Winter Health Tips: ಚಳಿಗಾಲದಲ್ಲಿ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರ 5 ಪ್ರಯೋಜನಗಳು ಇಲ್ಲಿವೆ
ಚಳಿಗಾಲದಲ್ಲಿಕಡಿಮೆ ರಕ್ತ ಪರಿಚಲನೆಯಿಂದಾಗಿ ಬೆಳಗ್ಗೆ ಹಲವಾರು ಜನರು ಆಲಸ್ಯವನ್ನು ಅನುಭವಿಸುತ್ತಾರೆ. ಆದರೆ,ಖಾಲಿ ಹೊಟ್ಟೆಯಲ್ಲಿ ಬಿಸಿನೀರನ್ನು ಕುಡಿಯುವುದು ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಆಗುವ ಇತರ ಪ್ರಯೋಜನಗಳನ್ನು ಬಗ್ಗೆ ಇಲ್ಲಿದೆ ಮಾಹಿತಿ.
ಚಳಿಗಾಲದ ಶೀತ ವಾತಾವರಣವು ಕೆಲವರಿಗೆ ಖುಷಿ ತಂದರೆ ಇನ್ನೂ ಕೆಲವರಿಗೆ ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಚಳಿಗಾಲದಲ್ಲಿ ಮೂಳೆ ನೋವುಗಳು ಹೆಚ್ಚಾಗುತ್ತವೆ. ಬೆಳಗ್ಗೆ ಎದ್ದಾಗ ಮೈಕೈ ನೋವು ಪ್ರಾರಂಭವಾಗುತ್ತದೆ. ಇದಲ್ಲದೆ, ತಂಪಾದ ಗಾಳಿಯು ಚರ್ಮದ ಜತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಸಹ ಪರಿಣಾಮ ಬೀರುತ್ತದೆ. ಏಕೆಂದರೆ ಅದು ರಕ್ತಪರಿಚಲನೆಯನ್ನು ಕಡಿಮೆ ಮಾಡುತ್ತದೆ. ನಂತರ ದೇಹದ ಈ ಎಲ್ಲಾ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಈ ಸಮಸ್ಯೆಗಳನ್ನು ತಪ್ಪಿಸಲು, ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಈ ಐದು ಪ್ರಯೋಜನಗಳಿರುತ್ತವೆ.
ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರ ಐದು ಪ್ರಯೋಜನಗಳು
ರಕ್ತ ಪರಿಚಲನೆ ಸುಧಾರಿಸುತ್ತದೆ: ಚಳಿಗಾಲದಲ್ಲಿ ಬಿಸಿ ನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಮೊದಲ ಪ್ರಯೋಜನವೆಂದರೆ ಅದು ರಕ್ತಪರಿಚಲನೆಯನ್ನು ವೇಗಗೊಳಿಸುತ್ತದೆ. ಚಳಿಗಾಲದ ಬೆಳಗ್ಗೆ ಶೀತದಿಂದಾಗಿ, ರಕ್ತಪರಿಚಲನೆಯ ವೇಗವು ನಿಧಾನವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬೆಳಗ್ಗೆ ಎದ್ದು ಬಿಸಿ ನೀರು ಕುಡಿದಾಗ ರಕ್ತ ಸಂಚಾರ ಹೆಚ್ಚಿ ದೇಹ ಬೆಚ್ಚಗಾಗುತ್ತದೆ.
ದೇಹವನ್ನು ನಿರ್ವಿಷಗೊಳಿಸಲು ಸಹಕಾರಿ: ಚಳಿಗಾಲದಲ್ಲಿ ಬೆಳಗ್ಗೆ ಎದ್ದ ನಂತರ ಬಿಸಿ ನೀರನ್ನು ಕುಡಿಯುವುದು ದೇಹದ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ನೀವು ನೀರನ್ನು ಕುಡಿಯುವುದರಿಂದ, ಬೆಚ್ಚಗಿನ ನೀರು ದೇಹದಲ್ಲಿ ಸಂಗ್ರಹವಾದ ಕೊಳೆತವನ್ನು ತೊಳೆಯುತ್ತದೆ. ಇದು ದೇಹದ ಡಿಟಾಕ್ಸ್‌ಗೆ ಸಹಾಯ ಮಾಡುತ್ತದೆ. ಇದು ಹೊಟ್ಟೆಯನ್ನು, ರಕ್ತವನ್ನು ಶುದ್ಧಗೊಳಿಸುತ್ತದೆ. ಅದರ ಪರಿಣಾಮವು ಇಡೀ ದೇಹದಲ್ಲಿ ಗೋಚರಿಸುತ್ತದೆ.
ಆಲಸ್ಯ ಮತ್ತು ಬಿಗಿತ ಕಡಿತ: ಚಳಿಗಾಲದಲ್ಲಿ ಬೆಳಿಗ್ಗೆ ಎದ್ದಾಗ ದೇಹದಲ್ಲಿ ಆಲಸ್ಯ ಇರುತ್ತದೆ. ಇದು ನಿಧಾನವಾದ ರಕ್ತ ಪರಿಚಲನೆಯಿಂದ ಉಂಟಾಗುತ್ತದೆ. ಆದ್ದರಿಂದ, ನೀವು ಬಿಸಿನೀರನ್ನು ಕುಡಿಯುವಾಗ, ಆಲಸ್ಯ ಮತ್ತು ಬಿಗಿತ ಕಡಿಮೆಯಾಗುತ್ತದೆ. ಇದರಿಂದ ವ್ಯಕ್ತಿ ಬೆಳಗ್ಗೆ ಎದ್ದಾಗ ತಾಜಾತನದಿಂದ ಎಚ್ಚರಗೊಳ್ಳಬಹುದು.
ಹೊಳೆಯುವ ತ್ವಚೆ ಪಡೆಯಲು ಸಹಕಾರಿ: ಚಳಿಗಾಲದಲ್ಲಿ ಬೆಳಗ್ಗೆ ಬಿಸಿನೀರು ಕುಡಿಯುವುದರಿಂದ ಚರ್ಮದ ಸಮಸ್ಯೆಗಳು ಬರದಂತೆ ತಡೆಯುತ್ತದೆ. ಬಿಸಿನೀರು ಕುಡಿದ ತಕ್ಷಣ ರಕ್ತಪರಿಚಲನೆ ಹೆಚ್ಚಾಗುತ್ತದೆ. ನಂತರ ದೇಹವು ಡಿಟಾಕ್ಸ್ ಆಗುತ್ತದೆ. ಇದು ಹೊಳೆಯುವ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ. ಈ ರೀತಿಯಾಗಿ, ಚಳಿಗಾಲದಲ್ಲಿ ಬಿಸಿನೀರನ್ನು ಕುಡಿಯುವುದು ಪ್ರಯೋಜನಕಾರಿಯಾಗಿದೆ. ಹೀಗಾಗಿ ಬೆಳಗ್ಗೆ ಎದ್ದ ನಂತರ ನೀವು ಮಾಡಬೇಕಾದ ಮೊದಲ ಕೆಲಸ ಇದು.
ಸೈನಸ್‍ನಿಂದ ಪರಿಹಾರ: ಸೈನಸೈಟಿಸ್ ಇರುವವರಿಗೆ ಚಳಿಗಾಲದಲ್ಲಿ ಮೂಗು ಕಟ್ಟಿಕೊಂಡು ತಲೆನೋವಿನ ಸಮಸ್ಯೆ ಹಲವು ದಿನಗಳವರೆಗೆ ಇರುತ್ತದೆ. ಬೆಳಿಗ್ಗೆ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಸೈನುಟಿಸ್ ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ ಮತ್ತು ತ್ವರಿತ ಪರಿಹಾರವನ್ನು ನೀಡುತ್ತದೆ.