ರವಾ ಕೇಕ್: ಮೊಟ್ಟೆ, ಓವನ್ ಏನೂ ಬೇಡ; ನಿಮ್ಮ ಮನೆಯಲ್ಲೇ ರೆಡಿ ಮಾಡಬಹುದು ಈ ರವಾ ಕೇಕ್ - ಬರ್ತ್‌ಡೇಗೆ ಇದೇ ಸ್ಪೆಷಲ್
ರವಾ ಕೇಕ್ ರೆಸಿಪಿ: ನೀವು ಮನೆಯಲ್ಲೇ ಕೇಕ್ ಮಾಡಬೇಕು ಎಂದುಕೊಂಡಿದ್ದರೆ ಈ ರೆಸಿಪಿ ಟ್ರೈ ಮಾಡಿ. ತುಂಬಾ ಸುಲಭವಾಗಿ ನೀವಿದನ್ನು ಮಾಡಿ ತಿನ್ನಬಹುದು. ನೀವೇ ಮಾಡಿದರೆ ಅದನ್ನು ಇನ್ನಷ್ಟು ಇಷ್ಟಪಟ್ಟು ತಿನ್ನುವವರು ಇರಬಹುದು. ಈ ರವಾ ಕೇಕ್ ತಯಾರಿಸುವುದು ಕಷ್ಟವೇನಲ್ಲ.
ಹಲವರಿಗೆ ಕೇಕ್ ಎಂದರೆ ಭಯ. ಕೇಕ್ ತಿಂದ್ರೆ ತೂಕ ಜಾಸ್ತಿ ಆಗುತ್ತದೆ ಎಂದು ಅಂದುಕೊಳ್ಳುತ್ತಾರೆ. ಮನೆಯಲ್ಲಿ ಕೇಕ್ ಮಾಡುವವರ ಸಂಖ್ಯೆಯಂತು ತೀರಾ ಕಡಿಮೆ. ಇದರ ತಯಾರಿ ತುಂಬಾ ಕಷ್ಟ ಎಂದು ಭಾವಿಸಿ ಯಾರೂ ಮಾಡುವುದೇ ಇಲ್ಲ. ಆದರೆ ಸಾಂಪ್ರದಾಯಿಕ ವಿಧಾನದಲ್ಲಿ ರವಾ ಕೇಕ್‌ಅನ್ನು ಅಡುಗೆಮನೆಯಲ್ಲಿ ಲಭ್ಯವಿರುವ ಪದಾರ್ಥಗಳಿಂದಲೇ ತಯಾರಿಸಬಹುದು. ಇದಕ್ಕೆ ಹೊಸದೇನೂ ಬೇಕಾಗಿಲ್ಲ. ಒಲೆಯ ಅಗತ್ಯವೂ ಇಲ್ಲ. ಮೊಟ್ಟೆಗಳನ್ನು ಬಳಸಬೇಕಾಗಿಯೂ ಇಲ್ಲ. ಈ ರವಾ ಕೇಕ್ ಉಪ್ಪಿಟ್ಟು ಮಾಡುವಷ್ಟು ಸರಳವಾಗಿದೆ. ನಿಮ್ಮ ಕುಟುಂಬದ ಸದಸ್ಯರು ಮತ್ತು ಮಕ್ಕಳ ಹುಟ್ಟುಹಬ್ಬದಂದು ಈ ಕೇಕ್ ಮಾಡಿ ಅಚ್ಚರಿಗೊಳಿಸಿ.
ರವಾ ಕೇಕ್ ಮಾಡಲು ಬೇಕಾಗುವ ಸಾಮಾಗ್ರಿಗಳು
2 ಕಪ್ ಸಣ್ಣ ರವಾ
ಅರ್ಧ ಕಪ್ ಎಣ್ಣೆ
1 ಕಪ್ ಸಕ್ಕರೆ
ಒಂದೂವರೆ ಕಪ್ ಹಾಲು
ಒಂದು ಚಿಟಿಕೆ ಉಪ್ಪು
ಕಾಲು ಚಮಚ ಅಡಿಗೆ ಸೋಡಾ
ಅರ್ಧ ಚಮಚ ಏಲಕ್ಕಿ ಪುಡಿ
ಬಣ್ಣದ ಟೂಟಿ ಫ್ರೂಟಿಯ 2 ಸ್ಪೂನ್ (ಮಾರ್ಕೆಟ್‌ನಲ್ಲಿ ಸಿಗುತ್ತದೆ)
ಕಾಲು ಚಮಚ ಬೇಕಿಂಗ್ ಪೌಡರ್
ರವಾ ಕೇಕ್ ಮಾಡುವ ವಿಧಾನ:
ಮೊದಲು ಮಿಕ್ಸಿಂಗ್ ಜಾರ್‌ಗೆ ತುಪ್ಪ ಹಾಕಿ ತೆಳುವಾಗಿ ಕಲಸಿ.
ಈಗ ದೊಡ್ಡ ಬಟ್ಟಲಿನಲ್ಲಿ ಅರ್ಧ ಕಪ್ ಎಣ್ಣೆ, ಮೊಸರು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ
ಇದನ್ನೂ ಓದಿ: ನಾಲಿಗೆ ರುಚಿ ಹುಡುಕುತ್ತಿದೆಯಾ: ಹಾಗಿದ್ದರೆ ಟ್ರೈ ಮಾಡಿ ಗರಿಗರಿಯಾದ ಹೆಸರು ಬೇಳೆ ಪಕೋಡಾ, ಇಲ್ಲಿದೆ ರೆಸಿಪಿ
ಒಂದು ಐದಾರು ನಿಮಿಷ ನೀವು ಇದನ್ನು ಮಿಕ್ಸ್ ಮಾಡುತ್ತಲೇ ಇರಬೇಕಾಗುತ್ತದೆ. ತುಂಬಾ ಚೆನ್ನಾಗಿ ಇದು ಮಿಕ್ಸ್ ಆಗಬೇಕು. ಇಲ್ಲವಾದರೆ ಕೇಕ್ ಸರಿಯಾಗುವುದಿಲ್ಲ. ಎಲ್ಲಾ ಸಕ್ಕರೆ ಸಂಪೂರ್ಣವಾಗಿ ಕರಗಿದ ನಂತರ, ಮತ್ತೊಂದು ಕಪ್ ಹಾಲು ಹಾಕಿ ಮತ್ತೆ ಮಿಕ್ಸ್ ಮಾಡಿ
ಒಳ್ಳೆಯ ಕೆನೆ ಮಿಶ್ರಣ ಸಿದ್ಧವಾಗುತ್ತದೆ. ಅದಕ್ಕೆ ರವೆ ಮತ್ತು ಚಿಟಿಕೆ ಉಪ್ಪು ಸೇರಿಸಿ ಎಲ್ಲವನ್ನೂ ಮತ್ತೆ ಮಿಶ್ರಣ ಮಾಡಿ.
ಈ ಮಿಶ್ರಣವನ್ನು ಅರ್ಧ ಘಂಟೆಯವರೆಗೆ ಪಕ್ಕಕ್ಕೆ ಇರಿಸಿ. ಈ ಸಮಯದಲ್ಲಿ ರವೆ ಚೆನ್ನಾಗಿ ನೆನೆಯುತ್ತದೆ.
ಈಗ ಸ್ವಲ್ಪ ಆಳವಾದ ಪಾತ್ರೆಯನ್ನು ತೆಗೆದುಕೊಳ್ಳಿ. ಅಥವಾ ಯಾವುದಾದರೂ ಪ್ಲಾಟ್ ಆಗಿರುವ ದೊಡ್ಡ ಪಾತ್ರೆಯಾದರೂ ಆಗುತ್ತದೆ. ನೀವು ಹಿಟ್ಟನ್ನು ಮಿಶ್ರಣ ಮಾಡಿದ ಮೇಲೆ ಸ್ವಲ್ಪ ಜಾಗ ಬಿಟ್ಟಿಡಿ.
ಬೇಕಿಂಗ್ ಪೇಪರ್ನೊಂದಿಗೆ ಈ ಪಾತ್ರೆಯನ್ನು ಕವರ್ ಮಾಡಿ. ಇದನ್ನು ಹಾಕಿದರೆ ಕೇಕ್ ಬೇಗ ಬಿಟ್ಟು ಬರುತ್ತದೆ ಅಂಟಿಕೊಳ್ಳುವುದಿಲ್ಲ.
ನಿಮ್ಮ ಬಳಿ ಈ ಪೇಪರ್ ಇಲ್ಲದಿದ್ದರೆ, ಎಣ್ಣೆ ಹಾಕಿದ ನಂತರ, ಸ್ವಲ್ಪ ಹಿಟ್ಟು ಸಿಂಪಡಿಸಿ. ಇದು ಕೇಕ್ ಅಂಟಿಕೊಳ್ಳದಂತೆ ತಡೆಯುತ್ತದೆ.
ಹಿಟ್ಟಿಗೆ ಬೇಕಿಂಗ್ ಸೋಡಾ , ಬೇಕಿಂಗ್ ಪೌಡರ್, ಏಲಕ್ಕಿ ಪುಡಿ ಮತ್ತು ಕಾಲು ಕಪ್ ಹಾಲು ಸೇರಿಸಿ ಮತ್ತು ಮತ್ತೆ ಮಿಶ್ರಣ ಮಾಡಿ.
ಈಗ ಅರ್ಧ ಚಮಚ ಟೂಟಿ ಫ್ರೂಟಿ ಸೇರಿಸಿ ಮತ್ತು ಹಿಟ್ಟಿಗೆ ಮಿಶ್ರಣ ಮಾಡಿ. ಉಳಿದದ್ದನ್ನು ಪಕ್ಕಕ್ಕೆ ಅಲಂಕಾರಕ್ಕಿಡಿ
ಈ ಹಿಟ್ಟನ್ನು ಪ್ಯಾನ್‌ಗೆ ಸುರಿಯಿರಿ. ಉಳಿದ ಟುಟ್ಟಿ ಟೂಟಿ ಫ್ರೂಟಿಯನ್ನು ಮೇಲಿನಿಂದ ಅಲಂಕರಿಸಿ
ಒಂದು ಅಡಿ ದಪ್ಪದ ಕಡಾಯಿ ಅಥವಾ ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಸ್ಟ್ಯಾಂಡ್ ಇರಿಸಿ.
ಅದನ್ನು ಮುಚ್ಚಿ ಹತ್ತು ನಿಮಿಷಗಳ ಕಾಲ ಬಿಸಿ ಮಾಡಲು ಬಿಡಿ. ಬಿಸಿ ಮಾಡಿದ ಪ್ಯಾನ್‌ಗೆ ಕೇಕ್ ಮಿಶ್ರಣವನ್ನು ಹಾಕಿ ಮುಚ್ಚಿ. ಶಾಖವು ಹೊರಬರದಂತೆ ಪ್ಯಾಕ್ ಮಾಡಿ
ಅರ್ಧ ಘಂಟೆಯ ನಂತರ, ನೀವು ಅದನ್ನು ಟೂತ್‌ಪಿಕ್‌ನಿಂದ ಚುಚ್ಚಿದರೆ ಹಿಟ್ಟನ್ನು ಅಂಟಿಕೊಳ್ಳಬಾರದು. ಇಷ್ಟಾದರೆ ಕೇಕ್ ರೆಡಿ.
ವಿಭಾಗ