ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡ್ತಾ ಇದ್ಯ? ಹಾಗಾದ್ರೆ ಪವನ ಮುಕ್ತಾಸನ ಮಾಡಿ ಪರಿಹಾರ ಕಂಡುಕೊಳ್ಳಿ
ಪವನ ಮುಕ್ತಾಸನ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಆಗುತ್ತದೆ. ಆ ಕಾರಣಕ್ಕಾಗಿ ನೀವು ಈ ಆಸನವನ್ನು ಮಾಡಿ. ಈ ಆಸನ ಮಾಡುವ ವಿಧಾನ ಹಾಗೂ ಅದರ ಪ್ರಯೋಜನಗಳನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಬಿಡುವಿಲ್ಲದ ಕೆಲಸಗಳ ನಡುವೆ ಊಟ, ತಿಂಡಿ ಸರಿಯಾಗಿ ಮಾಡದೇ ಇರುವವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಆಗುತ್ತದೆ. ಅದನ್ನು ನಿವಾರಣೆ ಮಾಡಿಕೊಳ್ಳಲು ತುಂಬಾ ಕಷ್ಟಪಡಬೇಕಾಗುತ್ತದೆ. ಆದರೆ ಯೋಗ ಎನ್ನುವುದು ಒಂದು ವರ ಇದ್ದಂತೆ. ಆ ಕಾರಣಕ್ಕಾಗಿ ನೀವು ಯೋಗ ಮಾಡಿ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಪವನ ಮುಕ್ತಾಸನ ನಿಮಗೆ ಸಹಾಯಕ ಆಸನವಾಗಿದೆ. ಇದನ್ನು ಹೇಗೆ ಮಾಡುವುದು. ಹಾಗೂ ಇದರಿಂದ ಏನೆಲ್ಲ ಪ್ರಯೋಜನ ಇದೆ ಎಂಬ ಅಂಶವನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಪ್ರಯೋಜನಗಳು
1 ವಾಯು ನಿವಾರಣೆ: ಇದು ಮುಖ್ಯವಾಗಿ ಗ್ಯಾಸ್ ಅಂದರೆ ವಾಯು ಸಮಸ್ಯೆಗೆ ಪರಿಹಾರ ನೀಡುವ ಆಸವಾಗಿದೆ. ಜೀರ್ಣಾಂಗ ವ್ಯವಸ್ಥೆಯಲ್ಲಿ ತುಂಬಿದ ಗಾಳಿಯನ್ನು ಹೊರಗಡೆ ಹಾಕಲು ಸಹಾಯ ಮಾಡುತ್ತದೆ.
2. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಜೀರ್ಣಕಾರಿ ಅಂಗಗಳನ್ನು ಉತ್ತೇಜಿಸುತ್ತದೆ, ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
3. ಕಿಬ್ಬೊಟ್ಟೆಯ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ: ಸೆಳೆತ, ಉಬ್ಬುವುದು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ನೀವು ಈ ಆಸನವನ್ನು ಮಾಡಿ. ಬೇಗನೆ ಪರಿಣಾಮ ಬೀರುತ್ತದೆ.
4. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ: ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಕ್ತ ಸಂಚಲನ ಸರಿಯಾದ ರೀತಿಯಲ್ಲಿ ಆಗುವಂತೆ ನೋಡಿಕೊಳ್ಳುತ್ತದೆ
5.ಬೆನ್ನು ನೋವು ನಿವಾರಣೆ: ಕೆಳ ಬೆನ್ನಿನ ಸ್ನಾಯುಗಳನ್ನು ಹಿಗ್ಗಿಸುತ್ತದೆ ಮತ್ತು ಸಡಿಲಗೊಳಿಸುತ್ತದೆ. ಇದರಿಂದಾಗಿ ನಿಮಗೆ ಬೆನ್ನು ಹುರಿ ನೋವಿದ್ದರೆ ಅದು ಸಹ ಕಡಿಮೆ ಆಗುತ್ತದೆ. ಸೊಂಟನೋವೂ ಕಡಿಮೆ ಆಗುತ್ತದೆ.
7. ಮುಟ್ಟಿನ ಸಮಸ್ಯೆ ನಿವಾರಣೆ: ಮುಟ್ಟಿನ ಸೆಳೆತ ಮತ್ತು ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮುಟ್ಟಾದ ಸಂದರ್ಭದಲ್ಲಿ ಹೆಚ್ಚಾಗಿ ಸೊಂಟ ನೋವು ಕಾಡುವವರು ಈ ಆಸನವನ್ನು ಮಾಡಬಹುದು.
8. ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ: ವಿಶ್ರಾಂತಿಯನ್ನು ಉತ್ತೇಜಿಸುತ್ತದೆ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಆರಾಮಯದಾಯ ಅನುಭವವನ್ನು ನಿಮಗೆ ನೀಡುತ್ತದೆ. ಆದ್ದರಿಂದ ನೀವು ಯಾವುದೇ ಸಮಸ್ಯೆ ಇಲ್ಲದೇ ಇದ್ದರೂ ಮಾಡಬಹುದು. ಮುಂದೆ ಬರಬಹುದಾದ ಸಮಸ್ಯೆಯನ್ನು ಇದು ತಡೆಯುತ್ತದೆ.
ಪವನಮುಕ್ತಾಸನ ಮಾಡುವ ಕ್ರಮ
1. ನೇರವಾಗಿ ಕಾಲು ಬಿಡಿಸಿ, ನಿಮ್ಮ ಬೆನ್ನಿನ ಮೇಲೆ ಮಲಗಿಕೊಳ್ಳಿ.
2. ನಿಮ್ಮ ಎದೆಯ ಕಡೆಗೆ ಒಂದು ಮೊಣಕಾಲು ತನ್ನಿ.
3. ನಿಮ್ಮ ಕೈಯಿಂದ ಮೊಣಕಾಲು ಹಿಡಿದುಕೊಳ್ಳಿ.
4. ನಿಮ್ಮ ಎದೆಯ ಕಡೆಗೆ ಇನ್ನೊಂದು ಮೊಣಕಾಲನ್ನೂ ತಂದು ಒತ್ತಿರಿ
5. 5-10 ಸೆಕೆಂಡುಗಳು ಉಸಿರಾಟದ ನಿಯಂತ್ರಣ ಮಾಡಿ, ಅನುಲೋಮ, ವಿಲೋಮ ರೀತಿಯಲ್ಲಿ
6. ಮತ್ತೆ ಇದೇ ವಿಧಾನವನ್ನು ಪುನರಾವರ್ತಿಸಿ.
ಅರ್ಹ ಬೋಧಕರ ಮಾರ್ಗದರ್ಶನದಲ್ಲಿ ಯೋಗವನ್ನು ಅಭ್ಯಾಸ ಮಾಡಲು ಮರೆಯದಿರಿ. ಮೊದಲು ಯಾರಿಂದಲಾದರೂ ಕಲಿತು ನಂತರ ನೀವು ಮಾಡಲು ಆರಂಭಿಸಿ.