ಭೂಮಿ ಮೇಲೆ ಮನುಷ್ಯರೇ ಇಲ್ಲವಾದರೆ ಏನಾಗುತ್ತೆ? ಇನ್ನು 500 ವರ್ಷಗಳ ನಂತರ ಭೂಮಿ ಹೇಗಾಗಬಹುದು ಎಂಬ ಕಾಲ್ಪನಿಕ ಚಿತ್ರಣ ಇಲ್ಲಿದೆ
ಪರಿಸರದ ಮೇಲೆ ಕಾಳಜಿ ಕಡಿಮೆ ಆದಂತೆಲ್ಲ ಮಾನವನ ಅಂತ್ಯ ಸಮೀಪಿಸಿದೆ ಎಂದೇ ಅರ್ಥ. ಹೀಗೆ ಆಗಿ ಒಂದೊಮ್ಮೆ ಮನುಷ್ಯನೇ ಈ ಭೂಮಿ ಮೇಲೆ ಇಲ್ಲದ ಹಾಗಾದರೆ ಏನಾಗುತ್ತದೆ ಎಂದು ಎಂದಾದರೂ ಊಹೆ ಮಾಡಿ ನೋಡಿದ್ದೀರಾ? ಆ ಕಲ್ಪನಾ ಭೂಲೋಕ ಇಲ್ಲಿದೆ ನೋಡಿ.
ಮನುಷ್ಯ ಭೂಮಿ ಮೇಲೆ ಇರುವುದಕ್ಕೆ ಎಷ್ಟೆಲ್ಲ ಬದಲಾವಣೆಯಾಗಿದೆ. ಭೂಮಿಯಲ್ಲಿ ಮಾನವ ಬದುಕುತ್ತಿದ್ದಾನೆ ಎನ್ನುವುದಕ್ಕಿಂತ ಮಾನವ ಭೂಮಿಯನ್ನು ನಾಶ ಮಾಡುತ್ತಿದ್ದಾನೆ ಎಂದರೆ ತಪ್ಪಾಗಲಾದರು. ಆ ಮಟ್ಟಿಗಿನ ಬದಲಾವಣೆ ಜಗತ್ತಿನಲ್ಲಿ ಬಂದಿದೆ. ಬದಲಾವಣೆ ಯಾವ ರೀತಿ ಆಗುತ್ತಿದೆ ಎಂದರೆ ಅವನದೇ ತಪ್ಪಿನಿಂದ ಮುಂದೊಂದು ದಿನ ಮಾನವನೇ ಭೂಮಿಯ ಮೇಲೆ ಬದುಕಲು ಯೋಗ್ಯನಾಗಿರುವುದಿಲ್ಲ. ಪರಿಸರದ ಮೇಲೆ ಕಾಳಜಿ ಕಡಿಮೆ ಆದಂತೆಲ್ಲ ಮಾನವನ ಅಂತ್ಯ ಸಮೀಪಿಸಿದೆ ಎಂದೇ ಅರ್ಥ. ಹೀಗೆ ಆಗಿ ಒಂದೊಮ್ಮೆ ಮನುಷ್ಯನೇ ಈ ಭೂಮಿ ಮೇಲೆ ಇಲ್ಲದ ಹಾಗಾದರೆ ಏನಾಗುತ್ತದೆ ಎಂದು ಎಂದಾದರೂ ಊಹೆ ಮಾಡಿ ನೋಡಿದ್ದೀರಾ? ಆ ಕಲ್ಪನಾ ಭೂಲೋಕ ಇಲ್ಲಿದೆ ನೋಡಿ.
ಮೊದಲು ಶಬ್ದವೆಲ್ಲ ನಿಂತು ಹೋಗುತ್ತದೆ: ಮಾನವ ಮಾಡಿದ ಶಬ್ಧ ಮಾಲಿನ್ಯ, ಅದರಲ್ಲೂ ಗಾಡಿ, ಕಾರ್ಖಾನೆ, ಮೋಜಿನ ಎಲ್ಲ ಶಬ್ದಗಳು ಸ್ತಬ್ಧವಾಗುತ್ತದೆ. ಯಾವುದೇ ರೀತಿ ಅನವಶ್ಯಕ ಶಬ್ಧಗಳೂ ಇರುವುದಿಲ್ಲ. ಪ್ರಕೃತಿಯಲ್ಲಿ ಎಷ್ಟು ಶಬ್ಧವಿರುತ್ತದೆಯೋ ಅಷ್ಟೇ ಶಬ್ಧ ಇರುತ್ತದೆ.
ಕಟ್ಟಡಗಳ ನಾಶ
ಕಟ್ಟಡಗಳು, ರಸ್ತೆಗಳು ಮತ್ತು ಸೇತುವೆಗಳು ಈ ರೀತಿ ಎಲ್ಲ ಸೌಕರ್ಯಗಳು ಪ್ರಯೋಜನಕ್ಕೆ ಬಾರದೇ ನಿಂತಿರುತ್ತದೆ. ಕತ್ತಲಲ್ಲಿ ಕತ್ತು ಮಾತ್ರ ಇರುತ್ತದೆ. ಯಾಕೆಂದರೆ ಬೆಳಕನ್ನು ಉತ್ಪಾದನೆ ಮಾಡಲು ಸಾಧ್ಯವಾಗುವುದಿಲ್ಲ. ಮಾಡಲು ಮಾನವನೇ ಇರುವುದಿಲ್ಲ. ಕಾಲಾನಂತರದಲ್ಲಿ ಕಟ್ಟಡಗಳೆಲ್ಲ ಕುಸಿಯುತ್ತದೆ. ಪ್ರಕೃತಿಯ ಬಲ ಹೆಚ್ಚುತ್ತಾ ಹೋಗುತ್ತದೆ. ಎಷ್ಟೋ ಜಾಗದಲ್ಲಿ ಸಸ್ಯಗಳು ಬೆಳೆಯಲು ಆರಂಭಿಸುತ್ತದೆ. ರಸ್ತೆಗಳ ಮೇಲೆ ಪ್ರಾಣಿಗಳು ಓಡಾಡಲು ಆರಂಭಿಸುತ್ತವೆ.
ನೀರಿನ ವ್ಯವಸ್ಥೆ: ಎಲ್ಲಾ ಕಡೆ ನೀರಿನ ವ್ಯವಸ್ಥೆ ಇರುವುದಿಲ್ಲ. ವಿದ್ಯುತ್ ಉತ್ಪಾದನೆ ಆಗುವುದಿಲ್ಲ. ಎಲ್ಲೆಲ್ಲಿ ಕೆರೆ ಭಾವಿಗಳಿರುತ್ತವೆಯೋ ಅಲ್ಲಷ್ಟೇ ನೀರಿರುತ್ತದೆ. ಅಣೆಕಟ್ಟುಗಳು ಒಡೆದು ಹೋಗುತ್ತವೆ. ಯಾಕೆಂದರೆ ತುಂಬಾ ದಿನ ಗೇಟ್ ಓಪನ್ ಮಾಡಲು ಮಾನವ ಇರುವುದಿಲ್ಲ. ನಂತರ ಹೆಚ್ಚಿನ ಭಾಗ ನೀರಿನಿಂದಲೇ ಆವರಿಸುತ್ತದೆ.
ಬಾಹ್ಯಾಕಾಶದಲ್ಲಿ ಭೂಮಿಯಿಂದ ಹೋದ ನೌಕೆಗಳು ಯಾವುದೇ ಸಿಗ್ನಲ್ ಇಲ್ಲದೇ ಚಿದ್ರವಾಗಿ ಬೀಳುತ್ತವೆ. ಹೀಗೆ ಇನ್ನೂ ಅನೇಕ ಬದಲಾವಣೆ ಆಗುತ್ತದೆ. ನಿಧಾನವಾಗಿ ಭೂಮಿಯ ಕಟ್ಟಡದ ಮೇಲೆಲ್ಲಾ ಹಸಿರು ಹುಲ್ಲುಗಳು ಬೆಳೆಯುತ್ತದೆ. ಯಾವುದೇ ಮೆಟ್ರೋ ಅಥವಾ ರೈಲು ಸಂಪರ್ಕ್ ಇರುವುದಿಲ್ಲ. ಇಲ್ಲಿ ಒಂದು ಕಾಲ್ಪನಿಕ ಏಐ ಸೃಷ್ಟೀಕೃತ ವಿಡಿಯೋ ಒಂದನ್ನು ನೀಡಲಾಗಿದೆ ಗಮನಿಸಿ.
ಇನ್ನು ಕೆಲವು ಜಾತಿಯ ಸಾಕು ಪ್ರಾಣಿಗಳೆಲ್ಲ ಸಾಯುತ್ತದೆ. ಮಾನವನ ಸೃಷ್ಟಿ ನಿಧಾನವಾಗಿ ಯಾವುದೂ ಇಲ್ಲದಂತೆ ಮಾಯವಾಗುತ್ತದೆ. ಎಲ್ಲೆಡೆಯೂ ಹಸಿರೇ ಆವರಿಸುತ್ತದೆ. ಹಿಮ ಪ್ರದೇಶಗಳಲ್ಲಿ ಹಿಮವೇ ಆವರಿಸುತ್ತದೆ. ಮರುಭೂಮಿಕ ಸೋಲಾರ್ ಪ್ಲಾಂಟ್‌ಗಳೆಲ್ಲವೂ ಮುಚ್ಚಿ ಹೋಗುತ್ತದೆ.
ವಿಭಾಗ