ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಕಾರಿ ಗ್ರೀನ್ ಗಾರ್ಲಿಕ್ ಚಟ್ನಿ: ಅನ್ನ, ಚಪಾತಿ ಜತೆ ತಿಂದ್ರೆ ರುಚಿ ಹೆಚ್ಚು
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಕಾರಿ ಗ್ರೀನ್ ಗಾರ್ಲಿಕ್ ಚಟ್ನಿ: ಅನ್ನ, ಚಪಾತಿ ಜತೆ ತಿಂದ್ರೆ ರುಚಿ ಹೆಚ್ಚು

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಕಾರಿ ಗ್ರೀನ್ ಗಾರ್ಲಿಕ್ ಚಟ್ನಿ: ಅನ್ನ, ಚಪಾತಿ ಜತೆ ತಿಂದ್ರೆ ರುಚಿ ಹೆಚ್ಚು

ಚಳಿಗಾಲದಲ್ಲಿ ಗ್ರೀನ್ ಗಾರ್ಲಿಕ್ ಚಟ್ನಿ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ರೆಸಿಪಿ ಮಾಡುವುದು ಹೇಗೆ? ಇಲ್ಲಿದೆ ಪಾಕವಿಧಾನ.

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಕಾರಿ ಗ್ರೀನ್ ಗಾರ್ಲಿಕ್ ಚಟ್ನಿ
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಕಾರಿ ಗ್ರೀನ್ ಗಾರ್ಲಿಕ್ ಚಟ್ನಿ (PC: Canva)

ಪ್ರತಿ ಋತುವಿನಲ್ಲೂ ಸೇವಿಸಬೇಕಾದ ವಿಶೇಷ ಖಾದ್ಯಗಳು ಇರುತ್ತವೆ. ಬೇಸಿಗೆ ಕಾಲದಲ್ಲಿ ಸೇವಿಸುವಂತಹ ಆಹಾರಗಳೇ ಬೇರೆ. ಮಳೆಗಾಲದಲ್ಲಿ ಆ ಋತುವಿನ ಖಾದ್ಯವಿದ್ದರೆ, ಚಳಿಗಾಲದ ತಿಂಗಳುಗಳಲ್ಲಿ ಸೇವಿಸಬೇಕಾದ ಖಾದ್ಯಗಳು ಬೇರೆಯೇ ಇದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇಂತಹ ಆಹಾರಗಳ ಸೇವನೆ ಬಹಳ ಮುಖ್ಯ. ಇದೀಗ ಚಳಿಗಾಲವಾದ್ದರಿಂದ ಈ ಋತುವಿನಲ್ಲಿ ಗ್ರೀನ್ ಗಾರ್ಲಿಕ್ ಚಟ್ನಿ ಸೇವನೆ ಮಾಡುವುದರಿಂದ ಪ್ರಯೋಜನವನ್ನು ಪಡೆಯಬಹುದು.

ಸಾಮಾನ್ಯವಾಗಿ ಕೊತ್ತಂಬರಿ, ಪುದೀನಾ, ಹುಣಸೆಹಣ್ಣಿನಂತಹ ಅನೇಕ ರೀತಿಯ ಚಟ್ನಿಗಳನ್ನು ನೀವು ಸವಿದಿರಬಹುದು. ಆದರೆ ಚಳಿಗಾಲದಲ್ಲಿ, ವಿಶೇಷ ಪಾಕವಿಧಾನದೊಂದಿಗೆ ಬಡಿಸುವ ಗ್ರೀನ್ ಗಾರ್ಲಿಕ್ ಚಟ್ನಿ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇತ್ತೀಚೆಗೆ, ಶ್ರುತಿ ಟಂಡನ್ ಧವನ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ರುಚಿಕರವಾದ ಚಟ್ನಿಯ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ. ಈ ರುಚಿಕರವಾದ ಗ್ರೀನ್ ಗಾರ್ಲಿಕ್ ಚಟ್ನಿಯನ್ನು ಹೇಗೆ ತಯಾರಿಸುವುದು ಎಂಬುದನ್ನು ಇಲ್ಲಿ ತಿಳಿಯೋಣ.

ಗ್ರೀನ್ ಗಾರ್ಲಿಕ್ ಚಟ್ನಿ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು: ಹಸಿರು ಬೆಳ್ಳುಳ್ಳಿ- 1 ಕಪ್, ಹಸಿಮೆಣಸಿನಕಾಯಿ – 5 ನಿಂಬೆ ರಸ- 1 ಚಮಚ, ಜೀರಿಗೆ- 1/2 ಟೀ ಚಮಚ, ಕೊತ್ತಂಬರಿ ಸೊಪ್ಪು- ಅರ್ಧ ಕಪ್, ಉಪ್ಪು - ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಕೊತ್ತಂಬರಿ ಸೊಪ್ಪನ್ನು ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆದು ಕತ್ತರಿಸಿ.

- ಈಗ ಹಸಿರು ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಜೀರಿಗೆ, ಉಪ್ಪು ಮತ್ತು ಸ್ವಲ್ಪ ನೀರನ್ನು ಮಿಕ್ಸರ್ ಜಾರ್‌ನಲ್ಲಿ ರುಬ್ಬಿಕೊಳ್ಳಿ.

- ಈ ರುಬ್ಬಿದ ಹಸಿರು ಬೆಳ್ಳುಳ್ಳಿ ಚಟ್ನಿಯ ರುಚಿಯನ್ನು ಹೆಚ್ಚಿಸಲು ನಿಂಬೆ ರಸವನ್ನು ಸೇರಿಸಿ.

- ಈಗ ಈ ಚಟ್ನಿಯನ್ನು ಒಂದು ಪಾತ್ರೆಗೆ ವರ್ಗಾಯಿಸಿಯದರೆ ರುಚಿಕರವಾದ ಗ್ರೀನ್ ಗಾರ್ಲಿಕ್ ಚಟ್ನಿ ಸವಿಯಲು ಸಿದ್ಧ

- ಈ ಚಟ್ನಿಯನ್ನು ಪರೋಟ, ರೊಟ್ಟಿ ಅಥವಾ ಅನ್ನದೊಂದಿಗೆ ಬಡಿಸಬಹುದು. ಈ ಚಟ್ನಿಯನ್ನು 4 ರಿಂದ 5 ದಿನಗಳವರೆಗೆ ಫ್ರಿಜ್‍ನಲ್ಲಿ ಸಂಗ್ರಹಿಸಬಹುದು.

ಗ್ರೀನ್ ಗಾರ್ಲಿಕ್‌ನ ಆರೋಗ್ಯ ಪ್ರಯೋಜನಗಳು

ಗ್ರೀನ್ ಗಾರ್ಲಿಕ್‌ನಲ್ಲಿ ಜೀವಸತ್ವಗಳು, ವಿಟಮಿನ್ ಎ, ಸಿ, ಬಿ6, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಂನಂತಹ ಖನಿಜಗಳು ಹಾಗೂ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಗ್ರೀನ್ ಗಾರ್ಲಿಕ್ ಅನ್ನು ವಿಶೇಷವಾಗಿ ಚಳಿಗಾಲದಲ್ಲಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಒಳ್ಳೆಯದು. ಅಲ್ಲದೆ ಇದು, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಸಂಯುಕ್ತಗಳನ್ನು ಹೊಂದಿದ್ದು, ಒಟ್ಟಾರೆ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ. ಮೂಳೆ ಆರೋಗ್ಯ, ಜೀರ್ಣಕಾರಿ ಆರೋಗ್ಯ, ಚರ್ಮದ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ.

ಒಟ್ಟಿನಲ್ಲಿ ಚಳಿಗಾಲದಲ್ಲಿ ಗ್ರೀನ್ ಗಾರ್ಲಿಕ್ ಚಟ್ನಿ ಸೇವಿಸುವುದರಿಂದ ನಾಲಿಗೆಯ ರುಚಿಗೆ ಮಾತ್ರವಲ್ಲದೆ ದೇಹದ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ಅನ್ನ, ದೋಸೆ, ಚಪಾತಿಯೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಈ ರೆಸಿಪಿ ಮಾಡುವುದು ತುಂಬಾ ಸುಲಭ. ಒಮ್ಮೆ ಮಾಡಿ ನೋಡಿ, ಖಂಡಿತ ಇಷ್ಟವಾಗಬಹುದು.

Whats_app_banner