ಅಬ್ಬಾ ಏನು ಚಳಿ ಮಾರಾಯ್ರೆ; ಕೈ, ಪಾದಗಳು ತಣ್ಣಗಾಗಿದ್ದರೆ ಬೆಚ್ಚಗಿಡಲು ಇಲ್ಲಿದೆ ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  ಅಬ್ಬಾ ಏನು ಚಳಿ ಮಾರಾಯ್ರೆ; ಕೈ, ಪಾದಗಳು ತಣ್ಣಗಾಗಿದ್ದರೆ ಬೆಚ್ಚಗಿಡಲು ಇಲ್ಲಿದೆ ಸಲಹೆ

ಅಬ್ಬಾ ಏನು ಚಳಿ ಮಾರಾಯ್ರೆ; ಕೈ, ಪಾದಗಳು ತಣ್ಣಗಾಗಿದ್ದರೆ ಬೆಚ್ಚಗಿಡಲು ಇಲ್ಲಿದೆ ಸಲಹೆ

ಚಳಿಗಾಲದಲ್ಲಿ ಕೈ, ಪಾದಗಳು ತಣ್ಣಗಾಗುವುದು ಸಾಮಾನ್ಯ. ಚಳಿಗೆದೇಹದ ಈ ಭಾಗಗಳನ್ನು ಬೆಚ್ಚಗಾಗಿಸುವುದು ಸ್ವಲ್ಪ ಕಷ್ಟವೇ ಸರಿ. ಅಬ್ಬಾ ಏನು ಚಳಿ ಮಾರಾಯ್ರೆ ಅನ್ನೋ ಪರಿಸ್ಥಿತಿಯಿದೆ.ಆದರೆ, ಇಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸಿದರೆ ಪರಿಹಾರವನ್ನು ಪಡೆಯಬಹುದು.ಚಳಿಗೆ ಕೈ ಹಾಗೂ ಪಾದಗಳನ್ನು ಹೇಗೆ ಬೆಚ್ಚಗಾಗಿಸಬಹುದು ಎಂಬ ಬಗ್ಗೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಕೈ, ಪಾದಗಳು ತಣ್ಣಗಾಗಿದ್ದರೆ ಬೆಚ್ಚಗಿಡಲು ಇಲ್ಲಿದೆ ಸಲಹೆ
ಕೈ, ಪಾದಗಳು ತಣ್ಣಗಾಗಿದ್ದರೆ ಬೆಚ್ಚಗಿಡಲು ಇಲ್ಲಿದೆ ಸಲಹೆ (PC: Canva)

ಚಳಿಗಾಲವು ಪ್ರಾರಂಭವಾದಾಗ, ಕೈ ಮತ್ತು ಪಾದಗಳು ತಣ್ಣಗಾಗಿರುತ್ತವೆ. ಕೈ, ಪಾದಗಳನ್ನು ಬೆಚ್ಚಗಾಗಿಸುವುದು ತುಂಬಾ ಸವಾಲೇ ಹೌದು. ಯಾಕೆಂದರೆ ದೇಹದ ಈ ಭಾಗಗಳು ಸಾಮಾನ್ಯವಾಗಿ ಮೊದಲು ಶೀತವನ್ನು ಅನುಭವಿಸುತ್ತವೆ. ಹೀಗಾಗಿ ದೇಹದ ಈ ಭಾಗಗಳನ್ನು ಬೆಚ್ಚಗಾಗಿಸುವುದು ಸ್ವಲ್ಪ ಕಷ್ಟವೇ ಸರಿ. ಚಳಿಗಾಲದಲ್ಲಿ, ಜನರು ತಮ್ಮ ಪಾದಗಳನ್ನು ಬೆಚ್ಚಗಾಗಲು ರಾತ್ರಿ ವೇಳೆ ಸಾಕ್ಸ್ ಧರಿಸುತ್ತಾರೆ. ಆದರೆ, ಕೇವಲ ಸಾಕ್ಸ್ ಧರಿಸುವುದು ಸಾಕಾಗುವುದಿಲ್ಲ. ಚಳಿಗೆ ಕೈ ಹಾಗೂ ಪಾದಗಳು ಮರಗಟ್ಟಿ ಹೋದಂತೆ ಭಾಸವಾಗುತ್ತದೆ. ಅಬ್ಬಾ ಏನು ಚಳಿ ಮಾರಾಯ್ರೆ ಅನ್ನೋ ಹಾಗಾಗಿದೆ. ಕೈ ಹಾಗೂ ಪಾದಗಳನ್ನು ಹೇಗೆ ಬೆಚ್ಚಗಾಗಿಸಬಹುದು ಎಂಬ ಬಗ್ಗೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಕೈ ಮತ್ತು ಪಾದಗಳನ್ನು ಬೆಚ್ಚಗಿಡಲು ಸಲಹೆಗಳು ಇಲ್ಲಿದೆ

ನಿಮ್ಮ ದೇಹವನ್ನು ಬೆಚ್ಚಗಾಗಲು ಸೂಕ್ತವಾದ ಉಡುಪು ಧರಿಸಿ: ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗಿಡಲು ಪ್ರಮುಖ ಅಂಶವೆಂದರೆ ಬೆಚ್ಚಗಿನ ಉಡುಗೆ ತೊಡುವುದು. ನೀವು ಮನೆಯಲ್ಲಿದ್ದರೂ, ಸಹ ದೇಹವನ್ನು ಬೆಚ್ಚಗಾಗಿಸುವುದು ಮುಖ್ಯ. ಇದಕ್ಕಾಗಿ ಕೈಗವಸುಗಳನ್ನು ಧರಿಸಿ. ಟಿ ಶರ್ಟ್ ಒಳಗೆ ಥರ್ಮಲ್ (ಬೆಚ್ಚಗಿನ) ಉಡುಪು ಮತ್ತು ಕೈಗವಸುಗಳನ್ನು ಧರಿಸಿ. ಪಾದಗಳಿಗೆ ಥರ್ಮಲ್ ಸಾಕ್ಸ್ ಧರಿಸಿ ಮತ್ತು ಉಣ್ಣೆಯ ಬೂಟುಗಳನ್ನು ಧರಿಸಿ. ದೇಹವನ್ನು ಬೆಚ್ಚಗಾಗಿಸುವುದರಿಂದ ರಕ್ತ ಪರಿಚಲನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸಕ್ರಿಯವಾಗಿರಿ: ಹೆಚ್ಚು ಸಕ್ರಿಯವಾಗಿರುವುದರಿಂದ ರಕ್ತಪರಿಚಲನೆ ಸುಧಾರಿಸುತ್ತದೆ. ಇದು ನೈಸರ್ಗಿಕವಾಗಿ ನಿಮ್ಮ ಅಂಗಗಳನ್ನು ಬೆಚ್ಚಗಾಗಿಸುತ್ತದೆ. ವಾಕಿಂಗ್ ಅಥವಾ ಓಟದಂತಹ ಲಘು ವ್ಯಾಯಾಮ ಕೂಡ ಕೈ ಮತ್ತು ಕಾಲುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ವಾಕಿಂಗ್, ಜಾಗಿಂಗ್ ಅಥವಾ ಸ್ಟ್ರೆಚಿಂಗ್ ರಕ್ತದ ಹರಿವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕೈ ಮತ್ತು ಪಾದಗಳನ್ನು ಬೆಚ್ಚಗಾಗಲು ಮುಷ್ಟಿಯನ್ನು ಬಿಗಿಗೊಳಿಸುವುದು ಸೇರಿದಂತೆ ಲಘು ವ್ಯಾಯಾಮಗಳನ್ನು ಪ್ರಯತ್ನಿಸಬಹುದು.

ಬಿಗಿಯಾದ ಬಟ್ಟೆ ಧರಿಸದಿರಿ: ಬೆಚ್ಚಗಾಗಲು ಬಿಗಿಯಾದ ಕೈಗವಸುಗಳು, ಸಾಕ್ಸ್ ಅಥವಾ ಬಟ್ಟೆ ಧರಿಸದಿರಿ. ಇದು ರಕ್ತಪರಿಚಲನೆಗೆ ಅಡ್ಡಿಯಾಗಬಹುದು. ಸರಿಯಾಗಿ ಹೊಂದಿಕೊಳ್ಳುವ ಮತ್ತು ತುಂಬಾ ಬಿಗಿಯಾಗಿಲ್ಲದ ಬಟ್ಟೆಗಳನ್ನು ಆರಿಸಿ. ಇದರಿಂದ ರಕ್ತದ ಹರಿವು ಸರಾಗವಾಗಿ ನಡೆಯುತ್ತದೆ.

ಬಿಸಿ ನೀರಿನ ಬಾಟಲಿ ಬಳಸಿ: ಬಿಸಿನೀರಿನ ಬಾಟಲಿ (ಪ್ಯಾಕ್) ಗಳು ಚಳಿಗಾಲದಲ್ಲಿ ಬೆಚ್ಚಗಾಗಲು ಒಂದು ಪರಿಹಾರವಾಗಿದೆ. ಕುಳಿತುಕೊಳ್ಳುವಾಗ ಅಥವಾ ಮಲಗುವಾಗ ನಿಮ್ಮ ಪಾದಗಳ ಬಳಿ ಬಿಸಿನೀರಿನ ಬಾಟಲಿಯನ್ನು ಇರಿಸುವ ಮೂಲಕ, ಶೀತವನ್ನು ನಿವಾರಿಸಲು ಇದು ಸಹಾಯಕವಾಗಿದೆ. ಕೈಗಳನ್ನು ಬೆಚ್ಚಗಾಗಲು ಸಣ್ಣ ಬಿಸಿ ಪ್ಯಾಕ್‌ಗಳನ್ನು ಬಳಸಬಹುದು. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು, ಬಿಸಿನೀರಿನ ಬಾಟಲಿಯನ್ನು ಮೃದುವಾದ ಬಟ್ಟೆಯಲ್ಲಿ ಸುತ್ತಿಡುವುದರಿಂದ ಹೆಚ್ಚು ಕಾಲ ಬೆಚ್ಚಗಿರುತ್ತದೆ.

ಮನೆಯಲ್ಲಿ ತಯಾರಿಸಿದ ಬಿಸಿ ಪಾನೀಯಗಳನ್ನು ಕುಡಿಯಿರಿ: ಶುಂಠಿ, ದಾಲ್ಚಿನ್ನಿ ಮತ್ತು ಅರಿಶಿನದಂತಹ ನೈಸರ್ಗಿಕ ಪದಾರ್ಥಗಳೊಂದಿಗೆ ತಯಾರಿಸಿದ ಬಿಸಿ ಪಾನೀಯಗಳು ಒಳಗಿನಿಂದ ಬೆಚ್ಚಗಾಗಲು ಸಹಾಯ ಮಾಡುತ್ತದೆ. ಇವು ಶಾಖ ಉತ್ಪಾದಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಚಳಿಗಾಲದಲ್ಲಿ ದೇಹವನ್ನು ಆರಾಮದಾಯಕವಾಗಿರಿಸುತ್ತದೆ. ಮಲಗುವ ಮುನ್ನ ಬೆಚ್ಚಗಿನ ಒಂದು ಕಪ್ ಗಿಡಮೂಲಿಕೆ ಚಹಾ ಅಥವಾ ಅರಿಶಿನ ಹಾಲು ಸೇವನೆಯು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ಇದು ಉತ್ತಮ ನಿದ್ದೆಗೆ ಕಾರಣವಾಗುತ್ತದೆ.

ಕೈ ಮತ್ತು ಪಾದಗಳನ್ನು ಮಸಾಜ್ ಮಾಡಿ: ಶೀತ ದಿನಗಳಲ್ಲಿ ಕೈ ಮತ್ತು ಪಾದಗಳನ್ನು ಮಸಾಜ್ ಮಾಡುವುದು ಅವುಗಳನ್ನು ಬೆಚ್ಚಗಾಗಿಸಲು ಸರಳ, ಹಾಗೆಯೇ ಪರಿಣಾಮಕಾರಿ ಮಾರ್ಗವಾಗಿದೆ. ನಿಯಮಿತವಾಗಿ ಎಣ್ಣೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ. ಶೀತ ಋತುವಿನಲ್ಲಿ ಸಂಭವಿಸುವ ಮರಗಟ್ಟುವಿಕೆ ಮತ್ತು ಅಸ್ವಸ್ಥತೆಯನ್ನು ಇದು ತಡೆಯುತ್ತದೆ. ಅಂಗೈ ಅಥವಾ ಪಾದಗಳಿಗೆ ಲೋಷನ್ ಅಥವಾ ಎಣ್ಣೆಯನ್ನು ಹಚ್ಚಿ, ವೃತ್ತಾಕಾರವಾಗಿ ನಿಧಾನವಾಗಿ ಮಸಾಜ್ ಮಾಡಿ.

Whats_app_banner