Winter Foods: ಚಳಿಗಾಲದಲ್ಲಿ ತೂಕ ಇಳಿಸಲು ಹೇಳಿ ಮಾಡಿಸಿದಂಥ ಆಹಾರ ಪದಾರ್ಥಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Winter Foods: ಚಳಿಗಾಲದಲ್ಲಿ ತೂಕ ಇಳಿಸಲು ಹೇಳಿ ಮಾಡಿಸಿದಂಥ ಆಹಾರ ಪದಾರ್ಥಗಳಿವು

Winter Foods: ಚಳಿಗಾಲದಲ್ಲಿ ತೂಕ ಇಳಿಸಲು ಹೇಳಿ ಮಾಡಿಸಿದಂಥ ಆಹಾರ ಪದಾರ್ಥಗಳಿವು

ಚಳಿಗಾಲದಲ್ಲಿ ತೂಕ ಇಳಿಸುವುದು ಕಷ್ಟ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ನೀವು ಈ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ತೂಕ ಏರಿಕೆ ಭಯದಿಂದ ಪಾರಾಗಬಹುದಾಗಿದೆ.

ಚಳಿಗಾಲದಲ್ಲಿ ತೂಕ ಇಳಿಕೆಗೆ ಸಹಾಯವಾಗುವ ಆಹಾರಗಳಿವು
ಚಳಿಗಾಲದಲ್ಲಿ ತೂಕ ಇಳಿಕೆಗೆ ಸಹಾಯವಾಗುವ ಆಹಾರಗಳಿವು (PC: Unsplash)

Winter Foods: ಚಳಿಗಾಲ ಬಂತು ಎಂದಾಕ್ಷಣ ಬೆಚ್ಚನೆಯ ಉಡುಗೆಗಳತ್ತ ಮಾತ್ರ ಗಮನ ನೀಡುವ ನಾವು ಈ ಸೀಸನ್‌ನಲ್ಲಿ ನಮ್ಮ ಆಹಾರದ ಕಡೆಗೂ ಹೆಚ್ಚಿನ ಗಮನ ನೀಡಬೇಕು ಎನ್ನುವುದನ್ನು ಮರೆತೇ ಬಿಡುತ್ತೇವೆ. ಚಳಿಗಾಲದಲ್ಲಿ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ.

ಚಳಿಗಾಲದಲ್ಲಿ ಅತಿಯಾದ ಕ್ಯಾಲೊರಿಯುಕ್ತ ಆಹಾರ ಸೇವನೆಯಿಂದ ಬೇಗನೆ ಬೊಜ್ಜು ಶೇಖರಣೆಯಾಗುತ್ತದೆ. ಅಲ್ಲದೇ ಈ ಸೀಸನ್​ನಲ್ಲಿ ಮನೆಯಲ್ಲಿ ಬೆಚ್ಚಗೆ ಕುಳಿತುಕೊಳ್ಳಲು ಇಷ್ಟಪಡುವ ಅನೇಕರು ಹೆಚ್ಚೆಚ್ಚು ಜಂಕ್​ಫುಡ್​ ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ರೀತಿಯ ಅಭ್ಯಾಸಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವುದು ಹೇಗೆ? ಹಾಗೂ ಚಳಿಗಾಲದಲ್ಲಿಯೂ ತೂಕ ನಿಯಂತ್ರಣ ಮಾಡಿಕೊಳ್ಳಲು ಯಾವೆಲ್ಲ ಆಹಾರ ಸೇವಿಸಬೇಕು ಎನ್ನುವುದಕ್ಕೆ ಆಹಾರ ತಜ್ಞೆ ಅಝ್ರಾ ಖಾನ್​ ನೀಡಿರುವ ಉತ್ತರ ಇಲ್ಲಿದೆ.

ಕ್ಯಾರೆಟ್​ಗಳು: ಈ ತರಕಾರಿಯಲ್ಲಿ ಫೈಬರ್ ಅಂಶ ಅಗಾಧ ಪ್ರಮಾಣದಲ್ಲಿದ್ದು ನಿಮಗೆ ಬೇಗ ಹಸಿವಿನ ಅನುಭವ ನೀಡುವುದಿಲ್ಲ. ಹೀಗಾಗಿ ನೀವು ಹೆಚ್ಚು ಸಮಯ ಹೊಟ್ಟೆ ತುಂಬಿರುವ ಅನುಭವದಲ್ಲೇ ಇರಲಿದ್ದೀರಿ. ಈ ರೀತಿ ನಿಮಗೆ ಹೊಟ್ಟೆ ತುಂಬಿದ ಅನುಭವವಿದ್ದರೆ ನೀವು ಹೆಚ್ಚೆಚ್ಚು ತಿನ್ನಲು ಹೋಗುವುದಿಲ್ಲ. ಅಲ್ಲದೆ ಕ್ಯಾರೆಟ್​ನಲ್ಲಿ ಅತಿ ಕಡಿಮೆ ಕ್ಯಾಲೋರಿ ಇರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಕ್ಯಾರೆಟ್​ ಸೇವನೆ ಉತ್ತಮ ಆಯ್ಕೆ ಎನಿಸಿದೆ.

ದಾಲ್ಚಿನ್ನಿ ಚಕ್ಕೆ : ಮಸಾಲೆ ಪದಾರ್ಥಗಳನ್ನು ನಿಯಮಿತವಾಗಿ ತಿನ್ನುವುದು ಆರೋಗ್ಯಕ್ಕೆ ಎಂದಿಗೂ ಒಳ್ಳೆಯದು. ಇವುಗಳಲ್ಲಿ ಇರುವ ಔಷಧೀಯ ಗುಣಗಳು ಉತ್ತಮ ಆರೋಗ್ಯಕ್ಕೆ ಸಹಕಾರಿ ಎನಿಸಿದೆ. ಅದೇ ರೀತಿ ದಾಲ್ಚಿನ್ನಿ ಚೆಕ್ಕೆಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಜೀರ್ಣಕ್ರಿಯೆ ಸುಲಭದಲ್ಲಿ ಆದಾಗ ತೂಕ ಇಳಿಸಲೂ ಸಹ ಸುಲಭವಾಗುತ್ತದೆ.

ಪೇರಳೆ : ಇದು ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವಂತ ಹಣ್ಣಾಗಿದ್ದು ಒಂದು ದೊಡ್ಡ ಪೇರಳೆ ಹಣ್ಣು ನಿಮ್ಮ ದೇಹಕ್ಕೆ ಒಂದು ದಿನಕ್ಕೆ ಬೇಕಾಗುವ ಫೈಬರ್​ ಅಂಶದಲ್ಲಿ 12 ಪ್ರತಿಶತ ಫೈಬರ್​ನ್ನು ನೀಡುತ್ತವೆ. ಅಲ್ಲದೇ ಈ ಹಣ್ಣು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಇದರಿಂದ ತೂಕವನ್ನೂ ಇಳಿಸಬಹುದು.

ಬಸಳೆ ಸೊಪ್ಪು: ಈ ಸೊಪ್ಪಿನಲ್ಲಿ ಫೈಬರ್​ ಅಂಶ ಅಗಾಧ ಪ್ರಮಾಣದಲ್ಲಿದೆ ಹಾಗೂ ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವುದರಿಂದ ಹೆಚ್ಚಿನ ತೂಕ ಇಳಿಕೆಗೆ ಬಸಳೆ ಸೊಪ್ಪು ಸಹಕಾರಿಯಾಗಿದೆ. ನಿಮ್ಮ ನಿತ್ಯದ ಆಹಾರದಲ್ಲಿ ಒಂದು ಸೊಪ್ಪು ಬಸಳೆ ಸೊಪ್ಪು ಕೂಡ ನಿಮ್ಮ ದೇಹದ ಒಳಗೆ ಹೋಗುವಂತಿರಲಿ.ಇದಾದ ಬಳಿಕ ನಿಮ್ಮ ದೇಹದಲ್ಲಿ ತೂಕ ಇಳಿಕೆಯನ್ನು ನೀವೇ ಗಮನಿಸಲಿದ್ದೀರಿ.

ಮೆಂತೆ ಕಾಳುಗಳು : ನಿಮ್ಮ ದೇಹದಲ್ಲಿ ಮಧುಮೇಹ ನಿಯಂತ್ರಿಸುವಲ್ಲಿ ಹಾಗೂ ಇನ್ಸುಲಿನ್ ಉತ್ಪಾದನೆಯನ್ನು ಸರಿದೂಗಿಸುವಲ್ಲಿ ಮೆಂತ್ಯ ಕಾಳುಗಳು ಪ್ರಮುಖ ಪಾತ್ರ ವಹಿಸುತ್ತವೆ. ಜೀರ್ಣಕ್ರಿಯೆ ಸುಧಾರಿಸುವಲ್ಲೂ ಮೆಂತ್ಯಕಾಳುಗಳು ಸಹಕಾರಿಯಾಗಿವೆ.

Whats_app_banner