ಒಣ ತ್ವಚೆಯಿಂದ ಬಳಲುತ್ತಿದ್ದು, ದುಬಾರಿ ಉತ್ಪನ್ನಗಳ ಮೊರೆ ಹೋಗಿದ್ದೀರಾ: ಮನೆಯಲ್ಲೇ ಸರಳವಾಗಿ ಈ ರೀತಿ ಬಾಡಿಲೋಷನ್ ತಯಾರಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಒಣ ತ್ವಚೆಯಿಂದ ಬಳಲುತ್ತಿದ್ದು, ದುಬಾರಿ ಉತ್ಪನ್ನಗಳ ಮೊರೆ ಹೋಗಿದ್ದೀರಾ: ಮನೆಯಲ್ಲೇ ಸರಳವಾಗಿ ಈ ರೀತಿ ಬಾಡಿಲೋಷನ್ ತಯಾರಿಸಿ

ಒಣ ತ್ವಚೆಯಿಂದ ಬಳಲುತ್ತಿದ್ದು, ದುಬಾರಿ ಉತ್ಪನ್ನಗಳ ಮೊರೆ ಹೋಗಿದ್ದೀರಾ: ಮನೆಯಲ್ಲೇ ಸರಳವಾಗಿ ಈ ರೀತಿ ಬಾಡಿಲೋಷನ್ ತಯಾರಿಸಿ

ಚಳಿಗಾಲ ಅಥವಾ ಬೇಸಿಗೆಕಾಲವೇ ಆಗಿರಲಿ ಚರ್ಮಕ್ಕೆ ಮಾಯಿಶ್ಚರೈಸರ್ ಅಥವಾ ಬಾಡಿಲೋಷನ್ ಹಚ್ಚುವುದುಅಗತ್ಯ. ಅದರಲ್ಲೂ ಚಳಿಗಾಲ್ಲಂತೂ ಚರ್ಮ ಒಣಗಿ, ತೇವಾಂಶ ಕಳೆದುಕೊಳ್ಳುತ್ತದೆ. ಇದಕ್ಕೆ ಬಹುತೇಕರು ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ. ಇದರ ಬದಲು ನೈಸರ್ಗಿಕವಾಗಿ ಸಿಗುವ ಪದಾರ್ಥಗಳಿಂದ ಮನೆಯಲ್ಲೇ ಬಾಡಿಲೋಷನ್ ತಯಾರಿಸಬಹುದು.

ಒಣ ತ್ವಚೆಯಿಂದ ಬಳಲುತ್ತಿದ್ದು, ದುಬಾರಿ ಉತ್ಪನ್ನಗಳ ಮೊರೆ ಹೋಗಿದ್ದೀರಾ: ಮನೆಯಲ್ಲೇ ಸರಳವಾಗಿ ಈ ರೀತಿ ಬಾಡಿಲೋಷನ್ ತಯಾರಿಸಿ
ಒಣ ತ್ವಚೆಯಿಂದ ಬಳಲುತ್ತಿದ್ದು, ದುಬಾರಿ ಉತ್ಪನ್ನಗಳ ಮೊರೆ ಹೋಗಿದ್ದೀರಾ: ಮನೆಯಲ್ಲೇ ಸರಳವಾಗಿ ಈ ರೀತಿ ಬಾಡಿಲೋಷನ್ ತಯಾರಿಸಿ (PC: Freepik)

ಚರ್ಮದ ಆರೈಕೆಗೆ ಮಾಯಿಶ್ಚರೈಸರ್ ಅಥವಾ ಬಾಡಿಲೋಷನ್ ಬಹಳ ಮುಖ್ಯ, ಚಳಿಗಾಲದಲ್ಲಿ ಉತ್ತಮ ಚರ್ಮವನ್ನು ಪಡೆಯುವುದು ಸ್ವಲ್ಪ ಕಷ್ಟ. ಏಕೆಂದರೆ ಈ ಶೀತದ ತಿಂಗಳುಗಳಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆಯಿರುವುದರಿಂದ ಚರ್ಮವು ಒಣಗಲು ಪ್ರಾರಂಭಿಸುತ್ತಿದೆ. ಕೇವಲ ಮುಖವಷ್ಟೇ ಅಲ್ಲ, ಕಾಲು, ಕೈ ಸೇರಿದಂತೆ ಇಡೀ ದೇಹದ ಚರ್ಮ ಒಣಗುತ್ತದೆ. ಇದರಿಂದ ಅಂದ ಹಾಳಾಗುತ್ತದೆ ಎಂದು ಬಹುತೇಕರು ಚಿಂತಿಸುತ್ತಾರೆ. ಹೀಗಾಗಿ ಚರ್ಮವನ್ನು ಮೃದುವಾಗಿಸಲು ಅನೇಕರು ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಉತ್ಪನ್ನಗಳಿವೆ. ಆದರೆ, ಈ ಎಲ್ಲಾ ಉತ್ಪನ್ನಗಳು ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಇದರ ಬದಲು ನೈಸರ್ಗಿಕವಾಗಿ ನಿಮ್ಮ ಚರ್ಮವನ್ನು ಮೃದುವಾಗಿಸಬಹುದು. ಮನೆಯಲ್ಲೇ ಮಾಯಿಶ್ಚರೈಸರ್ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು.

ಮನೆಯಲ್ಲೇ ಮಾಯಿಶ್ಚರೈಸರ್ ಅಥವಾ ಬಾಡಿಲೋಷನ್ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ನೀರು (ಫಿಲ್ಟರ್ ಮಾಡಿರುವ), ತಾಜಾ ಕಿತ್ತಳೆ ಸಿಪ್ಪೆಗಳು, ಅರಶಿನ, ಅಲೋವೆರಾ ಜೆಲ್, ನಿಂಬೆ ಸಾರಭೂತ ತೈಲ (lemon essential oil).

ಮಾಯಿಶ್ಚರೈಸರ್ ಮಾಡುವುದು ಹೀಗೆ: ಮೊದಲಿಗೆ ಪಾತ್ರೆಗೆ 1 ಕಪ್ ಫಿಲ್ಟರ್ ಮಾಡಿದ ನೀರನ್ನು ಸೇರಿಸಿ ಕುದಿಯಲು ಬಿಡಿ.

- ಇದಕ್ಕೆ ತಾಜಾ 1 ಹಣ್ಣಿನ ಕಿತ್ತಳೆ ಸಿಪ್ಪೆ ಮತ್ತು 2 ಟೀ ಚಮಚ ಅರಶಿನವನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ನೀರನ್ನು 2 ನಿಮಿಷಗಳ ಕಾಲ ಕುದಿಸಿ.

- ಎರಡು ನಿಮಿಷಗಳ ನಂತರ, ಸ್ಟೌವ್ ಆಫ್ ಮಾಡಿ. 30 ನಿಮಿಷಗಳ ಕಾಲ ಹಾಗೆಯೇ ಬಿಡಿ.

- ನಂತರ ಇದರಿಂದ 2 ಚಮಚದಷ್ಟು ಮಾತ್ರ ತೆಗೆದುಕೊಂಡು ಒಂದು ಬೌಲ್‌ನಲ್ಲಿ ಹಾಕಿ. ಅದಕ್ಕೆ 1 ಚಮಚ ಅಲೋವೆರಾ ಜೆಲ್ ಸೇರಿಸಿ.

- ನಂತರ ಇದಕ್ಕೆ 6 ರಿಂದ 7 ಹನಿ ನಿಂಬೆ ಸಾರಭೂತ ತೈಲ (lemon essential oil) ಅನ್ನು ಸೇರಿಸಿ, 2 ನಿಮಿಷಗಳ ಕಾಲ ನಿರಂತರವಾಗಿ ಬೆರೆಸಿ. ಇದನ್ನು ಒಂದು ಸಣ್ಣ ಬಾಕ್ಸ್‌ನಲ್ಲಿ ಸಂಗ್ರಹಿಸಬಹುದು.

- ಕೇವಲ 2 ಚಮಚ ಮಾತ್ರ ಸಾರವನ್ನು ತೆಗೆದುಕೊಂಡಿರುವುದರಿಂದ ಉಳಿದವನ್ನು ವ್ಯರ್ಥ ಎಂದು ಪರಿಗಣಿಸದಿರಿ. ಬೇಕೆಂದಾಗ ಇದರಿಂದ ತಯಾರಿಸಬಹುದು.

ಮುಖಕ್ಕೆ ಈ ರೀತಿ ಮಾಯಿಶ್ಚರೈಸರ್ ಅನ್ವಯಿಸಿ

ಮನೆಯಲ್ಲೇ ಮಾಡಿರುವ ಮಾಯಿಶ್ಚರೈಸರ್ ಅನ್ನು ಅನ್ವಯಿಸುವ ಮುನ್ನ, ಮೊದಲಿಗೆ ಕ್ಲೆನ್ಸರ್‌ ಅಥವಾ ಫೇಸ್ ವಾಶ್‍ನಿಂದ ಮುಖವನ್ನು ಸ್ವಚ್ಛಗೊಳಿಸಿ. ತದನಂತರ ನೈಸರ್ಗಿಕ ಮಾಯಿಶ್ಚರೈಸರ್ ಅನ್ನು ಹಚ್ಚಿರಿ. ಮಲಗುವ ಮುನ್ನ ಪ್ರತಿರಾತ್ರಿ ಇದನ್ನು ಹಚ್ಚಿ ಮಲಗಿ. ಸ್ನಾನ ಮಾಡಿದ ನಂತರ ಇಡೀ ದೇಹಕ್ಕೂ ಹಚ್ಚಬಹುದು.

ಈ ರೀತಿ ನೈಸರ್ಗಿಕವಾಗಿ ಮನೆಯಲ್ಲೇ ಮಾಯಿಶ್ಚರೈಸರ್ ಅಥವಾ ಬಾಡಿಲೋಷನ್ ಮಾಡಬಹುದು. ಬಹಳ ಸುಲಭವಾಗಿ ಮಾಡಬಹುದಾದ ಬಾಡಿಲೋಷನ್ ಇದು. ಇದನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಡಿ. ಒಂದು ವಾರ ಅಥವಾ 15 ದಿನಗಳವರೆಗೆ ಮಾತ್ರ ಇಡಿ. ಅಲರ್ಜಿ ಸಮಸ್ಯೆ ಇರುವವರು ಮೊದಲಿಗೆ ಪ್ಯಾಚ್ ಟೆಸ್ಟ್ ಮಾಡಿ, ನಂತರ ಬಳಕೆ ಮಾಡುವುದು ಉತ್ತಮ.

Whats_app_banner