ಮೀನಿನಿಂದ ಒಣಹಣ್ಣುಗಳವರೆಗೆ; ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಮೀನಿನಿಂದ ಒಣಹಣ್ಣುಗಳವರೆಗೆ; ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಿವು

ಮೀನಿನಿಂದ ಒಣಹಣ್ಣುಗಳವರೆಗೆ; ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಿವು

ಚಳಿಗಾಲದಲ್ಲಿ ಶೀತ ವಾತಾವರಣ ಇರುವುದರಿಂದ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಹೀಗಾಗಿ ಆರೋಗ್ಯಕರ ಆಹಾರ ಸೇವಿಸುವುದು ಬಹಳ ಮುಖ್ಯ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ಚಳಿಗಾಲದಲ್ಲಿ ನಿಮ್ಮ ದೇಹವನ್ನು ಪೋಷಿಸಲು ಯಾವೆಲ್ಲಾ ಆಹಾರ ಸೇವಿಸುವುದು ಉತ್ತಮ ಎಂಬುದು ಇಲ್ಲಿದೆ.

ಮೀನಿನಿಂದ ಒಣಹಣ್ಣುಗಳವರೆಗೆ; ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಿವು
ಮೀನಿನಿಂದ ಒಣಹಣ್ಣುಗಳವರೆಗೆ; ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಿವು

ಚಳಿಗಾಲದ ತಿಂಗಳುಗಳಲ್ಲಿ ಹಗಲಿನ ಸಮಯ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಶೀತ ವಾತಾವರಣ ಇರುವುದರಿಂದ ರೋಗನಿರೋಧಕ ಶಕ್ತಿಯೂ ಕುಂಠಿತವಾಗುತ್ತದೆ. ಹೀಗಾಗಿ ಆಹಾರದಲ್ಲಿ ಪೌಷ್ಟಿಕಾಂಶ ಭರಿತ ಆಹಾರಗಳನ್ನು ಸೇರಿಸುವುದು ಅತಿ ಮುಖ್ಯ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಋತುಮಾನದ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ನಿಮ್ಮ ದೇಹವನ್ನು ಪೋಷಿಸಲು ಯಾವೆಲ್ಲಾ ಆಹಾರ ಸೇವಿಸುವುದು ಉತ್ತಮ ಎಂಬುದು ಇಲ್ಲಿದೆ.

ಚಳಿಗಾಲದಲ್ಲಿ ದೇಹವನ್ನು ಪೋಷಿಸುವ ಆಹಾರಗಳು

ಒಮೆಗಾ-3 ಇರುವ ಕೊಬ್ಬಿನ ಮೀನುಗಳು: ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್‌ಗಳಂತಹ ಕೊಬ್ಬಿನ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ತುಂಬಿರುತ್ತವೆ. ಇದು ಅರಿವಿನ ಕಾರ್ಯಕ್ಕೆ ಅವಶ್ಯಕವಾಗಿದೆ. ಒಮೆಗಾ-3 ಕೊಬ್ಬಿನಾಮ್ಲಗಳು ಖಿನ್ನತೆಯ ಅಸ್ವಸ್ಥತೆಗಳು ಮತ್ತು ಆತಂಕದ ಲಕ್ಷಣಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ. ವಾರದಲ್ಲಿ ಕನಿಷ್ಠ ಮೂರರಿಂದ ನಾಲ್ಕು ಬಾರಿ ಈ ಮೀನುಗಳನ್ನು ಸೇವಿಸುವುದರಿಂದ ಆತ್ಮವಿಶ್ವಾಸವನ್ನು ಉತ್ತೇಜಿಸುತ್ತದೆಯ ಹಾಗೆಯೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಸೊಪ್ಪು: ಫೋಲೇಟ್, ಸಿರೊಟೋನಿನ್ ಉತ್ಪಾದನೆಯನ್ನು ಉತ್ತೇಜಿಸುವ ಬಿ-ವಿಟಮಿನ್ ಅಂಶವಿರುವ ಪಾಲಕ್, ಎಲೆಕೋಸುವಿನಂತಹವುಗಳನ್ನು ಸೇವಿಸುವುದು ಉತ್ತಮ. ಈ ಸೊಪ್ಪಿನಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಸಾಧಾರಣವಾಗಿ ಹೆಚ್ಚಿರುತ್ತವೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡದ ಪರಿಣಾಮಗಳನ್ನು ಎದುರಿಸುತ್ತದೆ.

ಕರುಳಿನ ಆರೋಗ್ಯಕ್ಕಾಗಿ ಈ ಆಹಾರಗಳನ್ನು ಸೇವಿಸಿ: ಕರುಳಿನಲ್ಲಿ ಆರೋಗ್ಯಕರ ಸೂಕ್ಷ್ಮಜೀವಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಪ್ರೋಬಯಾಟಿಕ್-ಸಮೃದ್ಧ ಆಹಾರಗಳಾದ ಮೊಸರು, ಕಿಮ್ಚಿ ಮತ್ತು ಸೌರ್‌ಕ್ರಾಟ್ ಅನ್ನು ಸೇವಿಸುವುದು ಉತ್ತಮ. ಕರುಳನ್ನು ಎರಡನೇ ಮೆದುಳು ಎಂದು ಕೂಡ ಹೇಳಬಹುದು. ಹೀಗಾಗಿ ನಿಮ್ಮ ಮನಸ್ಥಿತಿಯನ್ನು ನಿಯಂತ್ರಿಸಲು ಅದನ್ನು ನಿರ್ವಹಿಸುವುದು ಅತ್ಯಗತ್ಯ. ಕರುಳಿನಲ್ಲಿರುವ ಆರೋಗ್ಯಕರ ಮೈಕ್ರೋಬಯೋಟಾವು ರಕ್ಷಣೆಯನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ.

ಸಿಟ್ರಸ್ ಹಣ್ಣುಗಳು: ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಲು ಪ್ರಮುಖ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಕಿತ್ತಳೆ, ದ್ರಾಕ್ಷಿಹಣ್ಣು ಮತ್ತು ನಿಂಬೆಹಣ್ಣಿನಂತಹ ಸಿಟ್ರಸ್ ಹಣ್ಣುಗಳನ್ನು ಸೇವಿಸುವುದು ಉತ್ತಮ. ಇದಲ್ಲದೆ ವಿಟಮಿನ್ ಸಿ ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಅದು ಮಾನವ ದೇಹವನ್ನು ಚಳಿಗಾಲದ ಕಷ್ಟಗಳಿಂದ ರಕ್ಷಿಸುತ್ತದೆ. ನಿರಂತರ ಅಜೀರ್ಣವು ದೇಹವನ್ನು ಸಾಂಕ್ರಾಮಿಕ ರೋಗಗಳು ಮತ್ತು ಶೀತಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಆಹಾರದಲ್ಲಿ ಈ ತರಕಾರಿಗಳನ್ನು ಸೇರಿಸಿ: ಫೈಬರ್, ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಸಿಹಿ ಗೆಣಸು, ಕ್ಯಾರೆಟ್ ಮತ್ತು ಬೀಟ್ ರೂಟ್‍ಗಳಂತಹ ಬೇರು ಹೊಂದಿರುವ ತರಕಾರಿಗಳನ್ನು ಸೇವಿಸುವುದರಿಂದ ನಿರಂತರ ಶಕ್ತಿಯ ಮೂಲವನ್ನು ನೀಡುತ್ತದೆ. ರಕ್ತದಲ್ಲಿನ ಸಕ್ಕರೆ ನಿರ್ವಹಣೆಯನ್ನು ಉತ್ತೇಜಿಸುವ ಮೂಲಕ, ಈ ತರಕಾರಿಗಳು ಒತ್ತಡವನ್ನು ನಿಭಾಯಿಸಲು ಸಹಕಾರಿಯಾಗಿದೆ.

ಒಣಹಣ್ಣುಗಳು ಮತ್ತು ಬೀಜಗಳು: ಒಣಹಣ್ಣುಗಳು ಮತ್ತು ಬೀಜಗಳಲ್ಲಿ ವಿಶೇಷವಾಗಿ ವಾಲ್ನಟ್ಸ್, ಬಾದಾಮಿ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಂ ಅಂಶ ಹೇರಳವಾಗಿದ್ದು, ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ಅಂಶವು ಹೆಚ್ಚಿನ ವಿಶ್ರಾಂತಿಗೆ ಸಹಾಯ ಮಾಡುತ್ತದೆ.

ಗಿಡಮೂಲಿಕೆ ಚಹಾ ಸೇವಿಸಿ: ಪುದೀನಾ, ನಿಂಬೆ, ಗ್ರೀನ್ ಟೀ ಇತ್ಯಾದಿ ಗಿಡಮೂಲಿಕೆ ಚಹಾಗಳು ಒತ್ತಡವನ್ನು ಕಡಿಮೆ ಮಾಡಬಹುದು. ಈ ಚಹಾಗಳನ್ನು ಆಗಾಗ ಸೇವಿಸುವ ಮೂಲಕ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ದೇಹವನ್ನು ಬೆಚ್ಚಗಿಡಲು ಸಹಕಾರಿಯಾಗಿದೆ. ಇದು ಉತ್ತಮ ನಿದ್ದೆಯನ್ನು ಉತ್ತೇಜಿಸಲು ಕೂಡ ಸಹಾಯ ಮಾಡುತ್ತದೆ.

ವಿಷಯ ಸೂಚನೆ: ಈ ಲೇಖನವು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಆಹಾರದೊಂದಿಗೆ ಏನೇ ಅಲರ್ಜಿ ಇದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Whats_app_banner