ಚಳಿಗೆ ಬಿಸಿನೀರಿಲ್ಲ ಅಂದ್ರೆ ಸ್ನಾನ ಮಾಡೋದು ಕಷ್ಟ, ನೀವು ನೀರು ಕಾಯಿಸೋಕೆ ಹೀಟಿಂಗ್ ರಾಡ್ ಬಳಸುತ್ತಿದ್ರೆ ಈ 7 ತಪ್ಪು ಮಾಡದಿರಿ
ಚಳಿಗಾಲದಲ್ಲಿ ಸ್ನಾನಕ್ಕೆ ಬಿಸಿ ನೀರು ಬೇಕೆಂದು ಬಯಸುವುದು ಸಾಮಾನ್ಯ. ಬಿಸಿ ಬಿಸಿ ನೀರು ಸ್ನಾನ ಮಾಡಿದರೆ ಮನಸ್ಸಿಗೆ, ದೇಹಕ್ಕೆ ಹಿತ ಎಂದೆನಿಸುತ್ತದೆ. ಬಹುತೇಕ ಮಂದಿ ಈಗಲೂ ನೀರು ಕಾಯಿಸಲು ವಾಟರ್ ಹೀಟಿಂಗ್ ರಾಡ್ಅನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಹೀಟಿಂಗ್ ರಾಡ್‌ನಿಂದ ನೀರು ಕಾಯಿಸುವ ಸಂದರ್ಭ ಅಪ್ಪಿತಪ್ಪಿಯೂ ಈ 7 ತಪ್ಪುಗಳನ್ನು ಮಾಡಬೇಡಿ.
ಚಳಿಗಾಲದಲ್ಲಿ ಸ್ನಾನಕ್ಕೆ ಬಿಸಿ ನೀರು ಬೇಕೆಂದು ಬಯಸುವುದು ಸಾಮಾನ್ಯ. ಬಿಸಿ ಬಿಸಿ ನೀರು ಸ್ನಾನ ಮಾಡಿದರೆ ಮನಸ್ಸಿಗೆ, ದೇಹಕ್ಕೆ ಹಿತ ಎಂದೆನಿಸುತ್ತದೆ. ಹಳ್ಳಿಗಳಲ್ಲಿ ಈಗಲೂ ಬಹುತೇಕರು ಹಂಡೆ ನೀರು ಸ್ನಾನ ಮಾಡುತ್ತಾರೆ. ಈ ಹಂಡೆ ನೀರಿನ ಸ್ನಾನ ಮಾಡುವ ಖುಷಿಯೇ ಬೇರೆ. ಆದರೆ, ನಗರಗಳಲ್ಲಿ ಕರೆಂಟ್ ಗೀಸರ್ ಅಥವಾ ಗ್ಯಾಸ್ ಗೀಸರ್ ಬಳಸಿ ನೀರು ಕಾಯಿಸುವುದು ಸಾಮಾನ್ಯ. ಬಹುತೇಕ ಮಂದಿ ಬಹಳ ಸುಲಭದಲ್ಲಿ ಹಾಗೂ ಕಡಿಮೆ ದರದಲ್ಲಿ ಸಿಗುವ ಹೀಟಿಂಗ್ ಎಲೆಕ್ಟ್ರಿಕ್ ರಾಡ್ ಅನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಬಿಸಿ ನೀರು ಕಾಯಿಸುವ ಸಂದರ್ಭದಲ್ಲಿ ನೀವು ಮಾಡುವ ಕೆಲವೊಂದು ತಪ್ಪುಗಳು ಭಾರೀ ತೊಂದರೆಯುಂಟುಮಾಡಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ. ನೀರು ಕಾಯಿಸುವಾಗ ಈ ತಪ್ಪನ್ನಂತೂ ಮಾಡಲೇಬೇಡಿ. ಅವು ಯಾವ್ಯಾವು ಇಲ್ಲಿದೆ ಮಾಹಿತಿ.
ನೀರು ಕಾಯಿಸುವಾಗ ಯಾವತ್ತೂ ಈ 7 ತಪ್ಪುಗಳನ್ನು ಮಾಡಬೇಡಿ
ಹೀಟರ್ ಬಳಸುವಾಗ ಎಚ್ಚರಿಕೆ ಅಗತ್ಯ: ಚಳಿಗಾಲ ಆರಂಭವಾಗಿದೆ. ಮನೆಗಳಲ್ಲಿ, ಹಾಸ್ಟೆಲ್, ಪಿಜಿಗಳಲ್ಲಿ ಬಿಸಿ ನೀರು ಕಾಯಿಸಲು, ಸುಲಭದಲ್ಲಿ ದೊರೆಯುವ ಹೀಟಿಂಗ್ ಎಲೆಕ್ಟ್ರಿಕ್ ರಾಡ್ ಬಳಕೆ ಸಾಮಾನ್ಯ. ಕಡಿಮೆ ದರಕ್ಕೆ ಲಭ್ಯವಾಗುವ ಹೀಟರ್ ಬಳಸುವಾಗ ಎಚ್ಚರಿಕೆ ಅಗತ್ಯ. ಇಲ್ಲವಾದರೆ ಸಮಸ್ಯೆಯಾಗಬಹುದು.
ಹೀಟರ್ ರಾಡ್ ಬಳಸುವಾಗ ಸುರಕ್ಷತೆ ಬಗ್ಗೆ ಗಮನ ಹರಿಸಿ: ಚಳಿಗಾಲದಲ್ಲಿ ಬಿಸಿ ನೀರು ಕಾಯಿಸಲು ಹೀಟರ್ ರಾಡ್ ಬಳಸುವುದು ತಪ್ಪಲ್ಲ. ಆದರೆ, ಸೂಕ್ತ ಮುನ್ನೆಚ್ಚರಿಕೆ ಅಗತ್ಯ.
ಸಾಮಾನ್ಯವಾಗಿ ಹೀಟರ್ ರಾಡ್ ಬಳಸುವಾಗ ಮಾಡುವ ತಪ್ಪು: ಎಲೆಕ್ಟ್ರಿಕ್ ಹೀಟರ್ ರಾಡ್ ಬಳಸಿ ನೀರು ಕಾಯಿಸುವಾಗ ಯಾವತ್ತೂ ಸ್ಟೀಲ್ ಮತ್ತು ಕಬ್ಬಿಣದ ಬಕೆಟ್, ಪಾತ್ರೆ ಬಳಸಬೇಡಿ. ಅದರ ಬದಲು ಪ್ಲಾಸ್ಟಿಕ್ ಬಕೆಟ್ ಮಾತ್ರ ಬಳಸಿ.
ಎಲೆಕ್ಟ್ರಿಕ್ ಹೀಟರ್ ರಾಡ್ ದೀರ್ಘ ಬಳಕೆ ಬೇಡ: ನೀರು ಬಿಸಿ ಮಾಡುವಾಗ, ದೀರ್ಘ ಕಾಲದವರೆಗೆ ಹೀಟರ್ ರಾಡ್ ಬಳಸಬೇಡಿ. ನೀರು ಬಿಸಿಯಾದ ಕೂಡಲೇ ಹೀಟರ್ ಪ್ಲಗ್ ತೆಗೆದುಬಿಡಿ.
ಐಎಸ್ಐ ಮಾರ್ಕ್ ಇರುವ ರಾಡ್ ಖರೀದಿಸಿ: ಎಲೆಕ್ಟ್ರಿಕ್ ರಾಡ್ ಖರೀದಿಸುವಾಗ ಗುಣಮಟ್ಟದ ರಾಡ್ ಖರೀದಿಸಿ. ಐಎಸ್‌ಐ ಮಾರ್ಕ್ ಇರುವ, ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಪ್ರಮಾಣೀಕೃತ ರಾಡ್‌ಗಳನ್ನೇ ಖರೀದಿಸಿ.
ಎಲೆಕ್ಟ್ರಿಕ್ ರಾಡ್‌ನ ಪವರ್ ರೇಟಿಂಗ್ ಗಮನಿಸಿ: ಎಲೆಕ್ಟ್ರಿಕ್ ರಾಡ್ ಖರೀದಿಗೂ ಮೊದಲು ಅದರ ಪವರ್ ರೇಟಿಂಗ್ ಗಮನಿಸಿ. ಅಧಿಕ ವ್ಯಾಟ್‌ನ ರಾಡ್ ಇದ್ದರೆ, ನೀರು ಬೇಗನೆ ಬಿಸಿಯಾಗುತ್ತದೆ ಎನ್ನುವುದು ಗಮನದಲ್ಲಿರಲಿ.
ಒಣಗಿದ ಪ್ರದೇಶದಲ್ಲಿ ಹೀಟರ್ ರಾಡ್ ಸಹಿತ ಬಕೆಟ್ ಇರಿಸಿ: ಬಕೆಟ್‌ಗೆ ಹೀಟರ್ ಇಡುವಾಗ, ಒಣಗಿದ ಪ್ರದೇಶದಲ್ಲಿ ಇರುವುದನ್ನು ಗಮನಿಸಿ. ತೇವಾಂಶ ಇರುವ ನೆಲದಲ್ಲಿ ಇರಿಸಬೇಡಿ. ಈ ಎಚ್ಚರಿಕೆಯನ್ನು ಪಾಲಿಸಿ, ಸುರಕ್ಷತೆಯತ್ತ ಗಮನ ಹರಿಸಿ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.
kannada.hindustantimes.com/astrology/yearly-horoscope