ನಾಲಿಗೆಗೂ ರುಚಿ, ದೇಹಕ್ಕೂ ಹಿತ ಅನ್ನದ ಗಂಜಿ: ಚಳಿಗಾಲದಲ್ಲಿ ಇದನ್ನು ಸೇವಿಸುವುದರಿಂದ ಸಿಗಲಿದೆ ಹಲವು ಪ್ರಯೋಜನ, ಇಲ್ಲಿದೆ ಮಾಡುವ ವಿಧಾನ
ಚಳಿಗಾಲದಲ್ಲಿ ಮಾಡಿದ ಅನ್ನದ ಗಂಜಿಯನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ತಿನ್ನಲು ರುಚಿಕರ ಮಾತ್ರವಲ್ಲ,ಜೀರ್ಣಕ್ರಿಯೆಗೆ ಕೂಡ ಸಹಾಯ ಮಾಡುತ್ತದೆ. ಹಾಗಾದರೆ ಇದನ್ನು ಮಾಡುವ ವಿಧಾನ ನಿಮಗೆ ತಿಳಿದಿಲ್ಲದಿದ್ದರೆ,ಈ ಇಲ್ಲಿ ಅನ್ನದ ಗಂಜಿ ಗಂಜಿ ಮಾಡುವ ವಿಧಾನವನ್ನು ತಿಳಿಸಲಾಗಿದೆ.
ಅಕ್ಕಿ ಗಂಜಿ ಅಂದರೆ ಅನ್ನದಲ್ಲಿ ಬೇಯಿಸಿದ ನೀರು. ಚಳಿಗಾಲದಲ್ಲಿ ಅನ್ನದ ಗಂಜಿ ಸೇವನೆಯು ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಕರ್ನಾಟಕದ ಕರಾವಳಿ ಭಾಗದ ಜನರು ಗಂಜಿಯೂಟವನ್ನು ಮಾಡುತ್ತಾರೆ. ಅದರಲ್ಲೂ ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಬಹುತೇಕ ಪ್ರತಿಯೊಬ್ಬರ ಮನೆಗಳಲ್ಲೂ ಕೆಂಪಕ್ಕಿ ಅನ್ನದ ಗಂಜಿಯೂಟವನ್ನೇ ಮಾಡುತ್ತಾರೆ. ಕೇವಲ ಬೇಸಿಗೆ ಅಂತಲ್ಲ ಚಳಿಗಾಲದಲ್ಲೂ ಗಂಜಿ ಸೇವನೆ ಮಾಡುವುದು ನಿರ್ಜಲೀಕರಣ, ಅತಿಸಾರ, ಕಾಲರಾ ಸೇರಿದಂತೆ ಇತ್ಯಾದಿ ಹಲವು ಸಮಸ್ಯೆಗಳ ಸಂದರ್ಭದಲ್ಲಿ ಜನರು ಇದನ್ನು ಸೇವಿಸುತ್ತಾರೆ. ಚಳಿಗಾಲದಲ್ಲಿ, ಸಾಮಾನ್ಯವಾಗಿ ದೇಹದಲ್ಲಿ ನೀರಿನ ಕೊರತೆ ಮತ್ತು ಹೊಟ್ಟೆಯಲ್ಲಿ ಉಷ್ಣತೆ ಇರುತ್ತದೆ. ಏಕೆಂದರೆ, ಬಹಳಷ್ಟು ಮಂದಿ ಶೀತ ವಾತಾವರಣದಲ್ಲಿ ಕಡಿಮೆ ನೀರನ್ನು ಕುಡಿಯುತ್ತಾರೆ. ಹೀಗಾಗಿ ನಿರ್ಜಲೀಕರಣ ಸಮಸ್ಯೆ ಸಂಭವಿಸಬಹುದು. ಅದಕ್ಕಾಗಿ ಅನ್ನದಿಂದ ಮಾಡಿದ ಗಂಜಿಯ ಸೇವನೆಯು ಹೊಟ್ಟೆಯನ್ನು ತಂಪಾಗಿಸಲು ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಪರಿಗಣಿಸಲಾಗಿದೆ. ಅನ್ನದ ಗಂಜಿಯನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ.
ಅನ್ನದ ಗಂಜಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಅಕ್ಕಿ- 1 ರಿಂದ 2 ಕಪ್, ನೀರು- ಎರಡರಿಂದ ಮೂರು ಕಪ್.
ಮಾಡುವ ವಿಧಾನ: ಅಕ್ಕಿ ಗಂಜಿ ಮಾಡಲು, ಮೊದಲು ಅಕ್ಕಿಯನ್ನು ನೀರಿನಲ್ಲಿ ಹಾಕಿ ಎರಡರಿಂದ ಮೂರು ಬಾರಿ ತೊಳೆಯಿರಿ.
- ಇದರೊಂದಿಗೆ, ಅಕ್ಕಿಯಲ್ಲಿರುವ ಎಲ್ಲಾ ಕಲ್ಮಶಗಳು ಸ್ವಚ್ಛಗೊಳ್ಳುತ್ತದೆ
- ಈಗ ನಾವು ಅಕ್ಕಿಯನ್ನು ಬೇಯಿಸಬೇಕು, ಇದಕ್ಕಾಗಿ ಮೊದಲಿಗೆ ನೀರನ್ನು ಬಿಸಿ ಮಾಡಲು ಪಾತ್ರೆಯಲ್ಲಿಡಬೇಕು.
- ನೀರು ಬಿಸಿಯಾದಾಗ ಅಕ್ಕಿಯನ್ನು ಹಾಕಿ ಕುದಿಸಿ.
- ಅಕ್ಕಿ ಬೇಯಿಸಿದ ನಂತರ, ಉಳಿದ ನೀರನ್ನು ಫಿಲ್ಟರ್ ಮಾಡಿ.
- ಈ ಅನ್ನದ ಗಂಜಿಯ ನೀರನ್ನು ಎಸೆಯಬಾರದು, ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಹುದುಗಿಸಿದ ಅಕ್ಕಿ ಗಂಜಿ ಮಾಡುವ ವಿಧಾನ ಹೀಗಿದೆ
ಬೇಕಾಗುವ ಸಾಮಗ್ರಿಗಳು: ಅಕ್ಕಿ- ಒಂದು ಕಪ್, ನೀರು- ಎರಡು ಕಪ್.
ಹುದುಗಿಸಿದ ಅಕ್ಕಿ ಗಂಜಿಯನ್ನು ಹೇಗೆ ಮಾಡುವುದು
- ಮೊದಲಿಗೆ ಅಕ್ಕಿ ಗಂಜಿ ಮಾಡಲು, ಅಕ್ಕಿಯನ್ನು ಶುದ್ಧ ನೀರಿನಲ್ಲಿ ತೊಳೆದು ಪಕ್ಕಕ್ಕೆ ಇರಿಸಿ.
- ಈಗ ಅನ್ನವನ್ನು ಬೇಯಿಸಲು ಬಿಸಿಮಾಡಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ.
- ನೀರು ಕುದಿಯಲು ಪ್ರಾರಂಭಿಸಿದಾಗ, ಅಕ್ಕಿ ಸೇರಿಸಿ ಬೇಯಿಸಲು ಬಿಡಿ.
- ಅನ್ನ ಬೆಂದ ನಂತರ, ಅದರ ನೀರನ್ನು ಅಥವಾ ಗಂಜಿಯನ್ನು ಪಕ್ಕಕ್ಕೆ ಇರಿಸಿ.
- ಅನ್ನವನ್ನು ಊಟ ಮಾಡಿ. ಅನ್ನದ ನೀರು ಅಥವಾ ಗಂಜಿಯನ್ನು ಎರಡು ಮೂರು ದಿನಗಳವರೆಗೆ ಕೋಣೆಯ ಉಷ್ಣಾಂಶದಲ್ಲಿ ಹಾಗೆಯೇ ಬಿಡಿ.
- ಎರಡು ಮೂರು ದಿನಗಳಲ್ಲಿ, ಅಕ್ಕಿ ನೀರು ವಿಚಿತ್ರವಾದ ವಾಸನೆಯನ್ನು ಹೊರಸೂಸುತ್ತದೆ. ನಂತರ ಈ ಹುದುಗುವಿಕೆಯ ಪ್ರಕ್ರಿಯೆಯನ್ನು ನಿಲ್ಲಿಸಬೇಕು.
- ಈಗ ಈ ಅನ್ನದ ನೀರನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿ, ಅದನ್ನು ಕುಡಿಯಲು ಬಳಸಿ.
- ಈ ಯೀಸ್ಟ್ ಆಧಾರಿತ ಅಕ್ಕಿ ಗಂಜಿಯನ್ನು ನೇರವಾಗಿ ಸೇವಿಸಬಾರದು, ಇದನ್ನು ಎರಡರಿಂದ ಮೂರು ಕಪ್ ಬಿಸಿನೀರಿನೊಂದಿಗೆ ಬೆರೆಸಿ ಸೇವಿಸಬೇಕು.
ಚಳಿಗಾಲದಲ್ಲಿ ಅಕ್ಕಿ ಗಂಜಿಯನ್ನು ಸೇವಿಸುವುದರಿಂದ ಸಿಗುವ ಪ್ರಯೋಜನಗಳು
ಚಳಿಗಾಲದಲ್ಲಿ ಗಂಜಿಯನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿರುವ ಇದು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅನ್ನದ ಗಂಜಿಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್‌ಗಳಂತಹ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ, ಇದು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಇದು ಉತ್ತಮ ಪ್ರಮಾಣದ ನೀರನ್ನು ಹೊಂದಿರುವುದರಿಂದ ಚಳಿಗಾಲದಲ್ಲಿ ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ.