ಸಿಹಿಗೆಣಸಿನ ಚಾಟ್ಸ್ ಮಾತ್ರವಲ್ಲ ಹಲ್ವಾ ತಯಾರಿಸಬಹುದು: ಚಳಿಗಾಲಕ್ಕೆ ಹೇಳಿ ಮಾಡಿಸಿದ ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್
ಕನ್ನಡ ಸುದ್ದಿ  /  ಜೀವನಶೈಲಿ  /  ಸಿಹಿಗೆಣಸಿನ ಚಾಟ್ಸ್ ಮಾತ್ರವಲ್ಲ ಹಲ್ವಾ ತಯಾರಿಸಬಹುದು: ಚಳಿಗಾಲಕ್ಕೆ ಹೇಳಿ ಮಾಡಿಸಿದ ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್

ಸಿಹಿಗೆಣಸಿನ ಚಾಟ್ಸ್ ಮಾತ್ರವಲ್ಲ ಹಲ್ವಾ ತಯಾರಿಸಬಹುದು: ಚಳಿಗಾಲಕ್ಕೆ ಹೇಳಿ ಮಾಡಿಸಿದ ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್

ಚಳಿಗಾಲದಲ್ಲಿ ಸಿಹಿಗೆಣಸು ವ್ಯಾಪಕವಾಗಿ ಲಭ್ಯವಿದೆ. ಸಿಹಿಗೆಣಸನ್ನು ಬೇಯಿಸಿ ಅಥವಾ ಚಾಟ್ಸ್ ಮಾಡಿ ತಿಂದಿರಬಹುದು. ಆದರೆ, ಸಿಹಿಗೆಣಸಿನ ಹಲ್ವಾ ರೆಸಿಪಿಯನ್ನು ಎಂದಾದರೂ ಸವಿದಿದ್ದೀರಾ?ಬಹಳ ರುಚಿಕರವಾಗಿರುತ್ತದೆ ಈ ಸಿಹಿಖಾದ್ಯ. ಒಮ್ಮೆ ತಯಾರಿಸಿ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ. ಇಲ್ಲಿದೆ ರೆಸಿಪಿ ಮಾಡುವ ವಿಧಾನ.

ಸಿಹಿಗೆಣಸಿನ ಚಾಟ್ಸ್ ಮಾತ್ರವಲ್ಲ ಹಲ್ವಾ ತಯಾರಿಸಬಹುದು: ಚಳಿಗಾಲಕ್ಕೆ ಹೇಳಿ ಮಾಡಿಸಿದ ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್
ಸಿಹಿಗೆಣಸಿನ ಚಾಟ್ಸ್ ಮಾತ್ರವಲ್ಲ ಹಲ್ವಾ ತಯಾರಿಸಬಹುದು: ಚಳಿಗಾಲಕ್ಕೆ ಹೇಳಿ ಮಾಡಿಸಿದ ಈ ರೆಸಿಪಿ ಮಾಡುವುದು ತುಂಬಾನೇ ಸಿಂಪಲ್

ರವೆ, ಕ್ಯಾರೆಟ್ ಅಥವಾ ಹೆಸರು ಬೇಳೆ ಹಲ್ವಾವನ್ನು ಹೆಚ್ಚಾಗಿ ಬಹುತೇಕ ಮನೆಗಳಲ್ಲಿ ತಯಾರಿಸಲಾಗುತ್ತದೆ. ಆದರೆ, ಚಳಿಗಾಲದಲ್ಲಿ ರುಚಿಯ ಬಗ್ಗೆ ಮಾತ್ರವಲ್ಲ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಈ ಚಳಿಗಾಲದಲ್ಲಿ ಆರೋಗ್ಯಕರವಾದ ಸಿಹಿಖಾದ್ಯ ತಿನ್ನಬೇಕು ಎಂದು ಅನಿಸಿದರೆ ಸಿಹಿಗೆಣಸು ಹಲ್ವಾವನ್ನು ಪ್ರಯತ್ನಿಸಬಹುದು. ಚಳಿಗಾಲದಲ್ಲಿ ಸಿಹಿಗೆಣಸು ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿದೆ. ಇದನ್ನು ಬೇಯಿಸಿ ತಿಂದಿರಬಹುದು ಅಥವಾ ಚಾಟ್ಸ್ ಮಾಡಿ ತಿಂದಿರಬಹುದು. ಆದರೆ, ಇದರ ಹಲ್ವಾ ಮಾಡಿ ಸವಿಯುವುದರಿಂದ ಇನ್ನಷ್ಟು ರುಚಿಕರವಾಗಿರುತ್ತದೆ. ತಿನ್ನಲು ರುಚಿಕರವಾಗಿರುವುದಕ್ಕಿಂತ ಇದು ತಯಾರಿಸುವುದು ಸುಲಭ ಹಾಗೂ ಮತ್ತು ಜೀರ್ಣಿಸಿಕೊಳ್ಳುವುದು ಕೂಡ ತುಂಬಾನೇ ಸುಲಭ. ಚಳಿಗಾಲದಲ್ಲಿ ಇದನ್ನು ಸೇವಿಸುವುದರಿಂದ ದೇಹವನ್ನು ಬೆಚ್ಚಗಿಡುತ್ತದೆ. ಹಾಗಿದ್ದರೆ ರುಚಿಕರವಾದ ಸಿಹಿಗೆಣಸು ಹಲ್ವಾ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಸಿಹಿಗೆಣಸು ಹಲ್ವಾ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಸಿಹಿಗೆಣಸು (ಮಧ್ಯಮ ಗಾತ್ರ)- 5, ಬೆಲ್ಲ- 1 ಕಪ್, ತುಪ್ಪ- 4 ಟೀ ಚಮಚ, ಏಲಕ್ಕಿ ಪುಡಿ- 1 ಟೀ ಚಮಚ, ಕೇಸರಿ- 4 ದಳ, ಹಾಲು- 1 ಕಪ್, ಒಣದ್ರಾಕ್ಷಿ- ಸ್ವಲ್ಪ.

ಮಾಡುವ ವಿಧಾನ: ಸಿಹಿಗೆಣಸು ತಯಾರಿಸಲು ಮೊದಲಿಗೆ ಅದನ್ನು ಬೇಯಿಸಿ. ಅದು ಸ್ವಲ್ಪ ತಣ್ಣಗಾದ ನಂತರ, ಅದರ ಸಿಪ್ಪೆಯನ್ನು ತೆಗೆದು ಚೆನ್ನಾಗಿ ಮ್ಯಾಶ್ ಮಾಡಿ.

- ಈಗ ಬಾಣಲೆಗೆ ತುಪ್ಪವನ್ನು ಸೇರಿಸಿ. ಅದಕ್ಕೆ ಗೋಡಂಬಿ ಮತ್ತು ಕೇಸರಿಯನ್ನು ಸೇರಿಸಿ. ನಂತರ, ಮ್ಯಾಶ್ ಮಾಡಿದ ಸಿಹಿಗೆಣಸನ್ನು ಬಾಣಲೆಗೆ ಸೇರಿಸಿ ಮಿಕ್ಸ್ ಮಾಡಿ.

- ಈಗ ಸ್ಟೌವ್ ಮೇಲೆ ನೀರನ್ನು ಬಿಸಿ ಮಾಡಿ ಅದಕ್ಕೆ ಏಲಕ್ಕಿ ಪುಡಿ ಮತ್ತು ಒಂದು ಕಪ್ ಬೆಲ್ಲವನ್ನು ಸೇರಿಸಿ ಸಿರಪ್ ತಯಾರಿಸಿ.

- ಸಿಹಿಗೆಣಸಿನ ಬಣ್ಣ ಬದಲಾದಾಗ ಅದಕ್ಕೆ 1 ಕಪ್ ಹಾಲು ಸೇರಿಸಿ ನಂತರ ಬೆಲ್ಲದ ಸಿರಪ್ ಸೇರಿಸಿ. ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.

- ಹಲ್ವಾ ಸಿದ್ಧವಾದಾಗ ಅದಕ್ಕೆ ಒಣಹಣ್ಣುಗಳನ್ನು ಸೇರಿಸಿ, ಸ್ವಲ್ಪ ಸಮಯದವರೆಗೆ ಮುಚ್ಚಿಡಿ. ಇಷ್ಟು ಮಾಡಿದರೆ ರುಚಿಕರವಾದ ಸಿಹಿಗೆಣಸಿನ ಹಲ್ವಾ ಸವಿಯಲು ಸಿದ್ಧ.

ಈ ರೆಸಿಪಿಯನ್ನು ಬಿಸಿ ಬಿಸಿಯಾಗಿ ಬಡಿಸಿ. ಬಿಸಿ ಆರಿದ ಮೇಲೂ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಖಂಡಿತ ನಿಮಗೆ ಮಾತ್ರವಲ್ಲ ಮನೆಮಂದಿಗೆಲ್ಲ ಇಷ್ಟವಾಗುದರಲ್ಲಿ ಸಂಶಯವಿಲ್ಲ. ಮಕ್ಕಳು ಕೂಡ ಇಷ್ಟಪಟ್ಟು ತಿಂತಾರೆ. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ವಿಶೇಷವಾಗಿ ಈ ಹಲ್ವಾ ತಯಾರಿಸಿ ಬಡಿಸಬಹುದು. ಅತಿಥಿಗಳು ಕೂಡ ಖಂಡಿತ ಇಷ್ಟಪಡುತ್ತಾರೆ.

Whats_app_banner