ಈ ಚಳಿಗಾಲದಲ್ಲಿ ಬಿಸಿ ಬಿಸಿ ಅನ್ನದೊಂದಿಗೆ ಸವಿಯಿರಿ ಟೇಸ್ಟಿ ಈರುಳ್ಳಿ ಉಪ್ಪಿನಕಾಯಿ: ತಿನ್ನಲು ರುಚಿ, ಆರೋಗ್ಯಕ್ಕೂ ಬೆಸ್ಟ್
ಕನ್ನಡ ಸುದ್ದಿ  /  ಜೀವನಶೈಲಿ  /  ಈ ಚಳಿಗಾಲದಲ್ಲಿ ಬಿಸಿ ಬಿಸಿ ಅನ್ನದೊಂದಿಗೆ ಸವಿಯಿರಿ ಟೇಸ್ಟಿ ಈರುಳ್ಳಿ ಉಪ್ಪಿನಕಾಯಿ: ತಿನ್ನಲು ರುಚಿ, ಆರೋಗ್ಯಕ್ಕೂ ಬೆಸ್ಟ್

ಈ ಚಳಿಗಾಲದಲ್ಲಿ ಬಿಸಿ ಬಿಸಿ ಅನ್ನದೊಂದಿಗೆ ಸವಿಯಿರಿ ಟೇಸ್ಟಿ ಈರುಳ್ಳಿ ಉಪ್ಪಿನಕಾಯಿ: ತಿನ್ನಲು ರುಚಿ, ಆರೋಗ್ಯಕ್ಕೂ ಬೆಸ್ಟ್

ಮನೆಯಲ್ಲಿ ತರಕಾರಿ ಇಲ್ಲದಿದ್ದಾಗಏನು ಮಾಡುವುದು ಎಂದು ಯೋಚಿಸುತ್ತಿದ್ದರೆ ಈರುಳ್ಳಿ ಉಪ್ಪಿನಕಾಯಿ ಮಾಡಿ ಸವಿಯಬಹುದು. ಬಿಸಿ ಬಿಸಿ ಅನ್ನದೊಂದಿಗೆ ಸೇವಿಸಲು ತುಂಬಾ ರುಚಿಯಾಗಿರುತ್ತದೆ. ಇಡ್ಲಿ, ದೋಸೆಯೊಂದಿಗೂ ಸವಿಯಲು ಚೆನ್ನಾಗಿರುತ್ತದೆ.ವಿಭಿನ್ನ ರುಚಿಯನ್ನು ಹುಡುಕುತ್ತಿದ್ದರೆ ಈ ರೆಸಿಪಿ ಮಾಡಬಹುದು. ಇದನ್ನು ಮಾಡುವುದು ತುಂಬಾನೇ ಸುಲಭ. ಇಲ್ಲಿದೆ ಪಾಕವಿಧಾನ.

ಈ ಚಳಿಗಾಲದಲ್ಲಿ ಬಿಸಿ ಬಿಸಿ ಅನ್ನದೊಂದಿಗೆ ಸವಿಯಿರಿ ಟೇಸ್ಟಿ ಈರುಳ್ಳಿ ಉಪ್ಪಿನಕಾಯಿ: ತಿನ್ನಲು ರುಚಿ, ಆರೋಗ್ಯಕ್ಕೂ ಬೆಸ್ಟ್
ಈ ಚಳಿಗಾಲದಲ್ಲಿ ಬಿಸಿ ಬಿಸಿ ಅನ್ನದೊಂದಿಗೆ ಸವಿಯಿರಿ ಟೇಸ್ಟಿ ಈರುಳ್ಳಿ ಉಪ್ಪಿನಕಾಯಿ: ತಿನ್ನಲು ರುಚಿ, ಆರೋಗ್ಯಕ್ಕೂ ಬೆಸ್ಟ್

ಅಡುಗೆಮನೆಯಲ್ಲಿ ಈರುಳ್ಳಿ ಬಹಳ ಅತ್ಯಗತ್ಯ ಪದಾರ್ಥವಾಗಿದೆ. ದಾಲ್‌ನಿಂದ ಹಿಡಿದು ಬಿರಿಯಾನಿಯವರೆಗೆ ಈರುಳ್ಳಿ ಬೇಕೆ ಬೇಕು. ಕೆಲವೊಮ್ಮೆ ಮನೆಯಲ್ಲಿ ಏನೂ ತರಕಾರಿಯಿಲ್ಲದಾಗ ಏನು ಮಾಡುವುದು ಎಂದು ಚಿಂತೆ ಮಾಡಬಹುದು. ಅಥವಾ ನೀವು ಉಪ್ಪಿನಕಾಯಿ ಪ್ರಿಯರಾಗಿದ್ದು, ವಿಭಿನ್ನ ರುಚಿಯನ್ನು ಹುಡುಕುತ್ತಿದ್ದರೆ ಈರುಳ್ಳಿ ಉಪ್ಪಿನಕಾಯಿ ರೆಸಿಪಿ ತಯಾರಿಸಿ ಸವಿಯಬಹುದು. ಬಿಸಿ ಬಿಸಿ ಅನ್ನದೊಂದಿಗೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ದಿನಾ ಒಂದೇ ರೀತಿಯ ಸಾಂಬಾರ್ ತಿಂದು ಬೇಜಾರಾಗಿದ್ದರೆ ಈ ರೀತಿ ಈರುಳ್ಳಿ ಉಪ್ಪಿನಕಾಯಿಯನ್ನು ತಯಾರಿಸಿ ಸವಿಯಬಹುದು. ಇದನ್ನು ಮಾಡುವುದು ತುಂಬಾನೇ ಸುಲಭ. ಇಲ್ಲಿದೆ ಪಾಕವಿಧಾನ.

ಈರುಳ್ಳಿ ಉಪ್ಪಿನಕಾಯಿ ರೆಸಿಪಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ಈರುಳ್ಳಿ- ಐದು, ತುರಿದ ಬೆಲ್ಲ- ಮೂರು ಚಮಚ, ಹುಣಸೆಹಣ್ಣು- 1 ನಿಂಬೆ ಗಾತ್ರದಷ್ಟು, ಒಣ ಮೆಣಸಿನಕಾಯಿ- 20, ಎಣ್ಣೆ- ಅರ್ಧ ಕಪ್, ತುಪ್ಪ- ಒಂದು ಟೀ ಚಮಚ, ಜೀರಿಗೆ- ಅರ್ಧ ಟೀ ಚಮಚ, ಸಾಸಿವೆ- ಒಂದು ಟೀ ಚಮಚ, ಬೆಳ್ಳುಳ್ಳಿ ಎಸಳು- ಹತ್ತು, ಕರಿಬೇವು- 10 ರಿಂದ 12, ಇಂಗು- ಒಂದು ಚಿಟಿಕೆ, ಉಪ್ಪು- ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಈರುಳ್ಳಿಯನ್ನು ಸಿಪ್ಪೆ ಸುಲಿದು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ.

- ಒಣ ಮೆಣಸಿನಕಾಯಿಯನ್ನು ನೀರಿಗೆ ಸೇರಿಸಿ ಅರ್ಧ ಗಂಟೆ ನೆನೆಸಿಡಿ.

- ಮತ್ತೊಂದೆಡೆ ಹುಣಸೆಹಣ್ಣನ್ನು ಸ್ವಲ್ಪ ನೀರಿನಲ್ಲಿ ನೆನೆಸಿ.

- ಒಣ ಮೆಣಸಿನಕಾಯಿಯನ್ನು ಮಿಕ್ಸ್ ಜಾರಿಗೆ ಹಾಕಿ ರುಬ್ಬಿಕೊಳ್ಳಿ..

- ಅದಕ್ಕೆ ಕತ್ತರಿಸಿದ ಈರುಳ್ಳಿ, ತುರಿದ ಬೆಲ್ಲ ಮತ್ತು ಹುಣಸೆ ಹಣ್ಣಿನ ತಿರುಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

- ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ರುಬ್ಬಿಕೊಳ್ಳಿ.

- ಸ್ಟೌವ್ ಮೇಲೆ ಕಡಾಯಿ ಇಟ್ಟು ಎಣ್ಣೆ ಹಾಕಿ.

- ಎಣ್ಣೆ ಬಿಸಿಯಾದಾಗ ಸಾಸಿವೆ, ಕರಿಮೆಣಸು, ಕಡಲೆಬೇಳೆ, ಬೆಳ್ಳುಳ್ಳಿ ಎಸಳು, ಜೀರಿಗೆ ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ ಹುರಿಯಿರಿ.

- ಈ ಮಿಶ್ರಣಕ್ಕೆ ಹೆಚ್ಚಿದ ರುಬ್ಬಿದ ಈರುಳ್ಳಿ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.

- ಕಡಿಮೆ ಉರಿಯಲ್ಲಿ ಇದನ್ನು ಫ್ರೈ ಮಾಡಿ.

- ಎಣ್ಣೆಯು ಮಿಶ್ರಣದಿಂದ ಬೇರ್ಪಡುತ್ತಿದ್ದಂತೆ ಮೇಲಕ್ಕೆ ತೇಲುತ್ತದೆ. ಆ ಸಮಯದಲ್ಲಿ ಸ್ಟೌವ್ ಆಫ್ ಮಾಡಬೇಕು.

- ಈ ಪೇಸ್ಟ್ ಅನ್ನು ಸರ್ವಿಂಗ್ ಬೌಲ್‍ಗೆ ವರ್ಗಾಯಿಸಿದರೆ ಮಸಾಲೆಯುಕ್ತ ಈರುಳ್ಳಿ ಉಪ್ಪಿನಕಾಯಿ ಸವಿಯಲು ಸಿದ್ಧ.

ಇದನ್ನು ಬಿಸಿ ಅನ್ನದೊಂದಿಗೆ ಸವಿಯಲು ರುಚಿಕರವಾಗಿರುತ್ತದೆ. ಅಷ್ಟೇ ಅಲ್ಲ ಇಡ್ಲಿ, ದೋಸೆ ಜತೆಗೂ ತಿನ್ನಬಹುದು. ಈ ಉಪ್ಪಿನಕಾಯಿಯನ್ನು ಒಮ್ಮೆ ಮಾಡಿದರೆ ಒಂದು ತಿಂಗಳವರೆಗೆ ತಾಜಾವಾಗಿರುತ್ತದೆ. ಸಂಗ್ರಹಿಸಿಡುವ ವಿಧಾನ ಸೂಕ್ತವಾಗಿರಬೇಕು. ಗಾಳಿಯಾಡದ ಧಾರಕದಲ್ಲಿ ಸಂಗ್ರಹಿಸಬೇಕು.

Whats_app_banner