Sleeping Problem: ಮಧ್ಯಾಹ್ನವೇ ನೀವು ಆಯಾಸದಿಂದ ಬಳಲುತ್ತಿದ್ದರೆ, ಅದನ್ನು ದೂರಮಾಡಲು ವೈದ್ಯರ ಸಲಹೆ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Sleeping Problem: ಮಧ್ಯಾಹ್ನವೇ ನೀವು ಆಯಾಸದಿಂದ ಬಳಲುತ್ತಿದ್ದರೆ, ಅದನ್ನು ದೂರಮಾಡಲು ವೈದ್ಯರ ಸಲಹೆ ಇಲ್ಲಿದೆ

Sleeping Problem: ಮಧ್ಯಾಹ್ನವೇ ನೀವು ಆಯಾಸದಿಂದ ಬಳಲುತ್ತಿದ್ದರೆ, ಅದನ್ನು ದೂರಮಾಡಲು ವೈದ್ಯರ ಸಲಹೆ ಇಲ್ಲಿದೆ

ಕೆಲವರಂತೂ ಕೆಲಸ ಶುರು ಮಾಡಿ ಕೆಲವು ಗಂಟೆಗಳೇ ಕಳೆದಿರುವುದಿಲ್ಲ, ಅಷ್ಟರಲ್ಲೇ ಆಯಾಸದಿಂದ ಬಳಲುತ್ತಾರೆ. ಮಧ್ಯಾಹ್ನದ ಆಯಾಸ ಎಂಬ ಸಮಸ್ಯೆಯನ್ನು ಇಂದು ಬಹಳಷ್ಟು ಜನರು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಕಾರಣವೇನು ಮತ್ತು ತಜ್ಞವೈದ್ಯರು ಹೇಳುವುದೇನು? ಇಲ್ಲಿದೆ ನೋಡಿ..

ಮಧ್ಯಾಹ್ನದ ಆಯಾಸ ಎಂಬ ಸಮಸ್ಯೆಯನ್ನು ಇಂದು ಬಹಳಷ್ಟು ಜನರು ಅನುಭವಿಸುತ್ತಿದ್ದಾರೆ
ಮಧ್ಯಾಹ್ನದ ಆಯಾಸ ಎಂಬ ಸಮಸ್ಯೆಯನ್ನು ಇಂದು ಬಹಳಷ್ಟು ಜನರು ಅನುಭವಿಸುತ್ತಿದ್ದಾರೆ (Pixabay)

ಜೀವನಶೈಲಿ ಮತ್ತು ಕೆಲಸದ ಒತ್ತಡ, ಕಾರ್ಪೋರೇಟ್ ಬದುಕಿನ ಪರಿಣಾಮ ಹಲವು ರೀತಿಯ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದಾರೆ. ಅದರಲ್ಲಿ ಮಧ್ಯಾಹ್ನದ ಆಯಾಸವೂ ಒಂದು. ನಿಮಗೂ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿರುವಾಗ ಮಧ್ಯಾಹ್ನದ ಸಮಯದಲ್ಲಿ ಆಯಾಸವಾಗುತ್ತಿದೆಯೇ? ದೇಹವು ಹಗಲಿನಲ್ಲಿ ಕಡಿಮೆ ಶಕ್ತಿಯ ಮಟ್ಟವನ್ನು ಅನುಭವಿಸಿದಾಗ ಜನರು ಎದುರಿಸುವ ಸಾಮಾನ್ಯ ಸಮಸ್ಯೆ ಇದು. ಇದು ಏಕೆ ಸಂಭವಿಸುತ್ತಿರಬಹುದು ಎನ್ನುವುದಕ್ಕೆ ವೈದ್ಯರು ನೀಡುವ ಕಾರಣ ಇಲ್ಲಿದೆ. ಮಧ್ಯಾಹ್ನ 1 ಗಂಟೆ ಸಮಯದಲ್ಲೇ ದೇಹವು ಜೋತು ಬೀಳುತ್ತಿರುವಂತೆ ಅನ್ನಿಸುತ್ತದೆ. ಬೆಳಗನ್ನು ನಾವು ಅತ್ಯಂತ ಹೆಚ್ಚಿನ ಉತ್ಸಾಹದಿಂದ ಪ್ರಾರಂಭಿಸಿರುತ್ತೇವೆ, ಆದರೆ ಮಧ್ಯಾಹ್ನವೇ ಏಕೆ ನಮಗೆ ದಣಿವು ಕಾಣಿಸುತ್ತದೆ, ಸೋಮಾರಿತನ ಮತ್ತು ನಿದ್ರಾಹೀನತೆಯಾಗಿದೆ ಎಂದು ಅನಿಸುತ್ತದೆ? ಇದನ್ನು ಮಧ್ಯಾಹ್ನದ ನಿಶ್ಯಕ್ತಿ ಅಥವಾ ಮಧ್ಯಾಹ್ನದ ಆಯಾಸ ಎನ್ನುತ್ತಾರೆ.

ಮಧ್ಯಾಹ್ನದ ಆಯಾಸ ಎಂದರೇನು?

ನಮ್ಮ ದೇಹದ ಜೈವಿಕ ಗಡಿಯಾರವನ್ನು ಗಮನಿಸಿದಾಗ, ಸರ್ಕಾಡಿಯನ್ ಲಯ ಮತ್ತು ನಿದ್ರೆಯ ಒತ್ತಡವು ಮಧ್ಯಾಹ್ನದ ಸಮಯದಲ್ಲಿ ಒಬ್ಬರು ಏಕೆ ನಿದ್ರಿಸುತ್ತಾರೆ ಮತ್ತು ದಣಿದಿರಬಹುದು ಎಂಬುದನ್ನು ನಿರ್ದೇಶಿಸುವ ಎರಡು ಅಂಶಗಳಾಗಿವೆ. ಸರ್ಕಾಡಿಯನ್ ಲಯವು ಮೂಲತಃ ದೇಹದ ಆಂತರಿಕ ಗಡಿಯಾರವಾಗಿದ್ದು, ದಿನದ 24 ಗಂಟೆಗಳಲ್ಲಿ ವ್ಯಕ್ತಿಯಲ್ಲಿ ದೈಹಿಕ, ಮಾನಸಿಕ, ನಡವಳಿಕೆಯ ಬದಲಾವಣೆಗಳನ್ನು ನಿಯಂತ್ರಿಸಲು ಕಾರಣವಾಗಿದೆ. ಇದು ದೇಹವನ್ನು ಯಾವಾಗ ಮಲಗಬೇಕು ಮತ್ತು ಯಾವಾಗ ಎಚ್ಚರವಾಗಿರಬೇಕು ಎಂಬುದನ್ನು ನಿರ್ದೇಶಿಸುತ್ತದೆ.

ಪ್ರತಿ ದಿನವೂ ನಿದ್ರೆಯ ಒತ್ತಡವು ನಾವು ಹೆಚ್ಚು ಸಮಯ ಎಚ್ಚರವಾಗಿರುವಾಗ ದೇಹವು ನಿದ್ರೆ ಮಾಡುವ ಅಗತ್ಯವನ್ನು ಸೂಚಿಸುತ್ತದೆ. ನಾವು ಬೆಳಿಗ್ಗೆ ಎದ್ದಾಗ ಮತ್ತು ಚೈತನ್ಯಗೊಂಡಾಗ ನಿದ್ರೆಯ ಒತ್ತಡ ಕಡಿಮೆ ಇರುತ್ತದೆ. ದಿನವು ತೆರೆದುಕೊಳ್ಳುತ್ತಿದ್ದಂತೆ, ಹೆಚ್ಚು ಎಚ್ಚರವಾಗಿರುವ ಸಮಯ ನಿಧಾನವಾಗಿ ನಿದ್ರೆ ಮಾಡಲು ದೇಹದ ಒತ್ತಡವನ್ನು ಹೆಚ್ಚಿಸುತ್ತದೆ. ದಿ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಮಧ್ಯಾಹ್ನದ ಆಯಾಸದ ಸಮಯದಲ್ಲಿ, ಆ ಎರಡು ಶಕ್ತಿಗಳು - ನಿದ್ರೆಯ ಒತ್ತಡ ಮತ್ತು ಸಿರ್ಕಾಡಿಯನ್ ಲಯಗಳು - ಮೂಲಭೂತವಾಗಿ ಪರಸ್ಪರ ಹೋರಾಡುತ್ತಿವೆ ಎಂದು ಮಿಚಿಗನ್ ವಿಶ್ವವಿದ್ಯಾಲಯದ ಮಿಚಿಗನ್ ನರವಿಜ್ಞಾನ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ರವಿ ಅಲ್ಲಾಡ ಹೇಳುತ್ತಾರೆ. ಆದ್ದರಿಂದ, ನಾವು ನಿದ್ರಾಹೀನತೆಯನ್ನು ಅನುಭವಿಸಿದಾಗ, ನಿದ್ರೆಯ ಒತ್ತಡವು ಸಿರ್ಕಾಡಿಯನ್ ಲಯವನ್ನು ಪ್ರಾಬಲ್ಯಗೊಳಿಸುತ್ತಿದೆ ಎಂದರ್ಥ.

ದೇಹವು ನಿದ್ರೆಯಿಂದ ವಂಚಿತವಾದಾಗ ಅಥವಾ ಒಬ್ಬರು ಅನಿಯಮಿತ ಮಲಗುವ ಸಮಯದ ವೇಳಾಪಟ್ಟಿಯನ್ನು ಹೊಂದಿರುವಾಗ ದೇಹದ ಶಕ್ತಿಯ ಮಟ್ಟದಲ್ಲಿನ ಈ ಕುಸಿತವು ಅದಕ್ಕೆ ಕಾರಣವಾಗಿರುತ್ತದೆ. ವಿಜ್ಞಾನಿಗಳ ಪ್ರಕಾರ, ಆಹಾರವು ಇದರಲ್ಲಿ ನೇರ ಪಾತ್ರ ವಹಿಸುವುದಿಲ್ಲ, ಆದರೆ ಸಕ್ಕರೆ ಹೆಚ್ಚಿರುವ ಆಹಾರ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಸಹಿತ ವಿವಿಧ ರೀತಿಯ ಆಹಾರ ಪದಾರ್ಥ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತವೆ ಮತ್ತು ಆಲಸ್ಯದ ಭಾವನೆಯನ್ನು ಹೊಂದುವಂತೆ ಮಾಡುತ್ತವೆ.

ಮಧ್ಯಾಹ್ನದ ಜಡತ್ವವನ್ನು ನಿರ್ವಹಿಸುವುದು ಹೇಗೆ?

ಮಧ್ಯಾಹ್ಯ ಆಲಸ್ಯ ಉಂಟಾಗುವುದು ಮತ್ತು ಆಯಾಸವಾಗುವುದನ್ನು ತಡೆಯಲು, ಹೆಚ್ಚಿನ ಸಕ್ಕರೆಯುಕ್ತ ಆಹಾರದ ಬದಲು ಧಾನ್ಯದ ಓಟ್ ಮೀಲ್, ಮೊಟ್ಟೆ ಮುಂತಾದ ಆರೋಗ್ಯಕರ ಆಹಾರಗಳೊಂದಿಗೆ ಬದಲಾಯಿಸಬೇಕು.

ತೀರಾ ಆಯಾಸವಾಗುತ್ತಿದ್ದರೆ, ತಕ್ಷಣದ ಪರಿಹಾರ ಪಡೆಯುವ ಒಂದು ಮಾರ್ಗವೆಂದರೆ 15-20 ನಿಮಿಷಗಳ ಸಣ್ಣ ನಿದ್ರೆ ಮಾಡಿ. ಆದರೆ ಅದನ್ನು ಅಭ್ಯಾಸ ಮಾಡಿಕೊಳ್ಳಬಾರದು. ಅದರ ಜತೆಗೇ, ಆಲಸ್ಯ ದೂರಮಾಡಲು, ನಿಮ್ಮ ಮೇಲ್ ಬಾಕ್ಸ್ ಓದುವುದು, ದಿನನಿತ್ಯದ ಸಣ್ಣ ಸಣ್ಣ ಕೆಲಸಗಳನ್ನು ವಿಂಗಡಿಸುವುದು ಮುಂತಾದ ಚಟುವಟಿಕೆಗಳು ಮತ್ತು ಗುರಿಗಳ ಮೇಲೆ ಕೇಂದ್ರೀಕರಿಸಿ. ಅಲ್ಲದೆ, ಸಣ್ಣ ನಡಿಗೆಯಂತಹ ಕೆಲವು ದೈಹಿಕ ಚಲನೆಯು ಆಲಸ್ಯವನ್ನು ಹೋಗಲಾಡಿಸಿ ಏಕಾಗ್ರತೆಯನ್ನು ತರಬಹುದು.

ಮಧ್ಯಾಹ್ನದ ಆಯಾಸವು ಕೆಲವೊಮ್ಮೆ ಪ್ರತಿಯೊಬ್ಬರನ್ನು ಕೂಡ ಬಾಧಿಸುತ್ತದೆ. ಕೆಲವರು ಇದನ್ನು ಸೋಮಾರಿತನ, ಆಲಸ್ಯ ಎಂದು ಹೇಳಬಹುದಾದರೂ, ನಿದ್ರಾಹೀನತೆ, ನಿದ್ರೆಯ ಚಕ್ರಗಳಲ್ಲಿನ ಅಸಮತೋಲನ ಮತ್ತು ಕಾರ್ಬೋಹೈಡ್ರೇಟ್ ಭರಿತ ಅಧಿಕ ಮೌಲ್ಯದ ಆಹಾರವು ಇದರ ತೀವ್ರತೆಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಸಮತೋಲಿತ ಮತ್ತು ಸರಳ ಆಹಾರ, ಚಟುವಟಿಕೆ, ಸದಾ ಕುಳಿತುಕೊಂಡೇ ಇರುವ ಕೆಲಸವಾದರೆ, ಡೆಸ್ಕ್ ವ್ಯಾಯಾಮವನ್ನು ಪ್ರಯತ್ನಿಸಿ, ಮಧ್ಯಾಹ್ನದ ಆಯಾದಸ ಸಮಸ್ಯೆಯಿಂದ ಪಾರಾಗಬಹುದು.

Whats_app_banner