ಏನಿದು ರಿವೇಂಜ್ ಡ್ರೆಸ್ಸಿಂಗ್? ಪಿಸ್ತಾ ಬಣ್ಣದ ಉಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿದ ನತಾಶಾ
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಬೇರ್ಪಟ್ಟಿದ್ದು ಗೊತ್ತೇ ಇದೆ. ವಿಚ್ಛೇದನದ ನಂತರ ಇದೀಗ ನತಾಶಾ ಪಿಸ್ತಾ ಬಣ್ಣದ ಉಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋಗಳು ವೈರಲ್ ಆಗುತ್ತಿದೆ.
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಬೇರ್ಪಟ್ಟಿದ್ದು ಗೊತ್ತೇ ಇದೆ. ವಿಚ್ಛೇದನದ ನಂತರ ಸಹಜವಾಗಿ ಖಿನ್ನತೆ ಹಾಗೂ ಆತಂಕವನ್ನು ಅನುಭವಿಸುವುದು ಸಹಜ. ಆದರೆ ಇಂತಹ ಸಂದರ್ಭದಲ್ಲಿ ತಾನು ತುಂಬಾ ಸಂತೋಷವಾಗಿದ್ದೇನೆ ಎನ್ನುವ ರೀತಿಯಲ್ಲಿ ಕಾಣಿಸಿಕೊಂಡರೆ ಅಥವಾ ಆ ರೀತಿ ತುಂಬಾ ಖುಷಿಯಲ್ಲಿ ಇರುವಂತೆ ಫೋಟೋಗಳನ್ನು ಹಂಚಿಕೊಂಡರೆ ಅದನ್ನು ರಿವೇಂಜ್ ಡ್ರೆಸ್ಸಿಂಗ್ ಎಂದು ಕರೆಯುತ್ತಾರೆ. ಈ ರೀತಿ ತುಂಬಾ ಜನ ಮಾಡುತ್ತಾರೆ.
ನತಾಶಾ ಕೂಡ ಎಲ್ಲರಂತೆ ರಿವೇಂಜ್ ಡ್ರೆಸ್ಸಿಂಗ್ ಮಾಡಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಿಂದ ದೂರವಾದ ಕೆಲವು ದಿನಗಳ ನಂತರ, ಅವರು ತಮ್ಮ Instagram ನಲ್ಲಿ ಅನೇಕ ಸ್ಟೋರಿಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಮಿಂಟ್ ಗ್ರೀನ್ ಡ್ರೆಸ್‌ನಲ್ಲಿರುವ ಅವರ ಫೋಟೋಗಳು ಇದೀಗ ವೈರಲ್ ಆಗುತ್ತಿದೆ. ನೋವನ್ನು ಮರೆತು ಮುಂದೆ ಸಾಗುವುದರ ಬಗ್ಗೆ ಅವರು ಓಪನ್ ಪೋಸ್ಟ್ ಹಾಕಿದಂತಿದೆ.
ನತಾಶಾ ಉಡುಗೆ ವಿವರ:
ನತಾಶಾ ಅವರ ಪುದೀನ ಹಸಿರು ಬಣ್ಣದ ಉಡುಗೆ ತೊಟ್ಟಿದ್ದಾರೆ. ರೆನೀ ಕ್ಲೋಥಿಂಗ್ ಬ್ರಾಂಡ್‌ನಿಂದ ಈ ಡ್ರೆಸ್‌ನ ಆಯ್ಕೆ ಮಾಡಿಕೊಂಡಿದ್ದಾರೆ. ಹಾಲ್ಟರ್ ನೆಕ್ ಈ ಉಡುಗೆಗೆ ಅತ್ಯಾಧುನಿಕ ಸ್ಪರ್ಶವನ್ನು ನೀಡಿದೆ. ಬಾಡಿಕಾನ್ ಫಿಟ್ಟಿಂಗ್ ಡ್ರೆಸ್ ಅವರಿಗೆ ಒಪ್ಪುವಂತಿದೆ. ಬ್ರಾಡ್ ಕಾರ್ಸೆಟ್ ಬೆಲ್ಟ್, ಬ್ಯಾಕ್ ಲೆಸ್ ಡಿಟೇಲಿಂಗ್ ಡ್ರೆಸ್ ಲುಕ್ ಅನ್ನು ಮತ್ತಷ್ಟು ಹೆಚ್ಚಿಸಿದೆ. ಗೋಲ್ಡನ್ ಕಿವಿಯೋಲೆಗಳು ಮತ್ತು ಕಪ್ಪು ಸನ್‌ಗ್ಲಾಸ್ ಧರಿಸಿ, ನತಾಶಾ ಪೋಸ್ ನೀಡಿದ್ದಾರೆ.
ನ್ಯೂಡ್ ಐಶ್ಯಾಡೋ, ವಿಂಗ್ ಐಲೈನರ್, ಮಸ್ಕರ್ ಹಾಕಿಕೊಂಡಿದ್ದಾರೆ. ಇವುಗಳು ಅಂದವನ್ನು ಹೆಚ್ಚಿಸಿದೆ. ಬ್ಲಶ್‌ನೊಂದಿಗೆ ಫ್ಲಶ್ ಮಾಡಿದ ಕೆನ್ನೆಗಳು, ಮಿನುಗುವ ಹೈಲೈಟರ್ ಮತ್ತು ನ್ಯೂಡ್ ಲಿಪ್‌ಸ್ಟಿಕ್ ಮೇಕ್ಅಪ್ ಡಿಟೇಲಿಂಗ್ ನೀಡಿದೆ.
ರಿವೇಂಜ್ ಡ್ರೆಸ್ಸಿಂಗ್ ಎಂದರೇನು?
ರಿವೇಂಜ್ ಡ್ರೆಸ್ಸಿಂಗ್ ಅನ್ನು ಫ್ಯಾಷನ್ ಕ್ರಾಂತಿ ಎಂದು ಹೇಳಬಹುದು . ಸಾಮಾನ್ಯವಾಗಿ ವಿಚ್ಛೇದನ ಅಥವಾ ವಿಚ್ಛೇದನದ ನಂತರ ಯಾರಾದರೂ ಸೊಗಸಾದ, ಮನಮೋಹಕ ಉಡುಪಿನಲ್ಲಿ ಕಾಣಿಸಿಕೊಂಡರೆ ಅದನ್ನೇ ರಿವೇಂಜ್ ಡ್ರೆಸ್ಸಿಂಗ್ ಎಂದು ಕರೆಯುತ್ತಾರೆ. ರಾಜಕುಮಾರಿ ಡಯಾನಾ ಅವರು ಪ್ರಿನ್ಸ್ ಚಾರ್ಲ್ಸ್‌ನಿಂದ ಬೇರ್ಪಟ್ಟ ಸ್ವಲ್ಪ ಸಮಯದ ನಂತರ ಸಾರ್ವಜನಿಕ ಕಾರ್ಯಕ್ರಮಕ್ಕೆ ಕಡುಗಪ್ಪು ಉಡುಗೆ ತೊಟ್ಟು ಹೋಗಿದ್ದರು. ಇದು ಆ ಸಮಯದಲ್ಲಿ ಬಹಳ ಸುದ್ದಿಯಾಗಿತ್ತು. ತುಂಬಾ ಜನ ಇದಕ್ಕೆ ಪ್ರತಿಕ್ರಿಯೆ ನೀಡಿದ್ದರು.
ವಿಚ್ಛೇದನದ ಬಗ್ಗೆ:
ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಮೇ 2020 ರಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ನಂತರ ಫೆಬ್ರವರಿ 2023 ರಲ್ಲಿ ಅದ್ದೂರಿಯಾಗಿ ಸಮಾರಂಭ ನಡೆಯಿತು. ಕಳೆದ ತಿಂಗಳು, ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗಿನ ವಿಚ್ಚದನದ ಬಗ್ಗೆ ಖಾತ್ರಿ ಪಡಿಸಲಾಗಿದೆ. ಹಾರ್ದಿಕ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ನಾಲ್ಕು ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ ತಾನು ಮತ್ತು ನತಾಶಾ ಬೇರ್ಪಟ್ಟಿದ್ದೇವೆ ಎಂದು ಘೋಷಿಸಿದ್ದರು.
ವಿಭಾಗ