Radha Krishna love: ಜಗತ್ತಿಗೇ ಹೆಸರಾದ ರಾಧಾ ಕೃಷ್ಣರ ಪ್ರೀತಿ ವಿರಹದಲ್ಲಿ ಕೊನೆಯಾಗಿದ್ದು ಯಾಕೆ? ರಾಧೆಯ ಸಾವಿಗೆ ಇಲ್ಲಿದೆ ಕಾರಣ-why did radha and krishna separated how radha died in real life interesting story is here smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Radha Krishna Love: ಜಗತ್ತಿಗೇ ಹೆಸರಾದ ರಾಧಾ ಕೃಷ್ಣರ ಪ್ರೀತಿ ವಿರಹದಲ್ಲಿ ಕೊನೆಯಾಗಿದ್ದು ಯಾಕೆ? ರಾಧೆಯ ಸಾವಿಗೆ ಇಲ್ಲಿದೆ ಕಾರಣ

Radha Krishna love: ಜಗತ್ತಿಗೇ ಹೆಸರಾದ ರಾಧಾ ಕೃಷ್ಣರ ಪ್ರೀತಿ ವಿರಹದಲ್ಲಿ ಕೊನೆಯಾಗಿದ್ದು ಯಾಕೆ? ರಾಧೆಯ ಸಾವಿಗೆ ಇಲ್ಲಿದೆ ಕಾರಣ

Radha Krishna love: ಅತ್ಯಂತ ಮಧುರವಾದ ಭಾವನೆ ಎಂದರೆ ಅದು ಪ್ರೀತಿ ಎಂಬುದನ್ನು ಜಗತ್ತಿಗೆ ಸಾರಿದವರು ರಾಧಾಕೃಷ್ಣರು. ಆದರೆ ಕೊನೆಗೂ ಒಂದಾಗದೇ ಇವರಿಬ್ಬರ ವಿರಹಕ್ಕೆ ಕಾರಣವಾದದ್ದಾರು ಏನು ಎಂಬ ಪ್ರಶ್ನೆ ಹಲವರಲ್ಲಿದೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.

ರಾಧಾ ಕೃಷ್ಣ ಲವ್ ಸ್ಟೋರಿ
ರಾಧಾ ಕೃಷ್ಣ ಲವ್ ಸ್ಟೋರಿ

ಪುರಾತನ ಹಿಂದೂ ಧರ್ಮಗ್ರಂಥಗಳಲ್ಲಿ, ರಾಧಾ ಕೃಷ್ಣರನ್ನು ಪ್ರೇಮಿಗಳು ಎಂದೇ ಕರೆಯಲಾಗುತ್ತದೆ. ಇಂದಿಗೂ ಇವರಿಬ್ಬರು ಎಲ್ಲರಿಗೂ ನೆನಪಾಗುವುದು ಪ್ರೇಮಿಗಳಾಗಿಯೇ.ಅವರ ಪ್ರೀತಿ, ನಿಸ್ವಾರ್ಥ, ಮಧುರ ಸಂಬಂಧ ಇವೆಲ್ಲವನ್ನೂ ಹೊಗಳಲಾಗುತ್ತದೆ. ಆದರೆ ಕೊನೆಯಲ್ಲಿ ಕೃಷ್ಣ ವಿರಹಿಯಾಗುತ್ತಾನೆ. ರಾಧೆ ಕೃಷ್ಣನಿಗೆ ಸಿಗೋದೇ ಇಲ್ಲ. ಆದರೆ ಅನೇಕರಿಗೆ ಒಂದು ಅನುಮಾನವಿದೆ. ಕೃಷ್ಣನು ರಾಧೆಯನ್ನು ಏಕೆ ಮದುವೆಯಾಗಲಿಲ್ಲ? ಏಕೆ ಅವರು ಪ್ರತ್ಯೇಕವಾಗಿ ಮದುವೆಯಾದರು? ಎಂದು. ಭಗವಾನ್ ಕೃಷ್ಣ ಹಲವರನ್ನು ಮದುವೆಯಾದನು. ಆದರೆ ರಾಧಾಳನ್ನು ಯಾಕೆ ಆಗಿಲ್ಲ ಎಂಬ ಪ್ರಶ್ನೆ ಬರುತ್ತದೆ.

ದುರಂತದಲ್ಲಿ ಇವರ ಪ್ರೇಮ ಕೊನೆಯಾಗಿದೆ. ರಾಧೆಯನ್ನು ಲಕ್ಷ್ಮಿ ದೇವಿಯ ಅವತಾರವೆಂದೂ ಹೇಳಲಾಗುತ್ತದೆ. ಆದರೆ ಇದಕ್ಕೆ ಸ್ಪಷ್ಟ ಪುರಾವೆಗಳಿಲ್ಲ. ಲಕ್ಷ್ಮಿ ದೇವಿಯು ವೃಂದಾವನದಲ್ಲಿ ರಾಧೆಯಾಗಿ ಮತ್ತು ಮಥುರಾದಲ್ಲಿ ರುಕ್ಮಿಣಿಯಾಗಿ ಅವತರಿಸಿದಳು ಮತ್ತು ಇಬ್ಬರೂ ಒಂದೇ ಎಂದು ಹಲವರು ನಂಬುತ್ತಾರೆ.

ಕೃಷ್ಣ ತನ್ನ ಎಂಟನೇ ವರ್ಷದಲ್ಲಿ ಮೊದಲ ಬಾರಿಗೆ ರಾಧೆಯನ್ನು ನೋಡಿದನು ಎಂದು ಹೇಳಲಾಗುತ್ತದೆ. ಅಂದಿನಿಂದ ಇಬ್ಬರೂ ತುಂಬಾ ಆಪ್ತರಾದರು. ಅವರ ಪ್ರೀತಿಯನ್ನು ದೈವಿಕ ಪ್ರೀತಿ ಎಂದು ಕರೆಯಲಾಗುತ್ತದೆ. ಕಪ್ಪು ಕೃಷ್ಣನಿಗೆ ಹಾಲಿನ ನೊರೆಯಂತೆ ಮೈಬಣ್ಣದಿಂದ ಹೊಳೆಯುತ್ತಿರುವ ರಾಧೆಯನ್ನು ನೋಡಿ ತುಂಬಾ ಸಂತೋಷವಾಗಿತ್ತು. ಕೃಷ್ಣ ಕೊಳಲು ನುಡಿಸಿದರೆ ರಾಧಾ ಭಾವಪರವಶಳಾದಳು. ವೇಣು ರಾಧೆಯನ್ನು ಕೃಷ್ಣನ ಹತ್ತಿರ ಕರೆತಂದಿತು. ಕೃಷ್ಣನು ರಾಧೆಯ ಸೌಂದರ್ಯಕ್ಕೆ ಮಾರುಹೋದರೆ, ರಾಧೆಯು ಕೃಷ್ಣನ ಕೊಳಲು ವಾದನಕ್ಕೆ ಮಾರುಹೋದಳು.

ರಾಧೆಯ ಮನಸ್ಸು ಸದಾ ಕೃಷ್ಣನ ಬಗ್ಗೆಯೇ ಯೋಚಿಸುತ್ತಿತ್ತು. ಕೃಷ್ಣನೂ ರಾಧೆಯನ್ನು ತುಂಬಾ ಪ್ರೀತಿಸುತ್ತಿದ್ದ. ಕಂಸನಿಂದ ಮಲ್ಲಯುದ್ಧಕ್ಕೆ ಆಹ್ವಾನ ಬಂದಿರುತ್ತದೆ. ಆಗ ಕೃಷ್ಣ ಹೋಗಲೇಬೇಕಾಗಿ ಬಂತು. ಆದರೆ ಎಲ್ಲರೂ ಅವನನ್ನು ತಡೆಯಲು ಪ್ರಯತ್ನ ಮಾಡಿದರು. ಆದರೆ ಅವನು ಕರ್ತವ್ಯನಿಷ್ಠನಾಗಿ ಹೋಗುತ್ತಾನೆ.

ರಾಧಾ ಯಾರನ್ನು ಮದುವೆಯಾದಳು?

ಕೃಷ್ಣನು ಹೋದ ನಂತರ, ರಾಧಾ ತನ್ನ ಕುಟುಂಬಕ್ಕಾಗಿ ಅಯಾನ್ ಎಂಬ ವ್ಯಕ್ತಿಯನ್ನು ಮದುವೆಯಾಗುತ್ತಾಳೆ. ಆದರೂ ಆಕೆ ತನ್ನ ವೈವಾಹಿಕ ಕರ್ತವ್ಯಗಳನ್ನು ಪೂರೈಸದೆ ಕೃಷ್ಣನನ್ನು ಆರಾಧಿಸುತ್ತಿದ್ದಳು ಎಂದು ಹೇಳಲಾಗುತ್ತದೆ. ರಾಧೆಯ ಮದುವೆಯ ಸುದ್ದಿಯನ್ನು ಕೇಳಿದ ಕೃಷ್ಣನಿಗೆ ತುಂಬಾ ದುಃಖವಾಗುತ್ತದೆ. ರಾಧೆಯ ದಾಂಪತ್ಯ ಜೀವನ ಚೆನ್ನಾಗಿರಲಿ ಮತ್ತು ಅವಳು ಸುಖವಾಗಿರಲಿ ಎಂದು ಕೃಷ್ಣ ಬಯಸುತ್ತಾನೆ.

ರಾಧಾ ಸಾವು

ಮನದಲ್ಲಿ ಕೃಷ್ಣನನ್ನು ತುಂಬಿಕೊಂಡ ರಾಧಾ ವೈವಾಹಿಕ ಜೀವನವನ್ನು ಆನಂದಿಸಲಾರಳು. ಅವಳು ಸನ್ಯಾಸಿನಿಯಾಗಲು ಬಯಸುತ್ತಾಳೆ. ಆಕೆಯ ಆರೋಗ್ಯ ಈಗಾಗಲೇ ಹದಗೆಟ್ಟಿರುತ್ತದೆ. ಅದನ್ನು ತಿಳಿದ ಕೃಷ್ಣ ರಾಧೆಯನ್ನು ಭೇಟಿಯಾಗಲು ಬರುತ್ತಾನೆ. ಅವಳ ಕೊನೆಯ ಕ್ಷಣಗಳು ಕೃಷ್ಣನ ಮಡಿಲಲ್ಲಿ ಕಳೆಯುತ್ತದೆ. ರಾಧಾ, ಕೃಷ್ಣನ ಮಡಿಲಲ್ಲಿ ತನ್ನ ತಲೆಯನ್ನಿಟ್ಟು, ತನಗಾಗಿ ಕೊಳಲು ನುಡಿಸಲು ಕೇಳುತ್ತಾಳೆ. ರಾಧಾ ಆ ವೇಣು ಶಬ್ದವನ್ನು ಕೇಳುತ್ತಾ ಕೊನೆಯುಸಿರೆಳೆದಳು ಎನ್ನಲಾಗಿದೆ. ರಾಧೆ ಸತ್ತಿದ್ದಾಳೆಂದು ಅರಿತ ಕೃಷ್ಣನಿಗೆ ಇನ್ನು ಕೊಳಲಿನ ಅವಶ್ಯಕತೆಯಿಲ್ಲ ಎಂದೆನಿಸಿ ಅದನ್ನು ಒಡೆದು ಬಿಸಾಡುತ್ತಾನೆ. ರಾಧೆಯ ಸಾವು ಅವನ ಹೃದಯವನ್ನು ಎಷ್ಟು ಛಿದ್ರಗೊಳಿಸಿದೆ ಎಂಬುದು ಅವನನ್ನು ನೋಡಿದವರಿಗೆಲ್ಲ ಅರ್ಥವಾಗುತ್ತಿತ್ತು.

ಕುಟುಂಬದ ಕಾರಣಕ್ಕೆ ಅವರಿಬ್ಬರೂ ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದರು ಎಂದು ಹೇಳಲಾಗುತ್ತದೆ. ರಾಧೆ ನೀನು ನನ್ನ ಅಂಶ. ನಮ್ಮಿಬ್ಬರಿಂದ ನಿರ್ಮಲ ಪ್ರೀತಿ ಅಂದರೆ ಹೇಗಿರುತ್ತದೆ ಎಂದು ತೋರಿಸಿಕೊಳ್ಳುವ ಸಲುವಾಗಿ ಈ ರೀತಿ ಎಲ್ಲ ಆಯ್ತು ಎಂದು ಹೇಳುತ್ತಾನೆ. ಆದರೂ ಅವನು ತುಂಬಾ ವಿರಹಿಯಾಗಿ ಬಾಳುತ್ತಾನೆ.