ಬೆಳಿಗ್ಗೆ ಎದ್ದ ತಕ್ಷಣವೇ ಕೆಲಸ ನೆನಪಾಗಿ ಮೂಡ್‌ ಆಫ್‌ ಆಗುತ್ತಾ? ಹಾಗಾದ್ರೆ ನಿಮ್ಮ ದಿನವನ್ನು ಈ ರೀತಿ ಆರಂಭಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಿಗ್ಗೆ ಎದ್ದ ತಕ್ಷಣವೇ ಕೆಲಸ ನೆನಪಾಗಿ ಮೂಡ್‌ ಆಫ್‌ ಆಗುತ್ತಾ? ಹಾಗಾದ್ರೆ ನಿಮ್ಮ ದಿನವನ್ನು ಈ ರೀತಿ ಆರಂಭಿಸಿ

ಬೆಳಿಗ್ಗೆ ಎದ್ದ ತಕ್ಷಣವೇ ಕೆಲಸ ನೆನಪಾಗಿ ಮೂಡ್‌ ಆಫ್‌ ಆಗುತ್ತಾ? ಹಾಗಾದ್ರೆ ನಿಮ್ಮ ದಿನವನ್ನು ಈ ರೀತಿ ಆರಂಭಿಸಿ

ನೀವು ದಿನವೂ ಏಳುವಾಗ ಯಾಕಪ್ಪ ಬೆಳಗಾಯ್ತು ಎಂದುಕೊಳ್ಳುತ್ತಾ ಏಳುವ ಬದಲು ಸಕಾರಾತ್ಮಕ ಆಲೋಚನೆಗಳೊಂದಿಗೆ ಏಳಿ. ನಿಮ್ಮ ದಿನವನ್ನು ಹಾಳು ಮಾಡುವುದು ಮತ್ತು ಉತ್ತಮವಾಗಿಸುವುದು ಎರಡೂ ನಿಮ್ಮ ಕೈಯ್ಯಲ್ಲೇ ಇದೆ.

ದೈನಂದಿನ ಒತ್ತಡ ಮತ್ತು ಆತಂಕ ಬಿಟ್ಟುಬಿಡಿ
ದೈನಂದಿನ ಒತ್ತಡ ಮತ್ತು ಆತಂಕ ಬಿಟ್ಟುಬಿಡಿ (Meta AI)

ಬೆಳ್ಳಂಬೆಳಿಗ್ಗೆ ಅಲರಾಂ ಆನ್ ಆದರೆ ಸಾಕು ಅದನ್ನು ಆಫ್ ಮಾಡಿ ಏಳೋದಕ್ಕೆ ಕಷ್ಟ ಆಗಿ. ದಿನದ ಎಲ್ಲ ಕೆಲಸ ಹಾಸಿಗೆಯಲ್ಲೇ ನೆನಪಾಗಿ ನಿಮಗೆ ತುಂಬಾ ಕಷ್ಟ ಆಗುತ್ತಿದ್ದರೆ ನೀವು ನಿಮ್ಮ ದಿನಚರಿಯನ್ನು ಬದಲಾಯಿಸಿಕೊಳ್ಳಬೇಕು ಎಂದರ್ಥ. ನೀವು ಆದಷ್ಟು ಬೇಗ ಏಳಬೇಕು ಎಂದು ಪ್ರಯತ್ನ ಪಡುತ್ತಿದ್ದರೆ ತಪ್ಪಲ್ಲ. ಆದರೆ ಮಲಗುವಾಗಲೇ ನಾಳೆ ಏನೇನು ಮಾಡಬೇಕು ಎಂದು ಒಮ್ಮೆ ಮನಸಿನಲ್ಲೇ ಅವಲೋಕನ ಮಾಡಿಕೊಂಡರೆ ಯಾವ ಸಮಸ್ಯೆಯೂ ಆಗುವುದಿಲ್ಲ. ನಾವು ಇಲ್ಲಿ ನೀಡಿದ ಸಲಹೆಗಳನ್ನು ಪಾಲಿಸಿ ಉತ್ತಮ ದಿನ ನಿಮ್ಮದಾಗಿಸಿಕೊಳ್ಳಿ.

ಆತಂಕ ಒಳ್ಳೆಯದಲ್ಲ

ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಸ್ಟ್ರೆಸ್ ನಡೆಸಿದ ಅಧ್ಯಯನದ ಪ್ರಕಾರ, 77% ವಯಸ್ಕರು ದೈನಂದಿನ ಒತ್ತಡ ಮತ್ತು ಆತಂಕವನ್ನು ಅನುಭವಿಸುತ್ತಾ ತಮ್ಮ ದಿನವನ್ನು ಆರಂಭಿಸುತ್ತಾರೆ. ಇದು ಅವರ ಇಡೀ ದಿನದ ಮೇಲೆ ಪರಿಣಾಮ ಬೀರುತ್ತದೆ. ಇಡೀ ದಿನವನ್ನು ಧನಾತ್ಮಕವಾಗಿ ಪ್ರಭಾವಿಸಬಹುದಾದ ಕೆಲವು ಉಪಾಯಗಳನ್ನು ಕಂಡುಕೊಂಡಲ್ಲಿ ಮಾತ್ರ ನಿಮ್ಮ ದಿನ ಸುಗಮವಾಗಲು ಸಾಧ್ಯವಿದೆ. ಹಾಗಾದರೆ ನೀವು ಏನು ಮಾಡಬೇಕು ಎಂದು ಯೋಚಿಸುತ್ತಿದ್ದರೆ ಈ ಕೆಳಗೆ ನಾವು ತಿಳಿಸಿಕೊಟ್ಟಂತೆ ನಿಮ್ಮ ದಿನವನ್ನು ಆರಂಭಿಸಿ ನೋಡಿ.

ಎದ್ದ ತಕ್ಷಣ ನೀರು ಕುಡಿಯಿರಿ

ಉಸಿರಾಟ ಮತ್ತು ಬೆವರಿನ ಮೂಲಕ ನಿಮ್ಮ ದೇಹವು ರಾತ್ರಿಯಲ್ಲಿ ದ್ರವಾಂಶವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ನೀವು ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಬೆಳಿಗ್ಗೆ ಮೊದಲು ಒಂದು ಲೋಟ ನೀರು ಕುಡಿಯುವುದು ತುಂಬಾ ಸಹಕಾರಿ.

ವ್ಯಾಯಾಮ ಮಾಡಿ
ವ್ಯಾಯಾಮವು ತುಂಬಾ ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ರಕ್ತವನ್ನುಪಂಪ್ಮಾಡುತ್ತದೆ. ರಕ್ತ ಪರಿಚಲನೆಸುಧಾರಿಸುತ್ತದೆ. ನಿಮ್ಮ ಮನಸ್ಥಿತಿ ಮತ್ತುಶಕ್ತಿಯಮಟ್ಟವನ್ನು ಸುಧಾರಿಸಿ ನಿಮಗೆ ಉತ್ತಮ ಆರೋಗ್ಯ ನೀಡುತ್ತದೆ. ನಿಮ್ಮಲ್ಲಿ ವಿಶ್ವಾಸ ಹೆಚ್ಚಿಸುತ್ತದೆ.

ಅವಸರ ಬೇಡ
ಎಲ್ಲವನ್ನು ನಿಧಾನವಾಗಿ ಮಾಡಿ. ಸಮಾಧಾನ ಮುಖ್ಯ. ಧಾವಂತ ಹಾಗೂ ಗಡಿಬಿಡಿಯಲ್ಲಿ ನಿಮ್ಮ ಬೆಳಗನ್ನು ಆರಂಭಿಸಿದರೆ ಆತಂಕ ತನ್ನಿಂದ ತಾನೇ ಸೃಷ್ಟಿ ಆಗುತ್ತದೆ. ನಿಮ್ಮನ್ನು ನೀವೇ ಕಂಟ್ರೋಲ್‌ ಮಾಡಿಕೊಂಡು ಎಲ್ಲವನ್ನೂ ಸರಿಯಾಗಿ ಪ್ಲ್ಯಾನ್‌ ಮಾಡಿಕೊಂಡು ನಂತರ ಒಂದೊಂದೇ ಕೆಲಸವನ್ನು ಮುಗಿಸಿ.

ಆರೋಗ್ಯಕರ ಉಪಹಾರ
ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವುದು ನಿಮ್ಮ ದಿನವನ್ನು ನಿಜವಾಗಿಯೂ ಅಸ್ತವ್ಯಸ್ತಗೊಳಿಸುತ್ತದೆ. ಏನೂ ತಿನ್ನದೆ ಹೋಗುವುದು ಅಥವಾ ಬೇಗ ತಿಂದು ಮುಗಿಸಿ ಹೊಟ್ಟೆ ತುಂಬಿದೆಯೋ? ಇಲ್ಲವೋ? ಎಂಬುದನ್ನೂ ಲಕ್ಷಿಸದೇ ಇರಬೇಡಿ. ಯಾಕೆಂದರೆ ಬೆಳಗಿನ ತಿಂಡಿ ಉತ್ತಮ ಆರೋಗ್ಯಕ್ಕೆ ತುಂಬಾ ಮುಖ್ಯ. ಇದು ನಿಮಗೆ ಇಡೀ ದಿನ ಕೆಲಸ ಮಾಡಲು ಶಕ್ತಿ ನೀಡುವ ಆಹಾರವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಕೃತಜ್ಞತೆ ಸಲ್ಲಿಸಿ
ನೀವು ನಿನ್ನೆ ಮಾಡಿದ ಕೆಲಸಕ್ಕೆ ನೀವೇ ನಿಮಗೆ ಕೃತಜ್ಞತೆ ಸಲ್ಲಿಸಿ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಹುಟ್ಟುವ ರೀತಿಯಲ್ಲಿ ಬದುಕಲು ಆರಂಭಿಸಿ. ದಿನ ಬೆಳಿಗ್ಗೆ ನಿಮಗೆ ನೀವೇ ವಿಶ್‌ ಮಾಡಿಕೊಳ್ಳಿ. ದೇವರಿಗೆ ಧನ್ಯವಾದ ತಿಳಿಸಿ.

Whats_app_banner