Kannada News  /  Lifestyle  /  What Are The Symptoms Of Diabetes
ಮಧುಮೇಹದ ಲಕ್ಷಣಗಳು
ಮಧುಮೇಹದ ಲಕ್ಷಣಗಳು (PC: Freepik)

Symptoms of Diabetes: ದೇಹದಲ್ಲಿ ಈ ಲಕ್ಷಣಗಳಿದ್ದರೆ ಅದು ಮಧುಮೇಹದ ಸಂಕೇತವಾಗಿರಬಹುದು..ನಿರ್ಲಕ್ಷ್ಯ ಬೇಡ

03 November 2022, 12:50 ISTHT Kannada Desk
03 November 2022, 12:50 IST

ನಿಮ್ಮ ದೇಹದ ಯಾವುದೇ ಭಾಗದಲ್ಲಿ ಗಾಯವಾಗಿದ್ದರೆ ಹಾಗೇ ಅದು ಬಹಳ ದಿನಗಳ ಕಾಲ ಗುಣವಾಗದೆ ಹಾಗೇ ಉಳಿದಿದ್ದರೆ ಅದು ಮಧುಮೇಹದ ಲಕ್ಷಣಗಳಾಗಿರಬಹುದು. ಮಧುಮೇಹ ಇರುವವರಲ್ಲಿ ಗಾಯಗಳು ಬೇಗ ವಾಸಿಯಾಗುವುದಿಲ್ಲ. ಯಾರಾದರೂ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆ ಪಡೆಯಿರಿ.

ವಯಸ್ಸು 40 ದಾಟುತ್ತಿದ್ದಂತೆ ನಾನಾ ಕಾಯಿಲೆಗಳು ಆರಂಭವಾಗುತ್ತದೆ. ಅದರಲ್ಲಿ ಡಯಾಬಿಟಿಸ್‌ ಕೂಡಾ ಒಂದು. ಇತ್ತೀಚಿನ ದಿನಗಳಲ್ಲಿ ಯುವಜನತೆಗೆ ಕೂಡಾ ಈ ಸಮಸ್ಯೆ ಕಾಡುತ್ತಿದೆ. ಆದರೆ ಯಾವುದೇ ಕಾಯಿಲೆ ಬರುವ ಮೊದಲು, ದೇಹದಲ್ಲಿ ಮೊದಲು ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ್ಯ ಮಾಡಿದರೆ ದೀರ್ಘಕಾಲದ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.

ಮಧುಮೇಹದ ಲಕ್ಷಣಗಳು ಇದ್ದರೂ ಕೆಲವರು ಅದನ್ನು ನಿರ್ಲಕ್ಷಿಸುತ್ತಾರೆ. ನಮಗೆ ಆ ಸಮಸ್ಯೆ ಇಲ್ಲ ಎಂದುಕೊಳ್ಳುತ್ತಾರೆ. ಆದರೆ ಇದನ್ನು ಹೀಗೇ ಮುಂದುವರೆಸಿದರೆ ಸಕ್ಕರೆ ಕಾಯಿಲೆ ಅಪಾಯಕಾರಿ ಮಟ್ಟವನ್ನು ಆದ್ದರಿಂದ ಇಲ್ಲಿ ತಿಳಿಸಲಾದ ಯಾವುದೇ ರೋಗಲಕ್ಷಣಗಳನ್ನು ನೀವು ಹೊಂದಿದ್ದರೆ, ನೀವು ತಕ್ಷಣ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸುವುದು ಉತ್ತಮ.

1. ಯಾವುದೇ ಸ್ಪಷ್ಟ ಕಾರಣವಿಲ್ಲದೆ ಸ್ನಾಯುಗಳು ಅಥವಾ ಕೀಲುಗಳಲ್ಲಿ ನೋವುಂಟಾಗುವುದು ಮಧುಮೇಹದ ಲಕ್ಷಣವಾಗಿರಬಹುದು. ಸ್ನಾಯು ಮತ್ತು ಕೀಲು ನೋವಿನ ಕಾರಣ ನಿಮಗೆ ತಿಳಿದಿಲ್ಲದಿದ್ದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಕ್ಕರೆ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

2. ನಿಮ್ಮ ದೇಹದ ಯಾವುದೇ ಭಾಗದಲ್ಲಿ ಗಾಯವಾಗಿದ್ದರೆ ಹಾಗೇ ಅದು ಬಹಳ ದಿನಗಳ ಕಾಲ ಗುಣವಾಗದೆ ಹಾಗೇ ಉಳಿದಿದ್ದರೆ ಅದು ಮಧುಮೇಹದ ಲಕ್ಷಣಗಳಾಗಿರಬಹುದು. ಮಧುಮೇಹ ಇರುವವರಲ್ಲಿ ಗಾಯಗಳು ಬೇಗ ವಾಸಿಯಾಗುವುದಿಲ್ಲ. ಯಾರಾದರೂ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆ ಪಡೆಯಿರಿ.

3. ರಾತ್ರಿ ಒಳ್ಳೆ ನಿದ್ರೆ ಮಾಡಿದರೂ ಬೆಳಗ್ಗೆ ಎದ್ದ ನಂತರ ಸುಸ್ತು ಎನಿಸಿದರೆ ಅದು ಮಧುಮೇಹದ ಲಕ್ಷಣ ಆಗಿರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದಾಗ ಆಯಾಸ ಉಂಟಾಗುತ್ತದೆ. ಆದ್ದರಿಂದ, ಅಂತಹ ರೋಗಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

4. ನೀವು ಏನೂ ಪ್ರಯತ್ನ ಮಾಡದೆ ಇದ್ದಕ್ಕಿದ್ದಂತೆ ತೂಕ ಕಡಿಮೆಯಾದರೆ ಅದೂ ಕೂಡಾ ಮಧುಮೇಹದ ಲಕ್ಷಣವಾಗಿರಬಹುದು. ಮಧುಮೇಹ ಇರುವ ಕೆಲವರಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ತೂಕ ನಷ್ಟಕ್ಕೆ ನಿರ್ದಿಷ್ಟವಾಗಿ ಯಾವುದೇ ಆಹಾರವನ್ನು ಅನುಸರಿಸದಿದ್ದರೂ ಸಹ, ನೀವು ತೂಕವನ್ನು ಕಳೆದುಕೊಂಡರೆ ನೀವು ತಡ ಮಾಡದೆ ಡಾಕ್ಟರ್‌ ಭೇಟಿ ಮಾಡಿ.

5. ಆಗ್ಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು ಕೂಡಾ ಮಧುಮೇಹದ ಲಕ್ಷಣವಾಗಿರಬಹುದು. ನೀವು ಹೆಚ್ಚು ನೀರು ಕುಡಿದಿದ್ದರೂ ಪದೇ ಪದೆ ಮೂತ್ರ ವಿಸರ್ಜನೆ ಮಾಡುತ್ತಿದ್ದೀರಿ ಎಂದರೆ ವೈದರನ್ನು ಭೇಟಿ ಮಾಡುವುದನ್ನು ಮರೆಯಬೇಡಿ.

ಇವಿಷ್ಟೂ ಅಲ್ಲದೆ, ವಯಸ್ಸು 40 ದಾಟಿದ ನಂತರ ಆಗ್ಗಾಗ್ಗೆ ವೈದ್ಯರ ಬಳಿ ಹೋಗಿ ಚೆಕಪ್‌ ಮಾಡಿಸಿಕೊಳ್ಳುವುದು ಉತ್ತಮ.

ವಿಭಾಗ