ಕನ್ನಡ ಸುದ್ದಿ  /  ಜೀವನಶೈಲಿ  /  White Pulao Recipe: ವೈಟ್ ಪುಲಾವ್ ಯಾರಿಗೆ ಇಷ್ಟ ಆಗಲ್ಲ ಹೇಳಿ, ಮಕ್ಕಳೇನು, ದೊಡ್ಡವರೂ ಇಷ್ಟಪಟ್ಟು ತಿಂತಾರೆ- ಸಿಂಪಲ್‌ ರೆಸಿಪಿ

White Pulao Recipe: ವೈಟ್ ಪುಲಾವ್ ಯಾರಿಗೆ ಇಷ್ಟ ಆಗಲ್ಲ ಹೇಳಿ, ಮಕ್ಕಳೇನು, ದೊಡ್ಡವರೂ ಇಷ್ಟಪಟ್ಟು ತಿಂತಾರೆ- ಸಿಂಪಲ್‌ ರೆಸಿಪಿ

ವೈಟ್ ಪುಲಾವ್ ರೆಸಿಪಿ (White Pulao recipe): ಮಕ್ಕಳ ಲಂಚ್ ಬಾಕ್ಸ್ ಗೆ ಏನು ಹಾಕುವುದು ಎಂಬುದೇ ಬಹುತೇಕ ಹೆಂಗಳೆಯರ ಚಿಂತೆ. ವೈಟ್ ಪುಲಾವ್ ಒಮ್ಮೆ ಟ್ರೈ ಮಾಡಿ ನೋಡಬಹುದು. ವೈಟ್ ಪುಲಾವ್ ಯಾರಿಗೆ ಇಷ್ಟ ಆಗಲ್ಲ ಹೇಳಿ, ಮಕ್ಕಳೇನು, ದೊಡ್ಡವರೂ ಇಷ್ಟಪಟ್ಟು ತಿಂತಾರೆ- ಸಿಂಪಲ್‌ ರೆಸಿಪಿ ಇಲ್ಲಿದೆ. (ಬರಹ- ಪ್ರಿಯಾಂಕಾ, ಬೆಂಗಳೂರು)

White Pulao Recipe: ವೈಟ್ ಪುಲಾವ್ ಯಾರಿಗೆ ಇಷ್ಟ ಆಗಲ್ಲ ಹೇಳಿ, ಮಕ್ಕಳೇನು, ದೊಡ್ಡವರೂ ಇಷ್ಟಪಟ್ಟು ತಿಂತಾರೆ- ಸಿಂಪಲ್‌ ರೆಸಿಪಿ
White Pulao Recipe: ವೈಟ್ ಪುಲಾವ್ ಯಾರಿಗೆ ಇಷ್ಟ ಆಗಲ್ಲ ಹೇಳಿ, ಮಕ್ಕಳೇನು, ದೊಡ್ಡವರೂ ಇಷ್ಟಪಟ್ಟು ತಿಂತಾರೆ- ಸಿಂಪಲ್‌ ರೆಸಿಪಿ

ವೈಟ್ ಪುಲಾವ್ ರೆಸಿಪಿ (White Pulao recipe): ಬೆಳಗ್ಗೆ ತಿಂಡಿ ಏನಪ್ಪಾ ಮಾಡುವುದು ಎಂಬುದು ಬಹುತೇಕ ಎಲ್ಲಾ ಹೆಂಗಳೆಯರ ಚಿಂತೆ. ಅದರಲ್ಲೂ ಈ ಮಕ್ಕಳ ಲಂಚ್ ಬಾಕ್ಸ್ ಗೆ ಏನು ಹಾಕುವುದು ಎಂಬುವುದೇ ದೊಡ್ಡ ಚಿಂತೆಯಾಗಿರುತ್ತದೆ. ಹಾಗಿದ್ದರೆ ನೀವು ವೈಟ್ ಪಲಾವ್ ಅನ್ನು ಟ್ರೈ ಮಾಡಬಹುದು. ಮಕ್ಕಳಿಗೂ ಏನೋ ಡಿಫರೆಂಟ್ ಆಗಿದೆ ಎಂದೆನಿಸಿ ಖಂಡಿತಾ ಇಷ್ಟಪಟ್ಟು ತಿನ್ನುತ್ತಾರೆ.

ತರಕಾರಿ ಪಲಾವ್ ಫೈಬರ್‌ನ ಸಮೃದ್ಧ ಮೂಲವಾಗಿದ್ದು, ಹಲವು ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಬೀನ್ಸ್, ಪನೀರ್, ಬಟಾಣಿ ಮತ್ತು ಕ್ಯಾರೆಟ್‌ಗಳಂತಹ ವಿವಿಧ ತರಕಾರಿಗಳನ್ನು ಒಳಗೊಂಡಿದೆ. ವೈಟ್ ಪುಲಾವ್ ಪಾಕವಿಧಾನವು ಪರ್ಷಿಯನ್ ಪಾಕಪದ್ಧತಿಯಿಂದ ಪ್ರಭಾವಿತವಾಗಿದ್ದು, ಇದನ್ನು ಪಿಲಾಫ್ ರೈಸ್ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.

ಪುಲಾವ್ ತಿನ್ನೋ ಮೊದಲು ಒಂದಿಷ್ಟು ಇತಿಹಾಸ

ಪಿಲಾಫ್, ಪಿಲಾವ್ ಅಥವಾ ಪಲಾವ್, ಪುಲಾವ್‌ ಎಂಬುದು ಒಂದು ಅಕ್ಕಿಯ ಭಕ್ಷ್ಯವಾಗಿದೆ. ಇದರ ಇತಿಹಾಸವು ಬಿರಿಯಾನಿಗಿಂತಲೂ ಹಳೆಯದು. ಬಿರಿಯಾನಿಗಿಂತ ಮೊದಲು ಹುಟ್ಟಿದ್ದು ಪಲಾವ್ ಎಂದು ನಂಬಲಾಗಿದೆ. ಮಧ್ಯಪ್ರಾಚ್ಯದ ದೇಶದಲ್ಲಿ ಹುಟ್ಟಿಕೊಂಡ ಈ ಭಕ್ಷ್ಯ ಪ್ರಪಂಚದ ಇತರ ಭಾಗಗಳಿಗೆ ಹರಡಿತು ಬಂದಿತು. ಪಲಾವ್ ಎಂಬ ಪದವು ಪರ್ಶಿಯನ್ ಪದ 'ಪಿಲಾಫ್' ಅಥವಾ 'ಪಲ್ಲಾವೊ'ದಿಂದ ಬಂದಿದೆ. ಇಂದು ಭಾರತೀಯರ ನೆಚ್ಚಿನ ಭಕ್ಷ್ಯವಾಗಿರುವ ಈ ಪಲಾವ್ ವಿದೇಶದ್ದು ಎಂಬುದನ್ನೇ ಮರೆಸಿದಂತಿದೆ.

ಟ್ರೆಂಡಿಂಗ್​ ಸುದ್ದಿ

ವೆಜ್ ಪಲಾವ್ ಎಂಬುದು ಪ್ರಸಿದ್ಧ ಮಾಂಸದ ಪಲಾವ್‌ (ಬಿರಿಯಾನಿ)ಯ ರೂಪಾಂತರವಾಗಿದೆ. ಇದನ್ನು ಅಕ್ಕಿ, ಮಿಶ್ರ ತರಕಾರಿಗಳು ಮತ್ತು ಸೊಪ್ಪುಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಈ ಖಾದ್ಯವನ್ನು ಸಾಮಾನ್ಯವಾಗಿ ಊಟದ ಅಥವಾ ಟಿಫಿನ್ ಬಾಕ್ಸ್‌ನಂತೆ ತಯಾರಿಸಲಾಗುತ್ತದೆ. ರಾಯಿತಾ ಜೊತೆ ಇದನ್ನು ಸವಿದರೆ ಬಹಳ ರುಚಿಕರವಾಗಿರುತ್ತದೆ.

ವೈಟ್ ಪುಲಾವ್ ರೆಸಿಪಿ; ತಯಾರಿಸುವುದು ಹೀಗೆ

ಈ ನಿರ್ದಿಷ್ಟ ವೈಟ್‌ ಪಲಾವ್ ಅನ್ನು ಹೆಚ್ಚಾಗಿ ಮದುವೆಗಳು ಅಥವಾ ಔತಣಕೂಟಗಳಂತಹ ಶುಭ ಸಮಾರಂಭಗಳಲ್ಲಿ ತಯಾರಿಸಲಾಗುತ್ತದೆ. ಇದನ್ನು ತಯಾರಿಸುವ ವಿಧಾನ ತುಂಬಾನೇ ಸಿಂಪಲ್. ಅದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ...

ಬೇಕಾಗುವ ಪದಾರ್ಥಗಳು

ಬಾಸ್ಮತಿ ಅಕ್ಕಿ - 1 ಕಪ್

ಆಲೂಗಡ್ಡೆ - 2

ಕ್ಯಾರೆಟ್ - 2

ಬೀನ್ಸ್ - 50 ಗ್ರಾಂ

ಹಸಿರು ಬಟಾಣಿ - 1/2 ಕಪ್

ಈರುಳ್ಳಿ - 1

ಟೊಮ್ಯಾಟೊ - 1

ಹಸಿರು ಮೆಣಸಿನಕಾಯಿ - 5

ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಟೀ ಚಮಚ

ಜೀರಿಗೆ - 1 ಚಮಚ

ದಾಲ್ಚಿನ್ನಿ - 1

ಲವಂಗ - 3

ಏಲಕ್ಕಿ - 3

ಬಿರಿಯಾನೆ ಎಲೆ - 1

ಎಣ್ಣೆ - ಅಗತ್ಯ ಪ್ರಮಾಣ

ತುಪ್ಪ - ಅಗತ್ಯ ಪ್ರಮಾಣ

ಕೊತ್ತಂಬರಿ ಸೊಪ್ಪು - ಸ್ವಲ್ಪ

ಉಪ್ಪು - ರುಚಿಗೆ ತಕ್ಕಷ್ಟು

ಪಾಕವಿಧಾನ:

ಮೊದಲು ಬಾಸ್ಮತಿ ಅಕ್ಕಿಯನ್ನು ಎರಡು ಅಥವಾ ಮೂರು ಬಾರಿ ಚೆನ್ನಾಗಿ ತೊಳೆದು ಸುಮಾರು 30 ನಿಮಿಷಗಳ ಕಾಲ ನೆನೆಸಿಡಿ. ಬಳಿಕ ಬಾಣಲೆಯನ್ನು ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆ ಮತ್ತು ತುಪ್ಪ ಸೇರಿಸಿ ಬಿಸಿ ಮಾಡಿ. ನಂತರ ಇದಕ್ಕೆ ಬಿರಿಯಾನೆ ಎಲೆ, ಜೀರಿಗೆ, ಲವಂಗ, ದಾಲ್ಚಿನ್ನಿ ಮತ್ತು ಏಲಕ್ಕಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ನುಣ್ಣಗೆ ಕತ್ತರಿಸಿದ ದೊಡ್ಡ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಈರುಳ್ಳಿ ಸ್ವಲ್ಪ ಬೆಂದ ನಂತರ, ಕತ್ತರಿಸಿದ ಟೊಮ್ಯಾಟೊ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ, ಮಧ್ಯಮ ಉರಿಯಲ್ಲಿ 2 ನಿಮಿಷಗಳ ಕಾಲ ಫ್ರೈ ಮಾಡಿ.

ಬಳಿಕ ಸಣ್ಣಗೆ ಕತ್ತರಿಸಿದ ಆಲೂಗಡ್ಡೆ, ಕ್ಯಾರೆಟ್, ಬೀನ್ಸ್, ಹಸಿರು ಬಟಾಣಿ ಮತ್ತು ಚಿಟಿಕೆ ಉಪ್ಪು ಸೇರಿಸಿ, ಒಂದು ಅಥವಾ ಎರಡು ನಿಮಿಷ ಫ್ರೈ ಮಾಡಿ. ಆ ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿರು ವಾಸನೆ ಹೋಗುವವರೆಗೆ ಚೆನ್ನಾಗಿ ಫ್ರೈ ಮಾಡಿ. ಬಳಿಕ ನೆನೆಸಿಟ್ಟ ಬಾಸ್ಮತಿ ಅಕ್ಕಿಯನ್ನು ಮಿಕ್ಸ್ ಮಾಡಿ. 1 ಕಪ್ ಬಾಸ್ಮತಿ ಅಕ್ಕಿಗೆ 2 ಕಪ್ ನೀರು ಹಾಕಿ ಅದು ಕುದಿಯುವ ವೇಳೆಗೆ ಕುಕ್ಕರ್ ಮುಚ್ಚಳ ಮುಚ್ಚಿ, ಮಧ್ಯಮ ಉರಿಯಲ್ಲಿ ಬೇಯಿಸಿ. ಒಂದು ವಿಶಿಲ್ ಹೊಡೆದ ಬಳಿಕ ಸ್ಟೌವ್ ಆಫ್ ಮಾಡಿ.

ಕುಕ್ಕರ್‌ ಒಳಗಿನ ಹಬೆಯ ಒತ್ತಡ ಕಡಿಮೆಯಾದ ನಂತರ ಮುಚ್ಚಳ ತೆಗೆದರೆ ರುಚಿಕರವಾದ ವೈಟ್ ಪಲಾವ್ ಬಡಿಸಲು ಸಿದ್ಧವಾಗಿರುತ್ತದೆ. ಅಂತಿಮವಾಗಿ ಇದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ರಾಯಿತಾ ಜೊತೆ ಸವಿಯಿರಿ.

(ಬರೆಹ- ಪ್ರಿಯಾಂಕಾ, ಬೆಂಗಳೂರು)

ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್‌ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ಲೈಫ್‌ಸ್ಟೈಲ್ ವಿಭಾಗ ನೋಡಿ.