೇವಿಸಿ

Weight Loss Food: ಬಹಳ ವೇಗವಾಗಿ, ಆರೋಗ್ಯಕರ ವಿಧಾನದಲ್ಲಿ ತೂಕ ಇಳಿಸಿಕೊಳ್ಳಬೇಕಾ; ರಾತ್ರಿ ಊಟದ ಹೊತ್ತು ಈ ಆಹಾರಗಳನ್ನು ಸೇವಿಸಿ

Weight Loss Food For Dinner: ತೂಕ ಇಳಿಸಿಕೊಳ್ಳುವುದೇ ಸವಾಲಾಗಿರುವ ಈ ದಿನಗಳಲ್ಲಿ ರಾತ್ರಿ ಊಟಕ್ಕೆ ಆರೋಗ್ಯಕರ ಹಾಗೂ ಲಘ ಆಹಾರ ಸೇವಿಸಬೇಕು ಎಂದು ಹೇಳಲಾಗುತ್ತದೆ. ನೀವು ತೂಕ ಇಳಿಸಲು ಟ್ರೈ ಮಾಡ್ತಾ ಇದ್ರೆ ಈ 4 ಆಹಾರಗಳ ಬಗ್ಗೆ ತಿಳಿಯಲೇಬೇಕು.

ವೇಗವಾಗಿ, ಆರೋಗ್ಯಕರ ವಿಧಾನದಲ್ಲಿ ತೂಕ ಇಳಿಸಿಕೊಳ್ಳಲು ರಾತ್ರಿ ಊಟದ ಹೊತ್ತು ಈ ಆಹಾರ ಸೇವಿಸಿ
ವೇಗವಾಗಿ, ಆರೋಗ್ಯಕರ ವಿಧಾನದಲ್ಲಿ ತೂಕ ಇಳಿಸಿಕೊಳ್ಳಲು ರಾತ್ರಿ ಊಟದ ಹೊತ್ತು ಈ ಆಹಾರ ಸೇವಿಸಿ

Weight Loss With Food: ಇತ್ತೀಚಿನ ದಿನಗಳಲ್ಲಿ ತೂಕ ಏರಿಕೆ ಅನ್ನೋದು ಹಲವರ ಜೀವನಕ್ಕೆ ಶಾಪವಾಗಿದೆ. ಹಾಗಂತ ಯಾರೂ ಕೂಡ ತೂಕ ಹೆಚ್ಚಿಸಿಕೊಳ್ಳಲು ಇಷ್ಟಪಡುವುದಿಲ್ಲ. ಎಲ್ಲರೂ ಸ್ಲಿಮ್ ಆಗಿ, ಫಿಟ್ ಆಗಿ ಇರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಜಿಮ್‌ನಲ್ಲಿ ಕಷ್ಟಪಟ್ಟು ವರ್ಕೌಟ್‌ ಮಾಡುವುದರ ಜೊತೆಗೆ ಆಹಾರಕ್ರಮದ ಬಗ್ಗೆಯೂ ವಿಶೇಷ ಗಮನ ಹರಿಸುತ್ತಾರೆ. ತೂಕ ಕಡಿಮೆ ಮಾಡಿಕೊಳ್ಳಲು ಸೂಕ್ತ ಡಯೆಟ್ ಮಾಡುವವರು ಇದ್ದಾರೆ. ವಾಸ್ತವವಾಗಿ ತೂಕ ಇಳಿಸುವ ಆಹಾರ ಪದ್ಧತಿಯ ಬಗ್ಗೆ ಅನೇಕ ಜನರಿಗೆ ತಪ್ಪು ಕಲ್ಪನೆಗಳಿವೆ. ಅನೇಕ ಜನರು ಡಯಟ್ ಎಂದರೆ ಕಡಿಮೆ ತಿನ್ನುವುದು ಅಥವಾ ಸಂಪೂರ್ಣ ಊಟ ಬಿಡುವುದು ಎಂದು ಭಾವಿಸುತ್ತಾರೆ. ಇದರಿಂದ ಬೇಗ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂಬುದು ಅವರ ಭಾವನೆ. ಆದರೆ ವಾಸ್ತವವಾಗಿ ಇದರಿಂದ ತೂಕ ಇಳಿಯುವ ಬದಲು ಆರೋಗ್ಯ ಕೆಡುತ್ತದೆ. ವೈದ್ಯರು ಕೂಡ ತೂಕ ಇಳಿಕೆಗೆ ಊಟ ಬಿಡುವುದು ಸರಿಯಾದ ಮಾರ್ಗ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ.

ಡಯೆಟ್ ಎಂದರೆ ಖಂಡಿತ ಊಟ ಬಿಡುವುದಲ್ಲ. ಆರೋಗ್ಯಕರ, ಲಘು ಆಹಾರ ಸೇವಿಸುವುದು. ಹೀಗೆ ಮಾಡುವುದರಿಂದ ದೇಹ ತೂಕ ನಿಯಂತ್ರಣದಲ್ಲಿರುವುದು ಮಾತ್ರವಲ್ಲ ಜೀರ್ಣಕ್ರಿಯೆಯ ಸಮಸ್ಯೆಗಳೂ ದೂರವಾಗುತ್ತವೆ. ಹಾಗಾದರೆ ದೇಹ ತೂಕವನ್ನು ಹೆಚ್ಚಿಸದೇ ಆರೋಗ್ಯವಾಗಿ ಮತ್ತು ಫಿಟ್ ಆಗಿರಲು ಸಹಾಯ ಮಾಡುವ ನಾಲ್ಕು ರುಚಿಕರವಾದ ಆಹಾರಗಳ ಬಗ್ಗೆ ಈಗ ತಿಳಿದುಕೊಳ್ಳೋಣ. ಪ್ರತಿದಿನ ರಾತ್ರಿ ಅನ್ನದ ಬದಲು ಇವುಗಳನ್ನು ತಿಂದರೆ, ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ನೀವು ರುಚಿಯನ್ನು ಸಹ ಆನಂದಿಸಬಹುದು.

ತೂಕ ಇಳಿಕೆಗೆ ಸಹಾಯ ಮಾಡುವ ಆಹಾರಗಳು

ಓಟ್ಸ್ ಉಪ್ಮಾ

ರಾತ್ರಿ ಭೋಜನದ ಸಮಯದಲ್ಲಿ ತಿನ್ನಲು ಉಪ್ಮಾ ಅಥವಾ ಉಪ್ಪಿಟ್ಟು ಅತ್ಯುತ್ತಮ ಆಯ್ಕೆಯಾಗಿದೆ. ಇದು ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕರ ಮತ್ತು ಲಘು ಆಹಾರವಾಗಿದೆ. ದಕ್ಷಿಣ ಭಾರತದ ಖಾದ್ಯವಾದ ಉಪ್ಮಾ ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ರಾತ್ರಿಯಲ್ಲಿ ಓಟ್ಸ್ ಉಪ್ಮಾ ತಿನ್ನುವುದು ತುಂಬಾ ಒಳ್ಳೆಯದು. ಇದನ್ನು ಆರೋಗ್ಯಕರವಾಗಿಸಲು ನಿಮ್ಮ ಆಯ್ಕೆಯ ಯಾವುದೇ ತರಕಾರಿಗಳನ್ನು ಸೇರಿಸಬಹುದು. ಓಟ್ಸ್ ಉಪ್ಮಾ ಜೀರ್ಣಿಸಿಕೊಳ್ಳಲು ತುಂಬಾ ಸುಲಭ.

ಹೆಸರು ಬೇಳೆ ಚಿಲ್ಲಾ

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಮತ್ತು ಅದೇ ಸಮಯದಲ್ಲಿ ರುಚಿಕರವಾದ ಆಹಾರವನ್ನು ಸವಿಯಲು ಬಯಸುವವರಿಗೆ ಮೂಂಗ್ ದಾಲ್ ಚಿಲ್ಲಾ ಒಂದು ಉತ್ತಮ ಆಹಾರವಾಗಿದೆ. ಈ ಹೆಸರು ಬೇಳೆ ಚಿಲ್ಲಾಗಳು ಪ್ರೊಟೀನ್ ಮತ್ತು ನಾರಿನಾಂಶದಿಂದ ಸಮೃದ್ಧವಾಗಿವೆ. ಮೊಳಕೆಯೊಡೆದ ಬೀಜಗಳಿಂದ ತಯಾರಿಸಿದರೆ ಅವು ಆರೋಗ್ಯಕರವಾಗುತ್ತವೆ. ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ರಾತ್ರಿ ಎರಡು ಹೆಸರುಬೇಳೆ ಚಿಲ್ಲಾ ತಿನ್ನುವ ಮೂಲಕ ಅದರ ರುಚಿಯನ್ನು ಆನಂದಿಸಬಹುದು ಮತ್ತು ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದು ಹಗುರವಾದ ಊಟವಾಗಿ ಕಾರ್ಯನಿರ್ವಹಿಸುತ್ತದೆ. ಏಕೆಂದರೆ ಇದನ್ನು ಜೀರ್ಣಿಸಿಕೊಳ್ಳುವುದು ಸುಲಭ. ನಿಮ್ಮಿಷ್ಟದ ಚಟ್ನಿಯೊಂದಿಗೆ ಇದನ್ನು ನೀವು ಸವಿಯಬಹುದು.

ಸೂಪ್

ರಾತ್ರಿಯಲ್ಲಿ ರುಚಿಕರ, ಆರೋಗ್ಯಕರ ಲಘು ಆಹಾರ ತಿನ್ನಲು ಬಯಸಿದರೆ ಸೂಪ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಸೂಪ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ಜೀರ್ಣಿಸಿಕೊಳ್ಳಲು ತುಂಬಾ ಸುಲಭ. ನಿಮ್ಮ ಆದ್ಯತೆಗೆ ಅನುಗುಣವಾಗಿ ನೀವು ಯಾವುದೇ ರೀತಿಯ ಸೂಪ್ ಕುಡಿಯಬಹುದು, ಅದು ಸಸ್ಯಾಹಾರಿ ಅಥವಾ ಮಾಂಸಾಹಾರಿ ಆಗಿರಲಿ. ತೂಕ ಇಳಿಸಿಕೊಳ್ಳಲು, ರಾತ್ರಿಯ ಊಟಕ್ಕೆ ಕುಂಬಳಕಾಯಿ, ಟೊಮೆಟೊ, ಕ್ಯಾರೆಟ್ ಅಥವಾ ಪಾಲಕ್‌ನಂತಹ ತರಕಾರಿ ಸೂಪ್ ಕುಡಿಯಿರಿ. ಬೇಗನೆ ತಯಾರಿಸಬಹುದಾದ ಈ ಸೂಪ್ ಹೊಟ್ಟೆ ತುಂಬಿಸುವ ಜೊತೆಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ.

ಬೇಯಿಸಿದ ತರಕಾರಿಗಳು

ತೂಕ ಬೇಗ ಇಳಿಸಿಕೊಳ್ಳಲು ಬಯಸಿದರೆ ರಾತ್ರಿಯ ಊಟಕ್ಕೆ ಬೇಯಿಸಿದ ತರಕಾರಿಗಳನ್ನು ತಿನ್ನುವುದು ತುಂಬಾ ಒಳ್ಳೆಯದು. ಕ್ಯಾರೆಟ್, ಬ್ರೊಕೊಲಿ, ಕುಂಬಳಕಾಯಿ, ಸೋಯಾ ಅಥವಾ ಪಾಲಕ್ ಸೊಪ್ಪು ಮುಂತಾದ ತರಕಾರಿಗಳನ್ನು ಬೇಯಿಸಿ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಅಲ್ಲದೆ, ಈ ತರಕಾರಿಗಳು ಜೀರ್ಣಿಸಿಕೊಳ್ಳಲು ತುಂಬಾ ಸುಲಭ. ಅವುಗಳಲ್ಲಿ ಹೆಚ್ಚಿನ ನಾರಿನ ಅಂಶ ಇರುವುದರಿಂದ, ಅವುಗಳನ್ನು ತಿಂದ ನಂತರ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುತ್ತದೆ. ಹೀಗಾಗಿ, ಇದು ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿಯಲ್ಲಿ ತಿನ್ನಲು ಇವು ಒಳ್ಳೆಯ ಆಹಾರಗಳು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.