ತೂಕ ಇಳಿಕೆಗೆ ಯಾವುದು ಬೆಸ್ಟ್: ಟ್ರೆಡ್‌ಮಿಲ್‌ನಲ್ಲಿ ನಡೆಯುವುದೋ, ಹೊರಾಂಗಣದಲ್ಲಿ ವಾಕಿಂಗ್ ಮಾಡುವುದೋ, ಇಲ್ಲಿದೆ ಮಾಹಿತಿ-weight loss which burns more calories treadmill or walking outside outdoor vs indoor walking prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ತೂಕ ಇಳಿಕೆಗೆ ಯಾವುದು ಬೆಸ್ಟ್: ಟ್ರೆಡ್‌ಮಿಲ್‌ನಲ್ಲಿ ನಡೆಯುವುದೋ, ಹೊರಾಂಗಣದಲ್ಲಿ ವಾಕಿಂಗ್ ಮಾಡುವುದೋ, ಇಲ್ಲಿದೆ ಮಾಹಿತಿ

ತೂಕ ಇಳಿಕೆಗೆ ಯಾವುದು ಬೆಸ್ಟ್: ಟ್ರೆಡ್‌ಮಿಲ್‌ನಲ್ಲಿ ನಡೆಯುವುದೋ, ಹೊರಾಂಗಣದಲ್ಲಿ ವಾಕಿಂಗ್ ಮಾಡುವುದೋ, ಇಲ್ಲಿದೆ ಮಾಹಿತಿ

ತೂಕ ಇಳಿಕೆಗೆ ವಾಕಿಂಗ್ ಮಾಡುವುದು ಕೂಡ ಬಹಳ ಪರಿಣಾಮಕಾರಿಯಾಗಿದೆ. ಕೆಲವರು ವಾಕಿಂಗ್ ಮಾಡಲು ಹೊರಾಂಗಣವನ್ನು ಆಯ್ದುಕೊಂಡರೆ, ಇನ್ನೂ ಕೆಲವರು ಟ್ರೆಡ್‍ಮಿಲ್ ಅನ್ನು ಆರಿಸಿಕೊಳ್ಳುತ್ತಾರೆ. ಇವೆರಡರಲ್ಲಿ ಯಾವುದು ಉತ್ತಮ, ಇವುಗಳ ಅನುಕೂಲ ಹಾಗೂ ಅನಾನುಕೂಲದ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ತೂಕ ಇಳಿಕೆಗೆ ಟ್ರೆಡ್‌ಮಿಲ್‌ನಲ್ಲಿ ನಡೆಯುವುದು ಉತ್ತಮವೋ, ಹೊರಾಂಗಣದಲ್ಲಿ ವಾಕಿಂಗ್ ಮಾಡುವುದು ಉತ್ತಮವೋ? ಇಲ್ಲಿದೆ ಮಾಹಿತಿ.
ತೂಕ ಇಳಿಕೆಗೆ ಟ್ರೆಡ್‌ಮಿಲ್‌ನಲ್ಲಿ ನಡೆಯುವುದು ಉತ್ತಮವೋ, ಹೊರಾಂಗಣದಲ್ಲಿ ವಾಕಿಂಗ್ ಮಾಡುವುದು ಉತ್ತಮವೋ? ಇಲ್ಲಿದೆ ಮಾಹಿತಿ.

ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ತೂಕ ಇಳಿಕೆಗೆ ಪ್ರಯತ್ನಿಸುವವರೇ. ಅದರಲ್ಲೂ ನಗರದಲ್ಲಿ ವಾಸಿಸುವವರು ಫಾಸ್ಟ್ ಫುಡ್, ಹೆಚ್ಚಿನ ಕ್ಯಾಲೋರಿ ಇರುವ ಆಹಾರ ಸೇವನೆ ಇತ್ಯಾದಿಗಳಿಂದ ತೂಕ ಹೆಚ್ಚಿಸಿಕೊಂಡಿರುತ್ತಾರೆ. ಹೀಗಾಗಿ ತೂಕ ಇಳಿಕೆಗೆ ನಾನಾ ಕಸರತ್ತು ಮಾಡುತ್ತಾರೆ. ತೂಕ ಇಳಿಕೆ ವಿಚಾರಕ್ಕೆ ಬಂದಾಗ ವಾಕಿಂಗ್ ಬಹಳ ಜನಪ್ರಿಯವಾದ ವ್ಯಾಯಾಮವಾಗಿದ್ದು ಹಾಗೆಯೇ ಪರಿಣಾಮಕಾರಿಯಾಗಿದೆ. ಸಾಕಷ್ಟು ಮಂದಿ ಬೆಳಗ್ಗೆ ಅಥವಾ ಸಂಜೆ ವಾಕಿಂಗ್ ಮಾಡುತ್ತಾರೆ. ಕೆಲವರು ಹೊರಾಂಗಣದಲ್ಲಿ ವಾಕಿಂಗ್ ಮಾಡಿದರೆ ಇನ್ನೂ ಕೆಲವರು ಒಳಾಂಗಣದಲ್ಲಿ ಅಂದರೆ ಟ್ರೆಡ್‌ಮಿಲ್‌ನಲ್ಲಿ ನಡೆಯುತ್ತಾರೆ. ಇವೆರಡರಲ್ಲಿ ಯಾವುದು ಉತ್ತಮ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಟ್ರೆಡ್‍ಮಿಲ್ ವಾಕಿಂಗ್‍ನ ಅನುಕೂಲಗಳು

ನಿಯಂತ್ರಿತ ಪರಿಸರ: ಟ್ರೆಡ್ ಮಿಲ್ ವಾಕಿಂಗ್ ಸ್ಥಿರ ಮತ್ತು ನಿಯಂತ್ರಿತ ವಾತಾವರಣವನ್ನು ನೀಡುತ್ತದೆ. ಫಿಟ್‌ನೆಸ್ ಮಟ್ಟಕ್ಕೆ ಹೊಂದಿಸಲು ವೇಗ, ಇಳಿಜಾರು ಮತ್ತು ಅವಧಿಯನ್ನು ಇದರಲ್ಲಿ ಹೊಂದಿಸಬಹುದು.

ಹವಾಮಾನ: ಮಳೆ, ಚಳಿ ಅಥವಾ ಶೆಖೆಯಂತಹ ಹವಾಮಾನದಂತಹ ಪ್ರತಿಕೂಲವಾಗಿ ಇರುವ ದಿನಗಳಲ್ಲಿ ಟ್ರೆಡ್‌ಮಿಲ್‌ಗಳ ಆಯ್ಕೆ ಉತ್ತಮ.

ಪ್ರಗತಿ ಟ್ರ್ಯಾಕ್ ಮಾಡಬಹುದು: ನಿಮ್ಮ ಪ್ರಗತಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು ಮತ್ತು ವ್ಯಾಯಾಮದ ತೀವ್ರತೆಯನ್ನು ಸರಿಹೊಂದಿಸಬಹುದು. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಇದು ಬೆಸ್ಟ್ ಅಂದರೆ ತಪ್ಪಿಲ್ಲ.

ಸುರಕ್ಷತೆ: ಟ್ರೆಡ್‌ಮಿಲ್‌ಗಳು ಸುರಕ್ಷಿತ ಆಯ್ಕೆಯಾಗಿದೆ. ವಿಶೇಷವಾಗಿ ಮುಂಜಾನೆ ಅಥವಾ ಸಂಜೆ ಕಚೇರಿ ಕೆಲಸ ಮುಗಿಸಿ ಮನೆಗೆ ತಡವಾಗಿ ಬಂದಾಗ ಟ್ರೆಡ್‌ಮಿಲ್‌ನಲ್ಲಿ ನಡೆಯುವುದು ಸುರಕ್ಷಿತ.

ಟ್ರೆಡ್‍ಮಿಲ್ ವಾಕಿಂಗ್‍ನ ಅನಾನುಕೂಲಗಳು

ಏಕತಾನತೆ: ಟ್ರೆಡ್‌ಮಿಲ್‌ನಲ್ಲಿ ನಡೆಯುವುದು ಪುನರಾವರ್ತಿತ ಮತ್ತು ನೀರಸವಾಗಬಹುದು. ಕೆಲವೊಮ್ಮೆ ಸೋಮಾರಿಯಂತೆ ಬಿದ್ದುಕೊಳ್ಳಬಹುದು. ದಿನಾ ಒಂದೇ ಪರಿಸರದಲ್ಲಿ ನಡೆಯಲು ಬೇಸರವಾಗಬಹುದು.

ಸ್ನಾಯುಗಳನ್ನು ತೊಡಗಿಸುವುದಿಲ್ಲ: ಟ್ರೆಡ್‌ಮಿಲ್‌ಗಳು ನಯವಾದ, ಸಮತಟ್ಟಾದ ಮೇಲ್ಮೈಯನ್ನು ಒದಗಿಸುತ್ತವೆ. ಇದು ಹೊರಾಂಗಣ ಪ್ರದೇಶದಲ್ಲಿ ನಡೆಯುವಷ್ಟು ಸ್ನಾಯುಗಳನ್ನು ತೊಡಗಿಸಿಕೊಳ್ಳುವುದಿಲ್ಲ.

ಹೊರಾಂಗಣದಲ್ಲಿ ವಾಕಿಂಗ್ (ನಡಿಗೆ) ಮಾಡುವುದರ ಅನುಕೂಲಗಳು

ಪರಿಸರ ಖುಷಿಕೊಡಬಹುದು: ಹೊರಾಂಗಣದಲ್ಲಿ ನಡೆಯುವುದು ಹುಲ್ಲು, ಉದ್ಯಾನವನ ಅಥವಾ ಬೆಟ್ಟ ಇತ್ಯಾದಿ ಪರಿಸರಗಳಿಗೆ ನಿಮ್ಮನ್ನು ಒಡ್ಡುತ್ತದೆ. ಇದರಿಂದ ಸ್ನಾಯುಗಳನ್ನು ಹೆಚ್ಚು ತೊಡಗಿಸಿಕೊಳ್ಳುತ್ತದೆ ಮತ್ತು ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ.

ಒತ್ತಡ ಕಡಿಮೆ ಮಾಡುತ್ತದೆ: ಪ್ರಕೃತಿಯಲ್ಲಿ ಹೊರಗೆ ಇರುವುದರಿಂದ ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಇದು ಪರೋಕ್ಷವಾಗಿ ತೂಕ ನಷ್ಟಕ್ಕೂ ಪ್ರಯೋಜನಕಾರಿಯಾಗಿದೆ.

ಆನಂದದಾಯಕವಾಗಿಸಬಹುದು: ಬದಲಾಗುತ್ತಿರುವ ದೃಶ್ಯಾವಳಿ, ತಾಜಾ ಗಾಳಿ, ವಾಕಿಂಗ್‍ಗೆಂದು ಬಂದವರ ಪರಿಚಯ ಮತ್ತು ಪ್ರಕೃತಿಯ ಶಬ್ಧ ಗಳು ಹೊರಾಂಗಣ ನಡಿಗೆಯನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ. ಇದರಿಂದ ಹೆಚ್ಚೆಚ್ಚು ವಾಕಿಂಗ್ ಮಾಡಲು ಪ್ರೇರೇಪಿಸುತ್ತದೆ.

ವಿಟಮಿನ್ ಡಿ ಪಡೆಯಲು ಸಹಕಾರಿ: ಸೂರ್ಯನ ಬಿಸಿಲಿನಲ್ಲಿ ಹೊರಾಂಗಣದಲ್ಲಿ ನಡೆಯುವುದರಿಂದ ನಿಮ್ಮ ದೇಹಕ್ಕೆ ವಿಟಮಿನ್ ಡಿ ದೊರಕಲು ಸಹಾಯಕವಾಗಿದೆ. ಇದು ಮೂಳೆಯ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

ಹೊರಾಂಗಣ ನಡಿಗೆಯ ಅನಾನುಕೂಲಗಳು

ಹವಾಮಾನ ಅವಲಂಬಿತ: ಹವಾಮಾನ ಪರಿಸ್ಥಿತಿಗಳು ನಿಮ್ಮ ಹೊರಾಂಗಣ ವಾಕಿಂಗ್ ದಿನಚರಿಯನ್ನು ಅಡ್ಡಿಪಡಿಸಬಹುದು. ಉದಾಹರಣೆಗೆ ಮಳೆ ಬಂದಾಗ ವಾಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಇದು ಸ್ಥಿರವಾಗಿರಲು ಕಷ್ಟವಾಗುತ್ತದೆ.

ಸುರಕ್ಷತಾ ಕಾಳಜಿಗಳು: ನಿಮ್ಮ ಸ್ಥಳವನ್ನು ಅವಲಂಬಿಸಿ ಹೊರಾಂಗಣ ವಾಕಿಂಗ್ ಟ್ರಾಫಿಕ್, ಬೆಳಕಿನ ಕೊರತೆ ಇತ್ಯಾದಿಗಳಿಂದ ಸುರಕ್ಷತೆಯ ಅಪಾಯಗಳನ್ನು ಉಂಟುಮಾಡಬಹುದು.

ತೂಕ ನಷ್ಟಕ್ಕೆ ಯಾವುದು ಉತ್ತಮ?

ಟ್ರೆಡ್‍ಮಿಲ್ ಮತ್ತು ಹೊರಾಂಗಣ ನಡಿಗೆ ಎರಡು ಕೂಡ ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದೆ. ಏಕೆಂದರೆ ಹೆಚ್ಚೆಚ್ಚು ನಡಿಯುವುದರಿಂದ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಕಾರಿಯಾಗಿದೆ. ಇದು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತವೆ. ಒಂದೇ ಕಡೆ ಗಮನ ಕೇಂದ್ರೀಕರಿಸಲು ಟ್ರೆಡ್‍ಮಿಲ್ ಅನ್ನು ಆರಿಸಬಹುದು. ಮಾನಸಿಕ ಪ್ರಯೋಜನ, ಪರಿಸರವನ್ನು ಆನಂದಿಸಲು ಇಷ್ಟಪಡುವಿರಾದರೆ ಹೊರಾಂಗಣ ವಾಕಿಂಗ್ ಅನ್ನು ಆರಿಸಿಕೊಳ್ಳಬಹುದು.