Thunderstorm: ಗುಡುಗು-ಮಿಂಚು ಬರುವಾಗ ಏನು ಮಾಡಬೇಕು? ಏನು ಮಾಡಬಾರದು?
ಕನ್ನಡ ಸುದ್ದಿ  /  ಜೀವನಶೈಲಿ  /  Thunderstorm: ಗುಡುಗು-ಮಿಂಚು ಬರುವಾಗ ಏನು ಮಾಡಬೇಕು? ಏನು ಮಾಡಬಾರದು?

Thunderstorm: ಗುಡುಗು-ಮಿಂಚು ಬರುವಾಗ ಏನು ಮಾಡಬೇಕು? ಏನು ಮಾಡಬಾರದು?

ಗುಡುಗು ಮಿಂಚು ಬರುವ ಸಂದರ್ಭದಲ್ಲಿ ಮರಗಳ ಕೆಳಗೆ ನಿಲ್ಲಬಾರದು ಎನ್ನುತ್ತಾರೆ. ಏಕೆಂದರೆ ಮರಗಳ ಮೇಲೆ ಹೆಚ್ಚಾಗಿ ಸಿಡಿಲು ಬಡಿಯುತ್ತದೆ.

<p>ಗುಡುಗು ಮಿಂಚಿನ ಅಪಾಯದಿಂದ ತಪ್ಪಿಸುವುದು ಹೇಗೆ?</p>
ಗುಡುಗು ಮಿಂಚಿನ ಅಪಾಯದಿಂದ ತಪ್ಪಿಸುವುದು ಹೇಗೆ?

ಕೆಲವೊಮ್ಮೆ ಮಳೆಯ ಸಂದರ್ಭದಲ್ಲಿ ಅಥವಾ ಮಳೆಗೂ ಮುಂಚಿತವಾಗಿ ಭಾರಿ ಗುಡುಗು ಮಿಂಚಿನ ಆರ್ಭಟವಾಗುತ್ತದೆ. ನಮ್ಮ ರಾಜ್ಯದ ಹಲವು ಭಾಗಗಳಲ್ಲಿ ಇದು ಮಳೆಗಾಲದಲ್ಲಿ ಸಾಮಾನ್ಯ. ಗುಡುಗು ಮಿಂಚು ಬರುವ ಸಂದರ್ಭದಲ್ಲಿ ಮರಗಳ ಕೆಳಗೆ ನಿಲ್ಲಬಾರದು ಎನ್ನುತ್ತಾರೆ. ಏಕೆಂದರೆ ಮರಗಳ ಮೇಲೆ ಹೆಚ್ಚಾಗಿ ಸಿಡಿಲು ಬಡಿಯುತ್ತದೆ. ಇದರಿಂದ ಅಪಾಯ ಜಾಸ್ತಿ. ಭಾರಿ ಪ್ರಮಾಣದ ಸಾವು ನೋವಿಗೂ ಇದು ಕಾರಣವಾಗುತ್ತದೆ. ಇಂತಹ ಹಲವಾರು ಪ್ರಕರಣಗಳ ಬಗ್ಗೆ ನಾವು ಈ ಹಿಂದೆ ಓದಿರುತ್ತೇವೆ.

ಸಿಡಿಲು ಬಡಿದು ಅಪಾರ ಜನ ಹಾಗೂ ಜಾನುವಾರುಗಳು ಸಾವನ್ನಪ್ಪಿರುವ ಪ್ರಕರಣಗಳು ವರದಿಯಾಗಿವೆ. ಹೆಚ್ಚಿನ ಪ್ರಕರಣಗಳು ತೋಟದಲ್ಲಿರುವಾಗ ಅಥವಾ ಮನೆಯಿಂದ ಹೊರಗಿರುವಾಗ ಸಂಭವಿಸುತ್ತವೆ.

ಗುಡುಗು, ಮಿಂಚು ಮತ್ತು ಸುಂಟರಗಾಳಿಗಳು ಹೆಚ್ಚಾಗಿ ಅಮೆರಿಕದ ಫ್ಲೋರಿಡಾದಲ್ಲಿ ಅಪಾಯ ಉಂಟುಮಾಡುತ್ತವೆ. ಅದಕ್ಕಾಗಿಯೇ ಅಲ್ಲಿನ ಜನರು ಹೆಚ್ಚಾಗಿ ಮರದಿಂದ ಮಾಡಿದ ಮನೆಗಳಲ್ಲಿ ವಾಸಿಸುತ್ತಾರೆ. ಕಾರಣ ಮರದಿಂದ ಮಾಡಿದ ಮನೆಗಳು ಗುಡುಗು ಮಿಂಚಿನತ್ತ ಆಕರ್ಷಿತವಾಗುವುದಿಲ್ಲ. ಬಲವಾದ ಗಾಳಿ ಬಂದರೆ, ಬಲವಾದ ವಸ್ತುಗಳು ಕೂಡಾ ಹಾನಿಯಾಗುತ್ತವೆ. ಫ್ಲೋರಿಡಾ ಮತ್ತು ಟೆಕ್ಸಾಸ್‌ನಲ್ಲಿ ಗುಡುಗು ಸಹಿತ ಸಂಭವಿಸುವ ಸಾವುಗಳು ಹೆಚ್ಚು. ಪ್ರತಿ ವರ್ಷ 180 ಜನರು ಸಿಡಿಲಿಗೆ ಬಲಿಯಾಗುತ್ತಾರೆ ಎಂದು ವರದಿಗಳು ತಿಳಿಸುತ್ತವೆ. ಪ್ರತಿ ವರ್ಷ ಸಿಡಿಲು ಬಡಿದವರಲ್ಲಿ ಶೇ.10ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ.

ಅಮೆರಿಕದ ರಾಷ್ಟ್ರೀಯ ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ಗಲ್ಫ್ ಆಫ್ ಮೆಕ್ಸಿಕೋ ಮತ್ತು ಅಟ್ಲಾಂಟಿಕ್ ಸಾಗರದಿಂದ ಬೆಚ್ಚಗಿನ, ತೇವಾಂಶವುಳ್ಳ ಗಾಳಿಯು ಈ ಪ್ರದೇಶಕ್ಕೆ ಹೆಚ್ಚು ಗುಡುಗು ಸಹಿತ ಮಳೆಯನ್ನು ತರುತ್ತದೆ. ಅದಕ್ಕಾಗಿಯೇ ಈ ಸಮಯದಲ್ಲಿ ನೀರಿನಿಂದ ಸಂಪೂರ್ಣವಾಗಿ ದೂರವಿರಲು ಹೇಳಲಾಗುತ್ತದೆ. ಸ್ನಾನ ಮಾಡುವುದು, ಪಾತ್ರೆ ತೊಳೆಯುವುದು, ನೀರಿನಿಂದ ಕೈ ತೊಳೆಯುವುದನ್ನು ಸಿಡಿಲು ಮಿಂಚಿನ ಸಂದರ್ಭದಲ್ಲಿ ಮಾಡಬಾರದು ಎಂದು ಹೇಳಲಾಗುತ್ತದೆ.

ಗುಡುಗು ಮತ್ತು ಮಿಂಚಿನ ಸಮಯದಲ್ಲಿ ಈ ಕೆಲಸ ಮಾಡಬಾರದು

ಸಿಡಿಲು ಮಿಂಚುಗಳು ಪ್ಲಾಸ್ಟಿಕ್ ವಸ್ತುಗಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಮನುಷ್ಯನ ದೇಹದ ಮೇಲೆ ಇದರ ಆಕರ್ಷಣೆ ಹೆಚ್ಚು. ಹೀಗಾಗಿಯೇ ಮನೆಯ ಬಾಲ್ಕನಿ, ಕಿಟಕಿ, ಬಾಗಿಲುಗಳ ಬಳಿಯೂ ನಿಲ್ಲುವುದರಿಂದ ಬೇಡ ಎನ್ನುತ್ತಾರೆ ಹಿರಿಯರು. ಮಿಂಚಿನ ಬೆಳಕು ಕಣ್ಣಿಗೆ ಬಿದ್ದು ದೃಷ್ಟಿ ಹಾನಿಯಾಗುವ ಅಪಾಯವೂ ಇದೆ ಎಂದೂ ಹೇಳಲಾಗುತ್ತದೆ. ಮಿಂಚು ಮತ್ತು ಗುಡುಗುಗಳಿಂದ ಲೋಹವು ಹೆಚ್ಚು ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಇಂತಹ ಸಮಯದಲ್ಲಿ ಕಾಂಕ್ರೀಟ್ ಗೋಡೆಗಳಿಂದ ದೂರವಿರಬೇಕೆಂದು ಅಮೆರಿಕದ ವಿಜ್ಞಾನಿಗಳು ಹೇಳುತ್ತಾರೆ.

ಎಲೆಕ್ಟ್ರಾನಿಕ್ ಸಾಧನಗಳನ್ನು ದೂರ ಇಡಬೇಕು

ಕಂಪ್ಯೂಟರ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳಿಂದ ದೂರವಿರಬೇಕು. ಮನೆಯ ಇಲೆಕ್ಟ್ರಾನಿಕ್‌ ವಸ್ತುಗಳನ್ನು ಆಫ್‌ ಮಾಡಬೇಕು. ಈ ಸಾಧನಗಳು ಮಿಂಚನ್ನು ಆಕರ್ಷಿಸುವ ಶಕ್ತಿ ಹೊಂದಿರುತ್ತವೆ. ಹೀಗಾಗಿ ಮಿಂಚು ಬರುವ ಸಂದರ್ಭದಲ್ಲಿ ಫೋನ್‌ನಲ್ಲಿ ಮಾತನಾಡಬೇಡಿ. ಚಾರ್ಜಿಂಗ್‌ಗೂ ಹಾಕಬೇಡಿ. ರೇಡಿಯೋ, ದೂರದರ್ಶನ, ಯಾವುದೇ ಲೋಹದ ತಂತಿಗಳು, ಕಾಂಕ್ರೀಟ್ ಗೋಡೆಗಳ ಮೂಲಕವೂ ಮಿಂಚು ಹರಿಯುತ್ತದೆ.

ಸಿಡಿಲು ಬಡಿದಾಗ ಅನೇಕರು ಫೋಟೋ ತೆಗೆದುಕೊಳ್ಳಲು ಉತ್ಸುಕರಾಗಿರುತ್ತಾರೆ. ಆದರೆ ನೀವು ಹಾಗೆ ಮಾಡಿದರೆ, ನಿಮ್ಮ ಜೀವಕ್ಕೆ ಅಪಾಯವಿದೆ. ಕಾಂಕ್ರೀಟ್‌ನಿಂದ ಮಾಡಿದ ಕಿಟಕಿ ಬಾಗಿಲುಗಳ ಬಳಿ ಇರಬಾರದು. ಮುಳ್ಳುತಂತಿ ಬೇಲಿಗಳು, ವಿದ್ಯುತ್ ತಂತಿಗಳು, ದೂರವಾಣಿ ಕಂಬಗಳು ಮತ್ತು ಮರಗಳಂತಹ ಎತ್ತರದ ವಸ್ತುಗಳನ್ನು ಮಿಂಚು ತ್ವರಿತವಾಗಿ ಆಕ್ರಮಿಸಿ ಬಡಿಯಬಹುದು. ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ ನೀವು ಸಿಡಿಲಿನ ಅಪಾಯದಿಂದ ಸುರಕ್ಷಿತವಾಗಿರಬಹುದು.

Whats_app_banner