ಚಳಿಗಾಲದಲ್ಲಿ ತೀವ್ರ ಶೀತ, ಕೆಮ್ಮಿನಿಂದ ಬಳಲುತ್ತಿದ್ದೀರಾ: ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರಹಾಕಲು ಇಲ್ಲಿದೆ 5 ಮನೆಮದ್ದುಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ತೀವ್ರ ಶೀತ, ಕೆಮ್ಮಿನಿಂದ ಬಳಲುತ್ತಿದ್ದೀರಾ: ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರಹಾಕಲು ಇಲ್ಲಿದೆ 5 ಮನೆಮದ್ದುಗಳು

ಚಳಿಗಾಲದಲ್ಲಿ ತೀವ್ರ ಶೀತ, ಕೆಮ್ಮಿನಿಂದ ಬಳಲುತ್ತಿದ್ದೀರಾ: ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರಹಾಕಲು ಇಲ್ಲಿದೆ 5 ಮನೆಮದ್ದುಗಳು

ಚಳಿಗಾಲದಲ್ಲಿ ತೀವ್ರ ಶೀತ, ಕಫ, ಕೆಮ್ಮಿನಿಂದ ಹಲವು ಮಂದಿ ಬಳಲುತ್ತಿದ್ದಾರೆ. ಎದೆಯಲ್ಲಿ ಸಂಗ್ರಹವಾದ ಕಫವನ್ನು ತೆಗೆದುಹಾಕಲು ಇಲ್ಲಿ ನೀಡಿರುವ ಪರಿಣಾಮಕಾರಿ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇವು ಗಂಟಲು ನೋವು ಹಾಗೂ ಕೆಮ್ಮಿಗೂ ಪರಿಹಾರವನ್ನು ನೀಡುತ್ತದೆ. ಇಲ್ಲಿದೆ 5 ಮನೆಮದ್ದುಗಳು.

ಶೀತ, ಕೆಮ್ಮು ಕಫ ಸಮಸ್ಯೆ ನಿವಾರಿಸಲು ಇಲ್ಲಿದೆ 5 ಪರಿಣಾಮಕಾರಿ ಮನೆಮದ್ದುಗಳು
ಶೀತ, ಕೆಮ್ಮು ಕಫ ಸಮಸ್ಯೆ ನಿವಾರಿಸಲು ಇಲ್ಲಿದೆ 5 ಪರಿಣಾಮಕಾರಿ ಮನೆಮದ್ದುಗಳು (PC: Canva)

ಶೀತ ವಾತಾವರಣ ಇರುವುದರಿಂದ ಚಳಿಗಾಲದಲ್ಲಿ ಎದೆಯಲ್ಲಿ ಕಫ ಸಂಗ್ರಹವಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯು ಉಸಿರಾಟದ ತೊಂದರೆಯನ್ನು ಉಂಟುಮಾಡುತ್ತದೆ. ಹಾಗೆಯೇ ಶೀತ, ಕೆಮ್ಮು ಮತ್ತು ಗಂಟಲು ನೋವು ಸಮಸ್ಯೆಯನ್ನು ಸಹ ಹೆಚ್ಚಿಸಬಹುದು. ಈ ಕಾರಣದಿಂದಾಗಿ, ದೇಹದಲ್ಲಿ ದೌರ್ಬಲ್ಯವು ಕಂಡುಬರುತ್ತದೆ. ಇದು ದೈನಂದಿನ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಔಷಧಿಗಳನ್ನು ತೆಗದುಕೊಳ್ಳಬಹುದಾದರೂ, ಈ ಸಮಸ್ಯೆಯನ್ನು ನಿವಾರಿಸಲು ಮನೆಮದ್ದುಗಳು ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿ ಆಯ್ಕೆಯಾಗಿದೆ. ಶೀತ, ಕಫ, ಕೆಮ್ಮು ನಿವಾರಣೆಗೆ ಇಲ್ಲಿ 5 ಮನೆಮದ್ದುಗಳಿವೆ. ಅವು ಎದೆಯಲ್ಲಿ ಸಂಗ್ರಹವಾದ ಕಫವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗೆಯೇ, ಕೆಮ್ಮು ಮತ್ತು ಗಂಟಲು ನೋವಿನಿಂದಲೂ ಪರಿಹಾರವನ್ನು ನೀಡುತ್ತದೆ.

ಶೀತ, ಕಫ, ಕೆಮ್ಮು ನಿವಾರಣೆಗೆ ಇಲ್ಲಿದೆ 5 ಮನೆಮದ್ದು

ನಿಂಬೆ ಮತ್ತು ಕಾಳುಮೆಣಸು: ನಿಂಬೆ ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ, ಇದು ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ. ಕಾಳುಮೆಣಸು ಕಫವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇವೆರಡರ ಮಿಶ್ರಣವನ್ನು ಸೇವಿಸುವುದರಿಂದ ಕಫ ನಿವಾರಣೆಯಾಗುತ್ತದೆ ಮತ್ತು ಗಂಟಲುನೋವಿಗೂ ಶಮನಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

- ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ನಿಂಬೆ ರಸ ಮತ್ತು ಒಂದು ಚಿಟಿಕೆ ಕಾಳುಮೆಣಸಿನ ಪುಡಿ ಸೇರಿಸಿ.

- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ.

- ಇದನ್ನು ಕುಡಿಯುವುದರಿಂದ ಗಂಟಲು ನೋವು ಶಮನವಾಗುತ್ತದೆ ಮತ್ತು ಶೀತದ ಲಕ್ಷಣಗಳು ದೂರವಾಗುತ್ತವೆ.

ಅರಿಶಿನ ಹಾಲು: ಅರಿಶಿನ ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ಆಂಟಿವೈರಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಅರಶಿನದ ಹಾಲನ್ನು ಕುಡಿಯುವುದರಿಂದ ಎದೆಯಲ್ಲಿ ಸಂಗ್ರಹವಾಗಿರುವ ಕಫ ನಿವಾರಣೆಯಾಗುತ್ತದೆ. ಇದನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವಿಶ್ರಾಂತಿ ಮತ್ತು ಉತ್ತಮ ನಿದ್ದೆ ಪಡೆಯಲು ಸಹಾಯಕವಾಗಿದೆ.

- ಒಂದು ಲೋಟ ಬೆಚ್ಚಗಿನ ಹಾಲಿನಲ್ಲಿ ಅರ್ಧ ಟೀ ಚಮಚ ಅರಿಶಿನವನ್ನು ಮಿಶ್ರಣ ಮಾಡಿ.

- ಮಲಗುವ ಮುನ್ನ ಇದನ್ನು ಕುಡಿಯಿರಿ.

- ಇದು ಕಫವನ್ನು ತೆರವುಗೊಳಿಸುವುದು ಮಾತ್ರವಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ತುಳಸಿ ಮತ್ತು ಲವಂಗ ಟೀ: ತುಳಸಿ ಮತ್ತು ಲವಂಗ ಎರಡೂ ಔಷಧೀಯ ಗುಣಗಳಿಂದ ಕೂಡಿದೆ. ಕೆಮ್ಮು ಮತ್ತು ನೋಯುತ್ತಿರುವ ಗಂಟಲು ಕೆಮ್ಮನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಚಹಾವನ್ನು ಕುಡಿಯುವುದರಿಂದ ಕಫ ಕಡಿಮೆಯಾಗುತ್ತದೆ ಮತ್ತು ಉಸಿರಾಟಕ್ಕೆ ಪರಿಹಾರ ಸಿಗುತ್ತದೆ. ಇದನ್ನು ಕುಡಿಯುವುದರಿಂದ ಗಂಟಲಿನ ಊತವೂ ಕಡಿಮೆಯಾಗುತ್ತದೆ. ಇದು ದೇಹವನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.

- ಒಂದು ಕಪ್ ನೀರಿನಲ್ಲಿ 7 ರಿಂದ 8 ತುಳಸಿ ಎಲೆಗಳು ಮತ್ತು 2 ಲವಂಗವನ್ನು ಸೇರಿಸಿ ಅದನ್ನು ಕುದಿಸಿ.

- ಇದನ್ನು ಫಿಲ್ಟರ್ ಮಾಡಿ ಮತ್ತು ದಿನಕ್ಕೆ ಎರಡು ಬಾರಿ ಕುಡಿಯಿರಿ.

ಶುಂಠಿ ಮತ್ತು ಕಾಳುಮೆಣಸು ಕಷಾಯ: ಶುಂಠಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಗಂಟಲಿನ ಉರಿಯೂತ ಮತ್ತು ಕಫವನ್ನು ಕಡಿಮೆ ಮಾಡುತ್ತದೆ. ಕಾಳುಮೆಣಸು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಕಷಾಯವನ್ನು ಕುಡಿಯುವುದರಿಂದ ಕೆಮ್ಮು ಮತ್ತು ಗಂಟಲು ನೋವು ನಿವಾರಣೆಯಾಗುತ್ತದೆ. ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಶೀತ ಮತ್ತು ಕೆಮ್ಮಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

- ಶುಂಠಿಯನ್ನು ಜಜ್ಜಿ ಅದರ ರಸವನ್ನು ಹೊರತೆಗೆದು, ಅದಕ್ಕೆ ಒಂದು ಟೀ ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಇದಕ್ಕೆ ಕಾಳುಮೆಣಸಿನ ಪುಡಿ ಸೇರಿಸಿ.

- ನೀರನ್ನು ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ. ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಿ.

ಸ್ಟೀಮ್ ಇನ್ಹಲೇಷನ್: ಹಬೆಯನ್ನು ಉಸಿರಾಡುವುದು ಎದೆಯಲ್ಲಿ ಅಂಟಿಕೊಂಡಿರುವ ಕಫವನ್ನು ಸಡಿಲಗೊಳಿಸಲು ಪರಿಣಾಮಕಾರಿ ಮಾರ್ಗವಾಗಿದೆ. ಹಬೆಯನ್ನು ಉಸಿರಾಡುವುದರಿಂದ ಕಫ ತೆಳುವಾಗುತ್ತದೆ ಮತ್ತು ಹೊರಹಾಕಲು ಸುಲಭವಾಗುತ್ತದೆ. ಸ್ಟೀಮ್ ತೆಗೆದುಕೊಳ್ಳುವುದರಿಂದ ಕಟ್ಟಿರುವ ಮೂಗನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಿಂದ ಉಸಿರಾಟವು ಸರಾಗವಾಗಿ ಆಗುತ್ತದೆ. ನೋಯುತ್ತಿರುವ ಗಂಟಲು ಮತ್ತು ಕೆಮ್ಮುವಿಗೂ ಇದು ಪರಿಣಾಮಕಾರಿಯಾಗಿದೆ.

- ದೊಡ್ಡ ಪಾತ್ರೆಯಲ್ಲಿ ಬಿಸಿ ಬಿಸಿ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ನೀಲಗಿರಿ ಅಥವಾ ಪುದೀನ ಎಲೆಗಳನ್ನು ಸೇರಿಸಿ.

- ತಲೆಯ ಮೇಲೆ ಟವೆಲ್ ಹಾಕಿ ಹಬೆಯನ್ನು ತೆಗೆದುಕೊಳ್ಳಿ. ಈ ಪ್ರಕ್ರಿಯೆಯನ್ನು ದಿನಕ್ಕೆ 2 ರಿಂದ 3 ಬಾರಿ ಮಾಡಿ.

Whats_app_banner