Snacks Recipe: ಗೋಧಿಹಿಟ್ಟು ಈರುಳ್ಳಿ ಬಳಸಿ ತಯಾರಿಸಬಹುದಾದ ರುಚಿಯಾದ ಈರುಳ್ಳಿ ಸ್ಟಫಿಂಗ್ ಪೂರಿ: ಇದು ಸ್ನಾಕ್ಸ್ ಕಮ್ ಬ್ರೇಕ್‌ಫಾಸ್ಟ್
ಪುದೀನಾ ಚಟ್ನಿ ಅಥವಾ ಟೊಮ್ಯಾಟೋ ಸಾಸ್ ಜೊತೆಗೆ ಈ ಈರುಳ್ಳಿ ಸ್ಟಫಿಂಗ್ ಪೂರಿ ತಿನ್ನಬಹುದು. ಇದನ್ನು ಸ್ನಾಕ್ಸ್‌ಗಾದರೂ ತಯಾರಿಸಬಹುದು, ಬ್ರೇಕ್ ಫಾಸ್ಟ್ ಆಗಿ ಕೂಡಾ ತಿನ್ನಬಹುದು.
ಬೆಳಗಿನಿಂದ ಸಂಜೆವರೆಗೂ ನಾವು ಎಷ್ಟೆಲ್ಲಾ ತಿಂಡಿ ತಿನ್ನುತ್ತೇವೆ, ಏನೆಲ್ಲಾ ತಿನ್ನುತ್ತೇವೆ ಎಂದು ನಮಗೇ ಅರಿವು ಇರುವುದಿಲ್ಲ. ಡಯಟ್ ಮಾಡುವವರೂ ಕೂಡಾ ಬೇರೆಯವರ ಒತ್ತಾಯಕ್ಕೆ ಮಣಿದೋ, ತಿಂಡಿಯ ರುಚಿ ನೋಡಲೆಂದೋ ಒಮ್ಮೆಯಾದರೂ ಬಾಯಿ ಆಡಿಸುತ್ತಾರೆ.
ಟ್ರೆಂಡಿಂಗ್ ಸುದ್ದಿ
ಊಟದ ಜೊತೆಗೆ ಸದಾ ಒಂದಿಷ್ಟು ಸ್ನಾಕ್ಸ್ ಇರಲೇಬೇಕು. ಆದರೆ ಕೆಲವೊಂದು ಸ್ನಾಕ್ಸ್‌ಗಳನ್ನು ಸಂಜೆ ಆಗಲೀ, ಬೆಳಗ್ಗೆ ಬ್ರೇಕ್‌ಫಾಸ್ಟ್ ಆಗಿ ಕೂಡಾ ತಯಾರಿಸಿ ತಿನ್ನಬಹುದು. ಅದರಲ್ಲಿ ಈರುಳ್ಳಿ ಸ್ಟಫಿಂಗ್ ಪೂರಿ ಕೂಡಾ ಒಂದು. ಮನೆಯಲ್ಲಿ ಗೋಧಿಹಿಟ್ಟು, ಈರುಳ್ಳಿ ಇದ್ದರೆ ಇದನ್ನು ತಯಾರಿಸೋದು ಸಲೀಸು. ಈ ರುಚಿಯಾದ ತಿನಿಸು ತಯಾರಿಸಲು ಏನೆಲ್ಲಾ ಸಾಮಗ್ರಿ ಬೇಕು, ತಯಾರಿಸುವ ವಿಧಾನ ಹೇಗೆ ತಿಳಿಯೋಣ ಬನ್ನಿ.
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು - 1 ಕಪ್
ಅಚ್ಚ ಖಾರದ ಪುಡಿ - 1/2 ಟೀ ಸ್ಪೂನ್
ಈರುಳ್ಳಿ - 2
ಅರಿಶಿನ - 1 ಟೀ ಸ್ಪೂನ್
ಜೀರ್ಗೆ - 1 ಟೀ ಸ್ಪೂನ್
ಕತ್ತರಿಸಿದ ಕರಿಬೇವು - 1 ಟೇಬಲ್ ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೇಬಲ್ ಸ್ಪೂನ್
ಚಾಟ್ ಮಸಾಲ - ಸ್ವಲ್ಪ
ಅರಿಶಿನ - ಸ್ವಲ್ಪ
ಕಡ್ಲೆಹಿಟ್ಟು - - 1 ಟೇಬಲ್ ಸ್ಪೂನ್
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು - 2 ಟೇಬಲ್ ಸ್ಪೂನ್
ಎಣ್ಣೆ - ಶ್ಯಾಲೋ ಫ್ರೈ ಮಾಡುವಷ್ಟು
ಉಪ್ಪು - ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಒಂದು ಬೌಲ್‌ಗೆ ಗೋಧಿಹಿಟ್ಟು , ಅಚ್ಚ ಖಾರದ ಪುಡಿ, ಅರಿಶಿನ, ಉಪ್ಪು ಸೇರಿಸಿ ಮಿಕ್ಸ್ ಮಾಡಿ .
ಒಂದೆರಡು ಸ್ಪೂನ್ ಎಣ್ಣೆ ಸೇರಿಸಿ ಮತ್ತೆ ಮಿಕ್ಸ್ ಮಾಡಿ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಹಿಟ್ಟು ತಯಾರಿಸಿಕೊಳ್ಳಿ.
ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಜೀರ್ಗೆ, ಕರಿಬೇವು, ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಿರಿ.
ಕೊನೆಗೆ ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ , ಸ್ವಲ್ಪ ಅಚ್ಚ ಖಾರದ ಪುಡಿ, ಚಾಟ್ ಮಸಾಲ, ಅರಿಶಿನ ಸೇರಿಸಿ ಮಿಕ್ಸ್ ಮಾಡಿ
ಕೊನೆಗೆ ಕಡ್ಲೆಹಿಟ್ಟು , ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಪಕಕ್ಕೆ ಇಡಿ.
ಗೋಧಿ ಹಿಟ್ಟನ್ನು ಸಣ್ಣ ಉಂಡೆಗಳನ್ನಾಗಿ ಮಾಡಿ ಲಟ್ಟಿಸಿಕೊಳ್ಳಿ.
ಅದಕ್ಕೆ ಈರುಳ್ಳಿ ಸ್ಟಫಿಂಗ್ ಸೇರಿಸಿ ಸುತ್ತಲೂ ನೀಟಾಗಿ ಫೋಲ್ಡ್ ಮಾಡಿ.
ಮತ್ತೆ ನಿಧಾನವಾಗಿ ಪೂರಿ ಆಕಾರಕ್ಕೆ ಲಟ್ಟಿಸಿ, ಈ ಪೂರಿಗಳನ್ನು ಶ್ಯಾಲೋ ಫ್ರೈ ಮಾಡಿ, ಇಷ್ಟವಾದರೆ ಡೀಪ್ ಫ್ರೈ ಮಾಡಬಹುದು.
ಪುದೀನಾ ಚಟ್ನಿ ಅಥವಾ ಟೊಮ್ಯಾಟೋ ಸಾಸ್ ಜೊತೆಗೆ ಈ ಟೇಸ್ಟಿ ತಿಂಡಿಯನ್ನು ಎಂಜಾಯ್ ಮಾಡಿ.
ಮಕ್ಕಳು ಕೂಡಾ ಈ ತಿಂಡಿಯನ್ನು ಇಷ್ಟಪಟ್ಟು ತಿನ್ನುತ್ತಾರೆ, ಈರುಳ್ಳಿ ಬದಲಿಗೆ ನಿಮಗಿಷ್ಟವಾದ ತರಕಾರಿಗಳನ್ನು ಕೂಡಾ ಸ್ಟಫಿಂಗ್‌ಗೆ ಸೇರಿಸಿಕೊಳ್ಳಬಹುದು.
ವಿಭಾಗ