ಕನ್ನಡ ಸುದ್ದಿ  /  Lifestyle  /  Which Oils Are Good For Cooking

Best Oil for Cooking: ಅಡುಗೆಗೆ ಯಾವ ಎಣ್ಣೆ ಸೂಕ್ತ, ಯಾವುದು ಅಪಾಯಕಾರಿ... ಇಲ್ಲಿದೆ ಒಂದಿಷ್ಟು ಮಾಹಿತಿ

ಈ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಆಲಿವ್ ಎಣ್ಣೆಯಲ್ಲಿನ ಪ್ರಾಥಮಿಕ ಕೊಬ್ಬಿನಾಮ್ಲವು ಒಲಿಯಿಕ್ ಆಮ್ಲ ಎಂದು ಕರೆಯಲ್ಪಡುವ ಮೊನೊಸಾಚುರೇಟೆಡ್ ಕೊಬ್ಬಿನ ಅಂಶ ಹೊಂದಿದೆ.

ಆರೋಗ್ಯಕರ ಅಡುಗೆ ಎಣ್ಣೆ
ಆರೋಗ್ಯಕರ ಅಡುಗೆ ಎಣ್ಣೆ (PC: Freepik)

ಎಣ್ಣೆ ಇಲ್ಲದೆ ಯಾವ ಅಡುಗೆ ಕೂಡಾ ರುಚಿ ಇರುವುದಿಲ್ಲ. ಒಗ್ಗರಣೆ ಮಾಡಲು ಸ್ವಲ್ಪ ಎಣ್ಣೆಯಾದ್ರೂ ಬೇಕೇ ಬೇಕು. ಇನ್ನೂ ಕೆಲವೊಂದು ಅಡುಗೆಗಳು ಎಣ್ಣೆ ಇಲ್ಲದಿದ್ದರೆ ಮಾಡಲು ಸಾಧ್ಯವೇ ಆಗುವುದಿಲ್ಲ. ಆದರೆ ಅಡುಗೆ ಎಣ್ಣೆಯ ಆಯ್ಕೆಯಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಬಹಳ ಅವಶ್ಯಕ. ಯಾವ ಎಣ್ಣೆ ಬಳಸಬೇಕು? ಯಾವುದನ್ನು ಬಳಸಬಾರದು. ಯಾವ ಎಣ್ಣೆಗಳು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಆರೋಗ್ಯಕರ ಅಡುಗೆ ಎಣ್ಣೆಗಳು

ತುಪ್ಪ: ತುಪ್ಪವು ಭಾರತೀಯ ಪಾಕಪದ್ಧತಿಯ ಪ್ರಮುಖ ಭಾಗವಾಗಿದೆ. ಇದು ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಎ, ಇ, ಕೆ ಮತ್ತು ಬ್ಯುಟರಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆ ಮತ್ತು ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕೆಲವೊಂದು ತಿಂಡಿಗಳನ್ನು ಕರಿಯಲು ಹಾಗೂ ಬಹುತೇಕ ಸಿಹಿ ಪದಾರ್ಥಗಳನ್ನು ತಯಾರಿಸಲು ತುಪ್ಪ ಬೇಕೇ ಬೇಕು. ಒಗ್ಗರಣೆಗೆ ಕೂಡಾ ಬಹಳ ಜನರು ಎಣ್ಣೆ ಬದಲಿಗೆ ತುಪ್ಪ ಬಳಸುತ್ತಾರೆ.

ಸಾಸಿವೆ ಎಣ್ಣೆ: ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸಾಸಿವೆ ಎಣ್ಣೆ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. MUFA, PUFA ಮತ್ತು ಆಲ್ಫಾ-ಲಿನೋಲೆನಿಕ್ ಆಮ್ಲವನ್ನು ಸಹ ಒಳಗೊಂಡಿದೆ. ನಿಮ್ಮ ಆಹಾರದಲ್ಲಿ ಸಾಸಿವೆ ಎಣ್ಣೆಯನ್ನು ಸೇರಿಸುವುದು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಪ್ರಯೋಜನಕಾರಿಯಾಗಿದೆ. ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಇ ಅಂಶ ಹೆಚ್ಚಾಗಿದೆ. ಇದು ಚರ್ಮದ ಆರೋಗ್ಯವನ್ನು ಕೂಡಾ ಸುಧಾರಿಸುತ್ತದೆ. ಕೂದಲಿನ ಬೆಳವಣಿಗೆಗೆ ಕೂಡಾ ಸಹಾಯಕಾರಿ.

ಆಲಿವ್ ಎಣ್ಣೆ: ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಆಲಿವ್ ಎಣ್ಣೆಯಲ್ಲಿನ ಪ್ರಾಥಮಿಕ ಕೊಬ್ಬಿನಾಮ್ಲವು ಒಲಿಯಿಕ್ ಆಮ್ಲ ಎಂದು ಕರೆಯಲ್ಪಡುವ ಮೊನೊಸಾಚುರೇಟೆಡ್ ಕೊಬ್ಬಿನ ಅಂಶ ಹೊಂದಿದೆ. ಇದು ಕ್ಯಾನ್ಸರ್ ವಿರೋಧಿ, ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ ಎಂದು ಅಧ್ಯಯನಗಳು ತೋರಿಸಿವೆ. ಆಲಿವ್ ಎಣ್ಣೆಯು ಆಂಟಿಆಕ್ಸಿಡೆಂಟ್ ಕಾಂಪೌಂಡ್ಸ್ ಒಲಿಯೊಕಾಂಥಾಲ್ ಮತ್ತು ಒಲಿಯುರೊಪಿನ್ ಹೊಂದಿದೆ.

ಅನಾರೋಗ್ಯಕರ ಅಡುಗೆ ಎಣ್ಣೆಗಳು

ಕ್ಯಾನೋಲಾ ಎಣ್ಣೆ: ಇದನ್ನು ಹೆಚ್ಚಿನ ಶಾಖದ ಮೂಲಕ ಸಂಸ್ಕರಿಸಲಾಗುತ್ತದೆ. ಬ್ಲೀಚ್‌ಗಳು, ರೂಮ್ ಸ್ಪ್ರೇಗಳು, ಸುಗಂಧ ದ್ರವ್ಯಗಳಂತಹ ಹೆಕ್ಸೇನ್‌ಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ. ಆದರೆ ಇದು ಅಡುಗೆಗೆ ಸೂಕ್ತವಲ್ಲ.

ಸೂರ್ಯಕಾಂತಿ ಎಣ್ಣೆ: ಇದು ಒಮೆಗಾ -6 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಈ ಕೊಬ್ಬಿನಾಮ್ಲಗಳು ದೇಹಕ್ಕೆ ಬಹಳ ಅವಶ್ಯಕ. ಆದರೆ ಒಮೆಗಾ -3 ನೊಂದಿಗೆ ಸಮತೋಲನಗೊಳಿಸದೆ ಹೆಚ್ಚಿನ ಒಮೆಗಾ -6 ಅಂಶವಿರುವ ಎಣ್ಣೆಯನ್ನು ಬಳಸುವುದರಿಂದ ದೇಹದಲ್ಲಿ ಹೆಚ್ಚಿನ ಉರಿಯೂತವನ್ನು ಉಂಟುಮಾಡಬಹುದು. ಅಲ್ಲದೆ, ಸೂರ್ಯಕಾಂತಿ ಎಣ್ಣೆಯನ್ನು ಹೆಚ್ಚಿನ ಶಾಖದಲ್ಲಿ ಬೇಯಿಸಿದಾಗ ಆಲ್ಡಿಹೈಡ್‌ನಂತಹ ವಿಷಕಾರಿ ಪದಾರ್ಥಗಳು ಉತ್ಪಾದನೆ ಆಗುತ್ತದೆ.

ಪಾಮ್ ಆಯಿಲ್: ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಪಾಲ್ಮಿಟಿಕ್ ಆಮ್ಲವು ಸ್ಯಾಚುರೇಟೆಡ್ ಕೊಬ್ಬಿನಾಮ್ಲವಾಗಿದ್ದು ಅದು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಆದ್ದರಿಂದಲೇ ಅಡುಗೆ ಎಣ್ಣೆಯನ್ನು ಖರೀದಿಸುವಾಗ ನೀವು ಬಹಳ ಜಾಗರೂಕರಾಗಿರಬೇಕು. ನಿಮಗೆ ಹಾಗೂ ನಿಮ್ಮ ಮನೆಯವರಿಗೆ ಹೊಂದಿಕೊಳ್ಳುವ ಸೂಕ್ತ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ಮರೆಯಬೇಡಿ.

ವಿಭಾಗ