ಕನ್ನಡ ಸುದ್ದಿ  /  Lifestyle  /  What Is The Benefit Of Eating Peanuts Every Day Best Guide To Learn Health Nutrition Help Lose Weight Keep Your Skin Prs

Benefits of Peanut: ಬಡವರ ಬಾದಾಮಿ ಕಡಲೆ ಕಾಯಿಯಲ್ಲಿದೆ ಆರೋಗ್ಯದ ಗುಟ್ಟು; ಇದರ ಉಪಯೋಗ ಗೊತ್ತಾದ್ರೆ, ಈಗಿನಿಂದಲೇ ತಿನ್ನಲು ಶುರು ಮಾಡ್ತೀರಾ

Benefits of Peanut: ಬಡವರ ಬಾದಾಮಿ ಎಂದು ಕರೆಸಿಕೊಳ್ಳುವ ಕಡಲೆಕಾಯಿಯಲ್ಲಿ ಆರೋಗ್ಯದ ಗುಟ್ಟು ಅಡಗಿದೆ. ಏನೆಲ್ಲಾ ಪ್ರೋಟೀನ್ಸ್​ ಇದೆ? ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿ? ಹೀಗೆ ಕಡಲೆಕಾಯಿಯಿಂದ ಆರೋಗ್ಯಕ್ಕೆ ಆಗುವ ಲಾಭಗಳೇನು ಎಂಬುದನ್ನು ಈ ವರದಿಯಲ್ಲಿ ನೋಡೋಣ.

ಕಡಲೆ ಕಾಯಿ (ಸಾಂದರ್ಭಿಕ ಚಿತ್ರ)
ಕಡಲೆ ಕಾಯಿ (ಸಾಂದರ್ಭಿಕ ಚಿತ್ರ)

ನಿಮ್ಮ ದೇಹದಲ್ಲಿ ಸುಸ್ತು ಕಾಣಿಸಿಕೊಳ್ಳುತ್ತಿದೆಯಾ? ಚರ್ಮ ಕಳೆಗುಂದುತಿದೆಯಾ? ಹಾಗಿದ್ದರೆ ನೀವು ಈಗಿನಂದಲೇ ಇದನ್ನು ತಿನ್ನಲು ಶುರು ಮಾಡಿದರೆ ಸುಸ್ತು ಮಾಯಾವಾಗಿ, ಚರ್ಮ ಪಳಪಳ ಹೊಳೆಯುವುದು ಗ್ಯಾರಂಟಿ. ವಿಟಮಿನ್ ಇ, ಮೆಗ್ನಿಷಿಯಂ ಹಾಗೂ ಜಿಂಕ್ ಅಂಶಗಳು ಹೇರಳವಾಗಿರುವ ಇದರಲ್ಲಿವೆ. ಇದನ್ನು ತಿನ್ನುವುದರಿಂದ ಸಿಗುವ ಪ್ರೋಟೀನ್‌ ಅಂಶ ಕೇಳಿದರೆ ನಿಜಕ್ಕೂ ಆಶ್ಚರ್ಯಪಡತ್ತೀರಾ.

ಹೌದು, ಬಡವರ ಬಾದಾಮಿ ಕಡಲೆಬೀಜ (ಶೇಂಗಾ). ಈ ಬೀಜ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿಯಾಗಿದೆ (Benefits of Peanut) ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ. ಕಡಲೆಕಾಯಿ ಬೀಜವನ್ನು (Peanuts) ದಿನ ನಿತ್ಯದ ಅಡುಗೆಗೆ ಬಳಸಲಾಗುತ್ತದೆ. ಆದರೆ ಈ ಕಡಲೆಕಾಯಿ ಬೀಜದಲ್ಲಿ ಯಾವ ಪ್ರಮಾಣದಲ್ಲಿ ಪ್ರೋಟೀನ್ ಅಂಶಗಳು ಇರುತ್ತದೆ ಎಂಬುದು ನಿಮಗೆ ತಿಳಿದರೆ ನಿಜಕ್ಕೂ ನೀವು ಆಶ್ಚರ್ಯ ಪಡುತ್ತೀರಿ. ಹೌದು ಕಡಲೆಕಾಯಿ ಬೀಜದಲ್ಲಿ ಸಾಕಷ್ಟು ವಿಟಮಿನ್‌ ಮತ್ತು ಮಿನರಲ್ಸ್‌ಗಳಿವೆ.

ಕೊಬ್ಬಿನಾಂಶ ನಿಯಂತ್ರಣ‌

ಮೂವತ್ತು ಗ್ರಾಂ ಕಡಲೆಕಾಯಿಯನ್ನು ಸೇವಿಸಿದರೆ ದೇಹಕ್ಕೆ ಎಂಟು ಗ್ರಾಂನಷ್ಟು ಪ್ರೋಟೀನ್ ದೊರೆಯುತ್ತದೆ. ಜೊತೆಗೆ, ನಾರಿನಾಂಶ, ಉತ್ತಮ ಮಟ್ಟದ ಕೊಬ್ಬು ಪೊಟ್ಯಾಷಿಯಂ ಕೂಡ ಇದೆ. ಒಲೇಕ್ ಆಸಿಡ್ ಕಡಲೆಕಾಯಿಯಲ್ಲಿ ಇರುವುದರಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ನಿಯಂತ್ರಿಸುತ್ತದೆ. ಉರಿಯೂತವನ್ನು ತಡೆಗಟ್ಟುತ್ತದೆ ಮತ್ತು ಚರ್ಮದ ಆರೋಗ್ಯ ಕಾಪಾಡುವುದಲ್ಲದೇ, ಆರೋಗ್ಯ ಇನ್ನಿತರ ಸಮಸ್ಯೆಗಳಿಗೂ ಕೂಡ ಕಡಲೆಕಾಯಿ ರಾಮಭಾಣ ಎಂದರೆ ತಪ್ಪಲ್ಲ.

ಡಯಟ್‌ ಮಾಡಲು ಬೆಸ್ಟ್‌ ಫುಡ್

ಬೀಜದಲ್ಲಿರುವ ನಾರಿನಾಂಶ ಬೇಗ ಹಸಿವಾಗದಂತೆ ತಡೆಯುತ್ತದೆ. ಅದಲ್ಲದೆ, ದೇಹದ ತೂಕವನ್ನು ಕಡಿಮೆ ಮಾಡಲು ಇದು ಸಹಕಾರಿ. ಹೀಗಾಗಿಯೇ ಮಹಿಳೆಯರು ಡಯಟ್ ಮಾಡುವುದಕ್ಕೆ ಕಡಲೆ ಬೀಜವನ್ನು ಹೆಚ್ಚಾಗಿ ಸೇವಿಸುತ್ತಾರೆ. ಜೊತೆಗೆ ಕಡಲೆಕಾಯಿಯಲ್ಲಿ ಪ್ರೊಟೀನ್, ಉತ್ತಮ ಕೊಬ್ಬು, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿ ಇರುತ್ತದೆ. ಮೈಯಲ್ಲಿನ ಮೂಳೆಗಳನ್ನು ಬಲಪಡಿಸಲು ಮತ್ತು ನೀವು ಫಿಟ್ ಆಗಿ ಕಾಣುವಂತೆ ಮಾಡಲು ಕಡಲೆ ಬೀಜ ಬಹಳಷ್ಟು ನೆರವಾಗುತ್ತದೆ. ಮುಖ್ಯವಾಗಿ ವಯಸ್ಸಾಗದಂತೆ ತಡೆಯುವ ಶಕ್ತಿ ಇದಕ್ಕಿದೆ ಎಂದರೆ ತಪ್ಪಾಗಲಾರದು.

ಪಳಪಳ ಹೊಳೆಯಲಿದೆ ಚರ್ಮ

ಕಡಲೆಕಾಯಿ ಬೀಜ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಇದರಲ್ಲಿ ಒಮೆಗಾ 6 ಕೊಬ್ಬಿನಂಶ ಇರುವುದರಿಂದ ಚರ್ಮದ ಕಾಂತಿ ಹೆಚ್ಚಲಿದೆ. ವಾರದಲ್ಲಿ ಎರಡರಿಂದ ಮೂರು ದಿನ ಕಡಲೆಕಾಯಿ ಸೇವಿಸಿದರೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ದೂರವಾಗುತ್ತವೆ. ರಕ್ತ ಹೀನತೆ ಇದ್ದವರು ಮರೆಯದೆ ಕಡಲೆ ಬೀಜವನ್ನು ತಿನ್ನಬೇಕು. ಒಟ್ಟಾರೆಯಾಗಿ, ಆರೋಗ್ಯದ ಹಿತದೃಷ್ಟಿಯಿಂದ ಬಡವರ ಬಾದಾಮಿ ಆರೋಗ್ಯದ ಕಣಜ.

ಮಕ್ಕಳಿಗೆ ಪ್ರಯೋಜನ

ಪ್ರತಿ ದಿನ ಬೆಳೆಯುವ ಮಕ್ಕಳು ಹೆಚ್ಚು ಆಟವಾಡುತ್ತಾರೆ. ಅವರಿಗೆ ಪ್ರೋಟೀನ್‌ಯುಕ್ತ ಆಹಾರದ ಅವಶ್ಯಕತೆ ಇರುತ್ತದೆ. ದೇಹದ ಮಾಂಸಖಂಡಗಳ ಬೆಳವಣಿಗೆಗೆ ಕಡ್ಲೆಬೀಜ ಹಾಗೂ ಅದರಿಂದ ತಯಾರಿಸಿದ ತಿನಿಸುಗಳನ್ನು ತಿನ್ನಿಸುವುದು ತುಂಬಾ ಸಹಕಾರಿ. ಮೆದುಳಿನ ಬೆಳವಣಿಗೆಯಿಂದ ಮಕ್ಕಳು ಹೆಚ್ಚು ಚುರುಕಾಗಿಯೂ ಕೂಡ ಇರುತ್ತಾರೆ. ಮುಖ್ಯವಾಗಿ ಮಕ್ಕಳಲ್ಲಿ ಬರುವ ಒಬೆಸಿಟಿ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಪುಟ್ಟ ಮಕ್ಕಳಿಗೆ ಪೀನಟ್‌ ಬಟರ್

ದೋಸೆ, ಚಪಾತಿ‌ ಮೇಲೆ ಪೀನಟ್‌ ಬಟರ್‌ (ಕಡ್ಲೆಬೀಜ ಬೆಣ್ಣೆ) ಅನ್ನು ಸವರಿ ಕೊಡುವುದರಿಂದ ಮಕ್ಕಳು ಖುಷಿಯಿಂದ ತಿನ್ನುತ್ತಾರೆ. ಹಿರಿಯರು ಮತ್ತು ಡಯಟ್‌ ಮಾಡುವವರು ಕಡ್ಲೆಬೀಜವನ್ನು ನೆನೆಸಿ ಸಲಾಡ್‌ ಮಾಡಿಕೊಂಡು ತಿಂದರೆ ಚೆನ್ನಾಗಿರುತ್ತದೆ. ದಿನನಿತ್ಯದ ತಿಂಡಿಗಳ ಜೊತೆಗೆ ಕಡ್ಲೆಬೀಜದ ಚಟ್ನಿಯನ್ನು ಕೂಡ ಮಾಡಿಕೊಂಡು ತಿನ್ನವುದು ಒಳ್ಳೆಯದು.