Mindfulness Meditation Benefits: ಫಟಾ ಫಟ್ ನಿಮ್ಮ ಸ್ಟ್ರೆಸ್ಸು, ಸಿಟ್ಟು ಕ್ಲೀಯರ್ ಆಗ್ಬೇಕಾ? ನೀವು ಮಾಡಬೇಕಿರುವುದು ಇಷ್ಟೇ..
ಕೆಲವರು ಒತ್ತಡ ನಿವಾರಣೆಗೆ ವಾಕಿಂಗ್ ಹೋಗುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ, ಇನ್ನು ಕೆಲವರು ಸಿನಿಮಾ ನೋಡುತ್ತಾರೆ. ಆದರೆ, ಪ್ರತಿಫಲ ಮಾತ್ರ ಸಿಕ್ಕಿರುವುದಿಲ್ಲ. ಹೀಗಿರುವಾಗ ನೀವೇಕೆ ಮೈಂಡ್‌ಫುಲ್‌ನೆಸ್ ಧ್ಯಾನವನ್ನೊಮ್ಮೆ (Mindfulness Meditation) ಟ್ರೈ ಮಾಡಬಾರದು.
ಇತ್ತೀಚಿನ ವೇಗದ ಜಗತ್ತಿನಲ್ಲಿ ಮನುಷ್ಯ ಹಣದ ಹಿಂದೆ ಹೋದಷ್ಟೂ, ಆರೋಗ್ಯವನ್ನು ಕಡೆಗಣಿಸುತ್ತಿದ್ದಾನೆ. ಅನಾರೋಗ್ಯಕ್ಕೆ ಈಡಾದಾಗ ಮಾತ್ರ ಆರೋಗ್ಯದ ಕಾಳಜಿ ಮೂಡುತ್ತದೆ. ಆದರೆ, ನಿತ್ಯದ ನಮ್ಮ ಕೆಲಸದ ಒತ್ತಡದ ನಡುವೆಯೇ ಸಣ್ಣ ಪುಟ್ಟ ಆರೋಗ್ಯಕಾರಿ ಬದಲಾವಣೆಗಳನ್ನು ರೂಢಿಸಿಕೊಂಡರೆ, ಆಸ್ಪತ್ರೆಗೆ ದಾಖಲಾಗುವುದು ತಪ್ಪುತ್ತೆ, ಹಣವೂ ಉಳಿತಾಯವಾಗುತ್ತದೆ. ಹಾಗಾದರೆ ಏನು ಮಾಡಬೇಕು?
ಒತ್ತಡವನ್ನು ನಿವಾರಿಸಲು ಧ್ಯಾನ ಅತ್ಯುತ್ತಮ ಮಾರ್ಗ. ಮನಸ್ಸನ್ನು ಹಿಡಿತದಲ್ಲಿಡಲು, ಒತ್ತಡದಿಂದ ಮುಕ್ತಗೊಳಿಸಲು ವೈದ್ಯರು ಶಿಫಾರಸು ಮಾಡುವುದು ಧ್ಯಾನವನ್ನೇ. ಧ್ಯಾನದಿಂದ ದೇಹ ಮತ್ತು ಮನಸ್ಸು ಎರಡೂ ಶಾಂತವಾಗಿರುತ್ತವೆ. ಆ ಒತ್ತಡದಿಂದ ಹೊರಬರುವುದಕ್ಕೆ ಧ್ಯಾನ ಸರಿಯಾದ ಮಾರ್ಗ. ಕೆಲವರು ಒತ್ತಡ ನಿವಾರಣೆಗೆ ವಾಕಿಂಗ್ ಹೋಗುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ, ಇನ್ನು ಕೆಲವರು ಸಿನಿಮಾ ನೋಡುತ್ತಾರೆ. ಆದರೆ, ಪ್ರತಿಫಲ ಮಾತ್ರ ಸಿಕ್ಕಿರುವುದಿಲ್ಲ. ಹೀಗಿರುವಾಗ ನೀವೇಕೆ ಮೈಂಡ್‌ಫುಲ್‌ನೆಸ್ ಧ್ಯಾನವನ್ನೊಮ್ಮೆ (Mindfulness Meditation) ಮಾಡಬಾರದು.
ಏನಿದು ಮೈಂಡ್‌ಫುಲ್‌ನೆಸ್ ಧ್ಯಾನ..
(Mindfulness Meditation) ಮೈಂಡ್‌ಫುಲ್‌ನೆಸ್ ಧ್ಯಾನಕ್ಕೆ ಕನ್ನಡದಲ್ಲಿ ಸಾವಧಾನತೆಯ ಧ್ಯಾನ ಎಂದು ಕರೆಯುತ್ತಾರೆ. ಮನಸಿಗೆ ತರಬೇತಿ ನೀಡುವ ಒಂದು ಧ್ಯಾನ ಪ್ರಕ್ರಿಯೆ ಇದು. ಮನಸ್ಸಿನಲ್ಲಿನ ನಡೆಯುವ ಘರ್ಷಣೆಗಳನ್ನು, ಆಲೋಚನೆಗಳನ್ನು ನಿಧಾನಗೊಳಿಸುವ, ನಕಾರಾತ್ಮಕ ಶಕ್ತಿಯನ್ನು ಹೊರಕಳಿಸಕಲು ಇದು ಸಹಾಯ ಮಾಡುತ್ತದೆ. ಸಾವಧಾನ ಧ್ಯಾನ ಮಾಡುವುದರಿಂದ ಏನೆಲ್ಲ ಆಗುತ್ತದೆ? ಅದರ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸಾವಧಾನತೆ ಧ್ಯಾನದ ಪ್ರಯೋಜನಗಳು..
- ಮನಸ್ಸಿನ ಆಲೋಚನೆಗಳ ವೇಗ ಶಾಂತವಾಗುತ್ತದೆ
- ಮನಸ್ಸಿನಲ್ಲಿನ ನಕಾರಾತ್ಮಕತೆ ದೂರ ಹೋಗುತ್ತದೆ.
- ಈ ಧ್ಯಾನವು ಒತ್ತಡ, ಉದ್ವೇಗ, ಚಡಪಡಿಕೆಯನ್ನು ಹೋಗಲಾಡಿಸುತ್ತದೆ
- ವೇಗದ ಹೃದಯ ಬಡಿತ ಶಾಂತವಾಗಲಿದೆ
- ರಕ್ತದೊತ್ತಡ ಸಮತೋಲನವನ್ನು ಕಾಪಾಡುತ್ತದೆ
- ದೀರ್ಘಕಾಲದ ನೋವು ಗುಣವಾಗುತ್ತದೆ
- ಚೆನ್ನಾಗಿ ನಿದ್ರೆ ಪ್ರಾಪ್ತವಾಗಲಿದೆ.
- ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ
- ನಮ್ಮನ್ನು ಕೇಂದ್ರೀಕರಿಸುತ್ತದೆ, ಆಲೋಚನಾ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ
- ಭಾವನೆಗಳನ್ನು ನಿಯಂತ್ರಿಸಲು ಸುಲಭವಾಗುತ್ತದೆ
ಕೋಪ ಬಂದರೆ ಅದನ್ನೂ ಹಿಡಿತದಲ್ಲಿ ಇಡಲಿದೆ..
ಸಾವಧಾನತೆ ಧ್ಯಾನ ಕೋಪವನ್ನು ನಿಯಂತ್ರಿಸಲು ಇದು ತುಂಬಾ ಸಹಕಾರಿ. ನೀವು ಕೋಪಗೊಂಡಾಗ, ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಆಳವಾದ ಉಸಿರನ್ನು ತೆಗೆದುಕೊಳ್ಳಿ. ಇದರೊಂದಿಗೆ, ಎಲ್ಲಾ ಗಮನವನ್ನು ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ. ಹೀಗೆ 5 ನಿಮಿಷಗಳ ಕಾಲ ಮಾಡಿದರೆ ನಿಮ್ಮ ಕೋಪ ಸಂಪೂರ್ಣ ಶಾಂತವಾಗುತ್ತದೆ. ಇದನ್ನು ಮಾಡುವುದರಿಂದ ನೀವು ಶಾಂತಿ ಮತ್ತು ಸಂತೋಷದ ಭಾವನೆಯನ್ನು ಸಹ ಅನುಭವಿಸುವಿರಿ. ಮೈಂಡ್‌ಫುಲ್‌ನೆಸ್ ಧ್ಯಾನವು ನಿಮ್ಮ ಗಮನವನ್ನು ಹೆಚ್ಚಿಸುತ್ತದೆ.
ಈ ಧ್ಯಾನ ಮಾಡುವುದು ಹೇಗೆ?
- ಈ ಧ್ಯಾನ ಮಾಡಲು ನೀವು ಶಾಂತಿಯುತವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು.
- ಸೂರ್ಯನ ಬೆಳಕು ಒಳ್ಳೆಯ ಗಾಳಿ ಹರಿದಾಡುವ ಸ್ಥಳ ಆರಿಸಿಕೊಳ್ಳಬೇಕು.
- ಈ ಧ್ಯಾನಕ್ಕೆ ಬೆಳಗಿನ ಸಮಯವೇ ಉತ್ತಮ.
- ಮೊದಲಿಗೆ ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಸಂಪೂರ್ಣ ಗಮನವನ್ನು ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ.
- ಉಸಿರು ಎಷ್ಟು ಬಾರಿ ಒಳಗೆ ಮತ್ತು ಹೊರಗೆ ಬರುತ್ತಿದೆ ಎಂಬುದನ್ನು ಅನುಭವಿಸಿ.
- ಈ ಸಮಯದಲ್ಲಿ, ನಿಮ್ಮ ಹೊಟ್ಟೆಯ ಮೇಲೆ ಒಂದು ಕೈಯನ್ನು ಇರಿಸಿ. ಉಸಿರಾಟದ ಅನುಭವವನ್ನು ಆಸ್ವಾದಿಸಿ
- ನೀವು ಇದನ್ನು ನಿತ್ಯ 10 ರಿಂದ 15 ನಿಮಿಷಗಳ ಕಾಲ ಮಾಡಿದರೆ ಸಾಕು.