Simhasana: ಧ್ಯಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ ಪ್ರಾಣಾಯಾಮ ಮಾಡಿ, ಸಿಂಹಾಸನ- ಯೋಗಾಸನ ಕಲಿಯುತ್ತಿರುವವರಿಗೆ ಉತ್ತಮ ಆಸನ
ಕನ್ನಡ ಸುದ್ದಿ  /  ಜೀವನಶೈಲಿ  /  Simhasana: ಧ್ಯಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ ಪ್ರಾಣಾಯಾಮ ಮಾಡಿ, ಸಿಂಹಾಸನ- ಯೋಗಾಸನ ಕಲಿಯುತ್ತಿರುವವರಿಗೆ ಉತ್ತಮ ಆಸನ

Simhasana: ಧ್ಯಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ ಪ್ರಾಣಾಯಾಮ ಮಾಡಿ, ಸಿಂಹಾಸನ- ಯೋಗಾಸನ ಕಲಿಯುತ್ತಿರುವವರಿಗೆ ಉತ್ತಮ ಆಸನ

ನೀವು ಧ್ಯಾನ ಮಾಡಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಸಾಧ್ಯ ಆಗುತ್ತಿಲ್ಲ ಎಂದಾದರೆ ಪ್ರಾಣಾಯಾಮ ಮಾಡಿ. ಸಿಂಹಾಸನ ಪ್ರಾಣಾಯಾಮ ಮಾಡಿ. ಇದು ನಿಮ್ಮ ಒತ್ತಡ ನಿವಾರಣೆ ಮಾಡುವಲ್ಲಿ ಮುಖ್ಯಪಾತ್ರವಹಿಸುತ್ತದೆ. ಆತಂಕವನ್ನು ನಿವಾರಿಸುವ ಕೆಲಸ ಮಾಡುತ್ತದೆ.

ಧ್ಯಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ಪ್ರಾಣಾಯಾಮ ಮಾಡಿ
ಧ್ಯಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದರೆ ಪ್ರಾಣಾಯಾಮ ಮಾಡಿ (myyogateache.com)

ಮನಸ್ಸನ್ನು ಶಾಂತಗೊಳಿಸುವುದು, ಒತ್ತಡವನ್ನು ಹೋಗಲಾಡಿಸುವುದು ಮತ್ತು ಆತಂಕವನ್ನು ನಿವಾರಿಸುವುದು ಇವೆಲ್ಲವೂ ಈಗಿನ ಕಾಲದಲ್ಲಿ ತುಂಬಾ ಮುಖ್ಯ. ದೇಹ ಮತ್ತು ಮನಸ್ಸನ್ನು ಚೈತನ್ಯಗೊಳಿಸಲು ಕೆಲವು ಪ್ರಾಣಾಯಾಮವನ್ನು ನೀವು ಮಾಡಬೇಕಾಗುತ್ತದೆ. ಪ್ರಾಣಾಯಾಮವು ನಿಮ್ಮ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿ ನಿಮ್ಮ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಿಂಹ ಘರ್ಜನೆಯ ಪ್ರಾಣಾಯಾಮ ಮಾಡಿ. ಇದನ್ನು Simhasana or lion pose ಎಂದು ಇದನ್ನು ಕರೆಯುತ್ತಾರೆ. ಇದು ಕುಳಿತುಕೊಂಡು ಮಾಡುವ ಯೋಗಾಸನವಾಗಿದ್ದು, ಸಿಂಹದ ಉಸಿರಾಟದ ಶೈಲಿಯನ್ನು ಒಳಗೊಂಡಿರುವ ಪ್ರಾಣಾಯಾಮವಾಗಿದೆ.

ಯೋಗಾಭ್ಯಾಸ ಮಾಡುವ ಅಥವಾ ಈಗ ಹೊಸದಾಗಿ ಯೋಗಾಸನ ಕಲಿಯುತ್ತಾ ಇರುವವರಿಗೆ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವುದನ್ನು ಕಲಿಯುವುದಕ್ಕೆ ಇದು ಒಂದು ಉತ್ತಮ ಆಸನವಾಗಿದೆ. ಮನಸ್ಸನ್ನು ಶಾಂತಗೊಳಿಸಲು ಮತ್ತು ದೇಹವನ್ನು ಸಜ್ಜುಗೊಳಿಸಲು ಈ ಆಸನ ಸಹಾಯ ಮಾಡುತ್ತದೆ.

ನೀವು ನಿಮ್ಮ ಕಾಲುಗಳನ್ನು ಮಡಚಿ ಚಿತ್ರದಲ್ಲಿ ತೋರಿಸಿರುವಂತೆ ಕುಳಿತುಕೊಳ್ಳಬೇಕು. ಬಾಯಿಯನ್ನು ತೆರೆದು ನಾಲಿಗೆಯನ್ನು ಹೊರಚಾಚಿ, ಸಿಂಹದ ಮುಖಭಾವ ಇರುವಂತೆ ಮಾಡಬೇಕು. ಅದೇ ರೀತಿ ಉಸಿರಾಟ ಪ್ರಕ್ರಿಯೆ ನಡೆಸಬೇಕು. ಸಿಂಹವೊಂದು ಕುಣಿತು ತನ್ನ ದಣಿವನ್ನು ಆರಿಸಿಕೊಳ್ಳುವಂತೆ ನೀವು ಮಾಡಬೇಕು.

ಸಿಂಹಾಸನದ ಪ್ರಯೋಜನ

ಸಿಂಹಾಸನವು ಮನಸ್ಸಿನ ಒತ್ತಡ ಮತ್ತು ಅನಗತ್ಯ ಯೋಚನೆಯನ್ನು ನಿಮ್ಮ ಮನಸಿನಿಂದ ತೆಗೆದುಹಾಕಲು ಸಹಾಯ ಮಾಡುತ್ತದೆ. ನೀವು ನಿಮ್ಮ ಮನಸಿನ ನಿಯಂತ್ರಣ ಮಾಡಲು ಇದು ಸೂಕ್ತ ಆಸನ. ಯಾಕೆಂದರೆ ನೀವು ಸುಮ್ಮನೆ ಧ್ಯಾನ ಮಾಡುತ್ತೇನೆ. ಖಾಲಿ ಕುಳಿತಲ್ಲೇ ಏನೂ ಆಲೋಚನೆ ಮಾಡುವುದಿಲ್ಲ ಎಂದುಕೊಳ್ಳುವುದು ಆರಂಭಿಕ ದಿನದಲ್ಲಿ ತುಂಬಾ ಕಷ್ಟ.

ಸಿಂಹಾಸನ ಮಾಡುವಾಗ ನಿಮಗೆ ನೀವು ಕುಳಿತುಕೊಳ್ಳುವ ಭಂಗಿಯಿಂದ ಹಿಡಿದು ಉಸಿರಾಟದವರೆಗೆ ಎಲ್ಲ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಸಿಂಹದ ಭಂಗಿಯನ್ನು ಅಭ್ಯಾಸ ಮಾಡುವುದು ನಿಮ್ಮ ಬಾಯಿಯ ದುರ್ವಾಸನೆಯನ್ನೂ ಸಹ ಕಡಿಮೆ ಮಾಡುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ನಿಮ್ಮನ್ನು ಕಾಡದಂತೆ ಮಾಡುತ್ತದೆ.

ಗಮನಿಸಿ: ಸಿಂಹಾಸನವು ನೋಡಲು ಸರಳವಾಗಿ ಕಾಣಿಸಬಹುದು. ಆದರೆ ಇದನ್ನು ಎಲ್ಲರೂ ಅಭ್ಯಾಸ ಮಾಡುವುದು ಸರಿಯಲ್ಲ. ಪರಿಣಿತರ ಸಲಹೆಯನ್ನು ಪಡೆದುಕೊಂಡು ನಂತರ ಇದನ್ನು ಪ್ರಯತ್ನಿಸಿ.

Whats_app_banner